EPFO: ನಿಮ್ಮ ಪಿಎಫ್ ಖಾತೆಗೆ 2.5 ಲಕ್ಷಕ್ಕಿಂತ ಹೆಚ್ಚು ಹಣ ಹೋಗ್ತಿದ್ಯಾ? ಹಾಗಿದ್ರೆ ನಿಮ್ಗೆ ಎರಡೆರಡು PF Account ಇರುತ್ತೆ

New PF Rules You Should Know: 2021 ರ ಬಜೆಟ್ ಘೋಷಣೆಯಲ್ಲಿ ತೆರಿಗೆ ವಿಧಿಸಿರುವ ಬಡ್ಡಿಯನ್ನು ಹೇಗೆ ಲೆಕ್ಕಾಚಾರ ಮಾಡಲಾಗುತ್ತದೆ ಹಾಗೂ ತೆರಿಗೆ ರಹಿತ ಭಾಗದಿಂದ ಹೇಗೆ ಪ್ರತ್ಯೇಕಿಸಲಾಗುತ್ತದೆ ಎಂಬುದ ಕುರಿತು ವಿವರಣೆ ನೀಡಿರಲಿಲ್ಲ. ಇತ್ತೀಚಿನ CBDT ಅಧಿಸೂಚನೆಯು ತೆರಿಗೆ ವಿಧಿಸಿರುವ ಬಡ್ಡಿಯನ್ನು ಹೇಗೆ ಲೆಕ್ಕಾಚಾರ ಮಾಡಲಾಗುತ್ತದೆ ಎಂಬ ಮಾಹಿತಿಯ ವಿವರ ನೀಡಿದೆ.

EPF

EPF

  • Share this:

PF New Rules: 2021 ನೇ ಬಜೆಟ್ ಸಂದರ್ಭದಲ್ಲಿ ಉದ್ಯೋಗಿಯ ಭವಿಷ್ಯ ನಿಧಿ (ಪ್ರಾವಿಡೆಂಡ್ ಫಂಡ್) ಹಾಗೂ ಸ್ವಯಂಪ್ರೇರಿತ (ವಾಲಂಟರಿ ) ಭವಿಷ್ಯ ನಿಧಿ ಕೊಡುಗೆಗಳು ರೂ 2.5 ಲಕ್ಷವನ್ನು ಮೀರಿದ್ದರೆ ಈ ಕೊಡುಗೆಗೆ ತೆರಿಗೆ ಅನ್ವಯವಾಗುತ್ತದೆ ಎಂಬುದಾಗಿ ಘೋಷಣೆಯಾಗಿದೆ. ಈ ಕುರಿತು ನೇರ ತೆರಿಗೆಗಳ ಕೇಂದ್ರ ಮಂಡಳಿ (CBDT) ಹೆಚ್ಚುವರಿ ಇಪಿಎಫ್ ಕೊಡುಗೆಗಳಿಗೆ ವಿಧಿಸುವ ತೆರಿಗೆಗಳ ವಿವರಗಳ ಕುರಿತು ಮಾಹಿತಿ ನೀಡಿದೆ. ಅಧಿಸೂಚನೆಯ ಪ್ರಕಾರ ತೆರಿಗೆಗೆ ವಿಧಿಸುವ ಬಡ್ಡಿಯ ಲೆಕ್ಕಾಚಾರವನ್ನು ನಡೆಸಲು ಭವಿಷ್ಯ ನಿಧಿ ಖಾತೆಗಳನ್ನು ಪ್ರತ್ಯೇಕವಾಗಿ ನಿರ್ವಹಿಸಬೇಕು ಎಂಬ ಸೂಚನೆಯನ್ನೊಳಗೊಂಡಿದೆ. ಮಾರ್ಚ್ 31, 2021 ರವರೆಗೆ ಮಾಡುವ ಯಾವುದೇ ಕೊಡುಗೆಗಳನ್ನು ತೆರಿಗೆ ರಹಿತ ಕೊಡುಗೆಗಳು ಎಂದು ಪರಿಗಣಿಸಲಾಗುತ್ತದೆ.


ಆರ್ಥಿಕ ವರ್ಷ 2021-22 ರ ನಂತರ, ಈ ಎರಡೂ ಇಪಿಎಫ್ ಖಾತೆಗಳಿಗೆ ಬಡ್ಡಿಯನ್ನು ಪ್ರತ್ಯೇಕವಾಗಿ ಲೆಕ್ಕಾಚಾರ ಹಾಕಲಾಗುತ್ತದೆ. CBDT ಅಧಿಸೂಚನೆಯು ಈ ನಿಯಮಗಳ ಅನ್ವಯವು ಏಪ್ರಿಲ್ 1, 2022 ರಿಂದ ಪರಿಣಾಮ ಬೀರಲಿದೆ ಎಂದು ತಿಳಿಸಿದೆ. ಹಾಗಾಗಿ ಆರ್ಥಿಕ ವರ್ಷ 2021-22 ರಲ್ಲಿ ಹೆಚ್ಚುವರಿ ಕೊಡುಗೆಗಳಲ್ಲಿನ ಬಡ್ಡಿಗೆ ವಿಧಿಸಲಾಗುವ ತೆರಿಗೆಯನ್ನು ಪಾವತಿಸಬೇಕಾಗುತ್ತದೆ ಹಾಗೂ ಪಾವತಿಸಿರುವ ತೆರಿಗೆಯನ್ನು ಮುಂದಿನ ವರ್ಷದ ಆದಾಯ ತೆರಿಗೆ ರಿಟರ್ನ್ ಫಿಲ್ಲಿಂಗ್ ಸಮಯದಲ್ಲಿ ಘೋಷಿಸಬೇಕಾಗುತ್ತದೆ.


ಸರಕಾರೇತರ ಉದ್ಯೋಗಿಗಳಿಗೆ ರೂ 2.5 ಲಕ್ಷದ ಮಿತಿಯನ್ನು ವಿಧಿಸಲಾಗಿದೆ. ಸರಕಾರಿ ಉದ್ಯೋಗಿಗಳಿಗೆ ಈ ಮಿತಿಯು 5 ಲಕ್ಷವಾಗಿದೆ ಅಂದರೆ ಉದ್ಯೋಗಿಯ ಇಪಿಎಫ್ ಹಾಗೂ ವಿಪಿಎಫ್ ರೂ 5 ಲಕ್ಷದ ಮಿತಿಯನ್ನು ಮೀರಿದಲ್ಲಿ ಬಡ್ಡಿಗೆ ತೆರಿಗೆ ವಿಧಿಸಲಾಗುತ್ತದೆ. 2021 ರ ಬಜೆಟ್ ಘೋಷಣೆಯಲ್ಲಿ ತೆರಿಗೆ ವಿಧಿಸಿರುವ ಬಡ್ಡಿಯನ್ನು ಹೇಗೆ ಲೆಕ್ಕಾಚಾರ ಮಾಡಲಾಗುತ್ತದೆ ಹಾಗೂ ತೆರಿಗೆ ರಹಿತ ಭಾಗದಿಂದ ಹೇಗೆ ಪ್ರತ್ಯೇಕಿಸಲಾಗುತ್ತದೆ ಎಂಬುದ ಕುರಿತು ವಿವರಣೆ ನೀಡಿರಲಿಲ್ಲ. ಇತ್ತೀಚಿನ CBDT ಅಧಿಸೂಚನೆಯು ತೆರಿಗೆ ವಿಧಿಸಿರುವ ಬಡ್ಡಿಯನ್ನು ಹೇಗೆ ಲೆಕ್ಕಾಚಾರ ಮಾಡಲಾಗುತ್ತದೆ ಎಂಬ ಮಾಹಿತಿಯ ವಿವರ ನೀಡಿದೆ.


ಇದನ್ನೂ ಓದಿ: EPFO: ಪಿಎಫ್ ನಿಯಮ ಬದಲಾಗಿದೆ, ಈ ಲಿಂಕ್ ಮಾಡದಿದ್ರೆ ಮುಂದಿನ ತಿಂಗಳಿಂದ ಪಿಎಫ್ ಹಣ ಸಿಗಲ್ಲ!

ಇಂಡಸ್‌ಲಾಸ್‌ನ ಪಾಲುದಾರರಾದ ರಿತೇಶ್ ಕುಮಾರ್ ಹೇಳಿರುವಂತೆ 2021-22 ರ ಆರ್ಥಿಕ ವರ್ಷಕ್ಕಾಗಿ ಭವಿಷ್ಯ ನಿಧಿಯಲ್ಲಿಯೇ ಪ್ರತ್ಯೇಕ ಖಾತೆಗಳನ್ನು ನಿರ್ವಹಿಸುವ ಕಾರ್ಯವಿಧಾನಗಳನ್ನು ಇತ್ತೀಚಿನ CBDT ಘೋಷಿಸಿದೆ. ತೆರಿಗೆ ರಹಿತ ಕೊಡುಗೆಯ ಬಗ್ಗೆ ಕೂಡ ಕಾರ್ಯವಿಧಾನದಲ್ಲಿ ಸ್ಪಷ್ಟವಾಗಿ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.


Tax2win.in ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿರುವ ಅಭಿಷೇಕ್ ಸೋನಿ ತಿಳಿಸಿರುವಂತೆ, 2021 ರ ಬಜೆಟ್ ನಿಯಮಾವಳಿಗಳ ಪ್ರಕಾರ 2.5 ಲಕ್ಷ ಮೀರುವ ಭವಿಷ್ಯ ನಿಧಿ ಕೊಡುಗೆಗಳ ಬಡ್ಡಿಯ ಮೇಲೆ ತೆರಿಗೆ ವಿಧಿಸಲಾಗುತ್ತದೆ ಎಂದು ತಿಳಿಸಿದ್ದಾರೆ. 31 ನೇ ಆಗಸ್ಟ್ 2021 ರಂದು CBDT ಅಧಿಸೂಚನೆಯನ್ನು ಪ್ರಕಟಿಸಿದ್ದು, ತೆರಿಗೆ ವಿಧಿಸುವ ಬಡ್ಡಿಯ ಲೆಕ್ಕಾಚಾರಕ್ಕಾಗಿ ವಿಧಾನವನ್ನು ತಿಳಿಸಿದೆ. ಈ ಲೆಕ್ಕಾಚಾರಕ್ಕಾಗಿ ಭವಿಷ್ಯ ನಿಧಿ ಖಾತೆಯಲ್ಲಿಯೇ ಎರಡು ಪ್ರತ್ಯೇಕ ಖಾತೆಗಳನ್ನು ನಿರ್ವಹಿಸಲಾಗುತ್ತದೆ ಒಂದನ್ನು ತೆರಿಗೆಯ ಹಾಗೂ ಇನ್ನೊಂದನ್ನು ತೆರಿಗೆ ರಹಿತ ಎಂಬುದಾಗಿ ವರ್ಗೀಕರಿಸಲಾಗುತ್ತದೆ. 31 ನೇ ಮಾರ್ಚ್ 2021 ರವರೆಗೆ ಮಾಡುವ ಯಾವುದೇ ಕೊಡುಗೆ ಹಾಗೂ ಆರ್ಥಿಕ ವರ್ಷ 21-22 ರ ನಿರ್ದಿಷ್ಟ ಮಿತಿಯವರೆಗಿನ ಕೊಡುಗೆಗಳನ್ನು ತೆರಿಗೆ ರಹಿತವೆಂದು ಪರಿಗಣಿಸಲಾಗುತ್ತದೆ.


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
Published by:Soumya KN
First published: