ದೊಡ್ಡ ಕಣ್ಣುಗಳಿದ್ರೆ (Big Eyes) ಮುಖದ ಅಂದ ಹೆಚ್ಚುತ್ತದೆ. ಮುಖದ (Face) ಕಣ್ಣು, ಮೂಗು (Nose), ತುಟಿ (Lips) ಮತ್ತು ಕಿವಿ ಸೌಂದರ್ಯವನ್ನು (Beauty) ಇಮ್ಮಡಿಗೊಳಿಸುತ್ತದೆ. ಅದರಲ್ಲೂ ಕಣ್ಣು, ಹುಬ್ಬು, ರೆಪ್ಪೆ ಅಂದವನ್ನು ಹೆಚ್ಚಿಸುತ್ತದೆ. ಹಾಗಾಗಿ ಅನೇಕ ಮಹಿಳೆಯರು (Women) ಕಾಜಲ್, ಐ ಲೈನರ್ ಮೂಲಕ ತಮ್ಮ ಕಣ್ಣುಗಳನ್ನು ಹೈಲೈಟ್ ಮಾಡುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಕಣ್ಣಿನ ತೊಂದರೆಗಳು ಮತ್ತು ಡಾರ್ಕ್ ಸರ್ಕಲ್ ಸಮಸ್ಯೆ ಕಣ್ಣಿನ ಸುತ್ತ ಕಾಣಿಸಿಕೊಳ್ಳುತ್ತದೆ. ಇದು ಸೌಂದರ್ಯದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಪಫಿನೆಸ್, ಸುಕ್ಕು, ಒಣ ತ್ವಚೆ, ಕಪ್ಪು ವರ್ತುಲ ಸಮಸ್ಯೆಗಳು ಕಣ್ಣಿನ ಜೊತೆಗೆ ಮುಖದ ಅಂದವನ್ನು ಹಾಳು ಮಾಡುತ್ತದೆ.
ಕಣ್ಣಿನ ಮೇಕಪ್ ಮಾಡುವುದು
ಸೌಂದರ್ಯ ಕ್ಷೇತ್ರದಲ್ಲಿ 20 ವರ್ಷಗಳ ಅನುಭವ ಹೊಂದಿರುವ ಪೂನಂ ಶುಕ್ಲಾ ಪ್ರಕಾರ, ಕೆಲವು ಸಣ್ಣ ಮುನ್ನೆಚ್ಚರಿಕೆ ಕ್ರಮ ಗಮನದಲ್ಲಿಟ್ಟುಕೊಂಡು ಕಣ್ಣಿನ ಮೇಕಪ್ ಮಾಡಬೇಕು. ಇದು ಡಾರ್ಕ್ ಸರ್ಕಲ್ ಕಾಣದಂತೆ ನೋಡಿಕೊಳ್ಳುತ್ತದೆ. ಮೇಕಪ್ ಮಾಡುವಾಗ ಇತರೆ ವಿಷಯದ ಬಗ್ಗೆ ಕಾಳಜಿ ವಹಿಸಬೇಕು.
ಡಾರ್ಕ್ ಸರ್ಕಲ್ ಗಳಲ್ಲಿ ವಿಧಗಳು
ಡಾರ್ಕ್ ಸರ್ಕಲ್ ನ್ನು ತಜ್ಞರು ಇದನ್ನು 6 ವರ್ಗಗಳಾಗಿ ವಿಂಗಡಿಸಿದ್ದಾರೆ.
ನೀಲಿ ಅಥವಾ ನೇರಳೆ
ಅತಿಯಾದ ಕಿರಣಗಳಿಂದಾದ
ವಯಸ್ಸಾಗುವಿಕೆಯ
ತಾತ್ಕಾಲಿಕ
ಇದನ್ನೂ ಓದಿ: ಬಾದಾಮಿ ತಿಂದು ಸಿಪ್ಪೆ ಎಸೆಯೋ ಮುನ್ನ ಅದರ ಪ್ರಯೋಜನ ತಿಳಿಯಿರಿ!
ಅಲರ್ಜಿ
ವರ್ಣದ್ರವ್ಯದ
ಸರಿಯಾದ ಕನ್ಸೀಲರ್ ಬಳಸಿ
ಕಣ್ಣುಗಳ ಕೆಳಗೆ ಕಪ್ಪು ವಲಯ ಮರೆ ಮಾಡಲು ಸರಿಯಾದ ಕನ್ಸೀಲರ್ ಆಯ್ಕೆ ಮಾಡಿ. ಬಣ್ಣದ ಚಕ್ರದ ಕೆಲವು ಸೂಕ್ಷ್ಮ ವ್ಯತ್ಯಾಸ ಅರ್ಥ ಮಾಡಿಕೊಳ್ಳಿ. ಬಣ್ಣದ ಚಕ್ರವು ಮೂಲಭೂತ ಸಿದ್ಧಾಂತವಾಗಿದೆ. ಬಣ್ಣದ ತಿಳುವಳಿಕೆ ಹೊಂದಿದ್ದರೆ, ಸರಿಯಾದ ಕನ್ಸೀಲರ್ ಆಯ್ಕೆ ಮಾಡುವುದು ಸಮಸ್ಯೆಯಾಗಲ್ಲ. ಡಾರ್ಕ್ ಸರ್ಕಲ್ ಮರೆ ಮಾಚಲು ಇದು ಸಹಾಯಕ.
ಡಾರ್ಕ್ ಸರ್ಕಲ್ ಮರೆ ಮಾಚಲು ಪ್ಯಾಲೆಟ್‌ಗಳಲ್ಲಿ ಕಿತ್ತಳೆ, ಹಳದಿ, ಹಸಿರು, ನೇರಳೆ, ಕೆಂಪು ಮತ್ತು ನೀಲಿ ಛಾಯೆ ಹೊಂದಿರಬೇಕು. ಇದು ನಿಮ್ಮ ಕಪ್ಪು ವಲಯಗಳ ಬಣ್ಣಕ್ಕೆ ಅನುಗುಣವಾಗಿ ನೀವು ಅದನ್ನು ಮರೆ ಮಾಡಬಹುದು.
ಯಾವ ಡಾರ್ಕ್ ಸರ್ಕಲ್ ಗೆ ಯಾವ ಕನ್ಸೀಲರ್ ಬಳಸಬೇಕು?
ಡಾರ್ಕ್ ಸರ್ಕಲ್‌ಗಳ ಬಣ್ಣವು ತಿಳಿ ಕಂದು ಆಗಿದ್ದರೆ ಹಳದಿ ಬಣ್ಣದ ಕನ್ಸೀಲರ್‌ನಿಂದ ನೀವು ಅದನ್ನು ಮರೆ ಮಾಡಬಹುದು. ಹಳದಿ ಬಣ್ಣವು ತಿಳಿ ಕಂದು ಬಣ್ಣವನ್ನು ತಟಸ್ಥಗೊಳಿಸುತ್ತದೆ.
ಡಾರ್ಕ್ ಸರ್ಕಲ್ ಗಾಢ ಬಣ್ಣದ್ದಾಗಿದ್ದರೆ ಟೋನ್ ಕಪ್ಪು ಅಥವಾ ಹಸಿರು ಬಣ್ಣದ್ದಾಗಿದ್ದರೆ ಕಿತ್ತಳೆ ಬಣ್ಣದ ಕನ್ಸೀಲರ್ ಬಳಸಿ. ಕಣ್ಣಿನ ಕೆಳಭಾಗದಲ್ಲಿ ಗಾಯ ಅಥವಾ ಅಲರ್ಜಿ ಕೆಂಪು ಅಥವಾ ಪೀಚ್ ಬಣ್ಣದ ಗುರುತುಗಳಿದ್ದರೆ, ಹಸಿರು ಬಣ್ಣದ ಕನ್ಸೀಲರ್ ಬಳಸಿ.
ಕನ್ಸೀಲರ್ ಖರೀದಿಸುವಾಗ ಈ ವಿಷಯಗಳನ್ನು ನೆನಪಿಡಿ
ಕನ್ಸೀಲರ್ ಎಣ್ಣೆಯುಕ್ತ ಅಥವಾ ಕೆನೆಯುಕ್ತವಾಗಿರದಂತೆ ನೋಡಿಕೊಳ್ಳಿ. ಈ ರೀತಿಯ ಕನ್ಸೀಲರ್ ಹೆಚ್ಚು ಕಾಲ ಉಳಿಯುವುದಿಲ್ಲ. ಆದ್ದರಿಂದ, ಸಾಧ್ಯವಾದಷ್ಟು, ಮ್ಯಾಟ್ ಫಿನಿಶ್ ಕನ್ಸೀಲರ್ ಖರೀದಿಸಬೇಕು. ಡಾರ್ಕ್ ಸರ್ಕಲ್ ಗಳನ್ನು ಮರೆಮಾಚಲು ಯಾವಾಗಲೂ ಉತ್ತಮ ಬ್ರಾಂಡ್ ಕನ್ಸೀಲರ್ ಅನ್ನು ಬಳಸಿ. ಏಕೆಂದರೆ ಅವರು 100% ಕವರೇಜ್ ನೀಡುತ್ತವೆ. ಕಡಿಮೆ ತೂಕದ ಕನ್ಸೀಲರ್ ಬಳಸಿ. ಮ್ಯಾಟ್ ಫಿನಿಶ್ ಮತ್ತು ಕವರೇಜ್ ನೀಡುವ ಬಗ್ಗೆ ಗಮನಹರಿಸಿ.
ಇದನ್ನೂ ಓದಿ: ನೀವು ಬಳಸುವ ಟೂತ್ ಪೇಸ್ಟ್ ನಿಮ್ಮ ಹಲ್ಲುಗಳಿಗೆ ಎಷ್ಟು ಉತ್ತಮ ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ
ಕೇವಲ ಕನ್ಸೀಲರ್ ಅನ್ವಯಿಸಿ
ಕಪ್ಪು ವಲಯಗಳನ್ನು ಮರೆಮಾಡಲು, ಮೊದಲು ಕಣ್ಣುಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಿ. ನಂತರ ಚರ್ಮದ ಪ್ರಕಾರ ಪ್ರೈಮರ್ ಅನ್ವಯಿಸಿ. ನಿಮ್ಮ ಡಾರ್ಕ್ ಸರ್ಕಲ್ ಗೆ ಅನುಗುಣವಾಗಿ ಕನ್ಸೀಲರ್ ಆಯ್ಕೆ ಮಾಡಿ ಮತ್ತು ಅನ್ವಯಿಸಿ. ಬ್ಯೂಟಿ ಬ್ಲೆಂಡರ್ ಸಹಾಯದಿಂದ ಕನ್ಸೀಲರ್ ಅನ್ನು ಚೆನ್ನಾಗಿ ಹೊಂದಿಸಿ. ನೈಸರ್ಗಿಕ ಬಣ್ಣದ ಮ್ಯಾಟ್ ಫಿನಿಶ್ ಲಿಕ್ವಿಡ್ ಕನ್ಸೀಲರ್ ಅನ್ವಯಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ