Good Behavior: ಈ ಗುಣಗಳು ನಿಮ್ಮಲ್ಲಿದ್ದರೆ ಜನರು ನಿಮ್ಮನ್ನು ಹೇಗೆ ಮೆಚ್ಚಿಕೊಳ್ಳದೇ ಇರುತ್ತಾರೆ ಹೇಳಿ!

ನಾಲ್ಕು ಜನರ ಮುಂದೆ ನೀವು ನಿಮ್ಮನ್ನು ಹೇಗೆ ಪ್ರಸ್ತುತಪಡಿಸಿಕೊಳ್ಳುತ್ತೀರಿ ಎಂಬುದರ ಮೇಲೆ ನಿಮ್ಮ ಸಂಪೂರ್ಣ ವ್ಯಕ್ತಿತ್ವ ನಿರ್ಧಾರವಾಗುತ್ತದೆ ಎಂದು ಹೇಳಬಹುದು. ಸಾಮಾನ್ಯವಾಗಿ ನೀವು ಸಂಪೂರ್ಣ ನಿಯಂತ್ರಣದಲ್ಲಿರುವಾಗ, ಜನರು ನಿಮ್ಮನ್ನು ಬಹಳ ಇಷ್ಟ ಪಡುತ್ತಾರೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಜಗತ್ತಿನಲ್ಲಿ ಯಾವೊಬ್ಬ ವ್ಯಕ್ತಿಯು (Person) ಹುಟ್ಟುತ್ತಲೇ ಗೌರವವನ್ನು ಗಳಿಸಿಕೊಂಡು ಹುಟ್ಟುವುದಿಲ್ಲ, ಗೌರವ ಎನ್ನುವುದು ನಾವು ಇಲ್ಲಿ ಸಮಾಜದಲ್ಲಿ (Society) ನಾಲ್ಕು ಜನರ ಮಧ್ಯೆ ಇದ್ದು ನಮ್ಮ ಒಡನಾಟದಿಂದ ಅದನ್ನು ಗಳಿಸಬೇಕು. ಕೆಲವರನ್ನು ನೋಡಿದ ತಕ್ಷಣವೇ ಅವರ ನಡವಳಿಕೆ (behavior) ಮತ್ತು ಅವರಲ್ಲಿರುವ ನಮ್ರತೆ ಮತ್ತು ವಿನಯತೆಯಿಂದ ಗೌರವ ಹುಟ್ಟಿಕೊಳ್ಳುತ್ತದೆ ಮತ್ತು ಇನ್ನೂ ಕೆಲವರ ಜೊತೆಗೆ ಕೆಲವು ದಿನಗಳ ಕಾಲ ಒಡನಾಟದಲ್ಲಿದ್ದರೆ ಅವರ ಬಗ್ಗೆ ಅರ್ಥವಾದ ಮೇಲೆ ಅವರ ಮೇಲೆ ಗೌರವ (respect)  ಹುಟ್ಟುತ್ತದೆ. ಅವರು ತಮ್ಮ ಕೆಲಸಗಳು, ಜೀವನದಲ್ಲಿ ಅಳವಡಿಸಿಕೊಂಡಿರುವ ಮೌಲ್ಯಗಳು ಮತ್ತು ಮಾತುಗಳ ಸಹಾಯದಿಂದ ತಮ್ಮ ಜೀವಿತಾವಧಿಯುದ್ದಕ್ಕೂ ಗೌರವವನ್ನು ಸಂಪಾದಿಸುತ್ತಾರೆ. ಒಬ್ಬ ವ್ಯಕ್ತಿಯ ಸ್ವಭಾವ ಹೇಗೆ ಅಂತ ಹೇಳಲು ಕೆಲವೇ ಕೆಲವು ಮುಖ್ಯವಾದ ವಿಷಯಗಳು ಇವೆ. 

ಅಗೌರವದ ಮತ್ತು ತಪ್ಪು ಕಾರ್ಯಗಳು ತಕ್ಷಣವೇ ಒಬ್ಬ ವ್ಯಕ್ತಿಯನ್ನು ಇತರರ ದೃಷ್ಟಿಯಲ್ಲಿ ಕೆಳಗಿಳಿಸಬಹುದು. ಆದ್ದರಿಂದ, ವ್ಯಕ್ತಿಯು ಜನರೊಂದಿಗೆ ಹೇಗೆ ಇರಬೇಕು ಮತ್ತು ಮುಖ್ಯವಾಗಿ ಎಂತಹ ಗುಣಗಳನ್ನು ಅಳವಡಿಸಿಕೊಳ್ಳಬೇಕು ಅಂತ ಇಲ್ಲಿ ನಾವು ಹೇಳುತ್ತೇವೆ. ಒಟ್ಟಿನಲ್ಲಿ ಹೇಳುವುದಾದರೆ ಜನರು ನಿಮ್ಮನ್ನು ತುಂಬಾ ಮೆಚ್ಚುವಂತೆ ಮಾಡುವ ಕೆಲವು ಸೂಕ್ಷ್ಮ ವಿಷಯಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ ನೋಡಿ.

1. ನಿಮ್ಮ ಭಾವನೆಗಳನನು ನಿಯಂತ್ರಿಸುವುದು
ನೀವು ನಿಮ್ಮ ಭಾವನೆಗಳನ್ನು ಸಾಮಾನ್ಯಕ್ಕಿಂತ ಹೆಚ್ಚು ವ್ಯಕ್ತಪಡಿಸಿದರೆ, ಜನರು ನಿಮ್ಮನ್ನು ತುಂಬಾ ದುರ್ಬಲ ಮತ್ತು ಭಾವನಾತ್ಮಕವಾಗಿ ನೋಡಬಹುದು. ಕೆಲವು ಭಾವನೆಗಳನ್ನು ತಮ್ಮಲ್ಲಿಯೇ ಇಟ್ಟುಕೊಳ್ಳಲು ಸಾಧ್ಯವಾಗದ ದುರ್ಬಲ ವ್ಯಕ್ತಿಯಾಗಿ ಜನರು ನಿಮ್ಮನ್ನು ನೋಡದಂತೆ ಇರಲು, ನೀವು ನಿಮ್ಮ ಭಾವನೆಗಳನ್ನು ನಿಯಂತ್ರಿಸಿಕೊಳ್ಳುವುದನ್ನು ನೀವು ಕಲಿತುಕೊಳ್ಳಬೇಕು.

ಇದನ್ನೂ ಓದಿ: Sleeping Problem: ರಾತ್ರಿ ನಿದ್ರೆ ಸರಿಯಾಗಿ ಬರ್ತಿಲ್ವಾ? ಈ ಲಕ್ಷಣಗಳ ಬಗ್ಗೆ ಇರಲಿ ಎಚ್ಚರ

ನಾಲ್ಕು ಜನರ ಮುಂದೆ ನೀವು ನಿಮ್ಮನ್ನು ಹೇಗೆ ಪ್ರಸ್ತುತಪಡಿಸಿಕೊಳ್ಳುತ್ತೀರಿ ಎಂಬುದರ ಮೇಲೆ ನಿಮ್ಮ ಸಂಪೂರ್ಣ ವ್ಯಕ್ತಿತ್ವ ನಿರ್ಧಾರವಾಗುತ್ತದೆ ಎಂದು ಹೇಳಬಹುದು. ಸಾಮಾನ್ಯವಾಗಿ ನೀವು ಸಂಪೂರ್ಣ ನಿಯಂತ್ರಣದಲ್ಲಿರುವಾಗ, ಜನರು ನಿಮ್ಮನ್ನು ಬಹಳ ಇಷ್ಟ ಪಡುತ್ತಾರೆ.

2. ನಿಮ್ಮ ನೋಟದ ಬಗ್ಗೆ ಕಾಳಜಿ ವಹಿಸುವುದು
ನೀವು ನಿಮ್ಮ ಬಗ್ಗೆ ಕಾಳಜಿ ವಹಿಸಿದಾಗ ಮತ್ತು ನಿಮ್ಮ ಉಡುಗೆ ತೊಡುಗೆಗಳ ಕೌಶಲ್ಯಗಳ ಬಗ್ಗೆ ವಿಶೇಷ ಗಮನ ಹರಿಸಿದಾಗ, ಜನರು ನಿಮ್ಮನ್ನು ವಿಭಿನ್ನವಾಗಿ ನೋಡುತ್ತಾರೆ. ನೀವು ಯಾವುದೇ ರೀತಿಯ ಸಂದರ್ಭಕ್ಕಾಗಿ ತೀಕ್ಷ್ಣವಾಗಿ ಉಡುಪನ್ನು ಧರಿಸಿದ್ದರೆ, ಜನರು ನಿಮ್ಮನ್ನು ತುಂಬಾನೇ ಗೌರವದಿಂದ ನೋಡುತ್ತಾರೆ.

3. ನಿಮ್ಮ ಗುರಿಗಳ ಬಗ್ಗೆ ಸ್ಪಷ್ಟವಾಗಿರುವುದು
ನಿಮ್ಮ ಗುರಿಗಳು ಮತ್ತು ಮಹತ್ವಾಕಾಂಕ್ಷೆಗಳ ಬಗ್ಗೆ ನೀವು ಸಾಕಷ್ಟು ಭಾವೋದ್ರಿಕ್ತರಾಗಿರುವಾಗ, ಅದು ಇತರರಿಗೂ ಅವರ ಕನಸುಗಳನ್ನು ಅನುಸರಿಸಲು ಪ್ರೇರೇಪಿಸುತ್ತದೆ. ಇದು ಒಬ್ಬ ವ್ಯಕ್ತಿಯ ಅತ್ಯಂತ ಪ್ರಶಂಸನೀಯ ಗುಣಗಳಲ್ಲಿ ಒಂದಾಗಿದೆ, ಇತರರು ನಿಮ್ಮ ಸುತ್ತಲೂ ಇರಲು ಮತ್ತು ನಿಮ್ಮಂತೆ ನಿರ್ದಿಷ್ಟವಾದ ಗುರಿಗಳನ್ನು ಇಟ್ಟುಕೊಳ್ಳಲು ಬಯಸುತ್ತಾರೆ.

4. ಮೊದಲಿಗೆ ನಿಮ್ಮ ಬಗ್ಗೆ ಎಲ್ಲವನ್ನೂ ಬಹಿರಂಗಪಡಿಸದಿರುವುದು
ಆರಂಭದಲ್ಲಿಯೇ ತಮ್ಮ ಬಗ್ಗೆ ಎಲ್ಲವನ್ನೂ ಬಹಿರಂಗಪಡಿಸುವ ವ್ಯಕ್ತಿಗಳೊಂದಿಗೆ ಮಾತನಾಡುವ ಆಸಕ್ತಿಯನ್ನು ಜನರು ಕಳೆದುಕೊಳ್ಳುತ್ತಾರೆ. ಒಂದು ಸಣ್ಣ ರಹಸ್ಯವನ್ನು ನಿಮ್ಮಲ್ಲಿಯೇ ಇಟ್ಟುಕೊಳ್ಳುವುದು ಒಬ್ಬ ವ್ಯಕ್ತಿಯ ಗಮನವನ್ನು ನಿಮ್ಮ ಕಡೆಗೆ ಇರಿಸಿಕೊಳ್ಳಲು ಉತ್ತಮ ಮಾರ್ಗವಾಗಿದೆ. ಏಕೆಂದರೆ ಅದು ಜನರನ್ನು ನಿಮ್ಮ ಬಗ್ಗೆ ಊಹಿಸುವಂತೆ ಮಾಡುತ್ತದೆ.

5. ನಿಜವಾಗಿಯೂ ಒಳ್ಳೆಯ ಕೆಲಸಗಳನ್ನು ಪ್ರಶಂಶಿಸುವುದು
ನೀವು ಜನರ ಒಳ್ಳೆಯ ಕೆಲಸಗಳನ್ನು ಮೆಚ್ಚಿಕೊಂಡು ಅವರ ಕೆಲಸಗಳನ್ನು ಪ್ರಶಂಸಿಸುವುದು ಮತ್ತು ಹೀಗೆ ಮಾಡದೆ ಇದ್ದಾಗ ನಿಮ್ಮ ಮೌಲ್ಯವು ಇದ್ದಕ್ಕಿದ್ದಂತೆ ಕುಸಿಯಬಹುದು. ನೀವು ಯಾರಿಗಾದರೂ ಒಮ್ಮೆ ನಿಜವಾದ ಪ್ರಶಂಸೆ ನೀಡಿದಾಗ, ಅದು ಹೆಚ್ಚು ಮೌಲ್ಯವನ್ನು ಹೊಂದಿರುತ್ತದೆ ಮತ್ತು ಜನರು ನಿಮ್ಮನ್ನು ನಿಜವಾಗಿಯೂ ನೀವಾಗಿರುವುದಕ್ಕಾಗಿ ಮೆಚ್ಚುತ್ತಾರೆ.

ಇದನ್ನೂ ಓದಿ: Research: ಅತಿಯಾಗಿ ಸುದ್ದಿ ಓದುವ ಅಭ್ಯಾಸ ಅಪಾಯಕಾರಿಯೇ? ಇದೆಂತಾ ನ್ಯೂಸ್ ಅಂತ ನೆಗ್ಲೆಕ್ಟ್ ಮಾಡ್ಬೇಡಿ

6. ನೀವು ಮುಕ್ತವಾಗಿ ಮಾತನಾಡುವುದು
ಪರಿಣಾಮಗಳು ಏನೇ ಇರಲಿ, ಎಲ್ಲರ ಮುಂದೆ ತಮ್ಮ ಮನಸ್ಸಿನಲ್ಲಿರುವ ಮಾತನ್ನು ನೇರವಾಗಿ ವ್ಯಕ್ತಪಡಿಸುವ ಧೈರ್ಯವನ್ನು ಹೊಂದಿರುವ ವ್ಯಕ್ತಿಯು ಎಲ್ಲರಿಂದಲೂ ಗೌರವಿಸಲ್ಪಡುತ್ತಾನೆ ಮತ್ತು ಪ್ರಶಂಸಿಸಲ್ಪಡುತ್ತಾನೆ. ಹಾಗೆ ಮಾಡಲು ಆ ವ್ಯಕ್ತಿಗೆ ಧೈರ್ಯ ಇರಬೇಕು.
Published by:Ashwini Prabhu
First published: