Mobile Addiction: ನಿಮ್ಮ ಮಗು ಮೊಬೈಲ್‌ಗೆ ಅಡಿಕ್ಟ್ ಆಗ್ತಿದ್ಯಾ? ಹಾಗಿದ್ರೆ ಈಗಲೇ ನೀವು ಎಚ್ಚೆತ್ತುಕೊಳ್ಳಿ

ಆನ್‌ಲೈನ್‌ನಿಂದ ಮನರಂಜನೆ ಹಾಗೂ ಪ್ರಪಂಚದ ಅನೇಕ ಪ್ರಯೋಜನ ಸಿಗುತ್ತದೆ. ಆದರೆ ಸ್ಮಾರ್ಟ್ ಫೋನ್, ಕಂಪ್ಯೂಟರ್, ಟಿವಿ, ಟ್ಯಾಬ್ಲಾಯ್ಡ್ ಉಪಕರಣಗಳ ಬಳಕೆ ಮಕ್ಕಳ ಮಾನಸಿಕ ಹಾಗೂ ಆರೋಗ್ಯದ ಮೇಲೂ ಸಾಕಷ್ಟು ಕೆಟ್ಟ ಪರಿಣಾಮ ಬೀರುತ್ತದೆ. ಹಾಗಿದ್ರೆ ಪೋಷಕರು ಏನು ಮಾಡಬೇಕು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಎಲ್ಲವೂ ಈಗ ಆನ್‌ಲೈನ್‌ ಲ್ಲೇ (Online) ಸಿಗುತ್ತದೆ. ಯಾವುದೇ ವಿಷಯ (Thing) ಬೇಕಾದರೂ ಇಂದಿನ ಕಾಲದಲ್ಲಿ ನೆಟ್ (Internet), ಗೂಗಲ್ ಸರ್ಚ್ (Google Search) ಮಾಡುತ್ತೇವೆ. ಮಕ್ಕಳನ್ನು ಫೋನ್ ನಿಂದ ದೂರವಿಡುವುದು ತುಂಬಾ ಮುಖ್ಯ. ಆದರೆ ಕೊರೊನಾ ಶುರುವಾದಾಗಿನಿಂದ ಮಕ್ಕಳು ಆನ್ ಲೈನ್ ಕ್ಲಾಸ್, ಗೇಮಿಂಗ್ ಹೀಗೆ ವಿವಿಧ ಚಟುವಟಿಕೆಗಳಿಗೆ ಮೊಬೈಲ್ ಬಳಸುತ್ತಾರೆ. ಇತ್ತೀಚೆಗೆ ಮಕ್ಕಳು ಮೊಬೈಲ್ ಗೆ ಹೆಚ್ಚು ಅಡಿಕ್ಟ್ ಆಗುತ್ತಿದ್ದಾರೆ. ಸದಾ ಮೊಬೈಲ್ ನಲ್ಲೇ ಬ್ಯುಸಿಯಾಗಿರುತ್ತಾರೆ. ಮಕ್ಕಳನ್ನು ಮೊಬೈಲ್ ಪರದೆಯಿಂದ ದೂರವಿಡೋದು ಪೋಷಕರಿಗೆ ಸವಾಲಿನ ಕೆಲಸವಲ್ಲ. ಇಂದಿನ ಕಾಲದಲ್ಲಿ ಮಕ್ಕಳಿಗೆ ಸ್ಮಾರ್ಟ್‌ಫೋನ್‌, ಟ್ಯಾಬ್ಲೆಟ್‌ ಬಹಳ ಮುಖ್ಯ ಸಾಧನಗಳಾಗಿವೆ.

  ಸ್ಮಾರ್ಟ್‌ಫೋನ್‌ ಸಾಧನ ಬಳಕೆಯಿಂದ ಮಕ್ಕಳ ಮಾನಸಿಕ ಸ್ಥಿತಿಯ ಮೇಲೆ ಕೆಟ್ಟ ಪರಿಣಾಮ

  ಆನ್‌ಲೈನ್ ನಿಂದ ಮನರಂಜನೆ ಹಾಗೂ ಪ್ರಪಂಚದ ಅನೇಕ ಪ್ರಯೋಜನ ಸಿಗುತ್ತದೆ. ಆದರೆ ಸ್ಮಾರ್ಟ್ ಫೋನ್, ಕಂಪ್ಯೂಟರ್, ಟಿವಿ, ಟ್ಯಾಬ್ಲಾಯ್ಡ್ ಉಪಕರಣಗಳ ಬಳಕೆ ಮಕ್ಕಳ ಮಾನಸಿಕ ಹಾಗೂ ಆರೋಗ್ಯದ ಮೇಲೂ ಸಾಕಷ್ಟು ಕೆಟ್ಟ ಪರಿಣಾಮ ಬೀರುತ್ತದೆ.

  ಮಕ್ಕಳ ಮೇಲೆ ಸ್ಮಾರ್ಟ್ ಫೋನ್ ಬಳಕೆಯಿಂದ ಉಂಟಾಗುವ ಅಪಾಯಕಾರಿ ಪರಿಣಾಮಗಳು

  ಒಂದು ಅಧ್ಯಯನದ ಪ್ರಕಾರ, 8 ರಿಂದ 12 ವರ್ಷ ವಯಸ್ಸಿನ ಮಕ್ಕಳು ಪ್ರತಿದಿನ ಸುಮಾರು 6 ಗಂಟೆಯವರೆಗೆ ಮೊಬೈಲ್ ಪರದೆಯ ಮುಂದಿರುತ್ತಾರೆ. ಸ್ಮಾರ್ಟ್‌ಫೋನ್‌ಗಳ ಅತಿಯಾದ ಬಳಕೆ ಅನೇಕ ಅಪಾಯಕಾರಿ ಅಡ್ಡಪರಿಣಾಮ ಉಂಟು ಮಾಡುತ್ತದೆ.

  ಇದನ್ನೂ ಓದಿ: ನಿಮ್ಮ ಆಹಾರದಲ್ಲಿ ಈ ಪದಾರ್ಥಗಳಿದ್ದರೆ ಹೃದಯದ ಆರೋಗ್ಯಕ್ಕೆ ಬೆಸ್ಟ್ ಅಂತೆ!

  - ವರ್ತನೆಯ ಸಮಸ್ಯೆಗಳು

  - ವ್ಯಸನ

  - ಖಿನ್ನತೆ

  - ನಿದ್ರಿಸಲು ತೊಂದರೆ

  - ಸ್ಥೂಲಕಾಯತೆ

  - ಸಾಮಾಜಿಕ ಬೆಳವಣಿಗೆಯಲ್ಲಿ ವಿಳಂಬ

  - ಏಕಾಗ್ರತೆ ಮತ್ತು ಶ್ರವಣದಲ್ಲಿ ತೊಂದರೆ

  - ನರಮಂಡಲದ ತೊಂದರೆಗಳು

  ಮಕ್ಕಳನ್ನು ಸ್ಮಾರ್ಟ್‌ಫೋನ್‌ ನಿಂದ ದೂರವಿರಿಸುವ ಸೃಜನಾತ್ಮಕ ಮಾರ್ಗಗಳು

  ವಿರಾಮದ ಸಮಯ

  ಮಕ್ಕಳಲ್ಲಿ ಶಕ್ತಿ ಇರುತ್ತದೆ. ಅದನ್ನು ಸರಿಯಾಗಿ ಬಳಸುವುದು ಅವಶ್ಯಕ. ನಿಮ್ಮ ಮಗು ಖಾಲಿ ಕುಳಿತುಕೊಳ್ಳುವ ಬದಲು ಯಾವುದಾದರೂ ಚಟುವಟಿಕೆಯಲ್ಲಿ ತೊಡಗಿಕೊಳ್ಳುವಂತೆ ನೋಡಿಕೊಳ್ಳಿ. ಪ್ರತಿ 30 ನಿಮಿಷಗಳಿಗೊಮ್ಮೆ ಸ್ಟ್ರೆಚಿಂಗ್ ಮಾಡಲು ಹೇಳಿ.

  ಇತರ ವಿಷಯಗಳಿಗೆ ಆದ್ಯತೆ ನೀಡಿ

  ನಿಮ್ಮ ಮಗು ತನ್ನ ಮನೆಕೆಲಸ, ಅಧ್ಯಯನ ಮತ್ತು ಇತರ ಎಲ್ಲಾ ಪ್ರಮುಖ ಕೆಲಸಗಳನ್ನು  ಸ್ಮಾರ್ಟ್‌ಫೋನ್ ಹಿಡಿದು ಕೂರುವ ಮೊದಲೇ ಪೂರ್ಣಗೊಳಿಸಿದೆಯೇ ಅಥವಾ ಇಲ್ಲವೋ ಎಂದು ಖಚಿತಪಡಿಸಿಕೊಳ್ಳಿ.

  ಸ್ಮಾರ್ಟ್‌ಫೋನ್ ಹೆಚ್ಚು ಬಳಕೆಗೆ ಅವಕಾಶ ನೀಡಬೇಡಿ

  ಸ್ಮಾರ್ಟ್‌ಫೋನ್ ಮೂಲಕ ಮಕ್ಕಳು ಪ್ರಪಂಚದ ಸುತ್ತ ನಡೆಯುತ್ತಿರುವ ಅನೇಕ ವಿಷಯಗಳನ್ನು ಕಲಿಯಬಹುದು. ಹಾಗಾಗಿ ಮಕ್ಕಳಿಗೆ ಸ್ಮಾರ್ಟ್ ಫೋನ್ ಬಳಕೆಗೆ ಅವಕಾಶ ನೀಡಿ. ಆದರೆ ಅತೀಯಾಗಿ ಸ್ಮಾರ್ಟ್‌ಫೋನ್ ಬಳಸದಂತೆ ನೋಡಿಕೊಳ್ಳಿ. ಅಂದರೆ ಕಡಿಮೆ ಸಮಯದವರೆಗೆ ಬಳಸಲು ಅನುಮತಿ ನೀಡುವುದು ಮುಖ್ಯ.

  ಮಕ್ಕಳನ್ನು ಚಟುವಟಿಕೆಯಲ್ಲಿ ನಿರತರನ್ನಾಗಿ ಮಾಡಿ

  ಮಕ್ಕಳು ಸಾಮಾನ್ಯವಾಗಿ ವಿನೋದ ಮತ್ತು ಮನರಂಜನೆಗಾಗಿ ಸ್ಮಾರ್ಟ್‌ಫೋನ್‌ ಬಳಸುತ್ತಾರೆ. ಮಕ್ಕಳು ಸವಾಲಿನ ವಿಷಯ ಇಷ್ಟಪಡುವುದರಿಂದ ಮೊಬೈಲ್ ಆಟಗಳು ಸಾಕಷ್ಟು ಆಕರ್ಷಕವಾಗಿವೆ. ಅಂತಹ ಸ್ಥಿತಿಯಲ್ಲಿ ಅವರು ಆನಂದಿಸುವ ಮತ್ತು ಮೋಜಿನ ಜೊತೆಗೆ ಜ್ಞಾನ ಪಡೆಯುವ ವಿಷಯ ಚಟುವಟಿಗಳಲ್ಲಿ ಅವರನ್ನು ನಿರತರನ್ನಾಗಿ ಮಾಡಿ.

  ಪೋಷಕರ ತಪ್ಪುಗಳೂ ಕಾರಣ

  - ಮಗು ನಿಮ್ಮ ಸುತ್ತಲೂ ಇದ್ದರೆ ನೀವು ಸ್ಮಾರ್ಟ್‌ಫೋನ್ ಬಳಸಬೇಕು.

  - ಆಹಾರ ಸೇವಿಸುವಾಗ ಫೋನ್ ಬಳಸಬೇಡಿ. ಮಲಗುವ ಮುನ್ನ ಫೋನ್ ಮತ್ತು ಟಿವಿ ನೋಡಬೇಡಿ.

  - ಅನಗತ್ಯ ಬೇಡಿಕೆ ಈಡೇರಿಸಲು ಮಕ್ಕಳಿಗೆ ಫೋನ್ ನೀಡಬೇಡಿ.

  ಇದನ್ನೂ ಓದಿ: ಮಹಿಳೆಯರಲ್ಲಿ ಪದೇ ಪದೇ ಮೂತ್ರನಾಳ ಸೋಂಕು ಉಂಟಾಗಲು ಕಾರಣವೇನು? ಇಲ್ಲಿದೆ ಸಂಪೂರ್ಣ ಮಾಹಿತಿ

  - ನಿಮ್ಮ ಮಗು ಸ್ಮಾರ್ಟ್ ಫೋನ್ ಬಳಸುತ್ತಿರುವಾಗ ಕೆಲವು ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ.

  - ಕುಳಿತುಕೊಳ್ಳುವ ರೀತಿ, ಫೋನ್‌ ಬೆಳಕು, ಕಣ್ಣು ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸಿ.
  Published by:renukadariyannavar
  First published: