Sweet Craving: ಪ್ರತಿದಿನ ಸಿಹಿ ತಿನ್ನುವ ಬಯಕೆ ರೋಗಗಳಿಗೆ ಆಹ್ವಾನ! ಸಿಹಿ ಅತಿಯಾದ್ರೆ ಗಂಭೀರ ರೋಗ ನಿಮ್ಮಂದ ದೂರ ಉಳಿಯಲ್ಲ

ಪ್ರತಿದಿನ ಚಾಕೊಲೇಟ್, ರಸಗುಲ್ಲಾ ಅಥವಾ ಇತರೆ ಸಕ್ಕರೆ ಸಿಹಿ ತಿಂಡಿ ತಿನ್ನಲು ಒಗ್ಗಿಕೊಂಡಿರುತ್ತಾರೆ. ಸಿಹಿ ಇಲ್ಲದಿದ್ದರೆ ತುಂಬಾ ಚಡಪಡಿಸುತ್ತಾರೆ. ಅಂತವರ ತೂಕ ಹೆಚ್ಚುವುದು ಮತ್ತು ಎಷ್ಟೇ ಪ್ರಯತ್ನಿಸಿದರೂ ತೂಕ ನಷ್ಟ ಪ್ರಯಾಣ ಕಡಿಮೆ ಇರುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಕೆಲವರಿಗೆ ದಿನವೂ (Daily) ಸಿಹಿ ತಿಂಡಿ (Sweet) ತಿನ್ನುವ ರೂಢಿ (Eating Habit) ಇರುತ್ತದೆ. ಕೆಲವರಿಗೆ ಎಷ್ಟೇ ಸಿಹಿ ಸೇವಿಸಿದರೂ ತೃಪ್ತಿಯಾಗುವುದಿಲ್ಲ. ಅಂತಹವರು ಪದೇ ಪದೇ ಸಿಹಿ ತಿನ್ನುವ ಬಯಕೆ (Wants) ಹೊಂದಿರುತ್ತಾರೆ. ಭಾರತೀಯ (Indian) ಮನೆಗಳಲ್ಲಿ ಹಬ್ಬಗಳಲ್ಲಿ ಸಿಹಿ ತಿಂಡಿ ಇದ್ದೇ ಇರತ್ತದೆ. ಹಾಗೆಯೇ ಊಟದಲ್ಲಿ ಉಪ್ಪಿನಕಾಯಿ ಹಾಗೂ ಯಾವುದಾದರೊಂದು ಸಿಹಿ ಪದಾರ್ಥ ತಿನ್ನುವ ರೂಢಿ ಇರುತ್ತದೆ. ಸಿಹಿ ತಿನ್ನುವ ಕ್ರೇವಿಂಗ್ ನಿಮಗೆ ಒಬ್ಬರಿಗೆ ಮಾತ್ರ ಇದೆ ತಿಳಿಯಬೇಡಿ. ಯಾಕೆಂದರೆ ಬಹುತೇಕರಿಗೆ ಸಿಹಿ ತಿನ್ನುವ ಬಯಕೆ ಹಾಗೂ ಚಟ ಇದೆ. ಸಿಹಿ ತಿನ್ನದೆ ಅವರ ಆಹಾರ ಜೀರ್ಣವಾಗುವುದಿಲ್ಲ.

    ಪ್ರತಿದಿನ ಚಾಕೊಲೇಟ್ ಅಥವಾ ಇತರೆ ಸಿಹಿ ತಿನ್ನುವ ರೂಢಿ

    ಅವರು ಪ್ರತಿದಿನ ಚಾಕೊಲೇಟ್, ರಸಗುಲ್ಲಾ ಅಥವಾ ಇತರೆ ಸಕ್ಕರೆ ಸಿಹಿ ತಿಂಡಿ ತಿನ್ನಲು ಒಗ್ಗಿಕೊಂಡಿರುತ್ತಾರೆ. ಸಿಹಿ ಇಲ್ಲದಿದ್ದರೆ ತುಂಬಾ ಚಡಪಡಿಸುತ್ತಾರೆ. ಅಂತವರ ತೂಕ ಹೆಚ್ಚುವುದು ಮತ್ತು ಎಷ್ಟೇ ಪ್ರಯತ್ನಿಸಿದರೂ ತೂಕ ನಷ್ಟ ಪ್ರಯಾಣ ಕಡಿಮೆ ಇರುತ್ತದೆ.

    ಹೆಚ್ಚು ಸಕ್ಕರೆ ತಿನ್ನುವುದು ಬೊಜ್ಜು ಹೆಚ್ಚಲು ಕಾರಣ

    ಇದರ ಜೊತೆ ಕೊಲೆಸ್ಟ್ರಾಲ್, ಮಧುಮೇಹ, ಬಂಜೆತನ, ಪಿಸಿಒಡಿ ಸಮಸ್ಯೆಯೂ ಉಂಟಾಗುತ್ತದೆ. ಫ್ಯಾಟ್ ಟು ಸ್ಲಿಮ್‌ನ ಡಯೆಟಿಷಿಯನ್ ಶಿಖಾ ಅಗರ್ವಾಲ್ ಶರ್ಮಾ ಕೆಲ ವಿಷಯಗಳ ಬಗ್ಗೆ ಹೇಳಿದ್ದಾರೆ. ಇದು ನಿಮ್ಮ ಸಕ್ಕರೆ ಕಡು ಬಯಕೆ ಕಡಿಮೆ ಮಾಡುತ್ತದೆ.

    ಇದನ್ನೂ ಓದಿ: ಚರ್ಮದ ಟ್ಯಾಗ್‌ ಮತ್ತು ನರಹುಲಿ ಸಮಸ್ಯೆ ನಿವಾರಣೆಗೆ ನೈಸರ್ಗಿಕ ಮನೆಮದ್ದು ಟ್ರೈ ಮಾಡಿ

    ಚೂಯಿಂಗ್ ಗಮ್

    ನೀವು ಸಿಹಿ ತಿನ್ನುವ ಕಡು ಬಯಕೆ ಹೊಂದಿದ್ದರೆ ನಿಮ್ಮ ಫ್ರಿಜ್ನಲ್ಲಿ ಚೂಯಿಂಗ್ ಅಗಿಯಲು ಪ್ರಾರಂಭಿಸಿ. ಇದನ್ನು ಅಗಿಯುವುದರಿಂದ ಸಿಹಿ ಆಹಾರದ ಹಂಬಲ ಬಹಳ ಮಟ್ಟಿಗೆ ಕಡಿಮೆ ಆಗುತ್ತದೆ.

    ಬೆಲ್ಲ ತಿನ್ನುವ ಮೂಲಕ ಸಿಹಿ ಹಂಬಲ ಪೂರೈಸಿ

    ನೀವು ಸಿಹಿ ತಿಂಡಿ ತುಂಬಾ ಇಷ್ಟಪಡುತ್ತಿದ್ದರೆ ಸಕ್ಕರೆ ಪದಾರ್ಥ ತಿನ್ನುವ ಬದಲು ಬೆಲ್ಲದಿಂದ ಮಾಡಿದ ಪದಾರ್ಥ ಸೇವನೆ ಮಾಡಿ. ಇದನ್ನೂ ಸಹ ತುಂಬಾ ಕಡಿಮೆ ಪ್ರಮಾಣದಲ್ಲಿ ಸೇವಿಸಿ.

    ಗಿಡಮೂಲಿಕೆಗಳ ಪುಡಿ ಸೇವಿಸಿ

    ಮತ್ತೆ ಮತ್ತೆ ಸಿಹಿ ತಿನ್ನುವ ಬಯಕೆ ಉಂಟಾದಾಗ ಕಡಿಮೆ ಮಾಡಲು ನೀವು ಮನೆಯಲ್ಲಿ ಗಿಡಮೂಲಿಕೆಗಳ ಪುಡಿ ತಯಾರಿಸಿ ಸೇವಿಸಿ. ಅರ್ಧ ಚಮಚ ಕೊತ್ತಂಬರಿ ಪುಡಿ, ಅರ್ಧ ಚಮಚ ದಾಸವಾಳದ ಪುಡಿ, ಅರ್ಧ ಚಮಚ ಹುರಿದ ಜೀರಿಗೆ ಪುಡಿ ಮತ್ತು ಅರ್ಧ ಚಮಚ ಹುರಿದ ಮೆಂತ್ಯೆ ಪುಡಿ ತೆಗೆದುಕೊಳ್ಳಿ.

    ಇವೆಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಈ ಪುಡಿಯನ್ನು ಬೆಳಿಗ್ಗೆ ಅರ್ಧ ಚಮಚ ಮತ್ತು ಮಲಗುವ ಮುನ್ನ ಅರ್ಧ ಚಮಚ ತೆಗೆದುಕೊಳ್ಳಿ. ಇದಲ್ಲದೆ ನೀವು ದಿನವಿಡೀ ಸಿಹಿ ಕಡು ಬಯಕೆ ಹೊಂದಿದಾಗ ಸಹ ಇದನ್ನು ಸೇವಿಸಿ.

    ಕ್ರಮೇಣ ಸಿಹಿ ತಿನ್ನುವ ಅಭ್ಯಾಸ ಬಿಟ್ಟುಬಿಡಿ

    ಸಕ್ಕರೆ ತಿನ್ನುವ ಅಭ್ಯಾಸ ಬಿಡಲು ನೀವು ಚಹಾ ಮತ್ತು ಕಾಫಿಯಲ್ಲಿ 3 ಚಮಚ ಸಕ್ಕರೆ ಸೇರಿಸುತ್ತಿದ್ದರೆ ಅದನ್ನು ಕ್ರಮೇಣ ಒಂದು ಟೀಚಮಚಕ್ಕೆ ತನ್ನಿ. 5-6 ದಿನದವರೆಗೆ ಎರಡು ಚಮಚ ನಂತರ ಒಂದು ಚಮಚ ಸಕ್ಕರೆ ಸೇರಿಸಿ. ನಂತರ ಸಕ್ಕರೆ ಸೇವನೆ ಬಿಟ್ಟು ಪರ್ಯಾಯ ಸಿಹಿ ಬಳಸಿ.

    ಇದನ್ನೂ ಓದಿ: ಈ ಕೆಲವು ಸಸ್ಯಗಳಲ್ಲಿವೆ ಸೂಪರ್ ಪವರ್! ತೂಕ ಇಳಿಸಿ ಆರೋಗ್ಯ ರಕ್ಷಿಸುತ್ತೆ

    ಪೂರ್ವ-ಸಕ್ಕರೆ ಬ್ರಾಂಡ್‌ಗಳ ಆಹಾರಗಳನ್ನು ಬದಲಾಯಿಸಿ. ಕೇಕ್, ಐಸ್ ಕ್ರೀಮ್, ಬಿಸ್ಕತ್ತು ಅಥವಾ ಚಾಕೊಲೇಟ್‌ಗಳಂತಹ ಅಂಗಡಿಗಳು ಮತ್ತು ರೆಸ್ಟೋರೆಂಟ್‌ಗಳಿಂದ ತಯಾರಿಸಿದ ಸಿಹಿ ಆಹಾರ ಪದಾರ್ಥಗಳ ಸೇವನೆ ಸಂಪೂರ್ಣವಾಗಿ ತಪ್ಪಿಸಿ.
    Published by:renukadariyannavar
    First published: