ರಾತ್ರಿಯ (Night) ನಿದ್ದೆ (Sleeping) ಆರೋಗ್ಯಕ್ಕೆ (Health) ಉತ್ತಮ ಎಂಬುದು ನಮಗೆಲ್ಲಾ ಗೊತ್ತಿದೆ. ನಿಮ್ಮ ವೇಳಾಪಟ್ಟಿಯಲ್ಲಿ ಕೆಲಸದ ಒತ್ತಡ (Stress) ಹೆಚ್ಚಿ, ವಿಶ್ರಾಂತಿಗೆ ಸಮಯ ಇಲ್ಲದಂತೆ ಆದ್ರೆ, ಅಥವಾ ರಾತ್ರಿ ಯಾವುದೋ ಕಾರಣಕ್ಕೆ ನಿಮಗೆ ನಿದ್ದೆ ಬಾರದೇ ಹೋದ್ರೆ ಇದು ಯಾವುದೋ ಕಾಯಿಲೆಯ (Disease) ಸಂಕೇತವೂ ಆಗಿರಬಹುದು. 2019 ರ ವರದಿಯ ಪ್ರಕಾರ, ಇತ್ತೀಚಿನ ವರ್ಷಗಳಲ್ಲಿ ನಿದ್ರಾಭಂಗ ಅಥವಾ ನಿದ್ರಾಹೀನತೆ ಒಂದು ಸಾಂಕ್ರಾಮಿಕ ಕಾಯಿಲೆಯಾಗಿ ಮಾರ್ಪಟ್ಟಿದೆ ಎಂದು ಹೇಳುತ್ತದೆ. ಆದ್ರೆ ಈ ಬಗ್ಗೆ ತುಂಬಾ ಜನರಿಗೆ ಗೊತ್ತೇ ಇಲ್ಲ. ಆಶ್ಚರ್ಯಕರ ಸಂಗತಿ ಅಂದ್ರೆ ನಿದ್ರಾಭಂಗಕ್ಕೂ ರಾತ್ರಿಗೂ ಯಾವುದೇ ಸಂಬಂಧ ಇಲ್ಲ. ಅದಕ್ಕೆ ವ್ಯಕ್ತಿಯ ದಿನಚರಿಯೇ ಕಾರಣ ಅಂತಾ ಹೇಳ್ತಿದೆ ಈ ವರದಿ.
ವ್ಯಕ್ತಿಯ ನಿದ್ದೆಗೆಡಿಸಲು ಆತನ ಹಗಲು ಮಾಡಿದ ಚಟುವಟಿಕೆಗಳೇ ಕಾರಣ. ಹಗಲಿನಲ್ಲಿ ವ್ಯಕ್ತಿ ಅನುಸರಿಸುವ ಕೆಟ್ಟ ಅಭ್ಯಾಸಗಳೇ ಕಾರಣ ಅಂತಾ ವರದಿ ಹೇಳಿದೆ.
ಹಗಲು ಬೆಳಕು ಮತ್ತು ನೀಲಿ ಬೆಳಕು
ಸಿರ್ಕಾಡಿಯನ್ ರಿದಮ್ ಬಗ್ಗೆ ನಿಮಗೆ ಗೊತ್ತಿರಬಹುದು. ಇದು ನಮ್ಮ ದೇಹಕ್ಕೆ ಯಾವಾಗ ಮಲಗಬೇಕು ಮತ್ತು ಯಾವಾಗ ಏಳಬೇಕು ಎಂದು ಸೂಚನೆ ನೀಡುತ್ತದೆ. ಈ ಸಿರ್ಕಾಡಿಯನ್ ಲಯಬದ್ಧತೆ ಕಾಪಾಡಿಕೊಳ್ಳಲು ಸೂರ್ಯನ ಬೆಳಕು ಮುಖ್ಯ ಪಾತ್ರ ವಹಿಸುತ್ತದೆ.
ಇದನ್ನೂ ಓದಿ: ಬರೋಬ್ಬರಿ 194 ಕೆಜಿ ಇದ್ದ ವೈದ್ಯ ತೂಕ ಇಳಿಸಿಕೊಳ್ಳಲು ಕಾರಣವೇನಿತ್ತು ಗೊತ್ತಾ?
ಡೇಸ್ ವೆಬ್‌ಸೈಟ್‌ನ ಮುಖ್ಯ ವಿಜ್ಞಾನ ಅಧಿಕಾರಿ ಮೆರಾವ್ ಕೊಹೆನ್ ಜಿಯಾನ್ ಪ್ರಕಾರ, "ಸೂರ್ಯನ ಬೆಳಕು ನಮ್ಮ ಮೆದುಳಿಗೆ ನಿದ್ರೆ ಅಥವಾ ಎಚ್ಚರಗೊಳ್ಳುವ ಸಮಯದ ಬಗ್ಗೆ ಸಂಕೇತ ನೀಡುತ್ತದೆ” ಎಂದು ಹೇಳಿದ್ದಾರೆ. ಸೂರ್ಯನ ಬೆಳಕು ಎಷ್ಟು ಬೇಕು?
ಕೋಹೆನ್ ಜಿಯಾನ್ ಪ್ರಕಾರ, ಬೆಳಿಗ್ಗೆ 20 ರಿಂದ 30 ನಿಮಿಷದವರೆಗೆ ಸೂರ್ಯನ ಬೆಳಕನ್ನು ತೆಗೆದುಕೊಳ್ಳಬೇಕು. ಮತ್ತು ಮಲಗುವ ಎರಡು ಗಂಟೆಗಳ ಮೊದಲು ಮೊಬೈಲ್ ನೀಲಿ ಬೆಳಕು ಕಣ್ಣಿಗೆ ತಾಕದಂತೆ ನೋಡಿಕೊಳ್ಳಬೇಕು. ಇದು ನಿದ್ದೆಯ ಚಕ್ರವನ್ನು ಸುಧಾರಿಸುತ್ತದೆ.
ಹಗಲಿನಲ್ಲಿ ದೀರ್ಘ ನಿದ್ರೆ
ಹಗಲಿನಲ್ಲಿ ಚಿಕ್ಕನಿದ್ರೆ ತೆಗೆದುಕೊಂಡರೆ ಕಳಪೆ ನಿದ್ರೆ ಸರಿ ಹೋಗುತ್ತದೆ ಎಂಬುದು ನಿಮ್ಮ ಭಾವನೆಯಾಗಿದ್ರೆ ಅದನ್ನು ತೆಗೆದು ಹಾಕಿ ಯಾಕಂದ್ರೆ ಹಗಲು ನಿದ್ರೆ ರಾತ್ರಿ ನಿದ್ದೆಗೆ ಹೆಚ್ಚು ಹಾನಿ ಮಾಡುತ್ತದೆ.
ಮ್ಯಾಟ್ರೆಸ್ ಕ್ಲಾರಿಟಿಯ ನಿದ್ರಾ ಆರೋಗ್ಯ ತಜ್ಞ ವಿಕ್ಟೋರಿಯಾ ವೈಲ್ಡ್‌ಹಾರ್ನ್ ಪ್ರಕಾರ, ಹಗಲಿನಲ್ಲಿ ಸಣ್ಣ ನಿದ್ದೆ ತೆಗೆದುಕೊಳ್ಳುವುದು ಒಳ್ಳೆಯದು. ಆದರೆ ದೀರ್ಘ ಕಾಲದ ನಿದ್ದೆ ರಾತ್ರಿ ನಿದ್ದೆಗೆ ಭಂಗ ತರುತ್ತದೆ ಅಂತಾರೆ.
ಚಿಕ್ಕನಿದ್ರೆಗೆ ಸರಿಯಾದ ಸಮಯ ಯಾವುದು?
ನಿದ್ರೆಯ ಮನಶ್ಶಾಸ್ತ್ರಜ್ಞೆ ಸಮೀನಾ ಅಹ್ಮದ್ ಜೌರೆಗುಯಿ ಪ್ರಕಾರ, 15 ರಿಂದ 20 ನಿಮಿಷಗಳ ನಿದ್ದೆ ನಿಮ್ಮನ್ನು ರಿಫ್ರೆಶ್ ಮಾಡುತ್ತದೆ. ಅದೇ ಮಧ್ಯಾಹ್ನ 3 ಗಂಟೆಯ ನಂತರ ದೀರ್ಘ ನಿದ್ರೆ ಮಾಡಿದರೆ ಅದು ನಿಮ್ಮ ರಾತ್ರಿಯ ನಿದ್ರೆಗೆ ಭಂಗ ತರುತ್ತದೆ ಅಂತಾರೆ.
ರಾತ್ರಿ ಮಲಗುವ ಮುನ್ನ ತಿಂಡಿ ತಿನ್ನುವುದು
ಕೆಲವು ಆಹಾರಗಳು ನಿಮ್ಮ ನಿದ್ರೆಗೆ ಭಂಗ ತರುತ್ತವೆ. ಅಂತಹ ಆಹಾರವನ್ನು ಸಂಜೆಯ ಸಮಯದಲ್ಲಿ ಸೇವಿಸಿದರೆ ನಿದ್ರೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಚಾಕೊಲೇಟ್, ಸಕ್ಕರೆ, ಸ್ಯಾಚುರೇಟೆಡ್ ಕೊಬ್ಬು ಮತ್ತು ಕೆಫೀನ್ ಸೇರಿವೆ. 2016 ರ ಅಧ್ಯಯನವು ಕಡಿಮೆ ಫೈಬರ್, ಹೆಚ್ಚಿನ ಸ್ಯಾಚುರೇಟೆಡ್ ಕೊಬ್ಬು ಮತ್ತು ಸಕ್ಕರೆ ಹೊಂದಿರುವ ಆಹಾರವು ನಿದ್ರಾಹೀನತೆಗೆ ಕಾರಣ ಎಂದು ಹೇಳಿದೆ.
ವೈಲ್ಡ್ಹಾರ್ನ್ ಪ್ರಕಾರ, ಬೆಡ್ಟೈಮ್ ಮೊದಲು ಸಕ್ಕರೆ ಮತ್ತು ಸ್ಯಾಚುರೇಟೆಡ್ ಕೊಬ್ಬು ಹೊಂದಿದರೆ ಆಹಾರ ಸೇವನೆ ತಪ್ಪಿಸಬೇಕು. ವಾಲ್ನಟ್ಸ್, ಆವಕಾಡೊ, ಕಾಟೇಜ್ ಚೀಸ್ ಮತ್ತು ಮೊಸರು ಆರೋಗ್ಯಕರ ಕೊಬ್ಬುಗಳಲ್ಲಿ ಸಮೃದ್ಧವಾಗಿರುವ ಆಹಾರಗಳು ನಿದ್ರೆಗೆ ಸಹಾಯ ಮಾಡುತ್ತದೆ.
ಹಾಸಿಗೆ ಅಭ್ಯಾಸಗಳು
2020 ರಲ್ಲಿ ಬೆಸ್ಟ್ ಮ್ಯಾಟ್ರೆಸ್ ಬ್ರ್ಯಾಂಡ್ ಬೆಳಿಗ್ಗೆ ತಮ್ಮ ಹಾಸಿಗೆ ಸರಿಪಡಿಸುವ 500 ಜನರನ್ನು ಸಮೀಕ್ಷೆ ಮಾಡಿದೆ. ಇದರೊಂದಿಗೆ ಹಾಸಿಗೆ ಸರಿ ಮಾಡದ 500 ಜನರ ಮೇಲೂ ಸಮೀಕ್ಷೆ ಮಾಡಲಾಗಿದೆ. ಬೆಳಿಗ್ಗೆ ಮಲಗುವ ಅಭ್ಯಾಸ ಹೊಂದಿರುವವರು ಆರೋಗ್ಯಕರ ಆಹಾರ ಸೇವಿಸುತ್ತಾರೆ. ದಿನದಲ್ಲಿ ಉತ್ತಮವಾಗುತ್ತಾರೆ. ಸರಾಸರಿ 20 ನಿಮಿಷ ನಿದ್ರಿಸುತ್ತಾರೆ, ನಿದ್ರಿಸಲು ಕಡಿಮೆ ಕಷ್ಟ ಪಡುತ್ತಾರೆ ಎಂದಿದೆ.
ಇದನ್ನೂ ಓದಿ: ಬರ್ನೌಟ್ ಸಮಸ್ಯೆ ಎಂದರೇನು? ಮಾನಸಿಕವಾಗಿಯೂ ಭಾರೀ ಡೇಂಜರ್ ಇದು
ವಾರಾಂತ್ಯದ ವೇಳಾಪಟ್ಟಿ
ವಾರದ ದಿನಚರಿಯಲ್ಲಿ ರಾಜಿ ಮಾಡಿಕೊಳ್ಳುವುದು ಮತ್ತು ವಾರಾಂತ್ಯದ ಮೇಲೆ ಸಂಪೂರ್ಣ ಹೊರೆ ಹಾಕುವುದು ಸಹ ನಿದ್ರಾಭಂಗಕ್ಕೆ ಕಾರಣವಾಗುತ್ತದೆ. ವಾರಾಂತ್ಯದಲ್ಲಿ ಹೆಚ್ಚು ನಿದ್ರಿಸುವುದು ಸಿರ್ಕಾಡಿಯನ್ ಲಯದ ಮೇಲೆ ಪರಿಣಾಮ ಬೀರುತ್ತದೆ. ವ್ಯಾಯಾಮವು ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ. ನೀವು ವ್ಯಾಯಾಮ ಮಾಡುವಾಗ, ಅದು ಸಿರ್ಕಾಡಿಯನ್ ರಿದಮ್ ಮೇಲೆ ಪರಿಣಾಮ ಬೀರುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ