• Home
  • »
  • News
  • »
  • lifestyle
  • »
  • Weight Loss: ವ್ಯಾಯಾಮ ಮಾಡಲು ಮನಸ್ಸಿಲ್ಲವೇ? ಹಾಗಾದರೆ ತೂಕ ಇಳಿಕೆಗೆ ಹೀಗೆ ಮಾಡಿ

Weight Loss: ವ್ಯಾಯಾಮ ಮಾಡಲು ಮನಸ್ಸಿಲ್ಲವೇ? ಹಾಗಾದರೆ ತೂಕ ಇಳಿಕೆಗೆ ಹೀಗೆ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹೆಚ್ಚುತ್ತಿರುವ ತೂಕ ನಿಯಂತ್ರಿಸಲು ಆರೋಗ್ಯಕರ ಪದಾರ್ಥಗಳನ್ನೇ ಸೇವನೆ ಮಾಡಬೇಕಾಗುತ್ತದೆ. ಆಹಾರದಲ್ಲಿ ಸ್ವಲ್ಪ ಬದಲಾವಣೆ ಮಾಡಿದರೂ ಮತ್ತೆ ತೂಕ ಹೆಚ್ಚುತ್ತಾ ಹೋಗುತ್ತದೆ. ಬಹುತೇಕ ಎಲ್ಲರೂ ಬೊಜ್ಜು ಕಡಿಮೆ ಮಾಡಲು ಕೆಲವು ಕ್ರಮಗಳನ್ನು ಫಾಲೋ ಮಾಡುವ ಅಗತ್ಯವಿದೆ.

  • Share this:

    ಇಷ್ಟ ಪಟ್ಟಿದ್ದನ್ನು ಎಲ್ಲವನ್ನೂ ತಿಂದರೂ (Eating) ಸಹ ತೂಕ ಹೆಚ್ಚಳವಾಗಲ್ಲ ಎಂಬುವಂತಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಅಲ್ಲವೇ? ಈ ಯೋಚನೆ ನಿಮಗೆ ಹಲವು ಬಾರಿ ಮನಸ್ಸಿನಲ್ಲಿ (Mind) ಬಂದಿರಬಹುದು. ಇಷ್ಟವಾಗಿದ್ದನ್ನೆಲ್ಲಾ ತಿನ್ನುವ ಬಯಕೆ (Want) ಆಗುತ್ತದೆ. ನಾಲಿಗೆಯು ರುಚಿ ಬೇಡುತ್ತೆ. ದೇಹ (Body) ಶಕ್ತಿ (Energy), ಪೋಷಕಾಂಶ ಮತ್ತು ಆರೋಗ್ಯ (Health) ಬೇಡುತ್ತದೆ. ಈ ಮಧ್ಯೆ ಏನಾದರೂ ತಿಂದರೆ ತೂಕ ಹೆಚ್ಚುವ ಭಯ. ಇರುವ ತೂಕವನ್ನು ಮೆಂಟೇನ್ ಮಾಡಬೇಕು, ಹೆಚ್ಚುತ್ತಿರುವ ತೂಕ ನಿಯಂತ್ರಿಸಲು ಆರೋಗ್ಯಕರ ಪದಾರ್ಥಗಳನ್ನೇ ಸೇವನೆ ಮಾಡಬೇಕಾಗುತ್ತದೆ. ಆಹಾರದಲ್ಲಿ ಸ್ವಲ್ಪ ಬದಲಾವಣೆ ಮಾಡಿದರೂ ಮತ್ತೆ ತೂಕ ಹೆಚ್ಚುತ್ತಾ ಹೋಗುತ್ತದೆ.


    ಬಹುತೇಕ ಎಲ್ಲರೂ ಬೊಜ್ಜು ಕಡಿಮೆ ಮಾಡಲು ಕೆಲವು ಕ್ರಮಗಳನ್ನು ಫಾಲೋ ಮಾಡುವ ಅಗತ್ಯವಿದೆ. ತೂಕ ಇಳಿಸಲು ಮತ್ತು ತೂಕ ನಿಯಂತ್ರಿಸಲು ನೀವು ಅನೇಕ ಮಾರ್ಗಗಳನ್ನು ಫಾಲೋ ಮಾಡಬಹುದು. ಸಾಮಾಜಿಕ ಜಾಲತಾಣದಲ್ಲಿ ತೂಕ ಇಳಿಕೆಗೆ ಹಲವು ಪರಿಹಾರ ಕ್ರಮಗಳು ಇವೆ.


    ಇಂತಹ ಕ್ರಮಗಳನ್ನು ಫಾಲೋ ಮಾಡುವುದು ನಿರ್ದಿಷ್ಟವಾಗಿ ತೂಕ ಇಳಿಕೆಗೆ ಸರಿಯಾದ ಮಾರ್ಗವೇ? ಎಂಬ ಬಗ್ಗೆ ನಿಖರ ಪುರಾವೆಗಳಿಲ್ಲ. ನಿಮಗೆ ದಿನವೂ ವ್ಯಾಯಾಮ ಮಾಡಿ ಬೋರ್ ಆಗಿದ್ದರೆ ವ್ಯಾಯಾಮದ ಹೊರತಾಗಿ ತೂ ಕ ಇಳಿಕೆಗೆ ಈ ಪರ್ಯಾಯಾ ವಿಧಾನಗಳನ್ನು ಫಾಲೋ ಮಾಡಬಹುದು.


    ಇದನ್ನೂ ಓದಿ: ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಬೇಕು ಎಂದರೆ ಈ ಆಹಾರಗಳನ್ನು ಸೇವಿಸಿ


    ಅಡುಗೆಯಲ್ಲಿ ಮೇಕ್ ಓವರ್ ಮಾಡಿ


    ಸ್ಥೂಲಕಾಯ ಕಡಿಮೆ ಮಾಡಲು ಪರ್ಯಾಯ ಮಾರ್ಗವಾಗಿ ಕೊಬ್ಬು ಕಡಿಮೆ ಇರುವ ಆಹಾರ ಪದಾರ್ಥಗಳನ್ನು ಸೇವನೆ ಮಾಡಬಹುದು. ಅಡುಗೆಮನೆಯಲ್ಲಿ ಆರೋಗ್ಯಕರ ಪದಾರ್ಥಗಳ ಸೇವನೆಗೆ ಒತ್ತು ನೀಡಿ. ಫ್ರಿಜ್‌ನಲ್ಲಿರುವ ಜಂಕ್ ಫುಡ್ ಸೇವನೆ ತಪ್ಪಿಸಿ.


    ನಾಲಿಗೆ ರುಚಿಗಿಂತ ಆರೋಗ್ಯ ರುಚಿಗೆ ಮಹತ್ವ ನೀಡಿ. ಎಲ್ಲಾ ರೀತಿಯ ಹಸಿರು ತರಕಾರಿಗಳು, ಹಣ್ಣಿನ ರಸಗಳು, ಬೀಜಗಳು ಸೇವನೆ ಮಾಡಿ. ವೇಟ್ ಲಾಸ್ ದ್ರವ ಪದಾರ್ಥ ಸೇವನೆ ಮಾಡಿ.


    ಬೆಳಿಗ್ಗೆ ಮೆಂತ್ಯ ನೀರು ಸೇವನೆ ಮಾಡಿ


    ತೂಕ ಕಡಿಮೆ ಮಾಡಲು ಉಗುರು ಬೆಚ್ಚಗಿನ ಬಿಸಿ ನೀರಿಗೆ ಜೇನುತುಪ್ಪ ಮತ್ತು ನಿಂಬೆ ಮಿಶ್ರಣ ಮಾಡಿ ಕುಡಿಯಿರಿ. ಜೊತೆಗೆ ನೀವು ವಾರದ ಕೆಲವು ದಿನವನ್ನು ಮೆಂತ್ಯ ನೀರಿನ ಸೇವನೆಯೊಂದಿಗೆ ಆರಂಭಿಸಿ. ಎರಡು ಚಮಚ ಮೆಂತ್ಯ ಬೀಜಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆ ಮೆಂತ್ಯ ನೀರು ಸೇವನೆ ಮಾಡಿ.


    ಹಸಿರು ಚಹಾ


    ಹಸಿರು ಚಹಾ ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ. ಇದು ತೂಕ ಇಳಿಕೆಗೆ ಸಹಾಯ ಮಾಡುತ್ತದೆ. ಬೊಜ್ಜು ಕಡಿಮೆ ಮಾಡಲು ಹಸಿರು ಚಹಾವು ಸರಳ ಪರಿಹಾರವಾಗಿದೆ ಎಂದು ಹಲವು ಸಂಶೋಧನೆಗಳು ಹೇಳಿವೆ.


    ಕೆಲವೊಮ್ಮೆ ಸ್ಥೂಲಕಾಯವು ಹೃದ್ರೋಗ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ಅಂತಹ ವೇಳೆ ಹಸಿರು ಚಹಾ ರೋಗಗಳಿಂದ ರಕ್ಷಣೆ ನೀಡುತ್ತದೆ. ಇದರಲ್ಲಿರುವ ಕೆಫೀನ್ ಮತ್ತು ಕ್ಯಾಟೆಚಿನ್ ದೇಹದಲ್ಲಿ ಶಕ್ತಿ ಹೆಚ್ಚಿಸುವ ಕೆಲಸ ಮಾಡುತ್ತದೆ.


    ಸಮತೋಲನ ಆಹಾರ ಸೇವನೆ ಮಾಡಿ


    ತೆಳ್ಳಗಾಗಲು ಕಡಿಮೆ ತಿನ್ನಬೇಕೆಂದಲ್ಲ. ಆದರೆ ಯಾವಾಗಲೂ ಸಮತೋಲಿತ ಆಹಾರ ಸೇವಿಸಬೇಕು. ನಿಮ್ಮ ಆಹಾರದಲ್ಲಿ ಪ್ರೋಟೀನ್, ಆರೋಗ್ಯಕರ ಕೊಬ್ಬು, ಹಸಿರು ತರಕಾರಿ, ಹಣ್ಣು ಸೇರಿಸಿ. ಒಂದೇ ಸಮಯದಲ್ಲಿ ಹೆಚ್ಚು ತಿನ್ನಬೇಡಿ. ಆಹಾರವನ್ನು ಸಣ್ಣ ಭಾಗವಾಗಿ ನಾಲ್ಕು ಹೊತ್ತು ಸೇವಿಸಿ. ಹಾಗೂ ಕಡಿಮೆ ಕ್ಯಾಲೋರಿ ಪದಾರ್ಥ ಸೇವಿಸಿ.


    ನಿಧಾನವಾಗಿ ಅಗಿದು ತಿನ್ನಿ


    ಆಹಾರ ಸೇವಿಸುವಾಗ ನಿಧಾನವಾಗಿ ಅಗಿದು ತಿನ್ನಬೇಕು. ಆತುರದಲ್ಲಿ ಸೇವಿಸಬೇಡಿ. ಆಹಾರದ ಜೊತೆಗೆ ನೀರು ಕುಡಿಯುವ ಬದಲು ಆಹಾರವನ್ನು ನಿಧಾನವಾಗಿ ಮತ್ತು ಸಂಪೂರ್ಣವಾಗಿ ಅಗಿದು ಸೇವಿಸಿ.


    ಇದನ್ನೂ ಓದಿ: ಪೈಲ್ಸ್ ಸಮಸ್ಯೆ ಹೊಂದಿರುವವರು ಈ ಆಹಾರ ದೂರವಿರಿ!


    ಆಹಾರವನ್ನು ಸರಿಯಾಗಿ ಅಗಿದು ತಿನ್ನದೇ ಹೋದರೆ ಅದು ಹೊಟ್ಟೆಯ ಸಮಸ್ಯೆಗೆ ಕಾರಣ ಆಗುತ್ತದೆ. ಜೊತೆಗೆ ತೂಕ ಹೆಚ್ಚಿಸುತ್ತದೆ. ಹಾಗಾಗಿ ಆಹಾರವನ್ನು ಚೆನ್ನಾಗಿ ಅಗಿದು, ನಿಧಾನವಾಗಿ ತಿನ್ನಿರಿ.

    Published by:renukadariyannavar
    First published: