• ಹೋಂ
  • »
  • ನ್ಯೂಸ್
  • »
  • ಲೈಫ್ ಸ್ಟೈಲ್
  • »
  • Summer: ಪದೇ, ಪದೇ ಕಾಯಿಲೆ ಬೀಳುತ್ತಿದ್ದೀರಾ? ಈ 5 ಆಹಾರಗಳನ್ನು ತಿನ್ನಿ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ!

Summer: ಪದೇ, ಪದೇ ಕಾಯಿಲೆ ಬೀಳುತ್ತಿದ್ದೀರಾ? ಈ 5 ಆಹಾರಗಳನ್ನು ತಿನ್ನಿ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನಿಂಬೆಹಣ್ಣು, ಕಿತ್ತಳೆ, ದ್ರಾಕ್ಷಿಹಣ್ಣು ಮುಂತಾದ ಹಣ್ಣುಗಳು ಹೆಚ್ಚಿನ ಸಿಟ್ರಸ್ ಒಳಗೊಂಡಿದೆ. ಇವುಗಳಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಸಿ ಸಮೃದ್ಧವಾಗಿರುತ್ತವೆ. ಇವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

  • Share this:

    ಬೇಸಿಗೆ (Summer) ಆರಂಭವಾದೊಡನೆ ಮಕ್ಕಳಿಂದ ಹಿಡಿದು ವಯೋವೃದ್ಧರ ತನಕ ಎಲ್ಲರಿಗೂ ಶೀತ (cold), ಕೆಮ್ಮು (Caught) ,ಜ್ವರದಂತಹ (Fever) ಆರೋಗ್ಯ ಸಮಸ್ಯೆ (Health Problem) ಸಾಮಾನ್ಯವಾಗಿ ಕಂಡುಬರುತ್ತಿದೆ. ಇದಕ್ಕೆ ಔಷಧ (Medicine) ಮಾಡಿದರೂ ಕೆಲವೊಮ್ಮೆ ಬೇಗ ಗುಣವಾಗುವುದಿಲ್ಲ. ಇಂಥ ಆರೋಗ್ಯ ಸಮಸ್ಯೆಗಳಿಂದ ಬೇಗನೇ ಮುಕ್ತಿ ಪಡೆಯಬೇಕೆಂದರೆ ನಿಮ್ಮಲ್ಲಿ ಅತ್ಯುತ್ತಮ ರೋಗನಿರೋಧಕ ವ್ಯವಸ್ಥೆ ಇರುವುದು ಬಹಳ ಮುಖ್ಯ. ಬಲವಾದ ರೋಗನಿರೋಧಕ ಶಕ್ತಿಯು (Immune System) ಇಂಥ ಕಾಯಿಲೆಗಳನ್ನು ದೂರವಿಡಲು ಸಹಾಯ ಮಾಡುತ್ತದೆ. ನಿಮ್ಮ ದೇಹವನ್ನು ಸೋಂಕುಗಳು ಮತ್ತು ರೋಗಗಳಿಂದ ರಕ್ಷಿಸುತ್ತದೆ. ಅದರಲ್ಲೂ ಇತ್ತೀಚಿಗೆ ನಮ್ಮ ದೇಶದಲ್ಲೂ H3N2 ಪ್ರಕರಣಗಳು ಹೆಚ್ಚುತ್ತಿದೆ. ಶೀತ, ಕೆಮ್ಮು, ಜ್ವರ ಸಾಮಾನ್ಯವಾಗಿದೆ. ಕಾರಣ, ನಿಮ್ಮ ರೋಗನಿರೋಧಕ ವ್ಯವಸ್ಥೆಯನ್ನು ಬಲಪಡಿಸುವುದು ಅತ್ಯಗತ್ಯ. ಕೆಲವು ಆಹಾರಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುವ ಪೋಷಕಾಂಶಗಳನ್ನು ನಿಮಗೆ ಒದಗಿಸುತ್ತವೆ. ಹಾಗಿದ್ದರೆ ಅಂಥ ಅದ್ಭುತ ಆಹಾರಗಳು ಯಾವವು ಅನ್ನೋದನ್ನು ನೋಡೋಣ.


    winter season cough problem reducing Ayurveda solution
    ಸಾಂದರ್ಭಿಕ ಚಿತ್ರ


    ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಂಥ ಆಹಾರಗಳು


    1. ಸಿಟ್ರಸ್ ಹೊಂದಿರುವ ಹಣ್ಣುಗಳು : ನಿಂಬೆಹಣ್ಣು, ಕಿತ್ತಳೆ, ದ್ರಾಕ್ಷಿಹಣ್ಣು ಮುಂತಾದ ಹಣ್ಣುಗಳು ಹೆಚ್ಚಿನ ಸಿಟ್ರಸ್ ಒಳಗೊಂಡಿದೆ. ಇವುಗಳಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಸಿ ಸಮೃದ್ಧವಾಗಿರುತ್ತವೆ. ಇವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.


    2.ಬಾದಾಮಿ : ದೇಹಕ್ಕೆ ಬೇಕಾಗುವ ಅಗತ್ಯ ಪೋಷಕಾಂಶಗಳ ಶಕ್ತಿಕೇಂದ್ರವಾಗಿದೆ. ಬಾದಾಮಿಯು ಹೃದಯದ ಆರೋಗ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಇದು ನಿಮ್ಮ ರೋಗನಿರೋಧಕ ವ್ಯವಸ್ಥೆಗೂ ಒಳ್ಳೆಯದು. ಬಾದಾಮಿಯು ವಿಟಮಿನ್ ಇ, ಸತು, ಮೆಗ್ನೀಸಿಯಮ್ ಮತ್ತು ಪ್ರೋಟೀನ್‌ಗಳಂತಹ ಅಗತ್ಯ ಪೋಷಕಾಂಶಗಳನ್ನು ಹೊಂದಿರುತ್ತದೆ. ಇದು ರೋಗನಿರೋಧಕ ವ್ಯವಸ್ಥೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ.


    ಬಾದಾಮಿ


    3.ಅರಿಶಿನ: ಅರಿಶಿನದಲ್ಲಿ ಅದ್ಭುತವಾದ ಆರೋಗ್ಯ ಪ್ರಯೋಜನಗಳಿವೆ. ಅರಿಶಿನದ ಮುಖ್ಯ ಅಂಶವಾದ ಕರ್ಕ್ಯುಮಿನ್ ರೋಗನಿರೋಧಕ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಇದನ್ನು ಹಲವಾರು ವಿಧಗಳಲ್ಲಿ ನಿಮ್ಮ ಆಹಾರದಲ್ಲಿ ಸೇರಿಸಬಹುದು. ಪಾಕವಿಧಾನದಲ್ಲಿ ಇದನ್ನು ಬಳಸಬಹುದು. ಅಲ್ಲದೇ ಅರಿಶಿನ ಹಾಲು ಕುಡಿಯಬಹುದು. ಚಹಾಕ್ಕೂ ಇದನ್ನು ಸೇರಿಸಬಹುದು.


    4.ಗ್ರೀನ್‌ ಟೀ: ಗ್ರೀನ್‌ ಟೀ, ಎಪಿಗಲ್ಲೊಕಾಟೆಚಿನ್ ಗ್ಯಾಲೇಟ್ ಅನ್ನು ಹೊಂದಿರುತ್ತದೆ. ಆದ್ದರಿಂದ ಗ್ರೀನ್ ಟೀ ಕುಡಿಯುವುದು ನಮ್ಮ ರೋಗನಿರೋಧಕ ವ್ಯವಸ್ಥೆಗೆ ಒಳ್ಳೆಯದು. ಇದಲ್ಲದೇ ಈ ಗ್ರೀನ್‌ ಟೀ ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.


    ಗ್ರೀನ್ ಟೀ


    5.ಮಜ್ಜಿಗೆ: ಮಜ್ಜಿಗೆ ಕ್ಯಾಲ್ಸಿಯಂ ತುಂಬಿದ ದೇಸಿ ಪಾನೀಯವಾಗಿದೆ. ಇದು ಒಂದು ರಿಫ್ರೆಶ್ ಪಾನೀಯವಾಗಿದ್ದು, ಬೇಸಿಗೆಯಲ್ಲಿ ಮಜ್ಜಿಗೆಯನ್ನು ಕುಡಿಯುವುದು ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು. ಮಜ್ಜಿಗೆಯಲ್ಲಿರುವ ಲ್ಯಾಕ್ಟಿಕ್ ಆಮ್ಲವು ಪ್ರತಿರಕ್ಷಣಾ ವ್ಯವಸ್ಥೆ ಸರಾಗವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಮಜ್ಜಿಗೆಗೆ ನೀವು ಕಲ್ಲು ಉಪ್ಪು, ಮೆಣಸು, ಪುದೀನ ಎಲೆಗಳು ಮತ್ತು ಇತರ ಮಸಾಲೆಗಳನ್ನು ಸೇರಿಸಬಹುದು.


    ರೋಗನಿರೋಧಕ ಶಕ್ತಿಗಾಗಿ ಈ ಆಹಾರಗಳನ್ನೂ ತಿನ್ನಿ


    ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಇತರ ಆಹಾರಗಳಲ್ಲಿ ಬೆಳ್ಳುಳ್ಳಿ, ಶುಂಠಿ, ಕಿವಿ ಹಣ್ಣು, ಪಪ್ಪಾಯ, ಕೋಸುಗಡ್ಡೆ, ಪಾಲಕ್, ಮೊಸರು, ಬೆಲ್ ಪೆಪರ್ ಮತ್ತು ಕೆಲವು ಬೀಜಗಳು ಪ್ರಮುಖವಾಗಿವೆ. ಇವುಗಳು ಆರೋಗ್ಯಕ್ಕೆ ಬೇರೆ ಬೇರೆ ಪ್ರಯೋಜನಗಳನ್ನು ನೀಡುತ್ತವೆಯಲ್ಲದೇ ಕಾಯಿಲೆ , ಸೋಂಕುಗಳನ್ನು ದೂರವಿಡಲು ಸಹಾಯ ಮಾಡುತ್ತವೆ.




    ಅಂದಹಾಗೆ ನಿಮ್ಮ ಆಹಾರ ಮತ್ತು ಜೀವನಶೈಲಿಯು ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಆರೋಗ್ಯಕರ ಆಹಾರವನ್ನು ಸೇವಿಸುವುದು, ನಿಯಮಿತವಾಗಿ ವ್ಯಾಯಾಮ ಮಾಡುವುದು, ಸರಿಯಾದ, ಗುಣಮಟ್ಟದ ನಿದ್ರೆ ಮಾಡುವುದು ಮತ್ತು ಆರೋಗ್ಯಕರ ದೇಹವನ್ನು ಕಾಪಾಡಿಕೊಳ್ಳುವುದು ಬಹಳ ಅಗತ್ಯ. ಇವುಗಳ ಜೊತೆಗೆ ಆರೋಗ್ಯಕ್ಕೆ ಹಾನಿಕಾರಕವಾದ ಧೂಮಪಾನ ಹಾಗೂ ಮದ್ಯಪಾನವನ್ನು ತ್ಯಜಿಸುವುದು ಕೂಡ ಅಷ್ಟೇ ಮುಖ್ಯ.

    Published by:Monika N
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು