ನೀವು ಜಿಮ್​ಗೆ ಹೋಗುತ್ತಿದ್ದೀರಾ?; ಹಾಗಾದ್ರೆ ತಪ್ಪದೇ ಈ ಸ್ಟೋರಿ ಓದಿ!​

ಅರ್ಧಕ್ಕೆ ಜಿಮ್​ ಮಾಡುವುದನ್ನು ನಿಲ್ಲಿಸಿದರೆ ಹೃದಯದ ರಕ್ತನಾಳದ ಶಕ್ತಿ ಕುಸಿಯುತ್ತದೆ. ಕೆಲ ವಾರಗಳ ಕಾಲ ಆರೋಗ್ಯವಾಗಿದ್ದರೂ ಬಳಿಕ ನಿಮ್ಮ ಶರೀರದ ಶಕ್ತಿ ಕುಂದುತ್ತದೆ.

news18-kannada
Updated:March 27, 2020, 9:24 AM IST
ನೀವು ಜಿಮ್​ಗೆ ಹೋಗುತ್ತಿದ್ದೀರಾ?; ಹಾಗಾದ್ರೆ ತಪ್ಪದೇ ಈ ಸ್ಟೋರಿ ಓದಿ!​
ಸಾಂದರ್ಭಿಕ ಚಿತ್ರ.
  • Share this:
ನನಗೆ ಸಿಕ್ಸ್ ಪ್ಯಾಕ್ ಬೇಕು, ದಪ್ಪ ಆಗಬೇಕು, ಶಕ್ತಿ ಬರಬೇಕು ಎಂದು ಸಾಕಷ್ಟು ಮಂದಿ ಯುವಕರು ಬಯಸುತ್ತಾರೆ.  ಇದಕ್ಕಾಗೆ ಕೆಲ ಯುವಕರು ಗಂಟೆ ಗಟ್ಟಲೆ ಜಿಮ್​ನಲ್ಲಿ ತಾಲೀಮು ನಡೆಸುತ್ತಾರೆ. ಆದರೆ ನೀವು ಜಿಮ್​ಗೆ ಹೋಗುವುದರಿಂದ ಎಷ್ಟು ಪ್ರಯೋಜನಗಳಿವೆಯೋ, ಅಷ್ಟೇ ದುಷ್ಪರಿಣಾಮಗಳು ಕೂಡ ಇವೆ.

ನೀವು ನಿರಂತರವಾಗಿ ಜಿಮ್​ಗೆ ಹೋಗುತ್ತಿದ್ದರೆ ನಿಮ್ಮ ದೇಹ ಗಟ್ಟುಮುಟ್ಟಾಗಿ ಶಕ್ತಿಯುತವಾಗಿರುತ್ತದೆ. ಏನಾದರೂ ಜಿಮ್​ಗೆ ಹೋಗುವುದನ್ನು ತಕ್ಷಣ ನಿಲ್ಲಿಸಿದರೆ  ಕೀಲು ನೋವುಗಳು ಕಾಣಿಸುತ್ತದೆ. ಅಲ್ಲದೆ ಕಾಲಕ್ರಮೇಣ ನಿಮ್ಮ ಸ್ನಾಯುವಿನ ಬಲ ಕುಸಿಯಲು ಪ್ರಾರಂಭಿಸುತ್ತದೆ. ಮುಂದೆ ದೌರ್ಬಲ್ಯದ ಸಮಸ್ಯೆ ಬಂದರೂ ಆಶ್ಚರ್ಯವಿಲ್ಲ.

ಸಾಮಾನ್ಯ ಕೆಮ್ಮಿಗೆ ಮನೆಯಲ್ಲೇ ಇದೆ ಪರಿಹಾರ..!

ಅರ್ಧಕ್ಕೆ ಜಿಮ್​ ಮಾಡುವುದನ್ನು ನಿಲ್ಲಿಸಿದರೆ ಹೃದಯದ ರಕ್ತನಾಳದ ಶಕ್ತಿ ಕುಸಿಯುತ್ತದೆ. ಕೆಲ ವಾರಗಳ ಕಾಲ ಆರೋಗ್ಯವಾಗಿದ್ದರೂ ಬಳಿಕ ನಿಮ್ಮ ಶರೀರದ ಶಕ್ತಿ ಕುಂದುತ್ತದೆ.

ಜಿಮ್‍ಗೆ ಸೇರುವ ತವಕದಲ್ಲಿ ಅಗತ್ಯಕ್ಕಿಂತ ಹೆಚ್ಚು ವ್ಯಾಯಾಮ ಮಾಡುವುದು ಒಳ್ಳೆಯದಲ್ಲ. ಅಂತೆಯೇ ದೇಹಕ್ಕೆ ವಿಶ್ರಾಂತಿ ಕೂಡ ಅಗತ್ಯ.

ಪ್ರಮುಖವಾಗಿ ಆಹಾರದ ಬಗ್ಗೆ ನಿರ್ಲಕ್ಷ್ಯ ತೋರಬಾರದು. ಸಮಯಕ್ಕೆ ಸರಿಯಾಗಿ ದೇಹಕ್ಕೆ ಪೌಷ್ಠಿಕಾಂಶವಿರುವ ಆಹಾರ ಸೇವನೆ ಅಗತ್ಯ. ಇದರೊಂದಿಗೆ ಹಣ್ಣುಗಳ ಸೇವನೆ ಮಾಡಿ.

ಖಾಲಿ ಹೊಟ್ಟೆಯಲ್ಲಿ ಜಿಮ್ ಮಾಡಲು ಹೋಗದಿರಿ. ತಾಲೀಮಿಗೆ ಹೋಗುವ 30 ನಿಮಿಷಗಳ ಮುನ್ನ ಬಾಳೆ ಹಣ್ಣು, ಬೇಯಿಸಿದ ಆಲುಗಡ್ಡೆ ಅಥವಾ ಚಿಕ್ಕು ತಿಂದರೆ ಉತ್ತಮ. ಜತೆಗೆ ಬಿಸಿ ನೀರು ಕುಡಿಯುವುದು ಮತ್ತೂ ಒಳ್ಳೆಯದು.ನೀವು ಪದೇ ಪದೇ ಸೀನುತ್ತೀರಾ? ಇದರ ಹಿಂದಿರುವ ಕಾರಣ ಇದು..!

ಇನ್ನೊಂದು ಉತ್ತಮ ಉಪಾಯವೆಂದರೆ ಜಿಮ್​ಗೆ ಹೋಗುವ ಬದಲು ದಿನನಿತ್ಯ ನಾವೇ ವ್ಯಾಯಾಮದಲ್ಲಿ ತೊಡಗಿಕೊಂಡರೆ ಸೂಕ್ತ ಮತ್ತು ಸುರಕ್ಷಿತ ಎಂದು ತಜ್ಞರು ತಿಳಿಸಿದ್ದಾರೆ.
First published: March 27, 2020, 9:24 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading