Diabetes: ಸಕ್ಕರೆ ಕಾಯಿಲೆಯಿಂದ ಬಳಲುತಿದ್ದೀರಾ? ಹಾಗಿದ್ರೆ ಈ 7 ರೋಗಲಕ್ಷಣಗಳ ಬಗ್ಗೆ ನಿರ್ಲಕ್ಷ್ಯ ಬೇಡ

ನಿಮಗೆ ಸಕ್ಕರೆ ಕಾಯಿಲೆ ಇದ್ದರೆ, ನಿಮ್ಮ ಪಾದಗಳು ಮರಗಟ್ಟಬಹುದು, ಮಧುಮೇಹದ ಪಾದದ ಸಮಸ್ಯೆಗಳು ಮತ್ತು ಆರೈಕೆ, ಕನ್ಸಲ್ಟೆಂಟ್ ಡರ್ಮಟಾಲಜಿಸ್ಟ್ ಮತ್ತು ಡರ್ಮಾಟೋ-ಸರ್ಜನ್, ದಿ ಎಸ್ತೆಟಿಕ್ ಕ್ಲಿನಿಕ್ಸ್ ಮಧುಮೇಹ ಪಾದದ ಸಮಸ್ಯೆಗಳಿಗೆ ಚಿಹ್ನೆಗಳು ಮತ್ತು ರೋಗಲಕ್ಷಣಗಳನ್ನು ಹಂಚಿಕೊಳ್ಳುತ್ತದೆ ನೋಡಿ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಈಗ ಇಡೀ ವಿಶ್ವದಲ್ಲಿ 415 ಮಿಲಿಯನ್ ಜನರು ಈ ಸಕ್ಕರೆ ಕಾಯಿಲೆಯಿಂದ (Diabetes) ಬಳಲುತ್ತಿದ್ದಾರೆ. ಈ ಸಕ್ಕರೆ ಕಾಯಿಲೆ ಎನ್ನುವುದು ನಮ್ಮನ್ನು ಹೇಗೆ ಅವರಿಸಿಕೊಳ್ಳುತ್ತದೆ ಎಂದು ಹೇಳುವುದು ತುಂಬಾನೇ ಕಷ್ಟ. ಏಕೆಂದರೆ ಇದು ಅತಿಯಾದ ಒತ್ತಡದ (Stress) ಮತ್ತು ಜಡತ್ವದ ಜೀವನಶೈಲಿಯಿಂದಾನೂ (Sedentary lifestyle) ಬರಬಹುದು, ತಪ್ಪಾದ ಆಹಾರ ಕ್ರಮ, ಅತಿಯಾದ ಸಕ್ಕರೆ ಇರುವ ಸಿಹಿ ಪದಾರ್ಥಗಳ ಸೇವನೆಯಿಂದಾಗಬಹುದು ಮತ್ತು ನಿಮ್ಮ ರಕ್ತದಲ್ಲಿ ಸಕ್ಕರೆ ಮಟ್ಟ ಜಾಸ್ತಿ ಇದ್ದರೂ ಬರಬಹುದು. ಅಸಹಜ ರಕ್ತದಲ್ಲಿನ ಅಧಿಕ ಸಕ್ಕರೆ ಮಟ್ಟಗಳು ಸಾಮಾನ್ಯವಾಗಿ ಯಕೃತ್ತು ಮತ್ತು ಮೂತ್ರಪಿಂಡದ ಸಮಸ್ಯೆಗಳನ್ನು (Kidney Problem) ಉಂಟು ಮಾಡುತ್ತವೆ.

ರಕ್ತದಲ್ಲಿನ ಅಧಿಕ ಸಕ್ಕರೆ ಮಟ್ಟ ಪಾದಗಳಲ್ಲಿಯೂ ಸಮಸ್ಯೆ ಉಂಟು ಮಾಡುತ್ತದೆಯೇ?
ರಕ್ತದಲ್ಲಿನ ಅಧಿಕ ಸಕ್ಕರೆ ಮಟ್ಟ ನಿಮ್ಮ ಪಾದಗಳಲ್ಲಿಯೂ ಸಹ ಸಮಸ್ಯೆಗಳನ್ನು ಸಹ ಉಂಟು ಮಾಡಬಹುದು ಎಂದು ನಿಮಗೆ ತಿಳಿದಿದೆಯೇ? ಅಧಿಕ ರಕ್ತದಲ್ಲಿನ ಸಕ್ಕರೆ ಮಟ್ಟವು ನರಗಳ ಹಾನಿ, ರಕ್ತಪರಿಚಲನೆ ಸಮಸ್ಯೆಗಳು ಮತ್ತು ಪಾದದ ಗಾಯಗಳ ಅಪಾಯವನ್ನು ಹೆಚ್ಚಿಸುತ್ತದೆ. ನಿಮಗೆ ಸಕ್ಕರೆ ಕಾಯಿಲೆ ಇದ್ದರೆ, ನಿಮ್ಮ ಪಾದಗಳು ಮರಗಟ್ಟಬಹುದು, ಮಧುಮೇಹದ ಪಾದದ ಸಮಸ್ಯೆಗಳು ಮತ್ತು ಆರೈಕೆ, ಕನ್ಸಲ್ಟೆಂಟ್ ಡರ್ಮಟಾಲಜಿಸ್ಟ್ ಮತ್ತು ಡರ್ಮಾಟೋ-ಸರ್ಜನ್, ದಿ ಎಸ್ತೆಟಿಕ್ ಕ್ಲಿನಿಕ್ಸ್ ಮಧುಮೇಹ ಪಾದದ ಸಮಸ್ಯೆಗಳಿಗೆ ಚಿಹ್ನೆಗಳು ಮತ್ತು ರೋಗಲಕ್ಷಣಗಳನ್ನು ಹಂಚಿಕೊಳ್ಳುತ್ತದೆ ನೋಡಿ.

ಇದನ್ನೂ ಓದಿ:  Diabetes: ರಕ್ತದಲ್ಲಿ ಸಕ್ಕರೆಯ ಮಟ್ಟ ಹೆಚ್ಚು ಇದೆಯಾ? ಜೀವನಶೈಲಿಯಲ್ಲಿ ಈ ಬದಲಾವಣೆಗಳನ್ನು ಮಾಡಿಕೊಳ್ಳಿ, ಕಂಟ್ರೋಲ್​ ಆಗುತ್ತೆ ನೋಡಿ

ಮಧುಮೇಹಿಗಳಾಗಿರುವುದು ನಿಮ್ಮ ಪಾದಗಳಿಗೆ ರಕ್ತದ ಹರಿವನ್ನು ಕಡಿಮೆ ಮಾಡುತ್ತದೆ, ಇದು ನಿಮ್ಮ ಪಾದಗಳಲ್ಲಿನ ಸಂವೇದನೆಯನ್ನು ತೆಗೆದು ಹಾಕುವ ನರ ಹಾನಿಗೂ ಸಹ ಕಾರಣವಾಗುತ್ತದೆ. ಈ ಸ್ಥಿತಿಯನ್ನು ಡಯಾಬಿಟಿಕ್ ನ್ಯೂರೋಪತಿ ಎಂದು ಕರೆಯಲಾಗುತ್ತದೆ. ನೀವು ನೋವನ್ನು ಗ್ರಹಿಸಲು ಸಾಧ್ಯವಾಗದ ಕಾರಣ, ಸಣ್ಣ ಗಾಯವು ಸಹ ತುಂಬಾ ಗಂಭೀರವಾಗಬಹುದು.

ಮಧುಮೇಹ-ಸಂಬಂಧಿತ ನರರೋಗದ ಗಂಭೀರ ರೋಗಲಕ್ಷಣಗಳು:

  1. ಸಾಮಾನ್ಯ ರೋಗಲಕ್ಷಣಗಳೆಂದರೆ ಕಾಲುಗಳು ಮತ್ತು ಪಾದಗಳಲ್ಲಿ ನೋವು, ಉರಿ, ಜುಮ್ಮೆನಿಸುವಿಕೆ ಮತ್ತು ಮರಗಟ್ಟುವಿಕೆ.

  2. ರಕ್ತದ ಹರಿವಿಗೆ ಅಡ್ಡಿಯಾಗುವುದರಿಂದ ಗಾಯವನ್ನು ಗುಣಪಡಿಸುವಲ್ಲಿನ ತೊಂದರೆ ಮತ್ತು ಸೋಂಕಿಗೆ ಪ್ರತಿರೋಧ. ರಕ್ತನಾಳಗಳು ಕಿರಿದಾಗುತ್ತವೆ ಮತ್ತು ಗಟ್ಟಿಯಾಗಿರುತ್ತವೆ ಮತ್ತು ರಕ್ತವು ಅದು ಹರಿಯಬೇಕಾದ ರೀತಿಯಲ್ಲಿ ಹರಿಯುವುದಿಲ್ಲ.

  3. ಪಾದದ ಹೆಬ್ಬೆರಳಿನ ಕೆಳಗೆ ಸಣ್ಣ ಪುಟ್ಟ ಗಾಯಗಳಾಗುವುದು. ಅವು ನೋಯಿಸದಿದ್ದರೂ ಸಹ ಅವುಗಳನ್ನು ತಕ್ಷಣವೇ ವೈದ್ಯರಿಗೆ ತೋರಿಸಬೇಕು.

  4. ಪಾದಗಳ ಆಕಾರವನ್ನು ಬದಲಾಯಿಸುವ ಪಾದ ವಿರೂಪತೆಗಳು.

  5. ಅಂಗಾಂಶಗಳ ಕ್ಷಯ ಮತ್ತು ಸಾವಿಗೆ ಕಾರಣವಾಗುವ ಗ್ಯಾಂಗ್ರೀನ್ ಮತ್ತು ಅಂಗಚ್ಛೇದನದ ಅಗತ್ಯವನ್ನು ಹೆಚ್ಚಿಸಬಹುದು.

  6. ಶುಷ್ಕತೆ, ಬಿರುಕುಗಳು, ಹಿಮ್ಮಡಿಗಳಿಗೆ ಹಾನಿ, ಸ್ಕೇಲಿಂಗ್, ಕಾಲ್ಬೆರಳುಗಳ ನಡುವೆ ಮುರಿದ ಚರ್ಮ, ಸಿಪ್ಪೆ ಸುಲಿಯುವಿಕೆಯಂತಹ ಚರ್ಮದ ಬದಲಾವಣೆಗಳು.

  7. ಪಾದದ ಕೆಳಗೆ ಹೆಚ್ಚಿನ ಒತ್ತಡದ ಪ್ರದೇಶಗಳಿಂದಾಗಿ ಕ್ಯಾಲಸ್ ಗಳು. ಸಕಾಲದಲ್ಲಿ ಚಿಕಿತ್ಸೆ ನೀಡದಿದ್ದರೆ ಈ ಕ್ಯಾಲಸ್ ಗಳು ಮತ್ತು ಕಾರ್ನ್ ಗಳು ಹುಣ್ಣುಗಳಾಗಿ ಬದಲಾಗಬಹುದು.


ನೀವು ಮಧುಮೇಹಕ್ಕೆ ಸಂಬಂಧಿಸಿದ ಪಾದದ ಸಮಸ್ಯೆಗಳ ಅಪಾಯವನ್ನು ಹೇಗೆ ಕಡಿಮೆ ಮಾಡಬಹುದು:

  • ನಿಮ್ಮ ಪಾದಗಳನ್ನು ಆರೈಕೆ ಮಾಡಿಕೊಳ್ಳಲು ನೀವು ಮಾಡಬಹುದಾದ ಅತ್ಯುತ್ತಮ ಕೆಲಸವೆಂದರೆ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುವುದು ಮತ್ತು ನೀವು ನಿಯಮಿತವಾಗಿ ವ್ಯಾಯಾಮ ಮಾಡುತ್ತಿದ್ದೀರಿ ಎಂದು ಖಚಿತಪಡಿಸಿಕೊಳ್ಳುವುದು.

  • ನಿಮ್ಮ ಔಷಧಿಗಳನ್ನು ನಿಯಮಿತವಾಗಿ ಮತ್ತು ಸಮಯಕ್ಕೆ ಸರಿಯಾಗಿ ತೆಗೆದುಕೊಳ್ಳಿ ಮತ್ತು ನಿಯಮಿತವಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.

  • ನಿಮ್ಮ ಪಾದಗಳ ಮೇಲೆ ನಿಕಟ ನಿಗಾ ಇರಿಸಿ. ಯಾವುದೇ ಗಾಯ ಅಥವಾ ಸಣ್ಣ ಹುಣ್ಣುಗಳಾದರೆ ಅವುಗಳನ್ನು ಕೂಡಲೇ ವೈದ್ಯರಿಗೆ ತೋರಿಸಿ.

  • ಸ್ನಾನದ ನಂತರ ನಿಮ್ಮ ಪಾದಗಳನ್ನು ಸರಿಯಾಗಿ ಒರೆಸಿಕೊಳ್ಳಿರಿ ಮತ್ತು ಕ್ರೀಮ್ ಅಥವಾ ಜೆಲ್ಲಿಯಿಂದ ಮಾಯಿಶ್ಚರೈಸ್ ಮಾಡಿ. ಕಾಲ್ಬೆರಳುಗಳ ನಡುವೆ ಏನನ್ನೂ ಹಚ್ಚಬೇಡಿ.

  • ನೀವು ನಿಮ್ಮ ಪಾದಗಳನ್ನು ಬೆಚ್ಚಗಿನ ನೀರಿನಲ್ಲಿ ಮಾತ್ರ ಇರಿಸಿಕೊಳ್ಳಿರಿ.

  • ಧೂಮಪಾನವನ್ನು ಮಾಡುವುದನ್ನು ನಿಲ್ಲಿಸಿ.


ಇದನ್ನೂ ಓದಿ:  Cancer And Health: ಈ ಕೆಲವು ಆಹಾರ ಸೇವನೆಯಿಂದ ನಿಮ್ಮ ದೇಹದಲ್ಲಿ ಕ್ಯಾನ್ಸರ್ ಅಪಾಯ ಹೆಚ್ಚುತ್ತದೆ!

  • ಬರಿಗಾಲಿನಲ್ಲಿ ನಡೆಯುವುದು, ಬಿಸಿ ನೀರಿನ ಬಾಟಲಿಯನ್ನು ಬಳಸುವುದು, ಕೊಳೆ ಮತ್ತು ಮಣ್ಣಿನಲ್ಲಿ ಕೆಲಸ ಮಾಡುವುದು ಮುಂತಾದ ಗಾಯ ಅಥವಾ ಪಾದಗಳಿಗೆ ಸುಟ್ಟಗಾಯಗಳಿಗೆ ಕಾರಣವಾಗುವ ಚಟುವಟಿಕೆಗಳಿಂದ ದೂರವಿರಿ.

  • ಪಾದಗಳಲ್ಲಿ ಗುಳ್ಳೆಗಳಾದಲ್ಲಿ ಆ ಗುಳ್ಳೆಗಳ ಸ್ವಯಂ-ಔಷಧೋಪಚಾರ ಮಾಡಿಕೊಳ್ಳಬೇಡಿ.

  • ಸ್ವಚ್ಛವಾದ ಮತ್ತು ಒಣಗಿದ ಸಾಕ್ಸ್ ಗಳನ್ನು ಧರಿಸಿ. ನಿಮ್ಮ ಸಾಕ್ಸ್ ಮತ್ತು ಬೂಟುಗಳು ಸ್ವಚ್ಛವಾಗಿರಲಿ. ಶೂಗಳು ಚೆನ್ನಾಗಿ ಫಿಟ್ ಆಗಿರಬೇಕು ಮತ್ತು ಸಾಕ್ಸ್ ಗಳು ಕಾಟನ್ ಬಟ್ಟೆಯದ್ದಾಗಿರಬೇಕು. ನಿಮ್ಮ ಪಾದಗಳನ್ನು ಎಲ್ಲಾ ಸಮಯದಲ್ಲೂ ಬೆಚ್ಚಗೆ ಮತ್ತು ಶುಷ್ಕವಾಗಿರಿಸಿಕೊಳ್ಳಿ.

Published by:Ashwini Prabhu
First published: