Health Care Tips: ಹೊಟ್ಟೆಯುಬ್ಬರ ಸಮಸ್ಯೆ ಕಾಡುತ್ತಿದ್ದರೆ, ಆಹಾರ ಸೇವನೆಯಲ್ಲಿ ಈ ರೀತಿ ಜಾಗ್ರತೆ ವಹಿಸಿ

ನಾವು ಅತಿಯಾಗಿ ತಿನ್ನುವುದು ಮತ್ತು ತಿನ್ನದೇ ಇರುವುದು, ಕಡಿಮೆ ತಿನ್ನುವುದು ಕೂಡ ಹಲವು ಆರೋಗ್ಯ ಸಮಸ್ಯೆಗೆ ಕಾರಣ ಆಗುತ್ತದೆ. ಅತಿಯಾಗಿ ತಿನ್ನುವುದು ಹೊಟ್ಟೆಯುಬ್ಬರ ಸಮಸ್ಯೆಗೆ ಕಾರಣವಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ದೇಹದಲ್ಲಿ (Body) ಅನಾರೋಗ್ಯ (Unhealthy) ಯಾವುದೋ ಒಂದು ರೂಪದಲ್ಲಿ ಬಂದು ಅಟಕಾಯಿಸಿಕೊಳ್ಳುತ್ತದೆ. ಹಾಗಾಗಿ ನಾವು ತಿನ್ನುವ (Eating) ಮತ್ತು ಕುಡಿಯುವ (Drinking) ವಿಷಯದಲ್ಲಿ ತುಂಬಾ ಜಾಗ್ರತೆ (Care) ವಹಿಸ ಬೇಕಾಗುತ್ತದೆ. ಯಾಕೆಂದರೆ ನಾವು ಅತಿಯಾಗಿ ತಿನ್ನುವುದು ಮತ್ತು ತಿನ್ನದೇ ಇರುವುದು, ಕಡಿಮೆ ತಿನ್ನುವುದು ಕೂಡ ಹಲವು ಆರೋಗ್ಯ ಸಮಸ್ಯೆಗೆ ಕಾರಣ ಆಗುತ್ತದೆ. ಅತಿಯಾಗಿ ತಿನ್ನುವುದು ಹೊಟ್ಟೆಯುಬ್ಬರ ಸಮಸ್ಯೆಗೆ ಕಾರಣವಾಗುತ್ತದೆ. ಇದು ಸಾಮಾನ್ಯ ಎನ್ನಿಸಿದರೂ ಕೂಡ ಮುಂದೆ ದೊಡ್ಡ ಸಮಸ್ಯೆ ತಂದೊಡ್ಡುತ್ತದೆ. ಆಹಾರ ಸೇವನೆ ನಂತರವೂ ಹೊಟ್ಟೆಯಲ್ಲಿ ಗ್ಯಾಸ್ ಸಮಸ್ಯೆ ಇದ್ದರೆ ಇದನ್ನು ನಿರ್ಲಕ್ಷ್ಯ ಮಾಡಬಾರದು. ಮತ್ತು ಕೂಡಲೇ ವೈದ್ಯರನ್ನು ಸಂಪರ್ಕಿಸಿ.

    ಗ್ಯಾಸ್ ಸಮಸ್ಯೆ ಕೆಲವು ಕಾಯಿಲೆಯ ಸಂಕೇತವೂ ಆಗಿರಬಹುದು

    ಗ್ಯಾಸ್ ಸಮಸ್ಯೆ ಮತ್ತು ಅತಿಯಾಗಿ ತಿನ್ನುವುದು ಕೆಲವು ಕಾಯಿಲೆಯ ಸಂಕೇತವೂ ಆಗಿರಬಹುದು. ಗ್ಯಾಸ್ ಸಮಸ್ಯೆ ಎದುರಿಸುವ ಜನರು, ತಜ್ಞರು ಹೇಳುವ ಕೆಲವು ವಿಶೇಷ ವಿಧಾನಗಳನ್ನು ಅನುಸರಿಸುವ ಮೂಲಕ ಪರಿಹಾರ ಪಡೆಯಬಹುದು. ಹೊಟ್ಟೆ ಉಬ್ಬರಕ್ಕೆ ಕಾರಣಗಳು ಸಾಮಾನ್ಯ ಆಗಿರುತ್ತವೆ. ಸಾಮಾನ್ಯ ಜನರಿಗಿಂತ ಕೆಲವರಿಗೆ ವಾಯು ಸಮಸ್ಯೆ ಹೆಚ್ಚು. ಇದರ ಹಿಂದೆ ಹಲವು ಕಾರಣಗಳಿರಬಹುದು.

    ಕರುಳಿನಲ್ಲಿ ಬ್ಯಾಕ್ಟೀರಿಯಾ ಬೆಳವಣಿಗೆ (SIBO)

    ಕೆರಳಿಸುವ ಕರುಳಿನ ಲಕ್ಷಣಗಳು (IBS), ಆಹಾರ ಅಸಹಿಷ್ಣುತೆ, ಮುಟ್ಟಿನ ಅವಧಿ, ಆಗಾಗ್ಗೆ ತಿನ್ನುವ ಅಭ್ಯಾಸ ಅಥವಾ ಹೆಚ್ಚು ಫೈಬರ್ ಸೇವನೆ ಮಾಡದಿರುವುದು. ವಾತದ ಮತ್ತೊಂದು ಕಾರಣವೆಂದರೆ ಸಣ್ಣ ಕರುಳಿನಲ್ಲಿ ಬ್ಯಾಕ್ಟೀರಿಯಾ ಬೆಳವಣಿಗೆ (SIBO) ಎಂಬ ಕರುಳಿನ ಕಾಯಿಲೆ.

    ಇದನ್ನೂ ಓದಿ: ಬೇಸಿಗೆಯಲ್ಲಿ ದೇಹದ ಕಾಳಜಿಗಾಗಿ ಅಡುಗೆ ಮನೆಯಲ್ಲೇ ಇವೆ ಅಗತ್ಯ ವಸ್ತುಗಳು

    ತಜ್ಞರ ಪ್ರಕಾರ, ನಾವು ತಿಂದ ನಂತರ ಬ್ಯಾಕ್ಟೀರಿಯಾಗಳು ಹುದುಗಿಸಿದ ಮತ್ತು ಕಾರ್ಬೋಹೈಡ್ರೇಟ್ ಆಹಾರದಿಂದ ರೂಪುಗೊಳ್ಳುತ್ತವೆ. ಮೀಥೇನ್, ಹೈಡ್ರೋಜನ್ ಮತ್ತು ಹೈಡ್ರೋಜನ್ ಸಲ್ಫೈಡ್ನಂತಹ ಅನಿಲಗಳನ್ನು ಉತ್ಪತ್ತಿ ಮಾಡುತ್ತವೆ.

    ಕರುಳಿನಲ್ಲಿ ಅಂತಹ ಅನಿಲದ ರಚನೆ ಹೊಟ್ಟೆಯಲ್ಲಿ ಉಬ್ಬುವಿಕೆ ಉಂಟು ಮಾಡುತ್ತದೆ. ನೀವು SIBO ಹೊಂದಿದ್ದರೆ ಏನನ್ನಾದರೂ ತಿಂದ ನಂತರ ನಿಮ್ಮ ಹೊಟ್ಟೆ ಉಬ್ಬಿಕೊಳ್ಳುತ್ತದೆ. ಹಾಗಾದರೆ ಈ ಗ್ಯಾಸ್ ಮತ್ತು ಹೊಟ್ಟೆ ಉಬ್ಬುವಿಕೆ ಸಮಸ್ಯೆಯನ್ನು ಹೀಗೆ ತಪ್ಪಿಸಬಹುದು.

    ಊಟದ ನಡುವೆ ಹೆಚ್ಚು ಅಂತರ ಬಿಡಬೇಡಿ

    ಸಣ್ಣ ಕರುಳು ತನ್ನನ್ನು ತಾನೇ ಸ್ವಚ್ಛವಾಗಿಟ್ಟುಕೊಳ್ಳುವ ಕೆಲಸ ಮಾಡುತ್ತದೆ. ಹೊಟ್ಟೆಯಲ್ಲಿ ಜೀರ್ಣವಾಗದ ಆಹಾರವು ಸಣ್ಣ ಕರುಳಿನಿಂದ ದೊಡ್ಡ ಕರುಳಿಗೆ ಹೋಗುತ್ತದೆ. ನಾವು ತಿನ್ನದೇ ಇರುವಾಗ ಪ್ರತಿ ಎರಡು ಗಂಟೆಗಳಿಗೊಮ್ಮೆ ಇದು ಸಂಭವಿಸುತ್ತದೆ.

    ಈ ಕ್ರಿಯೆಯು ನಮ್ಮ ಹೊಟ್ಟೆಯಲ್ಲಿ ಕಂಡು ಬರುವ ಸಣ್ಣ ಬ್ಯಾಕ್ಟೀರಿಯಾಗಳನ್ನು ಸಮತೋಲನದಲ್ಲಿ ಇಡುತ್ತದೆ. ಹೊಟ್ಟೆಯಲ್ಲಿ ಈ ಸಮತೋಲನ ಕಾಪಾಡಲು ಕೆಲವು ಗಂಟೆಗಳ ಅಂತರದಲ್ಲಿ ತಿನ್ನುತ್ತಾ ಇರಬೇಕು.

    ತಿನ್ನುವಾಗ ಅವಸರ ಬೇಡ, ನಿಧಾನವಾಗಿ ತಿನ್ನಿ

    ಆರೋಗ್ಯ ತಜ್ಞರ ಪ್ರಕಾರ, ಆಹಾರವನ್ನು ಯಾವಾಗಲೂ ನಿಧಾನವಾಗಿ ಅಗಿಯಬೇಕು. ನೀವು ಆಹಾರ ಹೆಚ್ಚು ಅಗಿಯುವಾಗ ಕಡಿಮೆ ಗಾಳಿಯು ನಿಮ್ಮ ಬಾಯಿಗೆ ಹೋಗುತ್ತದೆ. ಬಾಯಿಯಲ್ಲಿ ಕಡಿಮೆ ಗಾಳಿ ಎಂದರೆ ನೀವು ಕಡಿಮೆ ವಾಯು ಸಮಸ್ಯೆ ಹೊಂದಿರುತ್ತೀರಿ.

    ಹೆಚ್ಚು ನೀರು ಕುಡಿಯಿರಿ

    ಕೆಲವೊಮ್ಮೆ ಹೆಚ್ಚು ಸೋಡಿಯಂ ಸೇವನೆಯು ಹೊಟ್ಟೆಯಲ್ಲಿ ಉಬ್ಬುವಿಕೆಗೆ ಕಾರಣವಾಗುತ್ತದೆ. ಈ ಪರಿಸ್ಥಿತಿ ತಪ್ಪಿಸಲು, ಸಾಕಷ್ಟು ನೀರು ಕುಡಿಯಿರಿ. ಹೆಚ್ಚಿನ ನೀರು ದೇಹದಲ್ಲಿ ಸಂಗ್ರಹವಾಗಿರುವ ಹೆಚ್ಚುವರಿ ಸೋಡಿಯಂ ಅನ್ನು ಹೊರ ಹಾಕಲು ಸಹಕಾರಿ ಆಗಿದೆ.

    ಇದನ್ನೂ ಓದಿ: ಕೂದಲು ಉದುರಿ ನೆತ್ತಿ ಕಾಣುತ್ತಿದೆಯೇ ಹಾಗಿದ್ದರೆ ಇಂದಿನಿಂದಲೇ ಈ ಸಲಹೆ ಪಾಲಿಸಿ

    ಕಡಿಮೆ ಹುದುಗುವಿಕೆ ಆಹಾರ ಸೇವಿಸಿ

    ಕಡಿಮೆ ಹುದುಗುವಿಕೆ ಆಹಾರ ಸೇವನೆ SIBO ನ ಲಕ್ಷಣಗಳನ್ನು ನಿಯಂತ್ರಿಸುತ್ತದೆ. ಈ ವಿಷಯದ ಬಗ್ಗೆ ಹೆಚ್ಚಿನ ಸಂಶೋಧನೆ ಅಗತ್ಯವಿದೆ. ಕೃತಕ ಸಿಹಿಕಾರಕ, ಬೀನ್ಸ್, ಹೂಕೋಸು ಮತ್ತು ಕೋಸುಗಡ್ಡೆಯಂತಹ ಹೆಚ್ಚಿನ ಹುದುಗುವಿಕೆ ಹೊಂದಿರುವ ಆಹಾರಗಳು ಹೊಟ್ಟೆಯಲ್ಲಿ ಅನಿಲ ಉತ್ಪಾದಿಸುತ್ತವೆ. ಹಾಗಾಗಿ ಈ ಸಮಸ್ಯೆ ತಪ್ಪಿಸಲು ಈ ವಸ್ತುಗಳ ಸೇವನೆ ಕಡಿಮೆ ಮಾಡಿ.
    Published by:renukadariyannavar
    First published: