ತೂಕ ಇಳಿಕೆ ಮತ್ತು ಫಿಟ್ನೆಸ್ (Weight Loss And Fitness) ಸಾಮಾನ್ಯ ವಿಷಯವಲ್ಲ. ಅದಕ್ಕಾಗಿ ಸಾಕಷ್ಟು ಶ್ರಮ ಮತ್ತು ತಾಳ್ಮೆ ಹಾಗೂ ತಪಸ್ಸು ಬೇಕಾಗುತ್ತದೆ. ತಪಸ್ಸು ಅಂದರೆ ತಿಂಡಿಗಳ ಮತ್ತು ಸಕ್ಕರೆ (Sugar) ವಸ್ತುಗಳ ಸೇವನೆ ಸಾಧ್ಯವಾದಷ್ಟು ಕಡಿಮೆ ಮಾಡುವುದು. ಆದರೆ ದೀರ್ಘಕಾಲ ಸಾಕಷ್ಟು ಜನರು ಸಕ್ಕರೆ ಮತ್ತು ಜಂಕ್ ಫುಡ್ (Junk Food) ಸೇವನೆಯಿಂದ ದೂರ ಉಳಿಯಲು ಸಾಧ್ಯ ಆಗಲ್ಲ. ಆದರೆ ಫಿಟ್ನೆಸ್ ಕಾಪಾಡಿಕೊಳ್ಳಲು ಕೆಲವು ಆಹಾರಗಳಿಂದ ಮುಖ್ಯವಾಗಿ ದೂರ ಇರುವುದು ಮುಖ್ಯ. ಯಾಕಂದ್ರೆ ನಾಲಿಗೆಗೆ ಎಷ್ಟೇ ಟೇಸ್ಟಿ ಆಗಿರುವ ಕೆಲವು ಪದಾರ್ಥಗಳು ಹೊಟ್ಟೆಗೆ ಅನಾರೋಗ್ಯಕರ ಆಹಾರವಾಗಿರುತ್ತವೆ.
ಫಿಟ್ನೆಸ್ ಮತ್ತು ವೇಟ್ ಲಾಸ್ ಗೆ ಈ ಪದಾರ್ಥಗಳು ಹಾನಿ ಮಾಡುತ್ತವೆ
ನಾವು ಯಾವಾಗಲೂ ಜಂಕ್ ಫುಡ್ ತಿನ್ನುತ್ತೇವೆ. ಅದರಲ್ಲೂ ಚಳಿಗಾಲದಲ್ಲಿ ತಿನ್ನುವ ಬಯಕೆ ಹೆಚ್ಚು. ಹಾಗಾಗಿ ಬಿಸಿ ಬಿಸಿ ರಸ್ತೆ ಬದಿಯ ಪದಾರ್ಥಗಳನ್ನು ತಿನ್ನಲು ಮುಂದಾಗುತ್ತೇವೆ. ಆದರೆ ಈ ಪದಾರ್ಥಗಳು ಆರೋಗ್ಯದ ಜೊತೆಗೆ ಫಿಟ್ನೆಸ್ ಹಾಳು ಮಾಡುತ್ತವೆ. ಅದರಲ್ಲೂ ತೂಕ ಇಳಿಸುವವರು ಹೆಚ್ಚು ಜಾಗ್ರತೆ ವಹಿಸಬೇಕಾಗುತ್ತದೆ.
ಕೆಲವೊಮ್ಮೆ ಪಿರಿಯಡ್ಸ್ನಲ್ಲಿ ಮೂಡ್ ಸ್ವಿಂಗ್ ಆಗುತ್ತೆ. ಹೀಗಾಗಿ ಚಾಕಲೇಟ್ ತಿನ್ನಬೇಕು ಅನಿಸುತ್ತದೆ. ಕೆಲವೊಮ್ಮೆ ತಡರಾತ್ರಿ ಸಿನಿಮಾ ನೋಡುವಾಗ ಚಿಪ್ಸ್ ತಿನ್ನುವ ಬಯಕೆಯಾಗುತ್ತದೆ. ಕೆಲವೊಮ್ಮೆ ತಿನ್ನಲು ಏನೂ ಇಲ್ಲದಾಗ, ನ್ಯೂಡಲ್ಸ್ ತಿನ್ನುತ್ತೇವೆ. ಇದು ಬಾಯಿ ರುಚಿ ಜೊತೆ ಹೊಟ್ಟೆ ತುಂಬಿಸುತ್ತದೆ. ಆದರೆ ಜಂಕ್ ತಿನ್ನುವ ಅಭ್ಯಾಸ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಜಂಕ್ ತಿನ್ನುವ ಅಭ್ಯಾಸ ಆರೋಗ್ಯಕ್ಕೆ ಹಾನಿಕರ. ಹಾಗಾಗಿ ಆರೋಗ್ಯಕರ ತಿನಿಸು ತಿನ್ನಿ ಇದು ಮನಸ್ಸು ಮತ್ತು ಹೊಟ್ಟೆ ಎರಡನ್ನೂ ಆರೋಗ್ಯವಾಗಿಡುತ್ತದೆ. ಡಾ. ಮನನ್ ವೋಹ್ರಾ ಅವರು ಇನ್ಸ್ಟಾದಲ್ಲಿ ಜಂಕ್ ಫುಡ್ ಗೆ ಕೆಲವು ಆರೋಗ್ಯಕರ ಪರ್ಯಾಯ ಪದಾರ್ಥಗಳ ಬಗ್ಗೆ ತಿಳಿಸಿದ್ದಾರೆ.
ಸಾಮಾನ್ಯ ಚಾಕೊಲೇಟ್ ಬದಲು ಡಾರ್ಕ್ ಚಾಕೊಲೇಟ್ ಸೇವಿಸಿ
ರಾತ್ರಿ ಸಿಹಿ ಕಡುಬಯಕೆ ತಪ್ಪಿಸಲು ಸಾಮಾನ್ಯ ಚಾಕೊಲೇಟ್ ಬದಲು ಡಾರ್ಕ್ ಚಾಕೊಲೇಟ್ ಸೇವಿಸಿ. ಇದು ಉತ್ಕರ್ಷಣ ನಿರೋಧಕ ಹೊಂದಿದೆ. ರಕ್ತದೊತ್ತಡ ನಿವಾರಣೆಗೆ ಪ್ರಯೋಜನಕಾರಿ. ಕನಿಷ್ಠ 70 ಪ್ರತಿಶತ ಚಾಕೊಲೇಟ್ ಅಂಶವಿರುವ ಡಾರ್ಕ್ ಚಾಕೊಲೇಟ್ ಸೇವಿಸುವುದು ಉತ್ತಮ.
ಆಲೂಗಡ್ಡೆ ಚಿಪ್ಸ್ ಬದಲು ನಾಚ್ನಿ ಚಿಪ್ಸ್ ಸೇವಿಸಿ
ಚಿಪ್ಸ್ ಸೇವಿಸುವಾಗ ಕ್ಯಾಲೊರಿ ಮತ್ತು ಬೊಜ್ಜು ಹೆಚ್ಚಿಸುವ ಆಲೂಗೆಡ್ಡೆ ಚಿಪ್ಸ್ ಬದಲು ನಾಚ್ನಿ ಚಿಪ್ಸ್ ಸೇವಿಸಿ. ಇದು ತೂಕ ಹೆಚ್ಚಾಗದಂತೆ ತಡೆಯುತ್ತದೆ. ಇವು ಆರೋಗ್ಯಕರವಾಗಿವೆ. ರಾಗಿಯಿಂದ ತಯಾರಿಸಿದ ಈ ಕುರುಕಲು ಚಿಪ್ಸ್ ಕಡಿಮೆ ಕ್ಯಾಲೋರಿ ಹೊಂದಿದ್ದು, ತೂಕವನ್ನು ಹೆಚ್ಚಿಸಲ್ಲ.
ತಣ್ಣನೆಯ ಪಾನೀಯ ಬದಲು ಹಣ್ಣಿನ ರಸ ಸೇವಿಸಿ
ತಂಪು ಪಾನೀಯ ಕುಡಿಯಲು ಇಷ್ಟ ಪಡುತ್ತಿದ್ದರೆ, ಅದು ನಿಮ್ಮ ಗಂಟಲಿಗೆ ಹಾನಿ ಮಾಡುತ್ತದೆ. ಅದರ ಬದಲು ಋತುಮಾನದ ಹಣ್ಣಿನ ಜ್ಯೂಸ್ ಸೇವಿಸಿ. ಹಣ್ಣಿನ ರಸಗಳು ಆರೋಗ್ಯ ಕಾಪಾಡುತ್ತವೆ. ಶಕ್ತಿ ಮತ್ತು ಪೌಷ್ಟಿಕಾಂಶ ನೀಡುತ್ತವೆ. ಹಣ್ಣಿನ ರಸ ಪೋಷಕಾಂಶಗಳಿಂದ ಸಮೃದ್ಧವಾಗಿದೆ.
ಡಬಲ್ ರೋಟಿ ಬದಲಿಗೆ ಸ್ಟಫ್ಡ್ ರೋಟಿ ತಿನ್ನಿ
ರಾತ್ರಿ ಬ್ರೆಡ್ನೊಂದಿಗೆ ಸ್ಯಾಂಡ್ವಿಚ್ ತಿನ್ನುವ ಬದಲು ಸ್ಟಫ್ಡ್ ರೋಟಿ ಸೇವನೆ ಮಾಡಿ. ಮೇಥಿ, ಬಾತುವಾ, ಪಾಲಕ್ ಇತ್ಯಾದಿ. ಇದು ತುಂಬಾ ಟೇಸ್ಟಿ ಮತ್ತು ಆರೋಗ್ಯಕರ ಆಹಾರವಾಗಿದ್ದು, ಸೇವಿಸಿ.
ಇದನ್ನೂ ಓದಿ: ಯಾವ ಬಣ್ಣದ ಸೇಬು ಆರೋಗ್ಯಕ್ಕೆ ಉತ್ತಮ? ತಜ್ಞರು ಹೇಳ್ತಾರೆ ಕೇಳಿ
ಸಿಹಿ ತಿಂಡಿಗಳ ಬದಲು ಖರ್ಜೂರ, ಒಣದ್ರಾಕ್ಷಿ ಸೇವಿಸಿ
ಸಿಹಿ ಆಹಾರದ ಸಕ್ಕರೆ ಆಹಾರದ ಬದಲು ಒಣದ್ರಾಕ್ಷಿ, ಏಪಿಕ್ರಾಟ್, ಖರ್ಜೂರ ಸೇವಿಸಿ. ಇದು ಚಳಿಗಾಲದಲ್ಲಿ ನಿಮ್ಮನ್ನು ಬೆಚ್ಚಗಿಡುತ್ತದೆ. ಸಕ್ಕರೆ ಕಡುಬಯಕೆ ದೂರ ಮಾಡುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ