• Home
  • »
  • News
  • »
  • lifestyle
  • »
  • Mental Health: ಈ ಗುಣ ನಿಮ್ಮಲ್ಲಿದ್ರೆ ನೀವು ಮೆಂಟಲಿ ಸ್ಟ್ರಾಂಗ್​ ಆಗಿದ್ದೀರ ಎಂದು ಅರ್ಥ

Mental Health: ಈ ಗುಣ ನಿಮ್ಮಲ್ಲಿದ್ರೆ ನೀವು ಮೆಂಟಲಿ ಸ್ಟ್ರಾಂಗ್​ ಆಗಿದ್ದೀರ ಎಂದು ಅರ್ಥ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೆಲವರು ಅವರಿಗೆ ಅರಿವಿಲ್ಲದಂತೆಯೇ ಮಾನಸಿಕವಾಗಿ ತುಂಬಾನೇ ಸದೃಢರಾಗಿರುತ್ತಾರೆ. ಹಾಗಾದರೆ ನಾವು ಮೆಂಟಲಿ ಸ್ಟ್ರಾಂಗ್‌ ಆಗಿದ್ದೇವೆ ಎಂಬುದನ್ನು ಹೇಗೆ ತಿಳಿಯೋದು?

  • Share this:

ಆರೋಗ್ಯ(Health) ಎಂದರೆ ಕೇವಲ ದೇಹಕ್ಕೆ ಸಂಬಂಧ ಪಟ್ಟಿದ್ದಲ್ಲ. ಇದು ಭಾವನೆ, ಮನಸ್ಸಿಗೆ ಸಂಬಂಧ ಪಟ್ಟಿದ್ದೂ ಹೌದು. ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯವು (Mental an Emotional Health) ನಮ್ಮ ಪೂರ್ಣ ಯೋಗಕ್ಷೇಮದ ಪ್ರಮುಖ ಭಾಗ. ನಮ್ಮ ದೇಹ ಹೇಗೆ ದಣಿಯುತ್ತದೆಯೋ ಅದೇ ರೀತಿ ಭಾವನಾತ್ಮಕವಾಗಿಯೂ ನಾವು ಕೆಲವೊಮ್ಮೆ ಕುಗ್ಗಿ ಹೋಗುತ್ತೇವೆ. ಮಾನಸಿಕವಾಗಿ ಹೀಗೆ ಜರ್ಜರಿತವಾಗುವುದು ಮುಂದೆ ಖಿನ್ನತೆಯಂತಹ ದೊಡ್ಡ ಅಪಾಯಗಳಿಗೆ ನಮ್ಮನ್ನು ದೂಡುತ್ತದೆ. ಹೀಗಾಗಿ ದೇಹದ ಬಗ್ಗೆ ಎಷ್ಟು ಕಾಳಜಿ ವಹಿಸುತ್ತೆವೆಯೋ, ಮನಸ್ಸಿನ ಆರೋಗ್ಯದ ಮೇಲೂ ನಿಗಾ ವಹಿಸಬೇಕು.


ಇನ್ನೂ ಕೆಲವರು ಅವರಿಗೆ ಅರಿವಿಲ್ಲದಂತೆಯೇ ಮಾನಸಿಕವಾಗಿ ತುಂಬಾನೇ ಸದೃಢರಾಗಿರುತ್ತಾರೆ. ಹಾಗಾದರೆ ನಾವು ಮೆಂಟಲಿ ಸ್ಟ್ರಾಂಗ್‌ ಆಗಿದ್ದೇವೆ ಎಂಬುದನ್ನು ಹೇಗೆ ತಿಳಿಯೋದು? ಈ ಬಗ್ಗೆ ಕೆಲವರಿಗೆ ಪ್ರಶ್ನೆಯೊಂದು ಹುಟ್ಟಿಕೊಳ್ಳುತ್ತದೆ. ಚಿಂತೆಬಿಡಿ ನಾವಿಲ್ಲಿ ಹೇಳುವ ಈ ಚಿಹ್ನೆಗಳು ಅಥವಾ ಲಕ್ಷಣಗಳು ನಿಮ್ಮಲ್ಲಿ ಇದ್ದರೆ ನೀವು ಕೂಡ ಮಾನಸಿಕವಾಗಿ ಸದೃಢರಾಗಿದ್ದೀರಿ ಎಂದರ್ಥ.


ನೀವು ಮಾನಸಿಕವಾಗಿ ಬಲಿಷ್ಠ ವ್ಯಕ್ತಿಯಾಗಿರುವ 10 ಚಿಹ್ನೆಗಳು
 ದಯೆ ಹೊಂದಿರುವುದು
ಏನನ್ನೂ ಬಯಸದೇ ಇತರರ ಮೇಲೆ ದಯೆ, ಕರುಣೆಯನ್ನು ತೋರುವ ಗುಣವಿದ್ದರೆ ನೀವು ಖಂಡಿತವಾಗಿ ಮಾನಸಿಕವಾಗಿ ಸಬಲರಿದ್ದೀರಿ ಎಂದರ್ಥ.


ನಿರ್ಧಾರ ಬದಲಾವಣೆ
ನೀವು ಇತರರ ವಿನಂತಿಗಳು ಅಥವಾ ಅಗತ್ಯಗಳನ್ನು ಪೂರೈಸಲು ಅಥವಾ ಸರಿಹೊಂದಿಸಲು ನಿಮ್ಮ ನಿರ್ಧಾರ ಅಥವಾ ಮನಸ್ಸನ್ನು ಬದಲಾಯಿಸುವ ನಿಮ್ಮ ಗುಣ ನೀವು ಮಾನಸಿಕವಾಗಿ ಸಬಲರಿದ್ದೀರಿ ಎಂಬುದನ್ನು ಸೂಚಿಸುತ್ತದೆ.


ನಿಮ್ಮ ತಪ್ಪನ್ನು ಒಪ್ಪಿಕೊಳ್ಳುವುದು
ನಿಮ್ಮ ತಪ್ಪನ್ನು ಒಪ್ಪಿಕೊಳ್ಳುವುದರ ಅರ್ಥ ಖಂಡಿತ ನೀವು ಎಲ್ಲೋ ಒಂದು ಕಡೆ ಕುಗ್ಗಿಹೋಗುತ್ತಿದ್ದೀರಿ ಅಂದಲ್ಲ. ಬದಲಿಗೆ ಇದು ನೀವು ಎಷ್ಟು ಶಕ್ತರಿದ್ದೀರಿ, ಜವಾಬ್ದಾರಿಗಳನ್ನು ಹೇಗೆ ನಿಭಾಯಿಸುತ್ತೀರಿ ಎಂಬುದನ್ನು ತೋರಿಸುತ್ತದೆ. ತಪ್ಪನ್ನು ಒಪ್ಪಿಕೊಂಡು ಅದನ್ನು ಹೇಗೆ ಸರಿ ಮಾಡುತ್ತೀರಿ ಎಂಬ ನಿಮ್ಮ ಅಚಲವಾದ ಮನಸ್ಸನ್ನು ತೋರಿಸುತ್ತದೆ.


ತಾಳ್ಮೆ
ಮನುಷ್ಯನ ಮನಸ್ಸು ನಿಶ್ಚಲವಾಗಿರಲು ತಾಳ್ಮೆ ಕೂಡ ಮುಖ್ಯ. ಎಲ್ಲಾ ಬೆಳವಣಿಗೆ, ಬದಲಾವಣೆ ರಾತ್ರೋರಾತ್ರಿ ಸಂಭವಿಸುವುದಿಲ್ಲ. ಹೀಗಾಗಿ ತಾಳ್ಮೆ ಮುಖ್ಯ. ನಿಮ್ಮ ಜೀವನದ ನಿರೀಕ್ಷೆಗಳು ಮತ್ತು ಸಮಸ್ಯೆಗಳ ಬಗ್ಗೆ ನೀವು ತಾಳ್ಮೆಯಿಂದಿರುವಾಗ ಹೆಚ್ಚಿನ ಗಡಿಬಿಡಿಯಿಲ್ಲದ ಜೀವನವನ್ನು ನೀವು ಪಡೆಯುತ್ತೀರಿ. ಹೆಚ್ಚು ತಾಳ್ಮೆ ಹೊಂದಿರುವ ವ್ಯಕ್ತಿ ಮಾನಸಿಕವಾಗಿ ಕೂಡ ಶಕ್ತನಾಗಿರುತ್ತಾನೆ.


ಸಹಾಯ ಕೋರುವುದು
ಮುಜುಗರ ಅಥವಾ ಅಹಂಕಾರದ ಭಾವನೆ ಇಲ್ಲದೆ ಇತರರನ್ನು ಸಹಾಯ ಕೇಳುವ ನಿಮ್ಮ ಗುಣ ನಿಮ್ಮ ಮಾನಸಿಕ ಆರೋಗ್ಯವನ್ನು ಸೂಚಿಸುತ್ತದೆ.


ಇದನ್ನು ಓದಿ: ಬೆಳಗಿನ ತಿಂಡಿಗೆ ಆರೋಗ್ಯಕರ ಬಾಳೆಹಣ್ಣು ಬಾದಾಮಿ ಹಲ್ವಾ ರೆಸಿಪಿ


ವೈಫಲ್ಯಗಳನ್ನು ನಿಭಾಯಿಸುವುದು
ಕಷ್ಟ ಬಂದಾಗ ಅಥವಾ ಜೀವನದಲ್ಲಿ ಹಿನ್ನಡೆಯಾದಾಗ ನೀವು ಅದರಿಂದ ಸರಿಯದೇ ಅದನ್ನು ನಿಭಾಯಿಸುವ ಗುಣಲಕ್ಷಣ ನೀವು ಹೊಂದಿದ್ದರೆ, ನಿಸ್ಸಂಶಯವಾಗಿ ನೀವು ಮಾನಸಿಕವಾಗಿ ಸದೃಢವಾಗಿದ್ದೀರಿ ಎಂದೇಳಬಹುದು


ಭಾವನೆ ವ್ಯಕ್ತಪಡಿಸುವುದು
ಖುಷಿ, ನೋವು ಈ ಎಲ್ಲಾ ಭಾವನೆಗಳನ್ನು ವ್ಯಕ್ತಪಡಿಸಬೇಕು. ಅದನ್ನು ಹಾಗೆ ಇಟ್ಟುಕೊಂಡರೆ ಮನಸ್ಸು ಭಾರವಾಗುತ್ತದೆ. ಹೀಗಾಗಿ ಯಾರು ತಮ್ಮ ಭಾವನೆಗಳನ್ನು ಆರಾಮವಾಗಿ ವ್ಯಕ್ತಪಡಿಸುವರೋ ಅವರು ಮಾನಸಿಕವಾಗಿ ಕೂಡ ಆರೋಗ್ಯವಾಗಿರುತ್ತಾರೆ.


ಪರಿಸ್ಥಿತಿಗಳ ಜೊತೆ ಹೋಗುವುದು
ಜೀವನದಲ್ಲಿ ಏನು ಬರುತ್ತದೆಯೋ ಅದನ್ನು ನಿಭಾಯಿಸಿ ಅದರ ಜೊತೆಗೆ ಸಾಗುವ ಮತ್ತು ಅದನ್ನು ಸ್ವೀಕರಿಸುವ ಗುಣ ಇದ್ದವರು ಮಾನಸಿಕವಾಗಿಯೂ ಸಹ ಗಟ್ಟಿಯಾಗಿರುತ್ತಾರೆ.


ಇದನ್ನು ಓದಿ: ಹಸಿ ಹಾಲನ್ನು ಚರ್ಮ ಮತ್ತು ಕೂದಲಿನ ಆರೈಕೆಗೆ ಹೀಗೂ ಬಳಸಬಹುದು


ಶಾಂತವಾಗಿರುವುದು
ಎಲ್ಲಾ ವಿಚಾರಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೇ ಇರುವ ನಿಮ್ಮ ಶಾಂತ ಗುಣ ಕೂಡ ನೀವು ಮಾನಸಿಕವಾಗಿ ಎಷ್ಟು ಸಬಲರು ಎಂಬುವುದರ ಸಂಕೇತ


ನಿಮ್ಮನ್ನು ಸುಧಾರಿಸಿಕೊಳ್ಳುವ ಗುಣ
ಜೀವನದಲ್ಲಿ ಪ್ರತಿಕ್ಷಣವೂ ಕಲಿಯುವುದಿರುತ್ತದೆ, ನಿಮ್ಮನ್ನು ನೀವೂ ದಿನವೂ ಸುಧಾರಿಸಿಕೊಳ್ಳುವ, ಕಲಿಯುವ, ಒಳ್ಳೆ ಗುಣಗಳನ್ನು ಬೆಳೆಸಿಕೊಳ್ಳುವ ನಿಮ್ಮ ಕಲಿಕಾ ಮನೋಭಾವ ನಿಮ್ಮನ್ನು ಮಾನಸಿಕವಾಗಿ ಗಟ್ಟಿಯಾಗಲು ಸಹಕರಿಸುತ್ತದೆ.

Published by:Seema R
First published: