HOME » NEWS » Lifestyle » IF YOUR ARE USING FORZEN FOOD THEN WILL FACE THESE HUGE PROBLEMS STG AE

ಎಚ್ಚರ: ಫ್ರೋಜನ್‌ ಫುಡ್​ ಸೇವನೆಯಿಂದ ಅಪಾಯ ಕಟ್ಟಿಟ್ಟ ಬುತ್ತಿ..!

ಫ್ರೋಜನ್ ತರಕಾರಿ ಮತ್ತು ಹಣ್ಣುಗಳಿಂದ ನಿಮ್ಮ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳು ಏನು ಎಂಬುದನ್ನು ತಿಳಿದುಕೊಳ್ಳೋಣ.

Anitha E | Trending Desk
Updated:June 24, 2021, 9:05 PM IST
ಎಚ್ಚರ: ಫ್ರೋಜನ್‌ ಫುಡ್​ ಸೇವನೆಯಿಂದ ಅಪಾಯ ಕಟ್ಟಿಟ್ಟ ಬುತ್ತಿ..!
ಸಾಂದರ್ಭಿಕ ಚಿತ್ರ
  • Share this:
ಇಂದಿನ ಆಧುನಿಕ ಯುಗದಲ್ಲಿ ಪ್ರತಿಯೊಂದು ರೆಡಿಮೇಡ್ ಆಗಿ ದೊರೆಯಬೇಕೆಂದೇ ಹೆಚ್ಚಿನವರು ಆಸೆಪಡುತ್ತಾರೆ. ಆಹಾರದಿಂದ ಹಿಡಿದು ಅಗತ್ಯ ವಸ್ತುಗಳೂ ಕೂಡ ನಿರಾಯಾಸವಾಗಿ ಹೆಚ್ಚಿನ ಶ್ರಮವಿಲ್ಲದೆ ಕೈಗೆ ದೊರೆಯಬೇಕೆಂದು ಭಾವಿಸುತ್ತಾರೆ. ಪಟ್ಟಣಗಳಲ್ಲಿ ಹೆಚ್ಚಿನವರು ಉದ್ಯೋಗಗಳಿಗೆ ಹೋಗುವುದರಿಂದ ಪ್ರತಿಯೊಂದು ಆಹಾರವೂ ರೆಡಿಯಾಗಿ ದೊರೆಯಬೇಕೆಂದು ಅದಕ್ಕಾಗಿಯೇ ಹಂಬಲಿಸುತ್ತಿರುತ್ತಾರೆ. ಇದಕ್ಕೆ ಸರಿಯಾಗಿ ಆಹಾರ ಕೈಗಾರಿಕೆಗಳು ಪ್ರತಿಯೊಬ್ಬರಿಗೆ ಕೈಗೆಟಕುವ ರೀತಿಯಲ್ಲಿ ಸಿದ್ಧ ಆಹಾರಗಳನ್ನು ತಯಾರಿಸುತ್ತಿವೆ.

ಇಂದು ತರಕಾರಿ ಮತ್ತು ಹಣ್ಣು ಕೂಡ ಫ್ರೋಜನ್ ಆಗಿ ದೊರೆಯುತ್ತಿರುವುದರಿಂದ ಇವುಗಳನ್ನು ನೇರವಾಗಿ ಆಹಾರ ತಯಾರಿಸುವಾಗ ಮಿಕ್ಸ್ ಮಾಡಿ ಬಳಸುವ ಪದ್ಧತಿ ಹೆಚ್ಚಾಗುತ್ತಿದೆ. ಮೊದಲೇ ಬೇಯಿಸಿದ ಆಹಾರವನ್ನು ಫ್ರೀಜರ್‌ನಲ್ಲಿಟ್ಟು ಅವು ಕೆಡದಂತೆ ಸಂರಕ್ಷಿಸುವುದೇ ಫ್ರೋಜನ್ ವಿಧಾನವಾಗಿದೆ. ಅಪರೂಪಕ್ಕೆ ಈ ಫ್ರೋಜನ್ ಆಹಾರಗಳು ದೇಹಕ್ಕೆ ಒಳ್ಳೆಯದಾದರೂ ದಿನನಿತ್ಯವೂ ಇದನ್ನೇ ನೀವು ಸೇವಿಸುತ್ತೀರಿ ಎಂದಾದಲ್ಲಿ ನೀವು ಅಪಾಯಕ್ಕೆ ಸನಿಹದಲ್ಲಿದ್ದೀರಿ ಎಂದೇ ಅರ್ಥ.

ಈ ಫ್ರೋಜನ್ ತರಕಾರಿ ಮತ್ತು ಹಣ್ಣುಗಳಿಂದ ನಿಮ್ಮ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳು ಏನು ಎಂಬುದನ್ನು ತಿಳಿದುಕೊಳ್ಳೋಣ.

ಮಧುಮೇಹ

ಈ ಆಹಾರಗಳನ್ನು ತಾಜಾ ಆಗಿರಿಸಲು ಸ್ಟಾರ್ಚ್‌ ಅಂಶವನ್ನು ಬಳಸಲಾಗುತ್ತದೆ. ಈ ಪಿಷ್ಠವು ಜೀರ್ಣಕ್ರಿಯೆಯ ಸಮಯದಲ್ಲಿ ಸಕ್ಕರೆಯಾಗಿ ಪರಿವರ್ತನೆಗೊಳ್ಳುತ್ತದೆ ಮತ್ತು ಮಧುಮೇಹದಂತಹ ಸಮಸ್ಯೆಗಳಿಗೆ ಇದು ಕಾರಣವಾಗಬಲ್ಲುದು.

ಹೃದಯ ಸಂಬಂಧಿ ಕಾಯಿಲೆಗಳು

ಫ್ರೋಜನ್ ಮಾಡಿದ ತರಕಾರಿ ಇಲ್ಲವೇ ಹಣ್ಣುಗಳನ್ನು ಪಿಷ್ಠವನ್ನು ಬಳಸಿ ಸಂರಕ್ಷಿಸಿಡಲಾಗುತ್ತದೆ. ಇದರಿಂದ ಹಣ್ಣು ತರಕಾರಿ ತಾಜಾ ಆಗಿರುತ್ತವೆ. ಆದರೆ ಹೃದಯಕ್ಕೆ ಇದರಿಂದ ಹಾನಿ ಖಂಡಿತಇದನ್ನೂ ಓದಿ: Urvashi Rautela: 58 ಲಕ್ಷ ಮೌಲ್ಯದ ಕಾಸ್ಟ್ಯೂಮ್​ ಧರಿಸಿ ರಾಜಕಾರಣಿಯೊಬ್ಬರ ಮರಿಮೊಮ್ಮಗಳ ಮದುವೆಗೆ ಹೋದ ಊರ್ವಶಿ ರೌಟೇಲಾ

ತೂಕ ಹೆಚ್ಚಳ ಅಥವಾ ಬೊಜ್ಜು

ಇಂತಹ ಆಹಾರಗಳಿಂದ ದೇಹದ ತೂಕ ಒಮ್ಮೆಲೆ ಹೆಚ್ಚಾಗುತ್ತದೆ ಮತ್ತು ಬೊಜ್ಜು ನಿಮ್ಮನ್ನು ಕಾಡುತ್ತದೆ. ಈ ಆಹಾರಗಳಲ್ಲಿ ಪ್ರೋಟೀನ್ ಹಾಗೂ ಕಾರ್ಬೊಹೈಡ್ರೇಟ್‌ಗಳು ಹೆಚ್ಚಿರುವುದರಿಂದ ನಿಮ್ಮ ದೇಹದಲ್ಲಿ ಕೊಬ್ಬು ಶೇಖರವಾಗುವಂತೆ ಮಾಡುತ್ತದೆ.

ದೇಹಕ್ಕೆ ನ್ಯೂಟ್ರಿಶನ್ ಕೊರತೆ

ಇಂತಹ ತರಕಾರಿ ಹಣ್ಣುಗಳ ಸೇವನೆಯಿಂದ ದೇಹಕ್ಕೆ ನ್ಯೂಟ್ರಿಶನ್ ಅಂಶ ನಷ್ಟವಾಗುತ್ತದೆ.

ತಾಜಾ ಹಣ್ಣಿನ ರುಚಿ ಇರುವುದಿಲ್ಲ

ಈ ಬಗೆಯ ಆಹಾರಗಳು ತಾಜಾ ಆಹಾರಗಳ ರುಚಿಯನ್ನು ನೀಡುವುದಿಲ್ಲ. ಇದರ ತಾಜಾತನವಿರುವುದು ನೀವು ಫ್ರಿಜ್‌ನಲ್ಲಿಟ್ಟುವರೆಗೆ ಮಾತ್ರ. ಒಮ್ಮೆ ನೀವು ಫ್ರಿಜ್‌ನಿಂದ ತೆಗೆದು ಹೊರಗಿಟ್ಟ ನಂತರ ಇದರ ರುಚಿ ನಶಿಸಿ ಹೋಗುತ್ತದೆ.

ಮೇದೋಜೀರಕ ಗ್ರಂಥಿಯ ಕ್ಯಾನ್ಸರ್

ಫ್ರೋಜನ್ ತರಕಾರಿ ಹಣ್ಣುಗಳ ಸೇವನೆಯಿಂದ ಮೆದೋಜೀರಕದ ಕ್ಯಾನ್ಸರ್‌ಗೆ ನೀವು ತುತ್ತಾಗುವ ಅಪಾಯವಿರುತ್ತದೆ. ಏಕೆಂದರೆ ಈ ಆಹಾರಗಳಲ್ಲಿ ಬಳಸಲಾದ ರಾಸಾಯನಿಕ ಪದಾರ್ಥಗಳು ಮೇದೋಜೀರಕ ಗ್ರಂಥಿಯ ಕ್ಯಾನ್ಸರ್‌ಗೆ ಕಾರಣವಾಗುತ್ತವೆ.

ರಕ್ತದೊತ್ತಡವನ್ನು ಏರಿಸುತ್ತದೆ

ಅಧ್ಯಯನದ ಪ್ರಕಾರ, ಹೆಪ್ಪುಗಟ್ಟಿದ ಆಹಾರಗಳು ಅಧಿಕ ಪ್ರಮಾಣದ ಸೋಡಿಯಂ ಅನ್ನು ಹೊಂದಿರುವುದರಿಂದ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಹೆಚ್ಚು ಸೋಡಿಯಂ ಸೇವಿಸುವುದರಿಂದ ಪಾರ್ಶ್ವವಾಯು ಮತ್ತು ಹೃದ್ರೋಗಗಳಂತಹ ಇತರ ವೈದ್ಯಕೀಯ ಪರಿಸ್ಥಿತಿಗಳ ಅಪಾಯವೂ ಹೆಚ್ಚಾಗುತ್ತದೆ.

ಇದನ್ನೂ ಓದಿ: ಚಕ್ರವರ್ತಿ ಚಂದ್ರಚೂಡರನ್ನು ತರಾಟೆಗೆ ತೆಗೆದುಕೊಂಡ ವೈಷ್ಣವಿ ಗೌಡ: ಅಷ್ಟಕ್ಕೂ ಆಗಿದ್ದೇನು ಗೊತ್ತಾ..?

ಫ್ರೋಜನ್ ಆಹಾರ ಪದಾರ್ಥಗಳ ಪ್ಯಾಕೆಟ್‌ನಲ್ಲಿ ಬರೆದಿರುವ ಸೂಚನೆಗಳನ್ನು ತಪ್ಪದೆ ಓದಿ. ಮೈಕ್ರೋವೇವ್​ನಲ್ಲಿ ಮಾಡುವಾಗ ತೇವಾಂಶವುಳ್ಳ ಶಾಖ ಉತ್ಪಾದನೆಯನ್ನು ಮಾಡಲು ಆಹಾರವನ್ನು ತಟ್ಟೆಯಿಂದ ಮುಚ್ಚಿಡಿ. ಇದು ಹಾನಿಕಾರಕ ಬ್ಯಾಕ್ಟೀರಿಯಾವನ್ನು ನಾಶಮಾಡುತ್ತದೆ. ಆಹಾರದ ಶೀತಲೀಕರಣ ಹೋಗುವವರೆಗೆ ಚೆನ್ನಾಗಿ ಬೇಯಿಸಿ.
Published by: Anitha E
First published: June 24, 2021, 9:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories