• Home
  • »
  • News
  • »
  • lifestyle
  • »
  • Weight Loss Tips: ಕೋರಿಯನ್ನರ ಈ ಜೀವನಶೈಲಿ ನಿಮ್ಮದಾಗಿದ್ರೆ ಬೊಜ್ಜು ನಿಮ್ಮ ಹತ್ರಾನೂ ಸುಳಿಯೋಲ್ಲ

Weight Loss Tips: ಕೋರಿಯನ್ನರ ಈ ಜೀವನಶೈಲಿ ನಿಮ್ಮದಾಗಿದ್ರೆ ಬೊಜ್ಜು ನಿಮ್ಮ ಹತ್ರಾನೂ ಸುಳಿಯೋಲ್ಲ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ವೇಗದ ಜೀವನಶೈಲಿ, ಸಮಯದ ಅಭಾವ ಇತ್ಯಾದಿ ಅಂಶಗಳು ಮಹಾನಗರಗಳ ಬಹುತೇಕ ಜನರು ಹೊರಗಿನ ತಿಂಡಿ-ತಿನಿಸುಗಳ ಮೇಲೆಯೇ ಹೆಚ್ಚಾಗಿ ಅವಲಂಬಿತರಾಗುವಂತೆ ಮಾಡಿದ್ದು ಅತಿಯಾದ ಜಂಕ್ ಆಹಾರಗಳಿಂದ ಈ ಬೊಜ್ಜು ಅಥವಾ ಅನವಶ್ಯಕ ತೂಕ ವೃದ್ಧಿಯಂತಹ ಸಮಸ್ಯೆಗಳು ಏರುತ್ತಿವೆ. ಬೊಜ್ಜನ್ನು ಸರಿಯಾಗಿ ನಿಯಂತ್ರಿಸದಿದ್ದಲ್ಲಿ ಮುಂದೆ ಇದು ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಉಂಟು ಮಾಡುವುದರಲ್ಲಿ ಸಂಶಯವೇ ಇಲ್ಲ. ಹಾಗಾಗಿ, ಉತ್ತಮ ಜೀವನಶೈಲಿ ನಮ್ಮದಾದರೆ ಬೊಜ್ಜನ್ನು ನಿಯಂತ್ರಿಸಬಹುದು.

ಮುಂದೆ ಓದಿ ...
  • Share this:

ಬೊಜ್ಜು (Fat) ಇಂದಿನ ದಿನಗಳಲ್ಲಿ ಸಾಕಷ್ಟು ಜನರ ದೊಡ್ಡ ಸಮಸ್ಯೆಯಾಗಿ ಮಾರ್ಪಾಡಾಗಿದೆ. ವೇಗದ ಜೀವನಶೈಲಿ, ಸಮಯದ ಅಭಾವ ಇತ್ಯಾದಿ ಅಂಶಗಳು ಮಹಾನಗರಗಳ ಬಹುತೇಕ ಜನರು ಹೊರಗಿನ ತಿಂಡಿ-ತಿನಿಸುಗಳ ಮೇಲೆಯೇ ಹೆಚ್ಚಾಗಿ ಅವಲಂಬಿತರಾಗುವಂತೆ ಮಾಡಿದ್ದು ಅತಿಯಾದ ಜಂಕ್ ಆಹಾರಗಳಿಂದ (Junk Food) ಈ ಬೊಜ್ಜು ಅಥವಾ ಅನವಶ್ಯಕ ತೂಕ (Weight) ವೃದ್ಧಿಯಂತಹ ಸಮಸ್ಯೆಗಳು ಏರುತ್ತಿವೆ. ಬೊಜ್ಜನ್ನು ಸರಿಯಾಗಿ ನಿಯಂತ್ರಿಸದಿದ್ದಲ್ಲಿ ಮುಂದೆ ಇದು ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಉಂಟು ಮಾಡುವುದರಲ್ಲಿ ಸಂಶಯವೇ ಇಲ್ಲ. ಹಾಗಾಗಿ, ಉತ್ತಮ ಜೀವನಶೈಲಿ (Lifestyle) ನಮ್ಮದಾದರೆ ಬೊಜ್ಜನ್ನು ನಿಯಂತ್ರಿಸಬಹುದು.


ಉದಾಹರಣೆಗೆ ಕೋರಿಯನ್ ಜನರನ್ನೇ ತೆಗೆದುಕೊಳ್ಳಿ. ಸಾಮಾನ್ಯವಾಗಿ ಅವರಲ್ಲಿ ಬೊಜ್ಜುತನದ ಪ್ರಮಾಣ ಅತ್ಯಲ್ಪವಿರುತ್ತದೆ. ಕಾರಣ, ಅವರ ಜೀವನಶೈಲಿ ಹಾಗೂ ಅವರು ಸೇವಿಸುವ ಗುಣಾತ್ಮಕ ಆಹಾರ. ಹೀಗಾಗಿ ಬಹಳಷ್ಟು ಕೋರಿಯನ್ ಜನರು ಬೊಜ್ಜನ್ನು ಪಡೆಯದೆ ಇರುವುದನ್ನು ಗಮನಿಸಬಹುದು ಹಾಗೂ ಸದಾ ಚಲನಶೀಲ ಹಾಗೂ ಆರೋಗ್ಯದಿಂದಿರುವುದನ್ನು ಕಾಣಬಹುದು. ಹಾಗಾದರೆ, ಅವರ ಈ ರೀತಿಯ ಬೊಜ್ಜಿಲ್ಲದ ಆರೋಗ್ಯಕರ ಜೀವನದ ಹಿಂದಿನ ರಹಸ್ಯವಾದರೂ ಏನಿರಬಹುದು ಎಂದೆನಿಸದೆ ಇರಲಾರದು. ಹಾಗಾದರೆ, ಬನ್ನಿ ಅವರ ಜೀವನಶೈಲಿಯ ಬಗ್ಗೆ ಇಲ್ಲಿ ಕೊಂಚವಾದರೂ ತಿಳಿಯೋಣ.


ಕೋರಿಯನ್ನರ ಆರೋಗ್ಯಕರ ಜೀವನಶೈಲಿ
ದಕ್ಷಿಣ ಕೋರಿಯಾದಲ್ಲಿ ಒಬೆಸಿಟಿ ಅಥವಾ ಬೊಜ್ಜಿನ ದರ ತುಂಬಾನೇ ಕಡಿಮೆ ಇರುತ್ತೆ. ಕಾರಣ ಅಲ್ಲಿನ ಜನರು ಅತಿ ಕಡಿಮೆ ಪ್ರಮಾಣದಲ್ಲಿ ಸಂಸ್ಕರಿಸಿದ ಆಹಾರ ಸೇವಿಸುತ್ತಾರೆ. ಫ್ಯಾಟ್‍ನಿಂದ ಸಮೃದ್ಧವಾದ ಅಥವಾ ಸಕ್ಕರೆಯಂಶವಿರುವ ಆಹಾರದಿಂದ ಅಲ್ಲಿನ ಜನರು ಸಾಕಷ್ಟು ದೂರವಿರುತ್ತಾರೆ. ಹಾಗಾಗಿ, ಸಾಮಾನ್ಯವಾಗಿ ಅಲ್ಲಿನ ಜನರು ಬೊಜ್ಜಿಗೆ ಒಳಗಾಗುವುದು ಬಲು ಕಡಿಮೆ ಎನ್ನಲಾಗಿದೆ.


ಇದನ್ನೂ ಓದಿ:  Headache Problem: ಈ ರೀತಿಯ ತಲೆನೋವುಗಳು ಯಾವ ಗಂಭೀರ ಕಾಯಿಲೆಯ ಲಕ್ಷಣವಾಗಿದೆ?


ಪ್ರತಿ ಪ್ಲೇಟ್ ಮೀಲ್ ತರಕಾರಿಗಳಿಂದ ಸಮೃದ್ಧ
ಕೋರಿಯನ್ನರು ತಾವು ಊಟ ಮಾಡುವಾಗ ತಟ್ಟೆಯಲ್ಲಿ ತರಕಾರಿಗಳು ಸಮೃದ್ಧವಾಗಿರುವುದನ್ನು ಖಚಿತಪಡಿಸಿಕೊಳ್ಳುತ್ತಾರೆ. ಅವರ ಊಟದಲ್ಲಿ ಮುಖ್ಯ ಭಾಗ ಹಲವು ಬಗೆಯ ತರಕಾರಿಗಳಿಂದಲೇ ತುಂಬಿರುತ್ತದೆ. ಹೀಗಾಗಿ ಅವರು ಎಲ್ಲ ರೀತಿಯ ಪೋಷಕ ತತ್ವ ಹಾಗೂ ಫೈಬರ್ ಅಂಶವನ್ನು ತರಕಾರಿಗಳಿಂದ ಯಥೇಚ್ಛವಾಗಿ ಪಡೆಯುತ್ತಾರೆ.


ಹೆಚ್ಚು ಸಮುದ್ರ ಖಾದ್ಯ
ಸಾಮಾನ್ಯವಾಗಿ ಸಮುದ್ರ ಜೀವಿಗಳ ಖಾದ್ಯ ಸಾಕಷ್ಟು ಆರೋಗ್ಯಕರವಾಗಿರುತ್ತವೆ ಎಂಬ ವಿಚಾರ ಎಲ್ಲರಿಗೂ ತಿಳಿದೇ ಇದೆ. ದಕ್ಷಿಣ ಕೋರಿಯಾ ಒಂದು ಪೆನಿನ್ಸುಲಾ ರಾಷ್ಟ್ರವಾದ ಕಾರಣ ಅಲ್ಲಿ ಸಮುದ್ರ ಜೀವಿಗಳನ್ನು ಹೆಚ್ಚಾಗಿ ಸೇವಿಸಲಾಗುತ್ತದೆ. ಬದಲಾಗಿ, ಅವರ ಮುಖ್ಯ ಆಹಾರದ ಅವಿಭಾಜ್ಯ ಭಾಗವಾಗಿದೆ ಸಮುದ್ರಜೀವಿಗಳು. ಇದರಿಂದ ಅವರಿಗೆ ಫ್ಯಾಟ್ ಅಲ್ಲದ ಆದರೆ ಸಾಕಷ್ಟು ಪೊಷಕಾಂಶಗಳ ಆಹಾರ ಅವರ ಡಯಟ್‍ನ ಭಾಗವಾಗಿದೆ. ಶೆಲ್ ಮೀನು, ಅಕ್ಟೋಪಸ್, ಗ್ರಿಲ್ ಮಾಡಲಾದ ಮ್ಯಾಕರೆಲ್‍ಗಳನ್ನು ಅಲ್ಲಿ ಹೆಚ್ಚು ಸೇವಿಸಲಾಗುತ್ತದೆ.


ಜೀರ್ಣಕ್ರಿಯೆಗಾಗಿ ಕಿಮ್ಚಿ
ಕಿಮ್ಚಿ ಇದೊಂದು ವಿಶಿಷ್ಟ ಬಗೆಯ ಖಾದ್ಯವಾಗಿದ್ದು ಕೋರಿಯನ್ನರು ಉತ್ತಮ ಜೀರ್ಣಕ್ರಿಯೆಗೆ ಪ್ರೋತ್ಸಾಹಿಸುವ ಇದನ್ನು ತಮ್ಮ ಡಯಟ್ ಭಾಗವಾಗಿ ಸೇವಿಸುತ್ತಾರೆ. ಇದನ್ನು ಫರ್ಮೆಂಟ್ ಮಾಡಲಾದ ಕ್ಯಾಬೆಜಿನಿಂದ ತಯಾರಿಸಲಾಗುತ್ತದೆ ಹಾಗೂ ಪೋಷಕ ತತ್ವಗಳಿಂದ ಸಮೃದ್ಧವಾಗಿರುತ್ತದೆ.


ಬ್ರೆಡ್‍ಗಿಂತ ಅನ್ನದ ಸೇವನೆ
ಸಾಮಾನ್ಯವಾಗಿ ಬ್ರೆಡ್‍ಗಿಂತಳೂ ಹೆಚ್ಚು ಅನ್ನ ಸೇವಿಸುವುದನ್ನು ಇಷ್ಟಪಡುತ್ತಾರೆ. ಇದರಿಂದ ಅವರಿಗೆ ಬೇಕಾದಷ್ಟು ಪ್ರಮಾಣದ ಅಥವಾ ಅಗತ್ಯವಿರುವಂತಹ ತೂಕ ಪಡೆಯುತ್ತಾರೆ.


ಜಂಕ್ ಹಾಗೂ ಸಂಸ್ಕರಿಸಿದ ಆಹಾರಗಳ ಕಡಿಮೆ ಸೇವನೆ
ಸರಾಸರಿ ಕೋರಿಯನ್ನಿಗನೊಬ್ಬ ತನ್ನ ಡಯಟ್‍ನಲ್ಲಿ ಅತಿ ಕಡಿಮೆ ಪ್ರಮಾಣದ ಜಂಕ್ ಅಥವಾ ಸಂಸ್ಕರಿಸಿದ ಆಹಾರ ಸೇವಿಸುತ್ತಾನೆ. ಈ ಕಾರಣದಿಂದಲೇ ಅನವಶ್ಯಕ ಬೊಜ್ಜು ಅವರಿಗೆ ಉಂಟಾಗುವುದಿಲ್ಲ. ಕೋರಿಯನ್ನರು ಸಾಮಾನ್ಯವಾಗಿ ಬಲು ಹಗುರವಾಗಿರುವಂತಹ ಉಪಹಾರ ಸೇವಿಸುತ್ತಾರೆ. ಅವರ ಉಪಹಾರವು ಹೆಚ್ಚಾಗಿ ಬೇಯಿಸಿದ ಅನ್ನ, ಸ್ಟೀವ್ ಹಾಗೂ ತರಕಾರಿಗಳನ್ನಷ್ಟೇ ಹೊಂದಿರುತ್ತದೆ. ಇನ್ನೊಂದು ಪ್ರಮುಖ ಅಂಶವೆಂದರೆ ಅವರು ಊಟವನ್ನು ಅತಿಯಾಗಿ ಸೇವನೆ ಮಾಡುವುದಿಲ್ಲ. ಕಡಿಮೆ ಪ್ರಮಾಣದ ಆಂದರೆ ಪೋಷಕಾಂಶಗಳಿರುವ ಆಹಾರವನ್ನಷ್ಟೇ ಅವರು ಹೆಚ್ಚಾಗಿ ಸೇವಿಸುತ್ತಾರೆ.


ಇದನ್ನೂ ಓದಿ: Grape Fruit Benefits: ಮೂಳೆಗಳ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತೆ ಗ್ರೇಫ್ ಫ್ರೂಟ್ಸ್


ಪಾನೀಯ
ಕೋರಿಯನ್ನರು ಸೋಡಾ ಅಥವಾ ಇತರೆ ಸಕ್ಕರೆಯುಕ್ತ ಪೇಯಗಳನ್ನು ಸೇವಿಸಲು ಇಷ್ಟಪಡುವುದಿಲ್ಲ. ಬದಲಾಗಿ ಅವರು ಪ್ರಾಕೃತಿಕ ಗುಣಗಳನ್ನು ಹೊಂದಿರುವ ಹಲವು ಬಗೆಯ ಚಹಾ ಸೇವನೆಯನ್ನು ಇಷ್ಟಪಡುತ್ತಾರೆ.


ಬಾಹ್ಯ ಚಟುವಟಿಕೆ
ಸಾಮಾನ್ಯವಾಗಿ ಕೋರಿಯನ್ ಜನರು ನಡೆಯಲು ಇಷ್ಟಪಡುತ್ತಾರೆ. ಅವರು ಸಾಧ್ಯವಾದಷ್ಟು ಮೆಟ್ಟಿಲುಗಳನ್ನು ಹತ್ತಿಳಿಯಲು ಬಳಸುತ್ತಾರೆ ಹಾಗೂ ಸೈಕ್ಲಿಂಗ್ ಅವರಿಗೆ ಇಷ್ಟವಾದ ಚಟುವಟಿಕೆ. ಈ ಮೂಲಕ ಅವರು ಹೆಚ್ಚಿನ ಕ್ಯಾಲೋರಿಯನ್ನು ಸುಲಭವಾಗಿ ದಹಿಸಿಕೊಳ್ಳುತ್ತಾರೆ.

Published by:Ashwini Prabhu
First published: