• Home
  • »
  • News
  • »
  • lifestyle
  • »
  • Vitamin D: ವಿಟಮಿನ್‌ ಡಿ ಕೊರತೆ ಹೊಂದಿದ್ದರೆ ಈ 5 ಆಹಾರಗಳನ್ನು ಸೇವಿಸಿ

Vitamin D: ವಿಟಮಿನ್‌ ಡಿ ಕೊರತೆ ಹೊಂದಿದ್ದರೆ ಈ 5 ಆಹಾರಗಳನ್ನು ಸೇವಿಸಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ವಿಟಮಿನ್‌ ಡಿ ಪಡೆದುಕೊಳ್ಳಲು ಸೂರ್ಯನ ಬೆಳಕನ್ನು ಬಿಟ್ಟರೆ ಎರಡನೇ ಅತ್ಯುತ್ತಮ ಮೂಲವೆಂದರೆ ಆಹಾರ.

  • Share this:

    ನಮ್ಮ ದೇಹಕ್ಕೆ ಎಲ್ಲ ಬಗೆಯ ವಿಟಮಿನ್‌ (Vitamin) ಅತ್ಯಗತ್ಯ. ಅದನ್ನು ತೆಗೆದುಕೊಂಡರೆ ಮಾತ್ರ ನಮ್ಮ ಶರೀರ ಸರಿಯಾಗಿ ಕಾರ್ಯ ನಿರ್ವಹಿಸಲು ಸಾಧ್ಯ. ಅದರಲ್ಲಿ ಪ್ರಮುಖವಾಗಿದ್ದು ವಿಟಮಿನ್‌ ಡಿ. ಎಲ್ಲರಿಗೂ ಗೊತ್ತಿರೋ ಹಾಗೆ ವಿಟಮಿನ್‌ ಡಿ ನಮಗೆ ಸಿಗೋದು ಸೂರ್ಯನ ಎಳೆ ಬಿಸಿಲಿನಿಂದ. ಅದರಲ್ಲೂ ಬೆಳಗಿನ ಹಾಗೂ ಸಾಯಂಕಾಲದ ಎಳೆ ಬಿಸಿಲಿನಲ್ಲಿ ವಿಟಮಿನ್‌ ಡಿ ಹೇರಳವಾಗಿರುತ್ತದೆ. ಆದರೆ ಅನೇಕರಿಗೆ ಬೆಳಕಿನ ಹಾಗೂ ಸಾಯಂಕಾಲದ ಸೂರ್ಯನ ರಶ್ಮಿಗೆ ಒಗ್ಗಿಕೊಳ್ಳಲು ಸಾಧ್ಯವಾಗೋದಿಲ್ಲ. ಗೊತ್ತಿದ್ದೋ ಗೊತ್ತಿಲ್ಲದೆಯೋ ಸೂರ್ಯನ ಬೆಳಕಿಗೆ ಅವರು ತಾಕಿಸಿಕೊಳ್ಳೋದೇ ಇಲ್ಲ. ಅಂಥವರಿಗೆ ವಿಟಮಿನ ಡಿ ಕೊರತೆ ಉಂಟಾಗೋದು ಸಾಮಾನ್ಯ. ಇದು ನಿಮಗೆ ವಿವಿಧ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು


    ಅಂದಹಾಗೆ ವಿಟಮಿನ್‌ ಡಿ ಪಡೆದುಕೊಳ್ಳಲು ಸೂರ್ಯನ ಬೆಳಕನ್ನು ಬಿಟ್ಟರೆ ಎರಡನೇ ಅತ್ಯುತ್ತಮ ಮೂಲವೆಂದರೆ ಆಹಾರ. ನೀವು ವಿಟಮಿನ್ ಡಿ ಕೊರತೆಯನ್ನು ಹೊಂದಿದ್ದರೆ ನೀವು ಈ 5 ಆರೋಗ್ಯಕರ ಆಹಾರಗಳನ್ನು ಸೇವಿಸಲೇಬೇಕು.


    ಅಣಬೆ: ಅಣಬೆಗಳು ವಿಟಮಿನ್‌ ಡಿಯ ಸಮೃದ್ಧ ಮೂಲಗಳಾಗಿವೆ. ಯುವಿ ವಿಕಿರಣಕ್ಕೆ ಒಡ್ಡಿಕೊಂಡಾಗ ಅಣಬೆಗಳು ವಿಟಮಿನ್ ಡಿ ಉತ್ಪಾದಿಸುತ್ತವೆ. ನ್ಯೂಟ್ರಿಯೆಂಟ್ಸ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಅಣಬೆಗಳು ವಿಟಮಿನ್ ಡಿ ಯ ಪ್ರಾಣಿ ಮೂಲವಲ್ಲದ ಆಹಾರವಾಗಿದ್ದು, ಅವು ವಿಟಮಿನ್ ಡಿ 2 ಅನ್ನು ಉತ್ಪಾದಿಸುತ್ತವೆ. ಇದು ವಿಟಮಿನ್ ಡಿ ಯ ರಕ್ತದ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.


    ಇದನ್ನೂ ಓದಿ: ಅತಿಯಾಗಿ ವಿಡಿಯೋ ಗೇಮ್ ಆಡಿದ್ರೆ ಮಕ್ಕಳ ಹೃದಯಕ್ಕೆ ಅಪಾಯವಂತೆ


    ಮೊಟ್ಟೆಯ ಹಳದಿ ಭಾಗ: ಎರಡು ಮೊಟ್ಟೆಗಳೊಂದಿಗೆ ತಮ್ಮ ದಿನವನ್ನು ಪ್ರಾರಂಭಿಸುವ ಜನರು ಸರಿಯಾದ ಪೌಷ್ಟಿಕಾಂಶದ ಜೊತೆ ತಮ್ಮ ದಿನವನ್ನು ಕಳೆಯುತ್ತಾರೆ. ಸಂಪೂರ್ಣ ಮೊಟ್ಟೆಗಳಲ್ಲಿ 37 IU ವಿಟಮಿನ್ ಡಿ ಇದೆ ಎಂದು ಅಧ್ಯಯನಗಳು ಕಂಡುಕೊಂಡಿವೆ. ವಿಟಮಿನ್ ಡಿ ಮಾತ್ರವಲ್ಲ, ಮೊಟ್ಟೆಗಳು ಆರೋಗ್ಯಕರ ಕೊಬ್ಬುಗಳು ಮತ್ತು ಪ್ರೋಟೀನ್‌ಗಳ ಉತ್ತಮ ಮೂಲವಾಗಿದೆ. ಇದನ್ನು ಸೇವಿಸುವುದರಿಂದ ಇಡೀ ದಿನ ನೀವು ಎನೆರ್ಜೆಟಿಕ್‌ ಆಗಿ ಇರುತ್ತೀರಿ.


    ಕೊಬ್ಬಿನ ಮೀನು: ಟ್ಯೂನ, ಮ್ಯಾಕೆರೆಲ್ ಮತ್ತು ಸಾಲ್ಮನ್‌ಗಳಂತಹ ಮೀನು ಪ್ರಭೇದಗಳು ವಿಟಮಿನ್ ಡಿ ಯ ಉತ್ತಮ ಮೂಲಗಳಾಗಿವೆ. ನಿಮ್ಮ ದೈನಂದಿನ ವಿಟಮಿನ್ ಡಿ ಮಟ್ಟವನ್ನು ತಲುಪಲು ನೀವು ಕೊಬ್ಬಿನ ಮೀನಿನ ಒಂದು ಸೇವನೆ ಸಾಕು ಎಂದು ಅಧ್ಯಯನಗಳು ಹೇಳಿವೆ.


    ಬಲವರ್ಧಿತ ಆಹಾರಗಳು: ಬಲವರ್ಧಿತ ಆಹಾರವು ಆಹಾರ ಪೂರಕಗಳ ಸಂಯೋಜನೆಯಾಗಿದೆ. ವಿಟಮಿನ್ ಡಿ ಯ ನೈಸರ್ಗಿಕ ಮೂಲಗಳು ಸೀಮಿತವಾಗಿರುವುದರಿಂದ, ಕೆಲವು ಆಹಾರ ಉತ್ಪನ್ನಗಳು ಈ ಪೋಷಕಾಂಶದಿಂದ ಬಲವರ್ಧಿತವಾಗಿವೆ. ಬಲವರ್ಧಿತ ಆಹಾರಗಳಲ್ಲಿ ವಿಟಮಿನ್ ಡಿ ಮಟ್ಟವು ಇತರ ಆಹಾರ ಮೂಲಗಳಂತೆ ಹೆಚ್ಚಿಲ್ಲದಿದ್ದರೂ ಇದು ನಿಮ್ಮ ದೇಹದಲ್ಲಿನ ಒಟ್ಟಾರೆ ಪ್ರಮಾಣದ ವಿಟಮಿನ್ ಅನ್ನು ಸೇರಿಸುತ್ತದೆ. ಇದರಲ್ಲಿ ಹೆಚ್ಚಾಗಿ ಡೈರಿ ಉತ್ಪನ್ನಗಳು, ಸೋಯಾ ಮಿಲ್ಕ್‌ ಹಾಗೂ ಹಾಲು, ಮೊಟ್ಟೆ ಗಳಂಥವು ಸೇರಿವೆ.


    ಇದನ್ನೂ ಓದಿ: ಸೌತೆಕಾಯಿ ಆರೋಗ್ಯಕರ ಅಂತ ಜಾಸ್ತಿ ತಿನ್ಬೇಡಿ, ಕಿಡ್ನಿ ಸಮಸ್ಯೆ ಬರಬಹುದು


    ಕಾಡ್ ಲಿವರ್ ಆಯಿಲ್:‌ ಸಾಮಾನ್ಯವಾಗಿ ಬಳಸುವ ಪೂರಕಗಳಲ್ಲಿ ಒಂದಾದ ಕಾಡ್ ಲಿವರ್ ಆಯಿಲ್ ಮೀನು ತಿನ್ನಲು ಇಷ್ಟಪಡದ ಜನರಿಗೆ ಉತ್ತಮ ಆಯ್ಕೆಯಾಗಿದೆ. ಇದು ಒಮೆಗಾ -3 ಕೊಬ್ಬಿನಾಮ್ಲಗಳಲ್ಲಿ ಅಧಿಕವಾಗಿದೆ. ಇದು ನಿಮ್ಮ ಹೃದಯಕ್ಕೆ ಉತ್ತಮವಾಗಿದೆ. ಅಲ್ಲದೇ, ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡುತ್ತದೆ. ಆದಾಗ್ಯೂ, ನೀವು ಈ ಪೂರಕವನ್ನು ಅತಿಯಾಗಿ ತಿನ್ನುತ್ತಿಲ್ಲ ಎಂದು ಖಚಿತಪಡಿಸಿಕೊಳ್ಳಿ ಏಕೆಂದರೆ ಅದು ಸಮಸ್ಯೆಗಳಿಗೆ ಕಾರಣವಾಗಬಹುದು!


    ಒಟ್ಟಾರೆ, ದೇಹಕ್ಕೆ ಅಗತ್ಯವಿರುವ ವಿಟಮಿನ್‌ ಡಿ ಪಡೆಯುವುದು ಆರೋಗ್ಯದ ದೃಷ್ಟಿಯಿಂದ ಅತ್ಯಗತ್ಯ. ಅದರ ಕೊರತೆಯಿಂದ ಬರುವ ಅನಾರೋಗ್ಯ ಸಹಿಸಿಕೊಳ್ಳುವ ಬದಲು ನೈಸರ್ಗಿಕ ಮೂಲವಾದ ಸೂರ್ಯನ ರಶ್ಮಿಯ ಜೊತೆಗೆ ಸರಿಯಾದ ಆಹಾರ ಕ್ರಮವನ್ನು ಪಾಲಿಸುವುದು ಒಳ್ಳೆಯದು.

    Published by:Seema R
    First published: