• Home
  • »
  • News
  • »
  • lifestyle
  • »
  • Health Tips: ಪ್ರತಿನಿತ್ಯ 8 ರಿಂದ 10 ಗ್ಲಾಸ್ ನೀರು ಕುಡಿಯದಿದ್ದರೆ ಈ ಆರೋಗ್ಯ ಸಮಸ್ಯೆಗಳು ಕಾಡುತ್ತೆ

Health Tips: ಪ್ರತಿನಿತ್ಯ 8 ರಿಂದ 10 ಗ್ಲಾಸ್ ನೀರು ಕುಡಿಯದಿದ್ದರೆ ಈ ಆರೋಗ್ಯ ಸಮಸ್ಯೆಗಳು ಕಾಡುತ್ತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೆಲವರು ತೀವ್ರ ಬಾಯಾರಿಕೆ ಆದಾಗ ಮಾತ್ರ ನೀರು ಕುಡಿಯುತ್ತಾರೆ. ಇನ್ನು ಕೆಲವರು ನೀರು ಕುಡಿಯಲು ಆಲಸ್ಯ ಮಾಡುತ್ತಾರೆ. ನೀವು ಹೀಗೆ ಮಾಡಿದರೆ ಬೊಜ್ಜು ಹೆಚ್ಚುವ ಅಪಾಯವಿದೆ.

  • Share this:

    ಒಂದು ದಿನಕ್ಕೆ (Daily) ಒಬ್ಬ ಮನುಷ್ಯ (Person) ದಿನವಿಡೀ 8 ರಿಂದ 10 ಗ್ಲಾಸ್ (Glass) ನೀರು ಕುಡಿಯಬೇಕು. ಇದರಿಂದ ಮಾನವನ ದೇಹ (Body) ಆರೋಗ್ಯಯುತವಾಗಿರುತ್ತದೆ ಎಂದು ತಜ್ಞರು ಹೇಳುತ್ತಾರೆ. ಆದರೆ ಎಲ್ಲಾ ಜನರು ದಿನವೂ ಎಂಟರಿಂದ ಹತ್ತು ಗ್ಲಾಸ್ ನೀರು (Water) ಕುಡಿಯುವುದಿಲ್ಲ. ಕೆಲವರು ನೀರು ಕುಡಿಯುವುದನ್ನು ಮರೆತು ಬಿಡುತ್ತಾರೆ. ಇನ್ನು ಕೆಲವರು ತೀವ್ರ ಬಾಯಾರಿಕೆ ಆದಾಗ ಮಾತ್ರ ನೀರು ಕುಡಿಯುತ್ತಾರೆ. ಇನ್ನು ಕೆಲವರು ನೀರು ಕುಡಿಯಲು ಆಲಸ್ಯ ಮಾಡುತ್ತಾರೆ. ನೀವು ಹೀಗೆ ಮಾಡಿದರೆ ಬೊಜ್ಜು ಹೆಚ್ಚುವ ಅಪಾಯವಿದೆ. ಹೌದು ಯಾರು ಕಡಿಮೆ ನೀರು ಕುಡಿಯುತ್ತಾರೋ, ಅವರ ದೇಹದಲ್ಲಿ ಬೊಜ್ಜು ಬೆಳೆಯುತ್ತದೆ ಎಂದು ಕೆಲ ಅಧ್ಯಯನಗಳು ಹೇಳಿವೆ.


    ಕೇವಲ ಬೊಜ್ಜು ಮಾತ್ರವಲ್ಲ, ಇನ್ನೂ ಅನೇಕ ಗಂಭೀರ ಕಾಯಿಲೆಗಳನ್ನು ಎದುರಿಸಬೇಕಾಗಬಹುದು. ವಾಸ್ತವವಾಗಿ ನೀರು ಕುಡಿಯುವುದರಿಂದ ದೇಹವು ಹೆಚ್ಚು ಕ್ರಿಯಾಶೀಲವಾಗಿರುತ್ತದೆ. ಜೀವಾಣುಗಳು ಬೆವರಿನ ಮೂಲಕ ದೇಹದಿಂದ ಹೊರ ಬರುತ್ತವೆ. ಅದರ ಪರಿಣಾಮವಾಗಿ ವ್ಯಕ್ತಿಯು ಆರೋಗ್ಯದಿಂದ ಇರಲು ಸಾಧ್ಯವಾಗುತ್ತದೆ.


    ಹೀಗಾಗಿ ವೈದ್ಯರು ದಿನಕ್ಕೆ 2 ರಿಂದ 3 ಲೀಟರ್ ನೀರನ್ನು ಕುಡಿಯಲೇ ಬೇಕು ಎಂದು ಹೇಳುತ್ತಾರೆ. ಕಡಿಮೆ ನೀರು ಕುಡಿಯುವುದು ಆರೋಗ್ಯಕ್ಕೆ ಸಾಕಷ್ಟು ಹಾನಿ ಉಂಟು ಮಾಡುತ್ತದೆ. ಇದರಿಂದ ಯಾವ ಕಾಯಿಲೆಗಳನ್ನು ವ್ಯಕ್ತಿ ಎದುರಿಸಬೇಕಾಗುತ್ತದೆ ಎಂದು ತಿಳಿಯೋಣ.


    ಇದನ್ನೂ ಓದಿ: ಬೇಸಿಗೆ ರೋಗಗಳಿಂದ ತಪ್ಪಿಸಿಕೊಳ್ಳಲು ನಿಮ್ಮ ಆಹಾರಕ್ರಮ ಹೀಗಿರಲಿ


    ದೇಹದಲ್ಲಿ ಬೊಜ್ಜು ಹೆಚ್ಚುತ್ತದೆ


    ನಿಮ್ಮ ಆಹಾರದಲ್ಲಿ ನೀರಿನ ಪ್ರಮಾಣ ಕಡಿಮೆಯಾದರೆ ನಿಮ್ಮ ಹಸಿವು ಹೆಚ್ಚಾಗುತ್ತದೆ. ಇದರಿಂದಾಗಿ ನೀವು ಹೆಚ್ಚು ತಿನ್ನಲು ಪ್ರಾರಂಭಿಸುತ್ತೀರಿ. ಇದರಿಂದ ದೇಹದಲ್ಲಿ ನೀರಿನ ಕೊರತೆ ಉಂಟಾಗುತ್ತದೆ. ನೀರು ಕುಡಿದರೆ ಹೊಟ್ಟೆ ತುಂಬಿದ ಅನುಭವವಾಗುತ್ತದೆ.


    ಮಲಬದ್ಧತೆ ಸಮಸ್ಯೆ


    ಕಡಿಮೆ ನೀರು ಕುಡಿಯುವುದರಿಂದ ದೇಹದ ಆಹಾರವು ಸರಿಯಾಗಿ ಜೀರ್ಣ ಆಗುವುದಿಲ್ಲ. ಇದರಿಂದಾಗಿ ಹೊಟ್ಟೆಯು ಸ್ವಚ್ಛವಾಗದೇ ಮಲಬದ್ಧತೆಯ ಸಮಸ್ಯೆಯು ಗಂಭೀರ ಕಾಯಿಲೆ ರೂಪ ಪಡೆದುಕೊಳ್ಳಲು ಇದು ಕಾರಣವಾಗುತ್ತದೆ.


    ಹರ್ಪಿಸ್ ಸ್ಕೇಬೀಸ್


    ಕಡಿಮೆ ನೀರು ಕುಡಿಯುವುದರಿಂದ ದೇಹದಿಂದ ಬೆವರು ಹೊರ ಹೋಗುವುದು ಕಡಿಮೆಯಾಗುತ್ತದೆ. ಈ ಕಾರಣದಿಂದ ವಿಷವು ಹರ್ಪಿಸ್ ಸ್ಕೇಬೀಸ್ ರೂಪದಲ್ಲಿ ಚರ್ಮದ ಮೇಲೆ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ.


    ಬಿಪಿ ಹೆಚ್ಚಿಸುವ ಅಪಾಯ


    ನೀರಿನ ಕೊರತೆಯಿಂದಾಗಿ, ರಕ್ತವು ದಪ್ಪವಾಗುತ್ತದೆ. ಇದರಿಂದಾಗಿ ನೀವು ಹೃದಯಾಘಾತ ಅಥವಾ ಸ್ಟೋಕ್ ಅಪಾಯ ಸಹ ಎದುರಿಸಬೇಕಾಗಬಹುದು.


    ನಿರ್ಜಲೀಕರಣ


    ದೇಹದಲ್ಲಿ ನೀರಿನ ಕೊರತೆಯಿಂದಾಗಿ ನಿರ್ಜಲೀಕರಣ ಉಂಟಾಗುತ್ತದೆ. ಇದು ತಲೆಯಲ್ಲಿ ತೀವ್ರವಾದ ನೋವನ್ನು ಉಂಟು ಮಾಡುತ್ತದೆ. ಈ ಕಾರಣದಿಂದಾಗಿ ನಿಮ್ಮ ಚರ್ಮವು ಹದಗೆಡಲು ಪ್ರಾರಂಭಿಸುತ್ತದೆ. ಮತ್ತು ನಂತರ ನೀವು ನಿಮ್ಮ ವಯಸ್ಸಿಗಿಂತ ಹೆಚ್ಚು ವಯಸ್ಸಿನವರಂತೆ ಕಾಣಲು ಪ್ರಾರಂಭಿಸುತ್ತೀರಿ.


    ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿದರೆ ಜೀರ್ಣಾಂಗ ವ್ಯವಸ್ಥೆ ಚೆನ್ನಾಗಿರುತ್ತದೆ


    ಖಾಲಿ ಹೊಟ್ಟೆಯಲ್ಲಿ ಪ್ರತಿದಿನ ಒಂದು ಲೋಟ ನೀರು ಕುಡಿದರೆ ಅದು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸರಿಯಾಗಿಡುತ್ತದೆ. ಇದು ಹೊಟ್ಟೆಯಲ್ಲಿನ ಗ್ಯಾಸ್ ಮತ್ತು ಹೊಟ್ಟೆ ಉಬ್ಬರ ಸಮಸ್ಯೆಗೆ ಪರಿಹಾರ ನೀಡುತ್ತದೆ. ಖಾಲಿ ಹೊಟ್ಟೆಯಲ್ಲಿ ನೀರು ಕುಡಿದರೆ ದೇಹದಲ್ಲಿರುವ ವಿಷಕಾರಿ ಅಂಶವೂ ಹೊರ ಹೋಗುತ್ತದೆ.


    ಖಾಲಿ ಹೊಟ್ಟೆಯಲ್ಲಿ ನೀರು ಕುಡಿದರೆ ದಿನವಿಡೀ ದೇಹದಲ್ಲಿ ಶಕ್ತಿ ಉಳಿಯುತ್ತದೆ ಮತ್ತು ಆಯಾಸದಂತಹ ಯಾವುದೇ ತೊಂದರೆ ಅನುಭವಿಸುವುದಿಲ್ಲ.


    ಇದನ್ನೂ ಓದಿ: ಹೆವಿ ಫುಡ್ ನಂತರ ಅಸ್ವಸ್ಥತೆಯಾ? ಈ ಕೆಲವು ಡಿಟಾಕ್ಸ್ ವಾಟರ್​ ಕುಡಿದು ಲೈಟ್ ಫೀಲ್ ಮಾಡಿ


    ತಲೆನೋವಿನಿಂದ ಮುಕ್ತಿ ಪಡೆಯಬಹುದು


    ಅನೇಕರಿಗೆ ತಲೆನೋವಿನ ಸಮಸ್ಯೆ ಇರುತ್ತದೆ. ವಿಶೇಷವಾಗಿ ಸಾಕಷ್ಟು ನೀರು ಕುಡಿಯದ ಜನರು. ತಲೆನೋವಿಗೆ ಪ್ರಮುಖ ಕಾರಣಗಳಲ್ಲಿ ನಿರ್ಜಲೀಕರಣವೂ ಒಂದು. ಸಾಕಷ್ಟು ನೀರು ಕುಡಿದರೆ ತಲೆನೋವಿನ ಸಮಸ್ಯೆ ಹೋಗುತ್ತದೆ.

    Published by:renukadariyannavar
    First published: