ಈ 5 ಕಾರಣಗಳಿಂದಾಗಿ ವರ್ಕೌಟ್ ಮಾಡಿದರೂ ನಿಮ್ಮ ಹೊಟ್ಟೆಯ ಕೊಬ್ಬು ಕರಗುತ್ತಿಲ್ಲ!

ಹೊಟ್ಟೆ ಕೊಬ್ಬು ಕರಗಿಸೋದು ಕಷ್ಟ. ಕರಗಿಸಲಾಗ ಹೊಟ್ಟೆ ಕೊಬ್ಬನ್ನು ಕರಗಿಸಲು ಈ ಕೆಳಗೆ ಕೊಟ್ಟಿರುವ ಐದು ಕಾರಣಗಳ ಬಗ್ಗೆ ಮೊದಲು ತಿಳಿದುಕೊಳ್ಳಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಹೊಟ್ಟೆಯ ಕೊಬ್ಬು ಕರಗಿಸುವುದು ಅತ್ಯಂತ ಕಷ್ಟಕರವೆಂದು ನಿಮಗೆಲ್ಲರಿಗೂ ತಿಳಿದಿದೆ. ನಾವು ಗಂಟೆ ಗಂಟೆ ಕಿಬ್ಬೊಟ್ಟೆಯ ವ್ಯಾಯಾಮ ಮತ್ತು ಕೋರ್ ವ್ಯಾಯಾಮಗಳನ್ನು ಮಾಡಿದರೂ ಕರಗಿಸಲು ತುಂಬ ಕಷ್ಟ. ನಾವು ಸೇವಿಸುವ ಆಹಾರವು ಹೊಟ್ಟೆ ಕೊಬ್ಬಿಗೆ ಕಾರಣವಾಗುತ್ತದೆ ಹಾಗೂ ನಮ್ಮ ದೈಹಿಕ ಚಟುವಟಿಕೆಯು ಕಾರಣವಾಗುತ್ತದೆ. ಉದಾ: ಸಕ್ಕರೆ, ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳು ಮತ್ತು ಪ್ಯಾಕ್ ಮಾಡಿದ ಆಹಾರಗಳು.

ಈ ಐದು ಇತರ ಕಾರಣಗಳು ನಿಮ್ಮ ಹೊಟ್ಟೆ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತವೆ ಬನ್ನಿ ಈ ಕುರಿತು ಇನ್ನಷ್ಟು ತಿಳಿಯೋಣ...

ನೀವು ಸಾಕಷ್ಟು ಆಹಾರ ಸೇವಿಸುತ್ತಿಲ್ಲ: ನಾವು ತೂಕ ಇಳಿಸಿಕೂಳ್ಳುವ ಸಲುವಾಗಿ ಅಗತ್ಯಕ್ಕಿಂತ ಕಡಿಮೆ ಕ್ಯಾಲೋರಿಗಳ ಆಹಾರವನ್ನು ಸೇವಿಸುತ್ತೇವೆ. ಆದ್ದರಿಂದ ನಿಮ್ಮ ದೇಹಕ್ಕೆ ಸಾಕಷ್ಟು ಶಕ್ತಿ ಸಿಗುವುದಿಲ್ಲ. ಈ ವಿಧಾನವು ಖಂಡಿತವಾಗಿಯೂ ನಿಮ್ಮ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಆದರೆ, ನಿಮ್ಮ ಕಡಿಮೆ ಕ್ಯಾಲೋರಿ ಸೇವನೆಯಿಂದಾಗಿ, ನಿಮ್ಮ ದೇಹಕ್ಕೆ ಅಗತ್ಯವಾದ ಸೂಕ್ಷ್ಮ ಮತ್ತು ಮ್ಯಾಕ್ರೋನ್ಯೂಟ್ರಿಯಂಟ್‌ಗಳನ್ನು ನೀವು ಪೂರೈಸುವುದಿಲ್ಲ. ಇದು ನಿಮ್ಮ ಹೊಟ್ಟೆ ಕೊಬ್ಬಿಗೆ ಕಾರಣವಾಗುತ್ತದೆ.

ಇದನ್ನೂ ಓದಿ: BBK8-Divya Suresh: ಮಧ್ಯರಾತ್ರಿ ಮನೆಯಿಂದ ಹೊರ ನಡೆದ ದಿವ್ಯಾ ಸುರೇಶ್: ಕಣ್ಣೀರಿಟ್ಟ ಮಂಜು ಪಾವಗಡ​..!

ಉದಾಹರಣೆಗೆ, ಪ್ರೋಟೀನ್ ಆರೋಗ್ಯಕರ ಆಹಾರ, ಮತ್ತು ಇದು ಸ್ನಾಯುಗಳ ಬಲ ಮತ್ತು ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಆರೋಗ್ಯಕರ ಚರ್ಮ ಮತ್ತು ಕೂದಲು ಹಾಗೂ ದೇಹದ ಸಾಮಾನ್ಯ ಕಾರ್ಯವನ್ನು ನಿರ್ವಹಿಸಲು ವಿಟಮಿನ್‌ಗಳು ಅತ್ಯಗತ್ಯ. ನೀವು ಈ ತೂಕವನ್ನು ಇಳಿಸಿಕೊಳ್ಳುವ ಸಲುವಾಗಿ ಪ್ರೋಟೀನ್ ಪೋಷಕಾಂಶಗಳನ್ನು ಸಾಧ್ಯವಾದಷ್ಟು ಕಡಿಮೆ ಮಾಡುವುದರಿಂದ ನೀವು ಕೊಬ್ಬು ಕಳೆದುಕೊಳ್ಳುವುದಕ್ಕಿಂತ ಸ್ನಾಯುಗಳ ನಷ್ಟ ಮತ್ತು ಅಧಿಕ ನೀರಿನಿಂದಾಗಿ ತೂಕವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ಆದರೆ ನೆನಪಿಡಿ ಹಠಮಾರಿ ಹೊಟ್ಟೆಯ ಕೊಬ್ಬನ್ನು ಕಳೆದುಕೊಳ್ಳುವ ಸಾಧ್ಯತೆ ಇಲ್ಲ.

ಒತ್ತಡ:  ಬಹುಶಃ ನೀವು ಯಾವಾಗಲೂ ಜಾಗರೂಕರಾಗಿರಬಹುದು. ಬಹುಶಃ ನೀವು ಕಾರ್ಯನಿರತ ಮತ್ತು ಕಠಿಣ ಕೆಲಸ ಮಾಡಲು ಇಷ್ಟಪಡಬಹುದು. ಆದರೆ ನಿಮ್ಮ ಕಾರ್ಯನಿರತ ಮತ್ತು ಕಠಿಣ ಕೆಲಸಗಳು ನಿಮಗೆ ಒತ್ತಡವನ್ನು ಉಂಟುಮಾಡುತ್ತವೆ. ಈ ಒತ್ತಡವು ದೇಹದಲ್ಲಿ ಕಾರ್ಟಿಸೋಲ್ ಹಾರ್ಮೋನ್ ಸ್ರವಿಸುವಿಕೆಯನ್ನು ಉಂಟುಮಾಡುತ್ತದೆ. 2012ರಲ್ಲಿ ನಡೆಸಿದ ಅಧ್ಯಯನದ ಪ್ರಕಾರ, ಈ ಹಾನಿಕಾರಕ ಹಾರ್ಮೋನ್ ನಿಮ್ಮ ಚಯಾಪಚಯ ಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಇದರಿಂದಾಗಿ ನಿಮ್ಮ ನೈಜ ಸಾಮರ್ಥ್ಯಕ್ಕಿಂತ ಕಡಿಮೆ ಕ್ಯಾಲೋರಿಗಳನ್ನು ಕರಗಿಸುತ್ತದೆ ಮತ್ತು ಸ್ಥೂಲಕಾಯಕ್ಕೆ ಕಾರಣವಾಗುತ್ತದೆ. ಎಲ್ಲ ಹೆಚ್ಚುವರಿ ತೂಕವು ಆ ಹೊಟ್ಟೆ ಕೊಬ್ಬಿಗೆ ಕಾರಣವಾಗುತ್ತದೆ.

ನೀವು ಮಾಡುವ ಪಾರ್ಟಿ ಕಾರಣವಾಗುತ್ತದೆ: ನಾವು ಪಾರ್ಟಿ ಮಾಡುವುದರಿಂದ ಹೆಚ್ಚಾಗಿ ತಿನ್ನುವ ಹಾಗೂ ಕುಡಿಯುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದರೆ, ನಾವು ಇಲ್ಲಿ ನೆನಪಿಸುತ್ತಿರುವುದೇನೆಂದರೆ ಪ್ರಸ್ತುತ ಸ್ಥೂಲಕಾಯ ವರದಿಗಳ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಅತಿಯಾದ ಕುಡಿಯುವಿಕೆಯು ತೂಕ ಹೆಚ್ಚಿಸಲು ಕಾರಣವಾಗಬಹುದು. ವಿಶೇಷವಾಗಿ ಹೊಟ್ಟೆಯ ಸುತ್ತ. ನೀವು ಕುಡಿಯುವುದರಿಂದ ಹಾಗೂ ಧೂಮಪಾನ ಮಾಡುವುದರಿಂದ ನಿಮ್ಮ ತೂಕ ಹೆಚ್ಚಾಗುತ್ತದೆ. ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನವು ಧೂಮಪಾನಿಗಳಿಗೆ ಹೋಲಿಸಿದರೆ ಧೂಮಪಾನ ಮಾಡದವರಲ್ಲಿ ಹೊಟ್ಟೆ ಕೊಬ್ಬು ಕಡಿಮೆ ಇರುತ್ತದೆ ಎಂದು ತಿಳಿಸಿದೆ.

ನಿಮ್ಮ ಸೋದರಮಾವನಿಂದ ಅಥವಾ ಅಮ್ಮನಿಂದ ನಿಮಗೆ ಬಂದಿರಬಹುದು: ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ನಡೆಸಿದ ಅಧ್ಯಯನದ ಪ್ರಕಾರ, ನಿಮ್ಮ ವಂಶವಾಹಿಗಳು ನಿಮ್ಮ ಚಯಾಪಚಯ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತವೆ. ಆದ್ದರಿಂದ, ನಿಮ್ಮ ತಾಯಿ ಅಥವಾ ಅದೇ ಜೀನ್ ಪೂಲ್‌ನಿಂದ ಯಾರಾದರೂ ಹೊಟ್ಟೆ ಕೊಬ್ಬನ್ನು ಹೆಚ್ಚಿಸುವ ಪ್ರವೃತ್ತಿಯನ್ನು ಹೊಂದಿದ್ದರೆ, ನೀವು ಈ ಪ್ರವೃತ್ತಿಯನ್ನು ಅನುವಂಶಿಕವಾಗಿ ಪಡೆಯಬಹುದು ಎಂದು ತಿಳಿಸಿದೆ.

ಇದನ್ನೂ ಓದಿ: Bellbottom Trailer: ಬೆಲ್​ ಬಾಟಮ್​ ಸಿನಿಮಾದಲ್ಲಿ ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸಿರುವ ಈ ಖ್ಯಾತ ನಟಿ ಯಾರು ಗೊತ್ತಾ..?

ನಿಮ್ಮ ರಾತ್ರಿ ನಿದ್ರೆ ಕಾರಣವಾಗಬಹುದು: ಜರ್ನಲ್ ಆಫ್ ಕ್ಲಿನಿಕಲ್ ಸ್ಲೀಪ್ ಮೆಡಿಸಿನ್‌ನಲ್ಲಿ ಪ್ರಕಟವಾದ ಅಧ್ಯಯನವು ಕಳಪೆ ಗುಣಮಟ್ಟದ/ಅಸಮರ್ಪಕ ನಿದ್ರೆಯ ಅನಾರೋಗ್ಯಕರ ಆಹಾರ ಸೇವನೆಯ ನಡುವಿನ ಸಂಬಂಧವನ್ನು ಹಾಗೂ ಚಯಾಪಚಯ ಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಇದರಿಂದಾಗಿ ಹೊಟ್ಟೆ ಭಾಗದ ಕೊಬ್ಬು ಹೆಚ್ಚಾಗುತ್ತದೆ ಎಂದು ತಿಳಿಸಿದೆ.
First published: