Health and Nutrition: ಆರೋಗ್ಯಕರ ಆಹಾರ ಸೇವನೆ ಹೇಗಿರಬೇಕು? ಶೆಫ್ ಕುನಾಲ್ ಕಪೂರ್ ಹೇಳಿದ್ದೇನು?

ಉದ್ಯೋಗಸ್ಥ ಮಹಿಳೆಯ ಬದುಕು ಒತ್ತಡದಿಂದ ಕೂಡಿರುತ್ತದೆ. ಅವರು ಮನೆಯ ಕೆಲಸ ಮಾತ್ರವಲ್ಲ, ಕಚೇರಿಯ ಒತ್ತಡವನ್ನು ಕೂಡ ನಿರ್ವಹಿಸುತ್ತಾರೆ. ಒತ್ತಡದ ಕೆಲಸಗಳ ಕಾರಣದಿಂದ, ಸಮಯವನ್ನು ಉಳಿಸಲಿಕ್ಕಾಗಿ ಬಹಳಷ್ಟು ಉದ್ಯೋಗಸ್ಥ ಮಹಿಳೆಯರು ತಮ್ಮ ಬೆಳಗ್ಗಿನ ಉಪಹಾರವನ್ನು ತಪ್ಪಿಸಿಕೊಳ್ಳುತ್ತಾರೆ.

ಶೆಪ್ ಕುನಾಲ್ ಕಪೂರ್

ಶೆಪ್ ಕುನಾಲ್ ಕಪೂರ್

  • Share this:
ಸಾಂಕ್ರಾಮಿಕದ (Pandemic) ಕಾರಣದಿಂದಾಗಿ, ಈ ದಿನಗಳಲ್ಲಿ ಆರೋಗ್ಯ (Health) ಮತ್ತು ಪೌಷ್ಟಿಕಾಂಶದ (Protien) ಬಗ್ಗೆ ಕಾಳಜಿ ಹೆಚ್ಚಾಗಿದೆ. ಜನ ತಮ್ಮ ಆಹಾರದ (Food) ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಇದು ಒಳ್ಳೆಯ ಬದಲಾವಣೆ ನಿಜ, ಆದರೆ ಏನನ್ನು ತಿನ್ನಬೇಕು, ತಿನ್ನಬಾರದು ಎಂಬ ಗೊಂದಲಕ್ಕೆ ಕೂಡ ಕಾರಣವಾಗಿದೆ. ಪೌಷ್ಟಿಕಾಂಶಯುಕ್ತ ಮತ್ತು ರೋಗ ನಿರೋಧಕ ಶಕ್ತಿ (Immunity) ಹೆಚ್ಚಿಸುವ ಆಹಾರಗಳು ಅತ್ಯಗತ್ಯ ಎಂಬುದು ನಮಗೆ ಗೊತ್ತು. ಆದರೆ ನಿಖರವಾಗಿ ಅವು ಯಾವುವು? ಶೆಫ್ ಕುನಾಲ್ ಕಪೂರ್ (Chief Kunal Kapoor), ಬೆಳಗ್ಗಿನ ಉಪಹಾರ (Breakfast), ಮಹಿಳೆಯರಿಗೆ ಅಗತ್ಯವಾದ ಆಹಾರ ಇತ್ಯಾದಿಗಳ ಕುರಿತು ಇಲ್ಲಿ ಮಾತನಾಡಿದ್ದಾರೆ.

ತಮ್ಮ ಆಹಾರದ ಯೋಜನೆಗಳನ್ನು ತಯಾರಿಸುವಾಗ ಉದ್ಯೋಗಸ್ಥ ಮಹಿಳೆಯರು ಏನನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು?

ಉದ್ಯೋಗಸ್ಥ ಮಹಿಳೆಯ ಬದುಕು ಒತ್ತಡದಿಂದ ಕೂಡಿರುತ್ತದೆ. ಅವರು ಮನೆಯ ಕೆಲಸ ಮಾತ್ರವಲ್ಲ, ಕಚೇರಿಯ ಒತ್ತಡವನ್ನು ಕೂಡ ನಿರ್ವಹಿಸುತ್ತಾರೆ. ಒತ್ತಡದ ಕೆಲಸಗಳ ಕಾರಣದಿಂದ, ಸಮಯವನ್ನು ಉಳಿಸಲಿಕ್ಕಾಗಿ ಬಹಳಷ್ಟು ಉದ್ಯೋಗಸ್ಥ ಮಹಿಳೆಯರು ತಮ್ಮ ಬೆಳಗ್ಗಿನ ಉಪಹಾರವನ್ನು ತಪ್ಪಿಸಿಕೊಳ್ಳುತ್ತಾರೆ.

ಅದು ಆನಾರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಆದ್ದರಿಂದ ಅವರುಗಳು ತಮ್ಮ ಮತ್ತು ಆಹಾರದ ಬಗ್ಗೆ ಕಾಳಜಿ ತೆಗೆದುಕೊಳ್ಳುವುದು ಅತ್ಯಗತ್ಯ. ಆಕೆ ಮೊದಲೇ ತನ್ನ ಆಹಾರದ ಯೋಜನೆ ರೂಪಿಸಿಕೊಳ್ಳಬಹುದು. ಆಗಾಗ ಸ್ವಲ್ಪ ಸ್ವಲ್ಪ ಆಹಾರ ಸೇವಿಸಿ, ಎನರ್ಜಿ ಮಟ್ಟವನ್ನು ಬೂಸ್ಟ್ ಮಾಡಿಕೊಳ್ಳಬಹುದು, ಸಾಕಷ್ಟು ನೀರನ್ನು ಕುಡಿಯಬೇಕು ಮತ್ತು ಸಂಜೆ ಆರೋಗ್ಯಕರ ತಿನಿಸುಗಳನ್ನು ಸೇವಿಸಬಹುದು.

ಪೌಷ್ಟಿಕಾಂಶ ಮತ್ತು ರೋಗ ನಿರೋಧಕ ಶಕ್ತಿಗೆ ಆದ್ಯತೆ ನೀಡಲಾಗುತ್ತಿದೆ. ನಿಮ್ಮ ಪ್ರಕಾರ ಬೆಳಗ್ಗಿನ ಉಪಹಾರ, ಮುಖ್ಯವಾಗಿ ಮಹಿಳೆಯರ ಬೆಳಗ್ಗಿನ ಉಪಹಾರ ಹೇಗಿರಬೇಕು?

ಮಹಿಳೆ ಹಲವಾರು ಕೆಲಸಗಳನ್ನು ಮಾಡುತ್ತಾರೆ, ದಿನವಿಡಿ ಅವರ ಸಾಮರ್ಥ್ಯ ಕುಗ್ಗದೆ ಇರಬೇಕಾದರೆ, ಅವರು ಬೆಳಗ್ಗೆ ಪೌಷ್ಟಿಕಾಂಶಯುಕ್ತ ಆಹಾರ ಸೇವಿಸುವುದು ಬಹಳ ಆವಶ್ಯಕ. ಓಟ್ಸ್ ‌‌‌‌‌‍ನಲ್ಲಿ ಪ್ರೊಟೀನ್, ಫೈಬರ್, ಕಬ್ಬಿಣಾಂಶ ಮತ್ತು ಸೂಕ್ಷ್ಮ ಪೋಷಕಾಂಶಗಳಿರುತ್ತವೆ. ಅದನ್ನು ತಯಾರಿಸುವುದು ಕೂಡ ಬಹಳ ಸುಲಭ, ಉಪ್ಪಿಟ್ಟು, ಪೊಂಗಲ್, ಉತ್ತಪ್ಪ, ಪರಾಟ ಸೇರಿದಂತೆ ಎಲ್ಲಾ ರೀತಿಯ ತಿನಿಸುಗಳನ್ನು ಅದರಿಂದ ತಯಾರಿಸಬಹುದು.

ಇದನ್ನೂ ಓದಿ:  Head Stand Yoga: ಯೋಗಾಸನಗಳ ರಾಜ ಎಂದೇ ಕರೆಯಲ್ಪಡುವ ಶೀರ್ಷಾಸನದ ಪ್ರಯೋಜನಗಳನ್ನು ಪಡೆಯಲು ಆಸನ ಹಾಕಿ

ಹಿಂದೆಲ್ಲಾ ಆರೋಗ್ಯಕರ ಅಡುಗೆ ಎಣ್ಣೆಗಳಲ್ಲಿ ಆಹಾರ ತಯಾರಿಸುವ ಬಗ್ಗೆ ಜನರು ತಲೆ ಕೆಡಿಸಿಕೊಂಡದ್ದರ ಬಗ್ಗೆ ಕೇಳಿದ್ದು ವಿರಳ; ಈಗ ಆ ವಿಷಯದಲ್ಲಿ ಏನು ಬದಲಾಗಿದೆ ಎಂದು ನಿಮಗನಿಸುತ್ತದೆ?

ಅವರ ಯೋಚನೆಯಲ್ಲಿ ಬದಲಾವಣೆಯಾಗಿದೆ; ಪೌಷ್ಟಿಕಾಂಶಯುಕ್ತ ಆಹಾರದ ಬಗ್ಗೆ ಅವರು ಹೆಚ್ಚು ಒಲವು ತೋರುತ್ತಿದ್ದಾರೆ. ಅವರು ಹೃದಯದ ಆರೋಗ್ಯಕ್ಕೆ ಸೂಕ್ತವಾದ, ಉತ್ತಮ ಗುಣಮಟ್ಟದ ಆಡುಗೆ ಎಣ್ಣೆಗಳಿಗೆ ಪ್ರಾಶಸ್ತ್ಯ ನೀಡುತ್ತಿದ್ದಾರೆ. ಉತ್ತಮ ಕೊಲೆಸ್ಟ್ರಾಲ್ ಅವರ ಆರೋಗ್ಯದ ಮಂತ್ರವಾಗಿದೆ.

ನಿಮ್ಮ ಪ್ರಕಾರ ಆರೋಗ್ಯಕರ ಮತ್ತು ಪೌಷ್ಟಿಕಾಂಶಯುಕ್ತ ಬೆಳಗ್ಗಿನ ಉಪಹಾರಗಳು ಯಾವುವು?

ಕೋವಿಡ್ ಸಾಂಕ್ರಾಮಿಕದ ಬಳಿಕ, ನಮ್ಮ ಆಹಾರದ ಆಯ್ಕೆಗಳ ಬಗ್ಗೆ ಹೆಚ್ಚು ಕಾಳಜಿ ವಹಿಸತೊಡಗಿದ್ದೇವೆ. ನನ್ನ ಉಪಹಾರವು ಅಗತ್ಯವಾದ ಪೋಷಕಾಂಶಗಳನ್ನು ಒಳಗೊಂಡಿರುತ್ತದೆ, ಅದರಲ್ಲಿ ಆ್ಯಂಟಿಆಕ್ಸಿಡೆಂಟ್‍ಗಳು ಇರುತ್ತವೆ ಮತ್ತು ದಿನವಿಡೀ ನನ್ನನ್ನು ಆ್ಯಕ್ಟಿವ್ ಆಗಿರುವಂತೆ ನೋಡಿಕೊಳ್ಳುತ್ತವೆ.

ಡಯೆಟ್ ಒಲವಿನ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಅವು ಒಂದು ಅಥವಾ ಹೆಚ್ಚಿನ ಪೋಷಕಾಂಶಗಳನ್ನು ಹೊಂದಿರುವುದಿಲ್ಲ, ಅದರಿಂದ ಗಂಭೀರ ಕೊರತೆಗಳು ಉಂಟಾಗಬಹುದು. ಸಮತೋಲಿತ ಆಹಾರವನ್ನು ಸೇವಿಸುವುದು, ಪ್ರತೀ ಗುಂಪಿನಿಂದ ಆಹಾರವನ್ನು ಸೇರಿಸಿಕೊಳ್ಳುವುದು, ಸೂಕ್ತ ರೀತಿಯ ವ್ಯಾಯಾಮ ಮಾಡುವುದು ಮತ್ತು ಚೆನ್ನಾಗಿ ನಿದ್ರಿಸುವುದು ಹೆಚ್ಚು ಅತ್ಯಗತ್ಯ.

ಒಬ್ಬ ಶೇಫ್ ಆಗಿ ಇಷ್ಟು ವರ್ಷಗಳ ನಿಮ್ಮ ಪಯಣವನ್ನು ಹೇಗೆ ವಿವರಿಸುವಿರಿ? ಸಾಂಕ್ರಾಮಿಕದಿಂದ ಅದರಲ್ಲಿ ಯಾವ ರೀತಿಯ ಬದಲಾವಣೆಯಾಗಿದೆ?

ನಾನು ಗಮನಸಿದ ಮುಖ್ಯ ಬದಲಾವಣೆ ಸುಸ್ಥಿರ ಜೀವನ. ರೆಸ್ಟೊರೆಂಟ್‍ಗಳಲ್ಲಿ ಅಥವಾ ಬಾಣಸಿಗರು, ಆಹಾರ ಪೋಲಾಗುವುದನ್ನು ತಡೆಯಲು ಮತ್ತು ಉಳಿದ ಆಹಾರವನ್ನು ಸೂಕ್ತ ರೀತಿಯಲ್ಲಿ ಬಳಸಲು ಪ್ರಯತ್ನಿಸುತ್ತಿದ್ದಾರೆ. ಜನರು ಸುಲಭವಾಗಿ ತಯಾರಿಸಿ ತಿನ್ನುವ ಆಹಾರಗಳನ್ನು ತಯಾರಿಸುತ್ತಿದ್ದಾರೆ. ಹಾಗಾಗಿ ಜನರನ್ನು ಆಕರ್ಷಿಸಲು ಹೊಸ ಹೊಸ ಐಡಿಯಾಗಳು ಹುಟ್ಟಿಕೊಳ್ಳುತ್ತಿವೆ.

ಇದನ್ನೂ ಓದಿ:  Health Tips: ಯೋಗ, ಧ್ಯಾನ ಮಾಡೋಕೆ ಟೈಮ್​ ಇಲ್ಲ ಅನ್ನೋ ನೆಪ ಬಿಡಿ, ಉತ್ತಮ ಆರೋಗ್ಯಕ್ಕೆ ಶಿಸ್ತಿನ ಜೀವನ ಶೈಲಿ

ನಿಮಗೆ ತಯಾರಿಸಲು ಇಷ್ಟವಾಗುವ ಭಾರತೀಯ ಖಾದ್ಯ?

ಗೇವರ್ ತನ್ನ ಸಿಗ್ನಿಚರ್ ಖಾದ್ಯ, ಅದನ್ನು ತಯಾರಿಸುವುದು ಒಂದು ಸವಾಲಾಗಿದ್ದರೂ, ಅದರ ರುಚಿ ಮಾತ್ರ ತುಂಬಾ ಚೆನ್ನಾಗಿರುತ್ತದೆ.

ನೀವು ಶೇಫ್ ಅಲ್ಲದಿದ್ದರೆ ಏನಾಗಿರುತ್ತಿದ್ದಿರಿ?

ಬ್ಯಾಂಕರ್ ಆಗಿರುತ್ತಿದ್ದೆ, ಏಕೆಂದರೆ ನಾನು ಬ್ಯಾಂಕರ್‍ಗಳ ಕುಟುಂಬಕ್ಕೆ ಸೇರಿದವನು. ನಾನು ಕಾಮರ್ಸ್ ಪದವೀಧರ.

ನಿಮ್ಮ ಮೆಚ್ಚಿನ ಜಾಗತಿಕ ಖಾದ್ಯ ?

ಇದನ್ನು ಹೇಳಲು ಕಷ್ಟ. ನನಗೆ ಎಲ್ಲಾ ಅಡುಗೆ ಪ್ರಕಾರಗಳು ಇಷ್ಟವಾಗುತ್ತವೆ.
Published by:Mahmadrafik K
First published: