• Home
  • »
  • News
  • »
  • lifestyle
  • »
  • Ikkeri Temple History: ಅಘೋರೇಶ್ವರನ ಮುಂದೆ ಕಲ್ಲಾಯ್ತು ಜೀವಂತ ನಂದಿ, ದಾಳಿಕೋರರ ದೌರ್ಜನ್ಯ ಸಾರುತ್ತ ನಿಂತಿವೆ ಇಕ್ಕೇರಿಯ ಐತಿಹಾಸಿಕ ಶಿಲ್ಪಗಳು!

Ikkeri Temple History: ಅಘೋರೇಶ್ವರನ ಮುಂದೆ ಕಲ್ಲಾಯ್ತು ಜೀವಂತ ನಂದಿ, ದಾಳಿಕೋರರ ದೌರ್ಜನ್ಯ ಸಾರುತ್ತ ನಿಂತಿವೆ ಇಕ್ಕೇರಿಯ ಐತಿಹಾಸಿಕ ಶಿಲ್ಪಗಳು!

ಇಕ್ಕೇರಿ

ಇಕ್ಕೇರಿ

Travel Story: ಈ ದೇವಾಲಯ ಗರ್ಭಗೃಹ, ಅರ್ಧ ಮಂಟಪ, ಹಿರಿದಾದ ಮುಖ ಮಂಟಪ ಹಾಗೂ ಪ್ರತ್ಯೇಕ ನಂದಿ ಮಂಟಪ ಒಳಗೊಂಡಿದೆ. ಇಲ್ಲಿ ಸುಂದರವಾದ ಗೋಪುರವಿದ್ದು, ಈ ದೇವಾಲಯದ ಎಡ ಭಾಗದ ದ್ವಾರದ ಬಳಿ ಇರುವ ಜೋಡಿ ಆನೆಗಳ ಶಿಲ್ಪ ಎಲ್ಲರ ಕಣ್ಣು ಸೆಳೆಯುತ್ತದೆ.

  • Share this:

ಸಾಮಾನ್ಯವಾಗಿ ನೀವು ಮಲೆನಾಡು (Malenadu) ಭಾಗದ ಶಿವಮೊಗ್ಗ (Shivamogga), ಸಾಗರ (sagar) ಕಡೆ ಟ್ರಿಪ್ ಹೋಗುವ ಯೋಚನೆ ಬಂದರೆ ಮೊದಲು ನೆನಪಿಗೆ ಬರುವುದು ವಿಶ್ವ ವಿಖ್ಯಾತ ಜೋಗ ಜಲಪಾತ (Jog falls). ಆದರೆ ನಂತರ ನಿಮಗೆ ಹೆಚ್ಚಾಗಿ ಕೆಳಿ ಬರುವುದು ಇತಿಹಾಸ ಪ್ರಸಿದ್ಧ ದೇವಾಲಯಗಳು. ಕೆಳದಿ, ಇಕ್ಕೇರಿ (Ikkeri), ಬನವಾಸಿ, ಹೀಗೆ ಹಲವಾರು ಸ್ಥಳಗಳಿವೆ. ಅದರಲ್ಲಿ ಹಲವು ಜನರಿಗೆ ಗೊತ್ತಿಲ್ಲದ ಸ್ಥಳ ಎಂದರೆ ಇಕ್ಕೇರಿ ಅಘೋರೇಶ್ವರ ದೇವಾಲಯ. ಕೆಳದಿಯ ಅರಸರ ಅದ್ಭುತ ಶಿಲ್ಪ ಕಲೆ ಹಾಗೂ ವೈಭವಕ್ಕೆ ಸಾಕ್ಷಿಯಾಗಿರುವ ಇಕ್ಕೇರಿ ಸುತ್ತ ಮುತ್ತಲಿನ ಜನರ ನೆಚ್ಚಿನ ಸ್ಥಳ. ಈ ಇಕ್ಕೇರಿ, ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿರುವ ಒಂದು ಪುಟ್ಟ ಗ್ರಾಮ. ಆದರೆ, ಇದರ ಇತಿಹಾಸ (history)ಮಾತ್ರ ಬಹಳ ಹಿಂದಿನದ್ದು. ಈ ಇಕ್ಕೇರಿಯ ಬಗ್ಗೆ ಕೆಲ ಮಾಹಿತಿ ಇಲ್ಲಿದೆ.


ಊರಿನ ಹೆಸರಿಗೂ ಇದೆ ಒಂದು ಅರ್ಥ


ಈ ಊರಿನಲ್ಲಿ ಎರಡು ಸಾಲಿನ ಮನೆಗಳ ಎರಡು ರಸ್ತೆ ಇದ್ದ ಕಾರಣ ಇದಕ್ಕೆ ಇಕ್ಕೇರಿ ಎಂದು ಹೆಸರು ಬಂದಿದೆಯಂತೆ. ಇಕ್ಕೇರಿ 16 ಮತ್ತು 17ನೇ ಶತಮಾನದಲ್ಲಿ ಕೆಳದಿ ಅರಸರ ರಾಜಧಾನಿಯಾಗಿ ವೈಭವದಿಂದ ಮೆರೆದದ್ದು ಈಗ ಇತಿಹಾಸ. ಮೊದಲು ವಿಜಯನಗರ ಅರಸನ ಅಧೀನದಲ್ಲಿದ್ದ ಈ ಕೆಳದಿ ಸಂಸ್ಥಾನ ನಂತರ ವೀರಭದ್ರನಾಯಕನ ಆಡಳಿತ ಕಾಲದಲ್ಲಿ ವಿಜಯನಗರ ಅರಸರ ಅಧೀನದಿಂದ ಬಿಡುಗಡೆಗೊಂಡು ಸ್ವತಂತ್ರ ಸಂಸ್ಥಾನವಾಯಿತು.


ಈ ಸಂದರ್ಭದಲ್ಲಿ ಇಕ್ಕೇರಿಯನ್ನು ಆಗಿನ ರಾಜರು ರಾಜಧಾನಿಯಾಗಿ ಮಾಡಿಕೊಂಡಿದ್ದರು.  ನಂತರ ಕೆಲ ಸಮಯವಾದ ಮೆಲೆ ಕೆಳದಿ ಅರಸರು ರಾಜಧಾನಿಯನ್ನು ಬಿದನೂರಿಗೆ ಬದಲಾಯಿಸಿದರು. ಆದರೂ ಇಕ್ಕೇರಿ ಇಂದಿಗೂ ತನ್ನ ಕಳೆಯನ್ನು ಉಳಿಸಿಕೊಂಡಿದೆ. ಇಕ್ಕೇರಿಯ ಸುತ್ತಲೂ ಮೂರು ಸುತ್ತಿನ ವಿಶಾಲವಾದ ಕೋಟೆಯಿತ್ತು ಎನ್ನುವ ಮಾತಿದೆ. ಮತ್ತೊಂದು ವಿಚಾರ ಎಂದರೆ ಈಗ ನಾವು ನೋಡಲು ಹೋದರೆ ಸಿಗುವುದು ಹೊಸ ಇಕ್ಕೇರಿಯಂತೆ. ಹಳೆ ಇಕ್ಕೇರಿ ಇನ್ನುವ ಊರು ಅತವಾ ಕೇರಿ ಈಗಲೂ ಇದ್ದು, ಅಲ್ಲಿ ಆಗಿನ ಅರಸರ ಕೋಟೆಯ ಅವಶೇಷವಿದೆ.


ಸುಂದರ ಜಾಗ ಈ ಇಕ್ಕೇರಿ


ಅಲ್ಲದೇ, ಈ ಸ್ಥಳ ಅತ್ಯಂತ ಹಳೆಯ ಐತಿಹಾಸಿಕ ಜಾಗ ಎನ್ನುವುದಕ್ಕೆ ಸಹ ಹಲವಾರು ಕುರುಹುಗಳಿದೆ.  ರಾಜರ ಆಳ್ವಿಕೆಯ ನೆನಪಾಗಿ ಇಲ್ಲಿ ಅಘೋರೇಶ್ವರ ದೇವಾಲಯ ಇದ್ದು, ಆ ದೇವಾಲಯಕ್ಕೂ ಒಂದು ಇತಿಹಾಸವಿದೆ. ಇಲ್ಲಿ ದೊಡ್ಡ ಕಲ್ಲು ಕಂಬಗಳು, ಜಾಲಂದ್ರ ಹಾಗೂ ಸುಂದರ ಶಿಲ್ಪಕಲಾ ಕೆತ್ತನೆಯಿಂದ ಕೂಡಿದ ದೇವಾಲಯಗಳು ಇದರ ಸುತ್ತಲೂ ಇದೆ. ಈ ಪುರಾತನ ದೇವಾಲಯದಲ್ಲಿ ಅಘೋರೇಶ್ವರ ಲಿಂಗವನ್ನು ಪ್ರತಿಷ್ಠಾಪನೆ ಮಾಡಲಾಗಿದ್ದು, 16ನೇ ಶತಮಾನದ ದೊಡ್ಡ ಸಂಕಣ್ಣನಾಯಕನ ಕಾಲದಲ್ಲಿ ಇಲ್ಲಿ ದಕ್ಷಿಣಾಭಿಮುಖವಾಗಿ ಅಖಿಲಾಂಡೇಶ್ವರಿ ಅಘೋರೇಶ್ವರನ ದೇವಾಲಯವನ್ನು ಕಟ್ಟಿದನೆಂದು ಹೇಳಲಾಗುತ್ತದೆ.
ಈ ದೇವಾಲಯ ಗರ್ಭಗೃಹ, ಅರ್ಧ ಮಂಟಪ, ಹಿರಿದಾದ ಮುಖ ಮಂಟಪ ಹಾಗೂ ಪ್ರತ್ಯೇಕ ನಂದಿ ಮಂಟಪ ಒಳಗೊಂಡಿದೆ. ಇಲ್ಲಿ ಸುಂದರವಾದ ಗೋಪುರವಿದ್ದು, ಈ ದೇವಾಲಯದ ಎಡ ಭಾಗದ ದ್ವಾರದ ಬಳಿ ಇರುವ ಜೋಡಿ ಆನೆಗಳ ಶಿಲ್ಪ ಎಲ್ಲರ ಕಣ್ಣು ಸೆಳೆಯುತ್ತದೆ. ಹಂಸ, ಅರೆಗೋಪುರ, ನಾಗಬಂಧ, ವಾದ್ಯಗಾರರು, ನೃತ್ಯ ಮಾಡುತ್ತಿರುವ ಕನ್ನಿಕೆಯರು, ಐರಾವತದ ಮೇಲೆ ಕುಳಿತ ಇಂದ್ರ, ಆನೆ, ಸಿಂಹ ಹೀಗೆ ಅನೇಕ ಶಿಲ್ಪ ಕೆತ್ತನೆ ಈ ದೇವಾಲಯದಲ್ಲಿದೆ.


ಇದನ್ನೂ ಓದಿ: ರುಚಿ ಜಾಸ್ತಿ ಅಂತ ಹೆಚ್ಚು ಸೋಡಾ ಕುಡಿದ್ರೆ ಹಲ್ಲೆಲ್ಲಾ ಹಾಳಾಗೋದು ಗ್ಯಾರಂಟಿ!


ದೇವರ ಮುಂದೆ ಕಲ್ಲಾದ ನಂದಿ


ದೇವಸ್ಥಾನದ ಹೊರ ಆವರಣವು ಹಚ್ಚ ಹಸುರಿನ ಹುಲ್ಲು ಹಾಸಿನಿಂದ ಕಂಗೊಳಿಸುತ್ತದೆ.  ಈ ದೇವಾಲಯದಲ್ಲಿರುವ ಕಲ್ಲು ನಂದಿ ಬೃಹದಾಕಾರವಾಗಿದ್ದು, ಅದರ ಕಾಲುಗಳ ಅಡಿಯಲ್ಲಿ ಪುಟ್ಟ ಮಕ್ಕಳನ್ನು ಒಂದು ಬದಿಯಿಂದ ಕಳುಹಿಸಿ ಆಶೀರ್ವಾದ ಪಡೆಯಲಾಗುತ್ತದೆ. ಈ ನಂದಿ ಕಲ್ಲಾಗಿರುವುದಕ್ಕೆ ಸಹ ಒಂದು ಕಥೆ ಇದೆ.


ಅದರಲ್ಲಿ ನುಸುಳಿದರೆ ಇಷ್ಟಾರ್ಥ ಪ್ರಾಪ್ತವಾಗುತ್ತದೆ ಎಂಬ ಪ್ರತೀತಿಯಿದೆ. ಈ ನಂದಿಯನ್ನು ಸರಿಯಾಗಿ ಗಮನಿಸದರೆ ನಂದಿ ರಾಜ ನಂದಿ ಎಂಬುದು ತಿಳಿಯುತ್ತದೆ. ರಾಜರ ಆಸ್ಥಾನದಲ್ಲಿರುವ ನಂದಿಗೆ ಮಾಡಿರುವ ಸಿಂಗಾರ ಆಗಿದೆ.  ಒಮ್ಮೆ ದಾಳಿಕೋರರಿಂದ ತಪ್ಪಿಸಿಕೊಂಡ ನಂದಿ, ಅಘೋರೇಶ್ವರ ಎದುರು ಕುಳಿತು ನನ್ನನ್ನ ಕಾಪಾಡು ಎಂದು ಕೇಳಿತಂತೆ. ಆಗ ಅಘೋರೇಶ್ವರ ಕಲ್ಲಾಗಿ ಪರಿವರ್ತನೆ ಮಾಡುತ್ತಾನೆ ಎನ್ನುವ ಕಥೆಯನ್ನು ಈ ಸ್ಥಳೀಯರು ಹೇಳುತ್ತಾರೆ.


ಕೇವಲ ನಂದಿ ಮಾತ್ರ ಅಲ್ಲ, ಆ ದೇವಾಲಯದ ಹೊರ ಭಾಗದಲ್ಲಿ ಕೆಲ ಮೂರ್ತಿಗಳನ್ನು ಗಮನಿಸಿ  ನೋಡಿದರೆ, ಕೇವಲ ಕಾಲು, ಅರ್ಧ ಕಟ್​ ಆಗಿರುವ ಮೂರ್ತಿ, ಹೀಗೆ ಅಪೂರ್ಣ ಮೂರ್ತಿಗಳಿವೆ. ಇದು ದಾಳಿಕೋರರು ಆ ಸಮಯದಲ್ಲಿ ಮಾಡಿದ ಕುಕೃತ್ಯಕ್ಕೆ ಸಾಕ್ಷಿ. ಆ ಮೂರ್ತಿಗಳನ್ನು ತೆಗೆದು ಪುನರುಜ್ಜೀವನ ಮಾಡಲಾಗಿದ್ದರೂ ಸಹ, ಅದರ ಕಥೆ ಸಾರಿ ಹೇಳುತ್ತಿವೆ ಈ ಮೂರ್ತಿಗಳು.


ಇದನ್ನೂ ಓದಿ: ರಸಗುಲ್ಲಾದಿಂದ ಸಂದೇಶ್​ವರೆಗೆ, ಬೆಂಗಳೂರಿನಲ್ಲಿ ಬೆಸ್ಟ್ ಬಂಗಾಳಿ ಸ್ವೀಟ್ಸ್ ಸಿಗುವ ಬೇಕರಿಗಳಿವು


ಸಾಗರದಿಂದ 3 ಕಿಲೋ ಮೀಟರ್ ದೂರದಲ್ಲಿರುವ ಇಕ್ಕೇರಿgಎ ನಿರ್ದಿಷ್ಟ ಸಮಯದಲ್ಲಿ ಸಾಗರದಿಂದ ಬಸ್​ ಇದೆ. ಅಲ್ಲದೇ, ಶ್ರೀ ಕ್ಷೇತ್ರ ಸಿಗಂಧೂರು ಕಡೆ ಹೋಗುವ ಬಸ್​ಗಳು ಅರ್ಧ ದಾರಿಗೆ ಹೋಗುತ್ತದೆ. ಅಲ್ಲಿಂದ 1 ಕಿಮೀ ನಡೆದುಕೊಂಡು ಹೋಗಬಹುದು.

Published by:Sandhya M
First published: