• Home
 • »
 • News
 • »
 • lifestyle
 • »
 • Health Tips: ನಿಮ್ಮಲ್ಲಿ ಪ್ರೋಟೀನ್ ಕೊರತೆ ಇದ್ಯಾ? ಆರೊಗ್ಯಕ್ಕೆ ಅಪಾಯವಾಗೋ ಮುನ್ನ ಎಚ್ಚೆತ್ತುಕೊಳ್ಳಿ

Health Tips: ನಿಮ್ಮಲ್ಲಿ ಪ್ರೋಟೀನ್ ಕೊರತೆ ಇದ್ಯಾ? ಆರೊಗ್ಯಕ್ಕೆ ಅಪಾಯವಾಗೋ ಮುನ್ನ ಎಚ್ಚೆತ್ತುಕೊಳ್ಳಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ, ಮಾಂಸಖಂಡಗಳ ಬೆಳವಣಿಗೆಯಲ್ಲಿ, ಮೂಳೆಗಳ ಸದೃಢತೆಯಲ್ಲಿ, ಬುದ್ಧಿಶಕ್ತಿಯ ಚುರುಕುತನದಲ್ಲಿ ಪ್ರೋಟೀನ್ ಬೇಕೇ ಬೇಕು.

 • Share this:

  ದೇಹದ ರೋಗ ನಿರೋಧಕ ಶಕ್ತಿಯನ್ನು (The immune system of the body) ಹೆಚ್ಚಿಸುವಲ್ಲಿ, ಮಾಂಸಖಂಡಗಳ ( muscles) ಬೆಳವಣಿಗೆಯಲ್ಲಿ, ಮೂಳೆಗಳ ಸದೃಢತೆಯಲ್ಲಿ, ಬುದ್ಧಿಶಕ್ತಿಯ ( Intellect) ಚುರುಕುತನದಲ್ಲಿ ಪ್ರೋಟೀನ್ ಬೇಕೇ ಬೇಕು. ಆದ ಕಾರಣ ಪ್ರೋಟೀನ್‌ ಹೆಚ್ಚಿರುವ ಆಹಾರಗಳನ್ನು ಸೇವಿಸುತ್ತಾ ಬಂದರೆ ಆರೋಗ್ಯಕರವಾದ ಆಹಾರ (Healthy) ಪದ್ಧತಿಯ ಜೊತೆಗೆ ಆರೋಗ್ಯಕರವಾದ ದೇಹ ಕೂಡ ನಮ್ಮದಾಗುತ್ತದೆ. ಪ್ರೋಟೀನ್ ಮೂಲಗಳಲ್ಲಿ ಮಾಂಸ, ಹಾಲು, ಮೀನು, ಮೊಟ್ಟೆ, ಸೋಯಾ, ಕಾಳುಗಳು, ಬೀನ್ಸ್ ಮತ್ತು ಕೆಲವು ಧಾನ್ಯಗಳಾದ ಗೋಧಿ ಮತ್ತು ಕ್ವಿನೋವಾ ಸೇರಿವೆ. ಇವುಗಳನ್ನು ಭಾರತೀಯರು ಹೆಚ್ಚಾಗಿ ಸೇವಿಸುವುದರಿಂದ ಅಷ್ಟಾಗಿ ಅವರಲ್ಲಿ ಈ ಪ್ರೋಟೀನ್‌ ಸಮಸ್ಯೆ ಕಂಡುಬರುವುದಿಲ್ಲ. ಆದರೆ ಪಾಶ್ಚಿಮಾತ್ಯ (Western) ಜಗತ್ತಿನಲ್ಲಿ ಇಂತಹ ಆಹಾರ ಪದ್ಧತಿ ಕಡಿಮೆ ಇದೆ. ಅವರು ಹೆಚ್ಚಾಗಿ ಫಿಜ್ಜಾ, ಬರ್ಗರ್‌ನಂತಹ ಜಂಕ್‌ ಫುಡ್‌ಗಳನ್ನು ಸೇವಿಸುತ್ತಾರೆ. ಇದೇ ಕಾರಣಕ್ಕೆ ಅಲ್ಲಿ ಸ್ಥೂಲಕಾಯತೆಯ ಪ್ರಮಾಣ ಹೆಚ್ಚಾಗುತ್ತಿದೆ.


  9,341 ಆಸ್ಟ್ರೇಲಿಯನ್ನರ ಆಹಾರ ಪದ್ಧತಿಯ 12 ತಿಂಗಳ ಅಧ್ಯಯನದಲ್ಲಿ ಸಂಸ್ಕರಿಸಿದ ಆಹಾರಗಳು ಬೊಜ್ಜಿಗೆ ಮುಖ್ಯ ಕಾರಣವೆಂದು ಹೇಳುತ್ತಿದೆ ಹೊಸ ಅಧ್ಯಯನ.


  ಹೊಸ ಅಧ್ಯಯನ ಏನು?
  ಹೊಸ ಅಧ್ಯಯನವು, ಸಿಡ್ನಿಯ ವಿಶ್ವವಿದ್ಯಾನಿಲಯದ ಚಾರ್ಲ್ಸ್ ಪರ್ಕಿನ್ಸ್ ಸೆಂಟರ್ (CPC) ನಡೆಸಿದ ಜರ್ನಲ್ ಒಬೆಸಿಟಿಯ ಇತ್ತೀಚಿನ ಸಂಚಿಕೆಯಲ್ಲಿ, ಆಸ್ಟ್ರೇಲಿಯನ್ ಬ್ಯೂರೋ ಆಫ್ ಸ್ಟ್ಯಾಟಿಸ್ಟಿಕ್ಸ್ (ABS) ಕೈಗೊಂಡ ರಾಷ್ಟ್ರೀಯ ಪೋಷಣೆ ಮತ್ತು ದೈಹಿಕ ಚಟುವಟಿಕೆಯ ಸಮೀಕ್ಷೆಯನ್ನು ಆಧರಿಸಿ 'ಪ್ರೋಟೀನ್ ಲಿವರೇಜ್ ಹೈಪೋಥೆಸಿಸ್' ಎಂಬ ಅಧ್ಯಯನವನ್ನು ನಡೆಸಿದೆ.


  ಪ್ರೋಟೀನ್‌ ಕೊರತೆಗೆ  ಜಂಕ್‌ ಫುಡ್‌ ಕಾರಣ
  ಪ್ರೊಫೆಸರ್‌ಗಳಾದ ರೌಬೆನ್‌ಹೈಮರ್ ಮತ್ತು ಸ್ಟೀಫನ್ ಸಿಂಪ್ಸನ್ ಅವರು 2005 ರಲ್ಲಿ ಈ ವಿಷಯವನ್ನು ಮೊದಲು ಮಂಡಿಸಿದರು. ಅಧ್ಯಯನ ಹೇಳುವುದಿಷ್ಟೇ, ನಮ್ಮ ಆಹಾರದಲ್ಲಿ ಪ್ರೋಟೀನ್‌ ಕಡಿಮೆಯಾದಾಗ ಹಸಿವಿನಿಂದ ಜನ ಕೊಬ್ಬುಗಳು ಮತ್ತು ಕಾರ್ಬೋಹೈಡ್ರೇಟ್‌ ತುಂಬಿದ ಆಹಾರವನ್ನು ಅತಿಯಾಗಿ ತಿನ್ನುತ್ತಾರೆ ಎಂದಿದೆ. ಅಂದರೆ ಪ್ರೋಟೀನ್‌ ಹಸಿವು ಅತಿಯಾಗಿ ತಿನ್ನುವುದನ್ನು ಪ್ರೇರೇಪಿಸುತ್ತದೆ ಎನ್ನಲಾಗಿದೆ. ಆಧುನಿಕ ಜೀವನ ಶೈಲಿ, ಸಂಸ್ಕರಿಸಿದ ಆಹಾರಗಳನ್ನು ತಿನ್ನುವುದರಿಂದ ಅವರಿಗೆ ಹೆಚ್ಚು ಪ್ರೋಟೀನ್‌ ಸಿಗುವುದಿಲ್ಲ. ಹೀಗಾಗಿ ಆ ವೇಳೆ ಶಕ್ತಿ ಕೊರತೆ ಮತ್ತು ಹಸಿವು ಹೆಚ್ಚಾಗುತ್ತದೆ. ಆಗ ಸಹಜವಾಗಿ ಹಸಿವನ್ನು ನೀಗಿಸಿಕೊಳ್ಳಲು ಇಂತಹ ಆಹಾರಗಳ ಮೊರೆ ಹೋಗಿ ಬೇಡದ ಕೊಬ್ಬನ್ನು ದೇಹದಲ್ಲಿ ಸೃಷ್ಟಿಸಿಕೊಳ್ಳುತ್ತಾರೆ ಎನ್ನುತ್ತಿದೆ ಅಧ್ಯಯನ.
  ಪ್ರೋಟೀನ್ ದುರ್ಬಲಕ್ಕೆ ಸಂಸ್ಕರಿಸಿದ ಆಹಾರಗಳೇ ಕಾರಣ
  "ಜನರು ಹೆಚ್ಚು ಜಂಕ್ ಆಹಾರಗಳು ಅಥವಾ ಹೆಚ್ಚು ಸಂಸ್ಕರಿಸಿದ ಮತ್ತು ಸಂಸ್ಕರಿಸಿದ ಆಹಾರಗಳನ್ನು ಸೇವಿಸುವುದರಿಂದ, ಅವರು ತಮ್ಮ ಆಹಾರದ ಪ್ರೋಟೀನ್ ಅನ್ನು ದುರ್ಬಲಗೊಳಿಸುತ್ತಾರೆ ಮತ್ತು ಅಧಿಕ ತೂಕ ಮತ್ತು ಬೊಜ್ಜಿನ ಅಪಾಯಕ್ಕೆ ತುತ್ತಾಗುತ್ತಾರೆ. ಇದು ದೀರ್ಘಕಾಲದ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ ಎಂದು ನಮಗೆ ತಿಳಿದಿದೆ" ಎಂದು ಪೋಸ್ಟ್‌ಡಾಕ್ಟರಲ್ ಸಂಶೋಧನೆಯ ಪ್ರಮುಖ ಲೇಖಕ ಡಾ. ಅಮಂಡಾ ಗ್ರೆಚ್ ಹೇಳಿದರು.


  "ನಮ್ಮ ದೇಹವು ಪ್ರೋಟೀನ್ ಅನ್ನು ಪೂರೈಸಲು ಹೆಚ್ಚು ತಿನ್ನುತ್ತದೆ ಎಂಬುದು ಅಧ್ಯಯನದಲ್ಲಿ ಹೆಚ್ಚು ಸ್ಪಷ್ಟವಾಗಿದೆ" ಎಂದು ಸ್ಕೂಲ್ ಆಫ್ ಲೈಫ್ ಮತ್ತು ಎನ್ವಿರಾನ್ಮೆಂಟಲ್ ಸೈನ್ಸಸ್‌ನಲ್ಲಿ ಪೌಷ್ಟಿಕಾಂಶದ ಪರಿಸರ ವಿಜ್ಞಾನದ ಲಿಯೊನಾರ್ಡ್ ಉಲ್ಮನ್ ಚೇರ್ ಪ್ರೊಫೆಸರ್ ಡೇವಿಡ್ ರೌಬೆನ್‌ಹೈಮರ್ ಹೇಳಿದರು. ಪಾಶ್ಚಾತ್ಯ ಆಹಾರಗಳಲ್ಲಿನ ಆಹಾರವು ಕಡಿಮೆ ಪ್ರೋಟೀನ್ ಅನ್ನು ಹೊಂದಿರುತ್ತದೆ. ಆದ್ದರಿಂದ, ಪ್ರೋಟೀನ್ ಗುರಿಯನ್ನು ತಲುಪಲು ನೀವು ಅದರಲ್ಲಿ ಹೆಚ್ಚಿನದನ್ನು ಸೇವಿಸಬೇಕು, ಇದು ನಿಮ್ಮ ದೈನಂದಿನ ಶಕ್ತಿಯ ಸೇವನೆಯನ್ನು ಪರಿಣಾಮಕಾರಿಯಾಗಿ ಹೆಚ್ಚಿಸುತ್ತದೆ ಎಂದಿದ್ದಾರೆ.


  ಇದನ್ನೂ ಓದಿ: Asthma Home Remedy: ಮನೆಯಲ್ಲಿರುವ ಈ ವಸ್ತುಗಳು ಅಸ್ತಮಾ ಸಮಸ್ಯೆಗೆ ಪರಿಹಾರವಂತೆ


  ಹಸಿವು ಹೆಚ್ಚಿಸುತ್ತದೆ ಪ್ರೋಟೀನ್‌ ಕೊರತೆ
  ಮನುಷ್ಯರು, ಕೊಬ್ಬುಗಳು ಮತ್ತು ಕಾರ್ಬೋಹೈಡ್ರೇಟ್‌ಗಳ ಮುಖ್ಯ ಶಕ್ತಿಯನ್ನು ಒದಗಿಸುವ ಪೋಷಕಾಂಶಗಳಿಗಿಂತ ಪ್ರೋಟೀನ್‌ಗಾಗಿ ಬಲವಾದ ಹಸಿವನ್ನು ಹೊಂದಿದ್ದಾರೆ. ಇದರರ್ಥ ನಮ್ಮ ಆಹಾರದಲ್ಲಿನ ಪ್ರೋಟೀನ್ ಅನ್ನು ಕೊಬ್ಬುಗಳು ಮತ್ತು ಕಾರ್ಬೋಹೈಡ್ರೇಟ್‌ಗಳೊಂದಿಗೆ ದುರ್ಬಲಗೊಳಿಸಿದರೆ, ನಮ್ಮ ದೇಹವು ಹಂಬಲಿಸುವ ಪ್ರೋಟೀನ್ ಪಡೆಯಲು ನಾವು ಹೆಚ್ಚು ತಿನ್ನುತ್ತೇವೆ ಎಂದು ಅಧ್ಯಯನ ವಿವರಿಸಿದೆ.


  ಅಧ್ಯಯನ ನಡೆದಿದ್ದು ಹೇಗೆ?
  ಸಿಡ್ನಿ ವಿಶ್ವವಿದ್ಯಾಲಯದ ವಿಜ್ಞಾನಿಗಳು 9,341 ವಯಸ್ಕರಲ್ಲಿ ಪೌಷ್ಟಿಕಾಂಶ ಮತ್ತು ದೈಹಿಕ ಚಟುವಟಿಕೆಯ ಸಮೀಕ್ಷೆಯಿಂದ ಡೇಟಾವನ್ನು ವಿಶ್ಲೇಷಿಸಿದ್ದಾರೆ, ಇದನ್ನು ರಾಷ್ಟ್ರೀಯ ಪೋಷಣೆ ಮತ್ತು ದೈಹಿಕ ಚಟುವಟಿಕೆ ಸಮೀಕ್ಷೆ ಎಂದು ಕರೆಯಲಾಗಿದೆ. ಇದನ್ನು ಮೇ 2011 ರಿಂದ ಜೂನ್ 2012 ರವರೆಗೆ ನಡೆಸಲಾಯಿತು, ಸರಾಸರಿ ವಯಸ್ಸು 46 ವರ್ಷದ ಪ್ರಾಯದವರು ಹೆಚ್ಚಾಗಿ ಅಧ್ಯಯನದಲ್ಲಿ ತೊಡಗಿದ್ದರು.
  ಭಾಗವಹಿಸಿದವರಲ್ಲಿ ದಿನದ ಮೊದಲ ಊಟದಲ್ಲಿ ಕಡಿಮೆ ಪ್ರಮಾಣದಲ್ಲಿ ಪ್ರೋಟೀನ್ ಸೇವಿಸಿದವರು ನಂತರದ ಊಟದಲ್ಲಿ ತಮ್ಮ ಒಟ್ಟಾರೆ ಆಹಾರ ಸೇವನೆಯನ್ನು ಹೆಚ್ಚಿಸಿಕೊಂಡರು. ದಿನದ ಪ್ರಾರಂಭದಲ್ಲಿ ಯಾರು ಪ್ರೋಟೀನ್‌ನಿಂದ ಹೆಚ್ಚಿನ ಪ್ರಮಾಣದ ಶಕ್ತಿಯನ್ನು ಸೇವಿಸಿದರೋ ಅವರು ದಿನದ ಕಡಿಮೆ ಹಸಿವನ್ನು ಅನುಭವಿಸಿದರು ಮತ್ತು ಜಂಕ್‌ ಆಹಾರಗಳಿಗೆ ಮೊರೆ ಹೋಗಿಲ್ಲ ಎಂದು ಅಧ್ಯಯನದ ಫಲಿತಾಂಶ ಹೇಳಿದೆ. ಕಡಿಮೆ ಪ್ರೋಟೀನ್‌ ಆಹಾರ ಸೇವಿಸಿ ಹಸಿವನ್ನು ನೀಗಿಸಿಕೊಳ್ಳಲು ಬೇರೆ ಅನಾರೋಗ್ಯಕರ ಆಹಾರವನ್ನು ಸೇವಿಸುವುದನ್ನು ಇಲ್ಲಿ ಸಂಶೋಧಕರು ʼಪ್ರೋಟೀನ್ ದುರ್ಬಲಗೊಳಿಸುವಿಕೆ' ಎಂದು ಕರೆದಿದ್ದಾರೆ.

  Published by:Gowtham K
  First published: