ಅದೆಷ್ಟೋ ಜನರು ಮನೆಯಲ್ಲಿ ಜನರು ಇಲ್ದೆ ಇದ್ರೂ ಪರ್ವಾಗಿಲ್ಲ, ಮನೆಯಲ್ಲಿ ಒಂದು ನಾಯಿ (Pet Dog) ಇರ್ಬೇಕು ಅಂತಾರೆ. ಇತ್ತೀಚೆಗಂತೂ ಶ್ವಾನಗಳನ್ನು ಸಾಕೋದು ಅನೇಕರಿಗೆ ಒಂದು ಹವ್ಯಾಸ ಆಗ್ಬಿಟಿದೆ. ಮನೆಯವ್ರು ಅದನ್ನು ಬರೀ ಶ್ವಾನ ಅಂತ ತಿಳ್ಕೊಂಡಿರೋದಿಲ್ಲ. ಬದಲಿಗೆ ಅದನ್ನು ಕೂಡಾ ಮನೆಯ ಒಂದು ಸದಸ್ಯನ (family Member) ಥರವೇ ನೋಡ್ಕೊಳ್ತಾರೆ. ತುಂಬಾ ಪ್ರೀತಿಯಿಂದ ನಾಯಿ ಮರಿಗಳನ್ನ ತಮ್ಮ ಮಕ್ಕಳ ಹಾಗೇ ನೋಡ್ಕೊಳ್ತಾರೆ. ಆದ್ರೆ ಅವುಗಳ ಆರೋಗ್ಯದಲ್ಲಿ (health upset) ಸ್ವಲ್ಪ ಏರು ಪೇರಾದ್ರೂ ಅದ್ರ ಸಂಕಟ ನೋಡೋಕೆ ಆಗೋದಿಲ್ಲ. ನೀವು ಸಾಕಿರುವ ಮುದ್ದು ನಾಯಿ ಏನಾದ್ರೂ ಊಟ ಬಿಟ್ಟಿದೆಯಾ.. ಚುರುಕಾಗಿ ಇದ್ದ ಶ್ವಾನ ಏಕಾಏಕಿ ತುಂಬಾನೇ ಮಂಕಾಗಿ (dull) ಇದ್ಯಾ? ಹಾಗಿದ್ರೆ ಇದು ಟಿಕ್ ಫೀವರ್‌ನ (tick fever) ಲಕ್ಷಣ ಇರ್ಬೋದು. ನಿಮ್ಮ ಶ್ವಾನಗಳ ಬಗ್ಗೆ ನಿರ್ಲಕ್ಷ್ಯ ಮಾಡದಿರಿ.
ಏನಿದು ಟಿಕ್ ಫೀವರ್ ?
ಸಾಮಾನ್ಯವಾಗಿ ಬೀದಿಯಲ್ಲಿ ಇರುವ ಶ್ವಾನಗಳಿಗೆ ಸ್ನಾನ ಇರ್ಲಿ, ಅದಕ್ಕೆ ಊಟ ಹಾಕೋವ್ರು ಕೂಡಾ ಯಾರು ಇರೋದಿಲ್ಲ. ಹೀಹಾಗಿ ಇವುಗಳ ಮೈಯಲ್ಲಿ ಚಿಕ್ಕ ಗಾತ್ರದ ಹಾಗೂ ದೊಡ್ಡ ಗಾತ್ರದ ಹುಳುಗಳು ಸೇರಿಕೊಳ್ಳುತ್ತವೆ. ಬೀದಿ ನಾಯಿಗಳ ಮೈಯಲ್ಲಿರೋ ಸಣ್ಣ ಸಣ್ಣ ಹುಳುಗಳಿಂದ ಕಚ್ಚಿ ಇನ್ಫೆಕ್ಷನ್ ಉಂಟು ಮಾಡೋದ್ರಿಂದ ಬರುವ ಜ್ವರವೇ ಈ ಟಿಕ್ ಫೀವರ್. ಬೀದಿನಾಯಿಗಳಿಂದ ಮನೆಯಲ್ಲಿ ಸಾಕಿರುವ ಶ್ವಾನಗಳಿಗೂ ಈ ಹುಳುಗಳು ಸೇರಿಕೊಳ್ಳೋದ್ರಿಂದ ಆರೋಗ್ಯವಂತ ನಾಯಿಗಳು ಕೂಡಾ ಈ ಖಾಯಿಲೆಗೆ ತುತ್ತಾಗುತ್ತವೆ.
ಈ ಖಾಯಿಲೆಗಳಿಗೆ ನಿಮ್ಮ ಶ್ವಾನ ಗಳು ಒಳಗಾದ್ರೆ, ಊಟವನ್ನು ಸರಿಯಾಗಿ ಮಾಡೋದಿಲ್ಲ. ನಿದ್ದೆಯನ್ನು ಕೂಡಾ ಮಾಡೋದಿಲ್ಲ, ಉತ್ಸಾವನ್ನು ಕಳೆದುಕೊಂಡು ಬಿಡುತ್ತವೆ. ನೀವೇನಾದ್ರೂ ಇದು ಸಾಮಾನ್ಯ ಖಾಯಿಲೆ ಅಂತ ನಿರ್ಲಕ್ಷ್ಯ ಮಾಡಿದ್ರೆ ಈ ಜ್ವರ ಹೆಚ್ಚಾಗಿ ನಾಯಿಗಳು ಸಾಯುವ ಹಂತಕ್ಕೆ ಹೋಗುತ್ತವೆ. ಕೊನೆಯ ಹಂತದಲ್ಲಿ ಎಷ್ಟು ಪ್ರಯತ್ನ ಮಾಡಿದ್ರೂ ನಮ್ಮ ಪ್ರೀತಿಯ ಶ್ವಾನಗಳನ್ನು ಉಳಿಸಿಕೊಳ್ಳೋದಕ್ಕೆ ಸಾಧ್ಯವಾಗೋದಿಲ್ಲ.
ಇದನ್ನೂ ಓದಿ: ನೆಚ್ಚಿನ ನಾಯಿಗಾಗಿ ಎರಡಂತಸ್ತಿನ ಐಶಾರಾಮಿ ಮನೆ ಕಟ್ಟಿಸಿದ ದಂಪತಿ, ಅದೃಷ್ಟ ಅಂದ್ರೆ ಇದು ನೋಡಿ!
ಈ ಟಿಕ್ ಫೀವರ್ ಹೆಚ್ಚಾಗೋಕೆ ಕಾರಣ ಏನು? ಬೀದಿನಾಯಿಗಳ ನಿರ್ವಹಣೆ ಸರಿಯಾಗಿ ಮಾಡಬೇಕು. ಅದ್ರೆ ಅವುಗಳ ನಿರ್ವಹಣೆ ಸರಿಯಾಗಿ ಇಲ್ಲದೆ ಇರೋದ್ರಿಂದ ಇವುಗಳಲ್ಲಿರೋ ಹುಳುಗಳು ವೈರಸ್ ಹೆಚ್ಚಾಗಿ ಅದು ಮನೆಯಲ್ಲಿರೋ ಸಾಕು ನಾಯಿಗಳಿಗೆ ಹರಡುತ್ತವೆ.
ಟಿಕ್ ಫೀವರ್‌ನಿಂದ ಸಾಕು ನಾಯಿಗಳನ್ನು ಕಾಪಾಡೋದು ಹೇಗೆ?
* ಶ್ವಾನಗಳನ್ನು ವಾಕಿಂಗ್‌ಗೆ ತಮ್ಮ ಜೊತೆಯಲ್ಲೇ ಕರೆದುಕೊಂಡು ಹೋಗಬೇಕು
* ಬೀದಿನಾಯಿಗಳು ಇರೋ ಪ್ರದೇಶದಿಂದ ಮನೆಯ ಶ್ವಾನವನ್ನು ದೂರವಿಡಬೇಕು
* ಗಾಳಿಯಲ್ಲಿ ನಾಯಿಗಳನ್ನು ಹೆಚ್ಚು ಹೊರಗೆ ಬಿಡಬಾರದು
* ಶ್ವಾನಗಳಿಗೆ ಪ್ರತಿ ವಾರಕ್ಕೆ ಒಮ್ಮೆಯಂತೆ ಸ್ನಾನ ಮಾಡಿಸಬೇಕು
* ಆಗಾಗ ನಾಯಿಗಳ ದೇಹದಲ್ಲಿ ಹುಳುಗಳು ಇವೆಯಾ ಅಂತ ಗಮನ ಹರಿಸಬೇಕು
* ಏಕಾಏಕಿ ನಿಮ್ಮ ನಾಯಿಗಳು ಊಟ ಬಿಟ್ಟರೆ, ಅಥವಾ ಉತ್ಸಾಹ ಕಳೆದುಕೊಂಡಂತೆ ಕಂಡರೆ ಕೂಡಲೇ ವೈದ್ಯರನ್ಮು ಸಂಪರ್ಕಿಸಬೇಕು ಅಂತ ಹೇಳ್ತಾರೆ ಪಶುಸಂಗೋಪನಾ ವೈದ್ಯರು.
ಇದನ್ನೂ ಓದಿ: ಪ್ರೀತಿಯ ನಾಯಿ ಗೋಪಿ ಹುಟ್ಟುಹಬ್ಬಕ್ಕೆ ಆರತಿ ಬೆಳಗಿ ಸಂಭ್ರಮಿಸಿದ ಸುಧಾ ಮೂರ್ತಿ, ವಿಡಿಯೋ ವೈರಲ್
ಈ ಎಲ್ಲಾ ಮುನ್ನೆಚ್ಚರಿಕೆ ತೆಗೆದುಕೊಂಡರೆ ಪ್ರೀತಿಯ ನಾಯಿಯ ಜೀವ ಉಳಿಸಬಹುದು. ಸಾಮಾನ್ಯವಾಗಿ ನಾಯಿ ಊಟ ಬಿಟ್ಟರೆ ಅದಕ್ಕೆ ಹೊಟ್ಟೆ ಸರಿಯಿಲ್ಲ ಅಥವಾ ಹೊರಗೆ ಹೋದಾಗ ಏನನ್ನೋ ತಿಂದುಕೊಂಡು ಬಂದಿದೆ ಎಂದೇ ಅನೇಕರು ಭಾವಿಸುತ್ತಾರೆ. ಟಿಕ್ ಫೀವರ್ ನಿಂದ ನಾಯಿ ಊಟ ಬಿಟ್ಟಿರಬಹುದು ಎಂದು ಬಹುತೇಕರು ಆಲೋಚನೆ ಮಾಡುವುದಿಲ್ಲ. ಇದು ಮೇಲ್ನೋಟಕ್ಕೆ ಅಂಥಾ ಭಯ ಹುಟ್ಟಿಸುವ ಲಕ್ಷಣಗಳನ್ನು ತೋರ್ಪಡಿಸದೇ ಇದ್ರೂ ನಾಯಿಯ ಜೀವಕ್ಕೇ ಸಂಚಕಾರ ತರಬಲ್ಲದು, ಹಾಗಾಗಿ ಎಚ್ಚರಿಕೆಯಿಂದ ಇರಬೇಕಾಗುತ್ತದೆ.
(ವರದಿ: ಹಂಸ ಶ್ಯಾಮಲ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ