Coffee: ಅತಿಯಾದ ಕಾಫಿ ಕುಡಿಯುವ ಅಭ್ಯಾಸ ನಿಮಗಿದ್ಯಾ? ಹಾಗಿದ್ರೆ ಈ ಸಮಸ್ಯೆ ನಿಮ್ಮನ್ನು ಕಾಡುವುದು ಗ್ಯಾರೆಂಟಿ

ಬೇಸಿಗೆ ಕಾಲಕ್ಕಿಂತಲೂ ಮಳೆಗಾಲ ಮತ್ತು ಚಳಿಗಾಲದಲ್ಲಿ ಬೆಳಿಗ್ಗೆ ಮತ್ತು ಸಂಜೆ ಹೊತ್ತಿನಲ್ಲಿ ಬಿಸಿ ಬಿಸಿ ಒಂದು ಕಪ್ ಚಹಾ ಅಥವಾ ಕಾಫಿ ಕುಡಿದರೆನೇ ಮನಸ್ಸಿಗೆ ಒಂದು ರೀತಿಯ ಉಲ್ಲಾಸ ಮತ್ತು ಚೈತನ್ಯ ಅಂತ ಹೇಳಬಹುದು. ಕೆಲವರು ಚಹಾ ಇಷ್ಟಪಟ್ಟರೆ, ಇನ್ನೂ ಕೆಲವರು ಕಾಫಿಯನ್ನು ಇಷ್ಟಪಡುತ್ತಾರೆ. ಹಾಗಂತ ದಿನದಲ್ಲಿ ನಾಲ್ಕೈದು ಬಾರಿ ಕಾಫಿಯನ್ನು ಕುಡಿದರೆ ತಲೆ ನೋವು ಬರುವುದು ಗ್ಯಾರೆಂಟಿ ಎಂದು ಹೇಳುತ್ತದೆ ಹೊಸ ಅಧ್ಯಯನ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಬೇಸಿಗೆ, ಮಳೆಗಾಲ ಮತ್ತು ಚಳಿಗಾಲ ಹೀಗೆ ಯಾವುದೇ ಋತುಗಳಾಗಿರಲಿ ನಾವು ಕುಡಿಯಲು ಇಷ್ಟಪಡುವುದು ಬಿಸಿ ಬಿಸಿ ಒಂದು ಕಪ್ ಚಹಾ (Tea) ಮತ್ತು ಕಾಫಿ (Coffee) ಅಂತ ಹೇಳಿದರೆ ತಪ್ಪಾಗುವುದಿಲ್ಲ. ಬೇಸಿಗೆ ಕಾಲಕ್ಕಿಂತಲೂ ಮಳೆಗಾಲ (Rainy Season) ಮತ್ತು ಚಳಿಗಾಲದಲ್ಲಿ ಬೆಳಿಗ್ಗೆ ಮತ್ತು ಸಂಜೆ ಹೊತ್ತಿನಲ್ಲಿ ಬಿಸಿ ಬಿಸಿ ಒಂದು ಕಪ್ ಚಹಾ ಅಥವಾ ಕಾಫಿ ಕುಡಿದರೆನೇ ಮನಸ್ಸಿಗೆ ಒಂದು ರೀತಿಯ ಉಲ್ಲಾಸ ಮತ್ತು ಚೈತನ್ಯ ಅಂತ ಹೇಳಬಹುದು. ಕೆಲವರು ಚಹಾ ಇಷ್ಟಪಟ್ಟರೆ, ಇನ್ನೂ ಕೆಲವರು ಕಾಫಿಯನ್ನು ಇಷ್ಟಪಡುತ್ತಾರೆ. ಹಾಗಂತ ದಿನದಲ್ಲಿ ನಾಲ್ಕೈದು ಬಾರಿ ಕಾಫಿಯನ್ನು ಕುಡಿದರೆ ತಲೆ ನೋವು (Head Ache) ಬರುವುದು ಗ್ಯಾರೆಂಟಿ ಎಂದು ಹೇಳುತ್ತದೆ ಹೊಸ ಅಧ್ಯಯನ (Study).

ಹೌದು.. ಹೆಚ್ಚಾದರೆ ಅಮೃತವು ವಿಷ ಎಂಬಂತೆ ಯಾವುದು ಅತಿ ಆಗಬಾರದು. ಕಾಫಿ ಇಷ್ಟ ಅಂತ ದಿನಕ್ಕೆ ನಾಲ್ಕು ಬಾರಿ ಅದನ್ನೇ ಕುಡಿತಾ ಇರೋದಲ್ಲ.

ಅತಿಯಾದ ಕಾಫಿ ಸೇವನೆ ಆರೋಗ್ಯಕ್ಕೆ ಒಳ್ಳೆಯದೇ?
ಕೆಲವರಿಗಂತೂ ಈ ಕಾಫಿ ಎಷ್ಟು ಇಷ್ಟ ಎಂದರೆ ಕಾಫಿ ಕುಡಿದೇ ಇದ್ದರೆ ಬೆಳಗ್ಗೆ ಆದ ಹಾಗೆಯೇ ಅನ್ನಿಸುವುದಿಲ್ಲ. ಕಾಫಿ ಅವರಿಗೆ ಗೊತ್ತಿದ್ದು ಅಥವಾ ಗೊತ್ತಿಲ್ಲದೆಯೋ ಅವರ ಜೀವನದ ಒಂದು ಮುಖ್ಯವಾದ ಭಾಗವಾಗಿರುತ್ತದೆ. ಕಾಫಿಯಲ್ಲಿರುವ ಕೆಫೀನ್ ನಿಮ್ಮ ಎಲ್ಲಾ ಇಂದ್ರಿಯಗಳನ್ನು ವೇಗವಾಗಿ ಕಾರ್ಯ ನಿರ್ವಹಿಸುವಂತೆ ಮಾಡುತ್ತದೆ. ಅದಕ್ಕಾಗಿಯೇ ಪರೀಕ್ಷೆಯ ಸಮಯದಲ್ಲಿ ಬಹುತೇಕ ವಿದ್ಯಾರ್ಥಿಗಳು ತಮಗೆ ನಿದ್ರೆ ಬರುವ ಹಾಗೆ ಅನ್ನಿಸಿದರೆ, ಅವರು ತಮ್ಮನ್ನು ಎಚ್ಚರವಾಗಿರಿಸಿಕೊಳ್ಳಲು ಒಂದು ಕಪ್ ಕಾಫಿಯನ್ನು ಕುಡಿಯುತ್ತಾರೆ. ಆದಾಗ್ಯೂ, ಕಾಫಿಯು ತನ್ನದೇ ಆದಂತಹ ಕೆಲವು ಅಡ್ಡಪರಿಣಾಮಗಳನ್ನು ಸಹ ಹೊಂದಿದೆ.

ಇದನ್ನೂ ಓದಿ: Basil Tea Benefits: ಚರ್ಮ - ಕೂದಲಿನ ಆರೋಗ್ಯಕ್ಕೆ ತುಳಸಿ ಟೀ ಬೆಸ್ಟ್ ಅಂತೆ, ನೀವೂ ಟ್ರೈ ಮಾಡಿ

ದಿನಕ್ಕೆ ನಾಲ್ಕು ಕಪ್ ಕಾಫಿ ಕುಡಿಯುವುದರಿಂದ ತಲೆನೋವು ಉಂಟಾಗುತ್ತದೆ ಎಂದು ಇತ್ತೀಚಿನ ಒಂದು ಅಧ್ಯಯನವು ಹೇಳಿದೆ. ಕಾಫಿಯು ಹೇಗೆ ತಲೆನೋವಿಗೆ ಕಾರಣವಾಗಬಹುದು ಅಂತ ನೀವು ನಮಗೆ ಕೇಳಬಹುದು. ಮುಂದೆ ಓದಿ, ನಿಮಗೆ ಅರ್ಥವಾಗುತ್ತದೆ.

ತಲೆನೋವಿಗೆ ಕಾರಣವಾಗುತ್ತದೆಯೇ ಹೆಚ್ಚಿನ ಪ್ರಮಾಣದ ಕೆಫೀನ್
ನ್ಯೂಸ್ ಟುಡೇ ವೈದ್ಯಕೀಯ ವರದಿಯ ಪ್ರಕಾರ, ಹೆಚ್ಚಿನ ಪ್ರಮಾಣದ ಕೆಫೀನ್ ತಲೆನೋವಿಗೆ ಕಾರಣವಾಗುತ್ತದೆ. ಪ್ರತಿದಿನ 400 ಮಿಲಿ ಗ್ರಾಂ ಅಥವಾ 4 ಕಪ್ ಕಾಫಿ ಕುಡಿಯುವುದರಿಂದ ಅಂತಹ ಸಮಸ್ಯೆಗಳು ಉಂಟಾಗಬಹುದು. ಅಷ್ಟೇ ಅಲ್ಲ, ದಿನಕ್ಕೆ 200 ಮಿಲಿ ಗ್ರಾಂ ಗಿಂತಲೂ ಹೆಚ್ಚು ಕೆಫೀನ್ ಸೇವಿಸುವವರು ಸಹ ಎರಡು ವಾರಗಳಿಗಿಂತ ಹೆಚ್ಚು ಕಾಲ ಮೈಗ್ರೇನ್ ಅನ್ನು ಹೊಂದಿರಬಹುದು.

ಇದನ್ನು ಕೇಳಿದ ಕೂಡಲೇ ನೀವು ಕಾಫಿ ಸೇವನೆಯನ್ನು ನಿಲ್ಲಿಸುವ ಬಗ್ಗೆ ಯೋಚಿಸುತ್ತಿದ್ದರೆ, ಸ್ವಲ್ಪ ತಾಳಿರಿ. ಇದ್ದಕ್ಕಿದ್ದಂತೆ ಕಾಫಿಯನ್ನು ನಿಲ್ಲಿಸುವುದು ಸಹ ಅನೇಕ ಸಮಸ್ಯೆಗಳನ್ನು ಉಂಟು ಮಾಡಬಹುದು. ಆದ್ದರಿಂದ, ನಿಮ್ಮ ಕಾಫಿ ಕುಡಿಯುವ ಅಭ್ಯಾಸವನ್ನು ಕ್ರಮೇಣ ಬದಲಾಯಿಸಿಕೊಳ್ಳಿ. ನೀವು ಇದನ್ನು ನಿರ್ವಹಿಸಲು ಸಾಧ್ಯವಾದರೆ, ಮೈಗ್ರೇನ್ ನ ಅಪಾಯವು ಸಹ ಬೇಗನೆ ಕಡಿಮೆಯಾಗುತ್ತದೆ.

ತಲೆನೋವಿಂದ ದೂರವಿರಲು ಕಾಫಿಯ ಸೇವನೆ ಕಡಿಮೆ ಮಾಡಿ
ಕಾಫಿಯಲ್ಲಿರುವ ಕೆಫೀನ್ ಪ್ರಮಾಣವು ಪ್ರತಿಯೊಬ್ಬ ವ್ಯಕ್ತಿಯ ದೇಹಕ್ಕೆ ವಿಭಿನ್ನವಾಗಿ ಪ್ರತಿಕ್ರಿಯಿಸುತ್ತದೆ. ಆದರೆ ತಲೆನೋವಿನಂತಹ ಸಂದರ್ಭಗಳನ್ನು ತಪ್ಪಿಸಲು, ಜನರು ಹೆಚ್ಚು ಕಾಫಿ ಕುಡಿಯುವುದನ್ನು ಕಡಿಮೆ ಮಾಡಬೇಕು. ಮೈಗ್ರೇನ್ ಸಮಸ್ಯೆಯಿಂದ ಬಳಲುತ್ತಿರುವವರಿಗೆ, ಕಾಫಿ ಸೇವನೆಯನ್ನು ಕಡಿಮೆ ಮಾಡುವುದು ಅತ್ಯಂತ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ.

ಇದನ್ನೂ ಓದಿ:  Night Dinner: ರಾತ್ರಿ ಹೊತ್ತಲ್ಲಿ ಈ ಕೆಲವು ಆಹಾರ ಸೇವಿಸಲೇಬಾರದು! ಯಾವ ಆಹಾರ ಬೆಸ್ಟ್ ಗೊತ್ತೇ?

ತಲೆನೋವಿನ ಹೊರತಾಗಿ, ಅತಿಯಾದ ಕೆಫೀನ್ ನಿಂದಾಗಿ ದೇಹವು ಇತರ ಸಮಸ್ಯೆಗಳನ್ನು ಸಹ ಎದುರಿಸಬಹುದು. ಎಂದರೆ ಉದ್ವಿಗ್ನತೆ, ಒತ್ತಡ ಮತ್ತು ನಿದ್ರೆಯ ಸಮಸ್ಯೆಗಳಿಗೂ ಇದು ಕಾರಣವಾಗಬಹುದು. ಅಂತಿಮವಾಗಿ ಇವೆಲ್ಲಾ ಸಮಸ್ಯೆಗಳು ತಲೆನೋವಿಗೆ ಕಾರಣವಾಗಬಹುದು. ಕೆಫೀನ್ ಸೇವನೆಯನ್ನು ನೀವು ಬಿಟ್ಟಿದ್ದರೂ ನಿಮಗೆ ಹೆಚ್ಚು ತೊಂದರೆಯಾಗುತ್ತಿದ್ದರೆ, ನೀವು ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಕೆಲವೊಮ್ಮೆ ಇದು ಗಂಭೀರ ಕಾಯಿಲೆಗಳ ಸಂಕೇತವೂ ಆಗಿರುತ್ತದೆ.
Published by:Ashwini Prabhu
First published: