Health Care: ನಿಮಗೆ ಉಸಿರಾಟದ ತೊಂದರೆ, ಎದೆ ನೋವು ಇದೆಯಾ ಹಾಗದರೆ ನೀವು ಈ ವಿಷಯವನ್ನು ತಿಳಿದುಕೊಳ್ಳಲೇ ಬೇಕು

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ನಿಮಗೆ ಉಸಿರಾಟದ ತೊಂದರೆ, ಎದೆ ನೋವು ಇಂತಹ ಸಮಸ್ಯೆಗಳು ಇದ್ದಾರೆ. ಅದು ನಿಮ್ಮ ಹೃದಯದಲ್ಲಿ ಇರುವ ಸಮಸ್ಯೆಯೂ ಆಗಿರಬಹುದು. ಇದನ್ನ ನಾವುಎಚ್ಚರದಿಂದ ನಿಭಾಯಿಸಬೇಕಾಗುತ್ತದೆ. ಯಾವ ರೀತಿ ನಿಭಾಯಿಸಬೇಕು ಎನ್ನುವ ಮಾಹಿತಿ ಇಲ್ಲಿದೆ.

  • Share this:

    ರಕ್ತ ಹೆಪ್ಪುಗಟ್ಟುವಿಕೆ (Blood Clotting) ಒಂದು ರೀತಿಯಲ್ಲಿ ಒಳ್ಳೆಯದೂ ಹೌದು, ಕೆಲವೊಮ್ಮೆ ಮಾರಾಣಾಂತಿಕವಾಗಿ (Deadly) ಕೂಡ ಪರಿಣಮಿಸಬಹುದು. ಗಾಯ ಅಥವಾ ಕಡಿತದ ನಂತರ ರಕ್ತಸ್ರಾವವನ್ನು ನಿಲ್ಲಿಸಲು ದೇಹದ (Blood) ನೈಸರ್ಗಿಕ (Natural) ಕಾರ್ಯವಿಧಾನವಾದ ಈ ರಕ್ತ ಹೆಪ್ಪುಗಟ್ಟುವಿಕೆ ಪ್ರಯೋಜನ ನೀಡುವಂತದ್ದು. ರಕ್ತದ ಪ್ಲೇಟ್ಲೆಟ್‌ಗಳು (Blood Plate) ಎಂಬ ಪುಟ್ಟ ತಟ್ಟೆಯಾಕಾರದ ಕಣಗಳು ಒಂದಕ್ಕೊಂದು ಅಂಟಿಕೊಂಡು ಗೋಡೆಯಾಗಿ ರಕ್ತ ಹೊರ ಹರಿಯುವುದನ್ನು ನಿಲ್ಲಿಸಬೇಕು. ಇದನ್ನೇ ರಕ್ತ ಹೆಪ್ಪುಗಟ್ಟುವಿಕೆ ಎನ್ನಲಾಗುತ್ತದೆ.


    ಅಪಧಮನಿಯಲ್ಲಿ ರಕ್ತ ಹೆಪ್ಪುಗಟ್ಟುವಿಕೆ


    ರಕ್ತ ಹೆಪ್ಪುಗಟ್ಟುವಿಕೆಯು ಸಾಮಾನ್ಯ ಪ್ರಕ್ರಿಯೆಯಾಗಿದ್ದರೂ, ಹೆಪ್ಪುಗಟ್ಟುವಿಕೆಯು ತನ್ನದೇ ಆದ ರೀತಿಯಲ್ಲಿ ಕರಗದಿದ್ದಾಗ ಅದು ಜೀವಕ್ಕೆ ಅಪಾಯಕಾರಿಯಾಗಬಹುದು.


    ಇದನ್ನು ಥ್ರಂಬಸ್ ಎಂದು ಕರೆಯಲಾಗುತ್ತದೆ. ಇನ್ನೂ ಅಪಧಮನಿಗಳಲ್ಲಿ ರೂಪುಗೊಳ್ಳುವ ರಕ್ತ ಹೆಪ್ಪುಗಟ್ಟುವಿಕೆಯನ್ನು ಅಪಧಮನಿಯ ಹೆಪ್ಪುಗಟ್ಟುವಿಕೆ ಎನ್ನಲಾಗಿದ್ದು, ಇದು ಒಂದು ಗಂಭೀರ ಸಮಸ್ಯೆ ಕೂಡ ಹೌದು.


    ಕೋವಿಡ್‌ ನಂತರ ಸಮಸ್ಯೆ ಉಲ್ಭಣ


    ಕೋವಿಡ್ -19 ರ ಅಡ್ಡಪರಿಣಾಮಗಳಲ್ಲಿ ಒಂದಾದ ರಕ್ತದ ಹೆಪ್ಪುಗಟ್ಟುವಿಕೆಯ ಹೆಚ್ಚಳವು ಅಪಧಮನಿಗಳಲ್ಲಿ ಹೆಪ್ಪುಗಟ್ಟುವಿಕೆಯ ಅಪಾಯವನ್ನು ಹೆಚ್ಚಿಸುತ್ತದೆ ಮತ್ತು ಇದು ಹೃದಯಾಘಾತದ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ ಎನ್ನುತ್ತಾರೆ ತಜ್ಞರು.


    ಕೋವಿಡ್ -19 ರ ನಂತರದ ಪರಿಣಾಮಗಳ ಅಧ್ಯಯನದ ಪ್ರಕಾರ, ಕೋರೋನಾ ಸೋಂಕಿಗೆ ಒಳಗಾದ ಮಂದಿ ಒಂದು ವರ್ಷದ ನಂತರ ಅಪಾಯಕಾರಿ ರಕ್ತ ಹೆಪ್ಪುಗಟ್ಟುವಿಕೆಯ ಅಪಾಯವನ್ನು ಹೊಂದಿದ್ದಾರೆ ಎಂದು ತಿಳಿದು ಬಂದಿದೆ.


    ಇತರರಿಗೆ ಹೋಲಿಸಿದರೆ ಕೋವಿಡ್‌ ಸೋಂಕಿನಿಂದ ಬಳಲಿದ್ದವರಿಗೆ ಅಪಧಮನಿಗಳಲ್ಲಿ ಹೆಪ್ಪುಗಟ್ಟುವಿಕೆಯು ಹೆಚ್ಚಾಗಿ ಕಂಡು ಬಂದಿದ್ದು, ಹೃದಯಾಘಾತ ಮತ್ತು ಪಾರ್ಶ್ವವಾಯು ಸೇರಿದಂತೆ ರಕ್ತ ಹೆಪ್ಪುಗಟ್ಟುವಿಕೆಗೆ ಸಂಬಂಧಿಸಿದ ಸಮಸ್ಯೆಗಳಲ್ಲಿ ತೀವ್ರತೆಯು ಹೆಚ್ಚಳವಾಗಿದೆ ಎಂದು ಅಧ್ಯಯನಗಳು ತಿಳಿಸಿವೆ.


     If you have breathing problem chest pain you should know this thing
    ಸಾಂಕೇತಿಕ ಚಿತ್ರ


    ಹೃದಯಾಘಾತ ಮತ್ತು ಸ್ಟ್ರೋಕ್‌ಗೆ ಕಾರಣ


    ಅಪಧಮನಿಗಳಲ್ಲಿ ಉಂಟಾಗುವ ರಕ್ತ ಹೆಪ್ಪುಗಟ್ಟುವಿಕೆಯನ್ನು ಅಪಧಮನಿಯ ಥ್ರಂಬೋಸಿಸ್ ಎಂದು ಕರೆಯಲಾಗುತ್ತದೆ. ಈ ಅವಸ್ಥೆ ಹೃದಯ ಅಥವಾ ಮೆದುಳಿಗೆ ರಕ್ತದ ಹರಿವನ್ನು ನಿಲ್ಲಿಸುವುದರಿಂದ ಇದು ಹೆಚ್ಚು ಅಪಾಯಕಾರಿ.


    ರಕ್ತ ಹೆಪ್ಪುಗಟ್ಟುವಿಕೆಯು ಹೃದಯ ಸ್ನಾಯುಗಳಲ್ಲಿನ ಅಪಧಮನಿಗಳನ್ನು ನಿರ್ಬಂಧಿಸಿದರೆ, ಅದು ಹೃದಯಾಘಾತಕ್ಕೆ ಕಾರಣವಾದರೆ, ಮೆದುಳಿನಲ್ಲಿನ ಅಪಧಮನಿಯಲ್ಲಿ ಅಡಚಣೆಯು ಪಾರ್ಶ್ವವಾಯುವಿಗೆ ಕಾರಣವಾಗುತ್ತದೆ.


    "ಅಪಧಮನಿಗಳಲ್ಲಿ ರಕ್ತ ಹೆಪ್ಪುಗಟ್ಟಿದರೆ ರಕ್ತದಲ್ಲಿನ ಆಮ್ಲಜನಕವನ್ನು ನಿಮ್ಮ ಹೃದಯದಿಂದ ನಿಮ್ಮ ದೇಹದ ಎಲ್ಲಾ ಜೀವಕೋಶಗಳಿಗೆ ತಲುಪಿಸುವುದು ಕಷ್ಟವಾಗುತ್ತದೆ.


    ಇದು ನಿಮ್ಮ ಹೃದಯ, ಶ್ವಾಸಕೋಶಗಳು ಅಥವಾ ಮೆದುಳಿಗೆ ಆಮ್ಲಜನಕವನ್ನು ಪಡೆಯದಂತೆ ತಡೆಯಬಹುದು. ಹೃದಯಾಘಾತ ಅಥವಾ ಪಾರ್ಶ್ವವಾಯುಗಳಂತಹ ಮಾರಣಾಂತಿಕ ತುರ್ತು ಪರಿಸ್ಥಿತಿಯನ್ನು ಉಂಟುಮಾಡುತ್ತದೆ" ಎಂದು ಕ್ಷೇಮ ತಜ್ಞ ಮತ್ತು ಪೌಷ್ಟಿಕತಜ್ಞ ಕರಿಷ್ಮಾ ಶಾ ತಮ್ಮ ಇನ್‌ಸ್ಟಾಗ್ರಾಮ್‌ ಪೇಜಿನಲ್ಲಿ ಹಂಚಿಕೊಂಡಿದ್ದಾರೆ.


    ಇದನ್ನೂ ಓದಿ: Fruits: ಹಣ್ಣುಗಳನ್ನು ತಿನ್ನುವಾಗ ಈ ನಾಲ್ಕು ತಪ್ಪುಗಳನ್ನು ಖಂಡಿತ ಮಾಡಬೇಡಿ



     If you have breathing problem chest pain you should know this thing
    ಸಾಂಕೇತಿಕ ಚಿತ್ರ


    ಅಪಧಮನಿಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆಯ ಚಿಹ್ನೆಗಳು


    ಹೃದಯ ರಕ್ತ ಹೆಪ್ಪುಗಟ್ಟುವಿಕೆಗೆ ಸಂಭವಿಸಿದಲ್ಲಿ ಅದು ಹೃದಯಾಘಾತಕ್ಕೆ ಕಾರಣವಾಗಬಹುದು. ನೀವು ಹೃದಯದಲ್ಲಿ ರಕ್ತ ಹೆಪ್ಪುಗಟ್ಟುವಿಕೆಯನ್ನು ಹೊಂದಿದ್ದರೆ, ಕೆಲವು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ, ಅವು ಹೀಗಿವೆ.


    1. ಚರ್ಮದ ಬಣ್ಣ
    ಅಪಧಮನಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆ ಇದ್ದರೆ ಇದು ಚರ್ಮದ ಬಣ್ಣದ ಬದಲಾವಣೆಗೆ ಕಾರಣವಾಗುತ್ತದೆ. ಈ ಸಮಸ್ಯೆಯಿಂದಾಗಿ ಚರ್ಮ ನೀಲಿ ಅಥವಾ ಕೆಂಪು ಬಣ್ಣದಲ್ಲಿ ಕಾಣಿಸಬಹುದು. ನಂತರ ರಕ್ತನಾಳಗಳ ಹಾನಿಯಿಂದ ನಿಮ್ಮ ಚರ್ಮವು ಬಣ್ಣರಹಿತವಾಗಬಹುದು.


    2. ಊತ
    ಹೆಪ್ಪುಗಟ್ಟುವಿಕೆಯು ರಕ್ತದ ಹರಿವನ್ನು ನಿಧಾನಗೊಳಿಸಿದಾಗ ಅಥವಾ ನಿಲ್ಲಿಸಿದಾಗ, ಕೈ, ಕಾಲು ಊದಿಕೊಳ್ಳಬಹುದು. ನಿಮ್ಮ ತೋಳುಗಳಲ್ಲಿ ಅಥವಾ ಹೊಟ್ಟೆಯಲ್ಲಿ ರಕ್ತ ಹೆಪ್ಪುಗಟ್ಟಿದರೆ ಹೊಟ್ಟೆ ನೋವು, ಊತ ಉಂಟಾಗಬಹುದು.


    3. ನೋವು
    ಅಪಧಮನಿಗಳಲ್ಲಿ ಕಂಡು ಬರುವ ರಕ್ತ ಹೆಪ್ಪುಗಟ್ಟುವಿಕೆ ತೀವ್ರವಾದ ಎದೆ ನೋವಿಗೆ ಕಾರಣವಾಗುತ್ತದೆ. ಹಾಗೆಯೇ ತಲೆನೋವು ಸಹ ಕಾಣಿಸಿಕೊಳ್ಳುತ್ತದೆ. ನಿಮ್ಮ ತೋಳುಗಳಲ್ಲಿ, ವಿಶೇಷವಾಗಿ ಎಡಭಾಗದಲ್ಲಿ ನೋವನ್ನು ಅನುಭವಿಸಬಹುದು.


    4. ಉಸಿರಾಟದ ತೊಂದರೆ
    ಇದು ಗಂಭೀರ ಲಕ್ಷಣವಾಗಿದೆ. ನಿಮ್ಮ ಶ್ವಾಸಕೋಶದಲ್ಲಿ ಅಥವಾ ನಿಮ್ಮ ಹೃದಯದಲ್ಲಿ ಹೆಪ್ಪುಗಟ್ಟುವಿಕೆ ಇದೆ ಎಂಬುದರ ಪ್ರಮುಖ ಚಿಹ್ನೆಯಾಗಿದ್ದು, ನೀವು ಮೂರ್ಛೆ ಹೋಗುವ ಅಥವಾ ಹೆಚ್ಚು ಬೆವರುವ ಲಕ್ಷಣವನ್ನು ಎದುರಿಸಬಹುದು.


    ಈ ರೀತಿಯ ತೊಂದರೆಗಳು ಕಂಡು ಬಂದರೆ ನೀವು ಎಚ್ಚರವಹಿಸಲು ಮರೆಯದಿರಿ. ಈ ಲಕ್ಷಣಗಳು ನಿಮಗೆ ತೀವ್ರ ಸಮಸ್ಯೆ ಮಾಡುತ್ತದೆ.

    Published by:Gowtham K
    First published: