• Home
 • »
 • News
 • »
 • lifestyle
 • »
 • Alcohol: ಕಂಠಪೂರ್ತಿ ಕುಡಿದರೆ ಹೃದಯಕ್ಕೆ ಆಪತ್ತು, ಮದ್ಯ ಸೇವನೆಗೂ ಮುನ್ನ ಮರೆಯದೇ ಓದಿ

Alcohol: ಕಂಠಪೂರ್ತಿ ಕುಡಿದರೆ ಹೃದಯಕ್ಕೆ ಆಪತ್ತು, ಮದ್ಯ ಸೇವನೆಗೂ ಮುನ್ನ ಮರೆಯದೇ ಓದಿ

ಸಾಂಕೇತಿಕ ಚಿತ್ರ
(ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ)

ಸಾಂಕೇತಿಕ ಚಿತ್ರ (ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ)

ಇನ್ನೇನು ಮಧ್ಯರಾತ್ರಿ 12 ಗಂಟೆಯಿಂದ ಹೊಸ ವರ್ಷ ಶುರುವಾಗುತ್ತೆ ಅಂತ ಡಿಸೆಂಬರ್ 31 ರ ರಾತ್ರಿ ಹೇಗೆಲ್ಲಾ ಪಾರ್ಟಿ ಮಾಡಬೇಕು? ಪಾರ್ಟಿಗೆ ಯಾರನ್ನೆಲ್ಲಾ ಕರಿಬೇಕು? ಎಲ್ಲಿ ಕೂತು ಎಣ್ಣೆ ಕುಡಿದು ಎಂಜಾಯ್ ಮಾಡಬೇಕು ಅಂತೆಲ್ಲಾ ಅನೇಕರು ತುಂಬಾ ದಿನಗಳ ಹಿಂದಿನಿಂದಲೇ ಮಾಸ್ಟರ್ ಪ್ಲ್ಯಾನ್ ಮಾಡ್ತಾ ಇರ್ತಾರೆ ಅಂತ ಹೇಳಬಹುದು. ಈ ಪ್ಲಾನ್​ ಮಾಡೋ ಮುಂಚೆ ನೀವು ಈ ತಿಳಿದುಕೊಳ್ಳಬೇಕು.

ಮುಂದೆ ಓದಿ ...
 • Share this:

  ಇನ್ನೇನು ಮಧ್ಯರಾತ್ರಿ (Mid night) 12 ಗಂಟೆಯಿಂದ ಹೊಸ ವರ್ಷ (New Year) ಶುರುವಾಗುತ್ತೆ ಅಂತ ಡಿಸೆಂಬರ್ (December) 31 ರ ರಾತ್ರಿ ಹೇಗೆಲ್ಲಾ ಪಾರ್ಟಿ (Party) ಮಾಡಬೇಕು? ಪಾರ್ಟಿಗೆ ಯಾರನ್ನೆಲ್ಲಾ ಕರಿಬೇಕು? ಎಲ್ಲಿ ಕೂತು ಎಣ್ಣೆ (Drinks) ಕುಡಿದು ಎಂಜಾಯ್ (Enjoy) ಮಾಡಬೇಕು ಅಂತೆಲ್ಲಾ ಅನೇಕರು ತುಂಬಾ ದಿನಗಳ ಹಿಂದಿನಿಂದಲೇ ಮಾಸ್ಟರ್ ಪ್ಲ್ಯಾನ್ ಮಾಡ್ತಾ ಇರ್ತಾರೆ ಅಂತ ಹೇಳಬಹುದು.


  ಪಾರ್ಟಿ ಮಾಡೋದಕ್ಕೆ ಯಾವೆಲ್ಲಾ ಬ್ರ್ಯಾಂಡ್ ನ ಮದ್ಯವನ್ನು ಖರೀದಿ ಮಾಡಿಕೊಂಡು ಬರಬೇಕು ಅಂತೆಲ್ಲಾ ಜನರು ಇವತ್ತು ಸಂಜೆಯಿಂದಲೇ ಸಿದ್ದತೆಗಳನ್ನು ಶುರು ಮಾಡುತ್ತಾರೆ. ಕೆಲವರಿಗೆ ಮದ್ಯವನ್ನು ಕುಡಿದು ಪಾರ್ಟಿ ಮಾಡಿದರೆನೆ ಹೊಸ ವರ್ಷದ ಎಂಜಾಯ್ಮೆಂಟ್ ಅಂತ ಅಂದುಕೊಂಡಿರುತ್ತಾರೆ.


  ಹೀಗೆ ಕಂಠಪೂರ್ತಿಯಾಗಿ ಮದ್ಯ ಕುಡಿಯುವುದು ಅವರ ಹೃದಯದ ಮೇಲೆ ಎಂತಹ ಪರಿಣಾಮವನ್ನು ಬೀರುತ್ತದೆ ಅಂತ ಬಹುಶಃ ಅವರಿಗೆ ಅಷ್ಟಾಗಿ ಗೊತ್ತಿರಲಿಕ್ಕಿಲ್ಲ ಅಥವಾ ಹೊಸ ವರ್ಷದ ಜೋಶ್ ನಲ್ಲಿ ಅದನ್ನು ಪರಿಗಣನೆಗೆ ತೆಗೆದುಕೊಳ್ಳದೆ ಸಹ ಇರಬಹುದು.


  ಹೀಗೆ ಸುಮಾರು ದಿನಗಳವರೆಗೆ ಮದ್ಯವನ್ನು ಕುಡಿಯದೆ, ನೀವು ದಿಢೀರನೆ ಒಂದೇ ರಾತ್ರಿ ಜೋಶ್ ನಲ್ಲಿ ಅತಿಯಾಗಿ ಮದ್ಯ ಸೇವನೆ ಮಾಡಿದರೆ 'ಹಾಲಿಡೇ ಹಾರ್ಟ್ ಸಿಂಡ್ರೋಮ್' ಅಪಾಯ ನಿಮ್ಮನ್ನು ಕಾಡದೆ ಬಿಡದು ಅಂತ ಹೃದ್ರೋಗ ತಜ್ಞರು ಬೆಂಗಳೂರಿಗರಿಗೆ ಎಚ್ಚರಿಕೆ ನೀಡಿದ್ದಾರೆ ನೋಡಿ.


  ಏನಿದು 'ಹಾಲಿಡೇ ಹಾರ್ಟ್ ಸಿಂಡ್ರೋಮ್'?


  ಹಾಲಿಡೇ ಹಾರ್ಟ್‌ ಸಿಂಡ್ರೋಮ್‌ ಎನ್ನುವುದು ಕೆಲವರಿಗೆ ಹೊಸ ಕಾಯಿಲೆ ಅಂತ ಅನ್ನಿಸಬಹುದು. ಆದರೆ ಇದು ಅತಿಯಾದ ಆಲ್ಕೋಹಾಲ್‌ ಸೇವನೆಯಿಂದ ಹೃದಯ ಸಂಬಂಧಿ ಕಾಯಿಲೆಗೆ ಪ್ರಮುಖ ಕಾರಣವಾಗುತ್ತದೆ. ಈ 'ಹಾಲಿಡೇ ಹಾರ್ಟ್ ಸಿಂಡ್ರೋಮ್' ಅಪಾಯದ ಬಗ್ಗೆ ಎಚ್ಚರಿಕೆ ನೀಡಿದ ವೈದ್ಯರು, ಅತಿಯಾದ ಮದ್ಯಪಾನದಿಂದ ಹೃದಯ ಬಡಿತದಲ್ಲಿ ಏರಿಳಿತಗಳು ಉಂಟಾಗುತ್ತವೆ ಎಂದು ಹೇಳಿದ್ದಾರೆ.


  If you drink alcohol to your heart's content, it is dangerous for your heart, don't forget to read before consuming alcohol
  ಸಾಂಕೇತಿಕ ಚಿತ್ರ
  (ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ)


  ಏನ್ ಹೇಳ್ತಾರೆ ನೋಡಿ ಇದರ ಬಗ್ಗೆ ಹೃದ್ರೋಗ ತಜ್ಞರು


  ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಅವರು "ಕಡಿಮೆ ಅವಧಿಯಲ್ಲಿ ಹೆಚ್ಚಿನ ಪ್ರಮಾಣದ ಆಲ್ಕೋಹಾಲ್ ಸೇವಿಸುವುದರಿಂದ ರಕ್ತದೊತ್ತಡ ಜಾಸ್ತಿಯಾಗುತ್ತದೆ ಮತ್ತು ಇದು ಅನಿಯಮಿತ ಹೃದಯದ ಲಯಗಳಿಗೆ ಕಾರಣವಾಗಬಹುದು. ಹೊಸ ವರ್ಷದಂತಹ ಆಚರಣೆಗಳ ಸಮಯದಲ್ಲಿ ಅತಿಯಾದ ಮದ್ಯಪಾನದ ಅಪಾಯವು ಹೆಚ್ಚಾಗುತ್ತದೆ" ಎಂದು ಅವರು ಹೇಳಿದರು.


  If you drink alcohol to your heart's content, it is dangerous for your heart, don't forget to read before consuming alcohol
  ಸಾಂಕೇತಿಕ ಚಿತ್ರ
  (ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ)


  “ಹೃದಯ ಬಡಿತ, ತಲೆ ತಿರುಗುವಿಕೆ, ಶಕ್ತಿಯ ಮಟ್ಟ ಕಡಿಮೆಯಾಗುವುದು ಮತ್ತು ಉಸಿರಾಟದ ಕೊರತೆ ಈ ಸಿಂಡ್ರೋಮ್ ನ ಪ್ರಮುಖವಾದ ಲಕ್ಷಣಗಳಲ್ಲಿ ಸೇರಿವೆ” ಎಂದು ಆಸ್ರಾ ಆಸ್ಪತ್ರೆಯ ಅಧ್ಯಕ್ಷ ಡಾ.ಜಗದೀಶ್ ಹಿರೇಮಠ್ ತಿಳಿಸಿದ್ದಾರೆ.


  ಹೆಚ್ಚಿನ ಸಂದರ್ಭಗಳಲ್ಲಿ ಈ ರೋಗಲಕ್ಷಣಗಳು ಕಾಣಿಸದೇ ಹೋದರೂ, ಅಪಾಯವನ್ನು ತಂದೊಡ್ಡಬಹುದು. ಇದು ಹಠಾತ್ ಹೃದಯ ಸ್ತಂಭನಕ್ಕೆ ಕಾರಣವಾಗಬಹುದು ಎಂದು ಡಾ.ಹಿರೇಮಠ್ ಹೇಳಿದರು. "ಸಿಂಡ್ರೋಮ್ ಆಗಾಗ್ಗೆ ಕಾಣಿಸಿಕೊಂಡರೆ ದೀರ್ಘಕಾಲೀನ ಹಾನಿಯಾಗುವ ಸಾಧ್ಯತೆ ಸಹ ಇರುತ್ತದೆ" ಎಂದು ಹೇಳಿದರು.


  ಇದನ್ನೂ ಓದಿ: Alcohol And Heart: ಏನಿದು ಹಾಲಿಡೇ ಹಾರ್ಟ್ ಸಿಂಡ್ರೋಮ್ ಕಾಯಿಲೆ, ಹೇಗೆ ಉಂಟಾಗುತ್ತದೆ?


  ರೋಗಲಕ್ಷಣಗಳು ಕಾಣಿಸಿದಾಗ ತಕ್ಷಣ ಆಸ್ಪತ್ರೆಗೆ ಬರುವ ಜನರು ತೀರಾ ಕಡಿಮೆ


  ರೋಗಲಕ್ಷಣಗಳು ಮುಂದುವರಿದಾಗ ಮಾತ್ರ ಜನರು ಆಸ್ಪತ್ರೆಗಳನ್ನು ಸಂಪರ್ಕಿಸುತ್ತಾರೆ ಮತ್ತು ಇದು ಸಹ ಕೆಲವೇ ಕೆಲವು ಪ್ರಕರಣಗಳಲ್ಲಿ ಸಂಭವಿಸುತ್ತದೆ ಎಂದು ಡಾ.ಮಂಜುನಾಥ್ ಹೇಳಿದರು. "ನೀವು ಮನೆಯಲ್ಲಿ ಹೃದಯ ಬಡಿತವನ್ನು ಪರೀಕ್ಷಿಸಿದರೆ, ಅತಿಯಾಗಿ ಕುಡಿಯುವವರು ಅದನ್ನು ಹೆಚ್ಚು ಎಂದು ಕಂಡುಕೊಳ್ಳಬಹುದು" ಎಂದು ಅವರು ಹೇಳಿದರು.
  ಭಾರತದಲ್ಲಿ ಈಗಾಗಲೇ ಹೃದಯ ಸಮಸ್ಯೆಗಳು ಹೆಚ್ಚಾಗಿರುವುದರಿಂದ, ವೈದ್ಯರು ಎಚ್ಚರಿಕೆ ವಹಿಸುವಂತೆ ಹೇಳುತ್ತಾರೆ. "ಜನರು ಆಲ್ಕೋಹಾಲ್ ಸೇವಿಸಿದರೂ ಸಹ ತುಂಬಾನೇ ಸಣ್ಣ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು. ಈಗಾಗಲೇ ಹೃದ್ರೋಗಗಳು, ಅಧಿಕ ರಕ್ತದೊತ್ತಡ ಮತ್ತು ಆಂಜಿಯೋಪ್ಲಾಸ್ಟಿಯಂತಹ ಪ್ರಕ್ರಿಯೆಗೆ ಒಳಗಾದವರು ತುಂಬಾನೇ ಜಾಗರೂಕರಾಗಿರಬೇಕು" ಎಂದು ಡಾ.ಮಂಜುನಾಥ್ ಹೇಳಿದರು.


  ಹಾಲಿಡೇ ಹಾರ್ಟ್ ಸಿಂಡ್ರೋಮ್ ರೋಗಲಕ್ಷಣಗಳನ್ನು ಅನುಭವಿಸುತ್ತಿರುವವರು ಮದ್ಯಪಾನ ಮಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಮತ್ತು ಕೂಡಲೇ ವೈದ್ಯಕೀಯ ಸಹಾಯವನ್ನು ಪಡೆಯಬೇಕು ಎಂದು ಡಾ.ಹಿರೇಮಠ್ ಹೇಳಿದರು.

  Published by:Gowtham K
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು