Eyebrow Tips: ನಿಮ್ಮ ಹುಬ್ಬು ನೋಡಿ ಎದುರಿದ್ದವರು ಹುಬ್ಬು ಹಾರಿಸುವಂತೆ ಆಗಬೇಕೇ? ಅದಕ್ಕೆ ಇಲ್ಲಿದೆ ಟಿಪ್ಸ್

ನಮ್ಮ ಮುಖದ ಮೇಲೆ ಹುಬ್ಬುಗಳು ಎಷ್ಟು ಮುಖ್ಯ ಎಂದು ಎಲ್ಲರಿಗೂ ತಿಳಿದಿದೆ. ಹುಬ್ಬು ಚಿಕ್ಕದಾಗಿದ್ದರೂ, ದೊಡ್ಡದಾಗಿದ್ದರೂ ಅದು ಮುಖದ ಅಂದವನ್ನು ಕೆಡಿಸುತ್ತದೆ. ಹಾಗಾದ್ರೆ ಹುಬ್ಬಿನ ಸೌಂದರ್ಯಕ್ಕೆ ಏನು ಮಾಡಬೇಕು? ಇಲ್ಲಿದೆ ಓದಿ ಟಿಪ್ಸ್...

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಮುಖದ (Face) ಅಂದವನ್ನು (Beauty) ದ್ವಿಗುಣಗೊಳಿಸುವ ಅಂಶವೆಂದರೆ ರೆಪ್ಪೆ ಮತ್ತು ಹುಬ್ಬು (Eyebrow). ಮುಖದ ಆಕಾರಕ್ಕೆ ತಕ್ಕಂತೆ ಹುಬ್ಬಿಗೆ ಶೇಪ್ (Shape) ನೀಡುವುದು ತುಂಬಾ ಮುಖ್ಯವಾಗುತ್ತದೆ. ಹುಬ್ಬು ದಪ್ಪವಾಗಿ (Thick) ಮತ್ತು ಒಳ್ಳೆಯ ಶೇಪ್ ಇದ್ದರೆ ನೋಡುಗರನ್ನು ಸೆಳೆಯುತ್ತದೆ. ಕಣ್ಣಿನ ನೋಟವು (Look) ಆಕರ್ಷಕವಾಗಿದ್ದಷ್ಟು ಚೆನ್ನಾಗಿ ಕಾಣಿಸುತ್ತಾರೆ. ಅದರಲ್ಲೂ ಹುಡುಗಿಯರು ತಮ್ಮ ಮುಖದ ಅಂದದ ಬಗ್ಗೆ ಹೆಚ್ಚು ಕಾಳಜಿ ವಹಿಸತ್ತಾರೆ. ಈ ನಡುವೆ ಹುಬ್ಬು ತೆಳ್ಳಗಿದ್ದು, ಶೇಪ್ ಇಲ್ಲದಿದ್ದರೆ ತುಂಬಾ ಬೇಸರ ಉಂಟಾಗುತ್ತದೆ. ಈಗ ಮಾರುಕಟ್ಟೆಯಲ್ಲಿ ಹೆಚ್ಚು ಸಾಧನಗಳು ಬಂದಿವೆ. ಆದರೆ ಚಿಂತಿಸಬೇಕಾಗಿಲ್ಲ. ನೀವು ಮನೆಯಲ್ಲೇ ನಿಮ್ಮ ಹುಬ್ಬನ್ನು ಚೆನ್ನಾಗಿ ಮತ್ತು ದಪ್ಪವಾಗಿ ಬರುವಂತೆ ಮಾಡುವ ಕೆಲವು ಐಡಿಯಾಗಳು ಇವೆ.  

    ದಪ್ಪ ಹುಬ್ಬುಗಳ ಟ್ರೆಂಡ್‌

    ನಮ್ಮ ಮುಖದ ಮೇಲೆ ಹುಬ್ಬುಗಳು ಎಷ್ಟು ಮುಖ್ಯ ಎಂದು ಎಲ್ಲರಿಗೂ ತಿಳಿದಿರುತ್ತದೆ. ಹುಬ್ಬು ಚಿಕ್ಕದಾಗಿದ್ದರೂ, ದೊಡ್ಡದಾಗಿದ್ದರೂ ಅದು ಮುಖ ಅಂದವನ್ನು ಕೆಡಿಸುತ್ತದೆ. ಇತ್ತೀಚಿನ ದಿನಗಳಲ್ಲಿ ದಪ್ಪ ಹುಬ್ಬುಗಳು ಟ್ರೆಂಡ್‌ ಆಗಿವೆ.

    ತೆಳ್ಳಗಿನ ಹುಬ್ಬುಗಳು ಮುಖಕ್ಕೆ ಚೆನ್ನಾಗಿ ಕಾಣಿಸಲ್ಲ ಎಂಬ ಕಾರಣಕ್ಕಾಗಿ ಹುಡುಗಿಯರು ವಿಶೇಷವಾಗಿ ಐಬ್ರೊ ಮಾಡಲು ಪಾರ್ಲರ್‌ಗೆ ಹೋಗುತ್ತಾರೆ. ಕೆಲವರು ಐಬ್ರೋ ಪೆನ್ಸಿಲ್ ಕೂಡ ಬಳಸುತ್ತಾರೆ. ಹುಬ್ಬು ಪೆನ್ಸಿಲ್ ಒಂದು ಸಣ್ಣ ಸಾಧನ ಆಗಿದೆ.

    ಇದನ್ನೂ ಓದಿ: ಸುಡು ಬಿಸಿಲು, ಮಕ್ಕಳ ಆಹಾರದಲ್ಲಿ ಈ ಪದಾರ್ಥಗಳನ್ನು ಮಿಸ್ ಮಾಡಲೇಬೇಡಿ

    ಹುಬ್ಬುಗಳನ್ನು ದಪ್ಪ ಮತ್ತು ಸುಂದರವಾಗಿ ಮಾಡುವ ವಿಧಾನಗಳು

    ಆದರೆ ಇಡೀ ಮುಖದ ನೋಟವನ್ನು ಬದಲಾಯಿಸಲು ಇದನ್ನು ಬಳಸಬಹುದು. ನಿಮ್ಮ ಹುಬ್ಬುಗಳನ್ನು ದಪ್ಪವಾಗಿ ಕಾಣುವಂತೆ ಮಾಡುವುದು ಹೇಗೆ ಎಂಬುದನ್ನು ಇಲ್ಲಿ ನೋಡೋಣ. ಹುಬ್ಬುಗಳನ್ನು ದಪ್ಪ ಮತ್ತು ಸುಂದರವಾಗಿ ಕಾಣುವಂತೆ ಮಾಡಲು ಈ ಕೆಳಗಿನ ವಿಧಾನ ಅನುಸರಿಸಿ.

    - ಹುಬ್ಬುಗಳನ್ನು ಶೇಪ್ ಮಾಡುವ ಮೊದಲು ಯಾವಾಗಲೂ ಮುಖ ತೊಳೆಯುವ ಮೂಲಕ ಪ್ರಾರಂಭಿಸಬೇಕು.

    - ಸಣ್ಣ ಬ್ರಷ್‌ ಸಹಾಯದಿಂದ ನಿಮ್ಮ ಹುಬ್ಬುಗಳನ್ನು ಮೇಲಕ್ಕೆ ಬ್ರಷ್ ಮಾಡಬೇಕು.

    - ನಿಮ್ಮ ಹುಬ್ಬುಗಳಲ್ಲಿನ ಅಂತರವನ್ನು ಪೆನ್ಸಿಲ್‌ನಿಂದ ತುಂಬಿಸಿ

    - ಹುಬ್ಬುಗಳನ್ನು ಹಗುರವಾದ ಕೈಯಿಂದ ಹಿಡಿಯಬೇಕು.

    - ಖಾಲಿ ಜಾಗಕ್ಕೆ ಪೆನ್ಸಿಲ್ ತುಂಬಿದ ನಂತರ ನೀವು ಲಘುವಾಗಿ ಕೈಯಿಂದ ಹುಬ್ಬುಗಳನ್ನು ಮೇಲಕ್ಕೆ ಚಲಿಸಬೇಕು.

    ಹುಬ್ಬುಗಳು ದಪ್ಪ ಮಾಡಲು ಈ ವಿಧಾನ ಅನುಸರಿಸಿ

    ವಿಟಮಿನ್ ಇ ಬಳಕೆ ಮಾಡಿ

    ವಿಟಮಿನ್ ಇ ಅನ್ನು ನೀವು ಬಳಸಬೇಕು. ಇದರಿಂದ ಹುಬ್ಬಿನ ಕೂದಲು ಬೇಗ ಬೆಳೆಯುತ್ತದೆ. ಕ್ಯಾಸ್ಟರ್ ಆಯಿಲ್ನೊಂದಿಗೆ ಮಿಶ್ರಣ ಮಾಡುವ ಮೂಲಕ ನೀವು ಇದನ್ನು ಬಳಸಬಹುದು.

    ಗ್ರೋತ್ ಸೀರಮ್ ಬಳಕೆ ಮಾಡಿ

    ನಿಮ್ಮ ಹುಬ್ಬುಗಳನ್ನು ದಪ್ಪ ಮಾಡಲು ನೀವು ಗ್ರೋತ್ ಸಿರಮ್ ಬಳಸಬಹುದು. ನಿಮ್ಮ ಕೂದಲು ಈಗಾಗಲೇ ಆರೋಗ್ಯಕರವಾಗಿದ್ದರೆ ಮಾತ್ರ ಈ ವಿಧಾನವು ಪ್ರಯೋಜನಕಾರಿ ಆಗಿದೆ. ಇದು ಈಗಾಗಲೇ ಆರೋಗ್ಯಕರವಾಗಿಲ್ಲದಿದ್ದರೆ, ನೀವು ಅದನ್ನು ಚರ್ಮದ ತಜ್ಞರಿಗೆ ತೋರಿಸಬೇಕು.

    ದೀರ್ಘ ಕಾಲದವರೆಗೆ ಮೇಕಪ್ ಮಾಡುವುದು ಬೇಡ

    ನೀವು ಹಲವಾರು ಗಂಟೆಗಳ ಕಾಲ ಮೇಕಪ್ ಮಾಡಿದರೆ, ಇದರಿಂದ ಹುಬ್ಬುಗಳ ಕೂದಲು ಉದುರುತ್ತದೆ. ಅನೇಕ ಜನರಿಗೆ ಇದು ಸರಿ ಹೊಂದುವುದಿಲ್ಲ. ಹಾಗಾಗಿ ಹಾಗೆ ಮಾಡಬೇಡಿ. ನೀವು ಮುಗಿಸಿದ ತಕ್ಷಣ ನಿಮ್ಮ ಮೇಕಪ್ ತೆಗೆದು ಹಾಕಿ.

    ಇದನ್ನೂ ಓದಿ: ಪದೇ ಪದೇ ಕಾಣಿಸಿಕೊಳ್ಳೋ ಮೊಡವೆ ನಿವಾರಣೆಗೆ ತ್ವಚೆಯ ಹೊರಗಲ್ಲ ಒಳಗಿಂದಲೇ ಮದ್ದು ಮಾಡಿ

    ಜೆಲ್ ಬಳಕೆ  ಮಾಡಿ

    ಜೆಲ್ ಮತ್ತು ವ್ಯಾಸಲೀನ್ ಸಹಾಯದಿಂದ ಹುಬ್ಬುಗಳನ್ನು ಶೇಪ್ ಮಾಡಿ. ಜೆಲ್ ಅಥವಾ ವ್ಯಾಸಲೀನ್ ತೆಗೆದುಕೊಂಡು ನಿಮ್ಮ ಹುಬ್ಬುಗಳ ಕೂದಲನ್ನು ಹೊಂದಿಸಿ. ಹೆಚ್ಚು ಉತ್ಪನ್ನ ಬಳಸಬೇಡಿ. ಅದು ನಿಮ್ಮ ಹುಬ್ಬುಗಳನ್ನು ಕೆಟ್ಟದಾಗಿ ಕಾಣುವಂತೆ ಮಾಡುತ್ತದೆ.
    Published by:renukadariyannavar
    First published: