Dream: ಈ ಕನಸುಗಳು ಬಿದ್ದರೆ ಶೀಘ್ರವೇ ನಿಮ್ಮ ಮದುವೆ ನೆರವೇರಲಿದೆ ಎಂದು ಅರ್ಥ!

Dream about marriage: ಒಬ್ಬ ಹುಡುಗಿ ಅವಳ ಕನಸಲ್ಲಿ ಮುದ್ದಾದ ಗುಬ್ಬಿ ಮರಿಯನ್ನ ನೋಡಿದರೆ ಇಲ್ಲ ಗುಬ್ಬಿ ನೋಡಿದರೆ ಅವಳ ಪ್ರೇಮ ಸಂಬಂಧ ಮದುವೆ ರೂಪದಲ್ಲಿ ಬದಲಾಗಲು ತುಂಬಾ ಸಮಯ ಬೇಕಾಗಿಲ್ಲ ಅತಿ ಶೀಘ್ರದಲ್ಲಿ ಮದುವೆ ಆಗಲಿದೆ ಎಂದು ಸೂಚಿಸುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಪ್ರತಿ ನಿತ್ಯ ಒಂದಲ್ಲ ಒಂದು ಕನಸು(Dream)ಬೀಳುತ್ತಲೇ ಇರುತ್ತದೆ. ಹಾಗಂತ ಎಲ್ಲವಕ್ಕೂ ಅರ್ಥ(Meaning)ಹುಡುಕುತ್ತಾ ಕೂರುವುದು ಸಾಧ್ಯವಿಲ್ಲದ ಮಾತು. ಆದರೆ, ಕೆಲವು ಕನಸುಗಳು ಗೊಂದಲವನ್ನು ಉಂಟುಮಾಡುತ್ತವೆ.  ಕನಸು ಸರ್ವೇ ಸಾಮಾನ್ಯವಾಗಿ ಬೀಳುತ್ತಿರುತ್ತದೆ. ಕೆಲವು ನೆನಪಿನಲ್ಲಿ ಉಳಿದರೆ ಇನ್ನು ಕೆಲವು ಕನಸು ಮಸುಕಾಗಿ ಕಾಡುತ್ತದೆ. ಕೆಲವು ರೀತಿಯ ಕನಸುಗಳು ಖುಷಿ(Happiness)ಕೊಟ್ಟರೆ, ಮತ್ತೆ ಕೆಲವು ಗಾಬರಿಗೊಳಿಸುತ್ತವೆ. ಅರ್ಥವಾಗದೆ ಕಾಡುವ ಕನಸು ಹಲವಾರು, ಕೊಂಬು, ಬಾಲವಿಲ್ಲದ ಆ ಕನಸಿನ ಬಗ್ಗೆ ಎಷ್ಟೇ ಚಿಂತಿಸಿದರೂ ಅದರ ಸಂಕೇತವನ್ನು (Sign)ಮಾತ್ರ ಬಿಡಿಸಲಾಗದು. ಹೀಗಾಗಿಯೇ ಆ ಕನಸಿನ ಅರ್ಥವನ್ನು ತಿಳಿದುಕೊಳ್ಳಲೇ ಬೇಕೆಂದು ಮನಸ್ಸಿಗೆ ಅನ್ನಿಸುತ್ತದೆ. ಅಂತಹ ಸಂದರ್ಭದಲ್ಲಿ  ಕನಸಿನ ಅರ್ಥವನ್ನು ತಿಳಿಯಬೇಕೆಂದರೆ ಸ್ವಪ್ನ ಶಾಸ್ತ್ರವನ್ನು(Swapna Shastra)ತಡಕಾಡಿ ನೋಡಬೇಕಾಗುತ್ತದೆ.

  ಇನ್ನು ಹಲವಾರು ತರದ ಕನಸು ಅರ್ಥವೇ ಆಗುವುದಿಲ್ಲ, ಎಲ್ಲ ಕನಸುಗಳಿಗೆ ಅರ್ಥವನ್ನು ಹುಡುಕುತ್ತಾ ಕೂರುವುದು ಮೂರ್ಖತನ ಅನ್ನಿಸಿದರೂ, ಬೀಳುವ ಕನಸಿಗೆ ಅರ್ಥವಿದೆ ಅದು ಭವಿಷ್ಯದಲ್ಲಿ ನಡೆಯುವ ವಿಚಾರವನ್ನು ತಿಳಿಸುವ ಸೂಚಕವಾಗಿರುತ್ತವೆ .

  ಸ್ವಪ್ನ ಶಾಸ್ತ್ರದ ಪ್ರಕಾರ ಕೆಲವು ಕನಸುಗಳನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಅಂತಹ ಕನಸುಗಳು ಕಂಡುಬಂದರೆ, ಕೆಲವು ಪರಿಹಾರ ಕ್ರಮಗಳನ್ನು ಕೈಗೊಳ್ಳುವ ಮೂಲಕ ಅವುಗಳ ದುಷ್ಪರಿಣಾಮಗಳನ್ನು ತಪ್ಪಿಸಬಹುದು ಎಂದು ನಂಬಲಾಗಿದೆ. ಹೀಗಾಗಿಯೇ ಮನುಷ್ಯನಿಗೆ ಬೀಳುವ ಪ್ರತಿಯೊಂದು ಕನಸು ಒಂದೊಂದು ಅರ್ಥವನ್ನ ನೀಡುತ್ತದೆ.

  ಹಾಗಿದ್ರೆ ಮದುವೆ ಬಗ್ಗೆ ಬೀಳುವ ಕನಸು ಏನನ್ನು ಸೂಚಿಸುತ್ತದೆ ಎನ್ನುವ ಮಾಹಿತಿ ಇಲ್ಲಿದೆ.ಮದುವೆ ಎನ್ನುವ ಶುಭ ಗಳಿಗೆ ಯಾವ ಸಂದರ್ಭದಲ್ಲಿ ಬರುತ್ತದೆ ಎನ್ನುವುದು ಯಾರಿಗೂ ಗೊತ್ತಿರುವುದಿಲ್ಲ. ಆದರೆ ಕೆಲವೊಂದು ಕನಸು  ನಮ್ಮ ಮದುವೆಯ ಕುರಿತು ಸಾಕಷ್ಟು ಮಾಹಿತಿಯನ್ನು ನೀಡುತ್ತದೆ. ಹಾಗಾದರೆ ಯಾವ ತರಹದ ಕನಸುಗಳು ಮದುವೆಯಾಗುವ ಮುನ್ಸೂಚನೆಯನ್ನು ನೀಡುತ್ತದೆ ಎಂದು ನೋಡೋಣ

  ಇದನ್ನೂ ಓದಿ: ಸತ್ತಂತೆ ಕನಸು ಬಿದ್ದರೆ ಏನು ಅರ್ಥ ಗೊತ್ತಾ..?

  1)ಕಿಕ್ಕಿರಿದ ಸ್ಥಳದಲ್ಲಿ ಹೋಗುತ್ತಿರುವಂತೆ ಕನಸು ಬಿದ್ದರೆ: ನಿಮ್ಮ ಕನಸಿನಲ್ಲಿ ನೀವೆಲ್ಲೋ ಅಲೆದಾಡುತ್ತಿರುವ ದೃಶ್ಯ ಕಂಡರೆ ಅಥವಾ ವಿಶೇಷವಾಗಿ ನೀವು ಯಾವುದಾದರೂ ಕಿಕ್ಕಿರಿದ ಸ್ಥಳದಲ್ಲಿ ಹೋಗುತ್ತಿರುವಂತೆ ಕನಸು ಬಿದ್ದರೆ ನೀವು ತುಂಬಾ ಅದೃಷ್ಟಶಾಲಿಯೆಂದು ತಿಳಿದುಕೊಳ್ಳಿ. ಯಾಕೆಂದರೆ ಈ ರೀತಿಯ ಕನಸುಗಳು ನೀವು ಶೀಘ್ರದಲ್ಲೇ ಉತ್ತಮ ಗುಣವುಳ್ಳ ಸಂಗಾತಿಯನ್ನು ಸೇರುವಿರಿ ಎಂಬೂದನ್ನು ತಿಳಿಸುತ್ತದೆ.

  2)ಗುಬ್ಬಿ ಮರಿ ಕಾಣಿಸಿದ್ರೆ: ಒಬ್ಬ ಹುಡುಗಿ ಅವಳ ಕನಸಲ್ಲಿ ಮುದ್ದಾದ ಗುಬ್ಬಿ ಮರಿಯನ್ನ ನೋಡಿದರೆ ಇಲ್ಲ ಗುಬ್ಬಿ ನೋಡಿದರೆ ಅವಳ ಪ್ರೇಮ ಸಂಬಂಧ ಮದುವೆ ರೂಪದಲ್ಲಿ ಬದಲಾಗಲು ತುಂಬಾ ಸಮಯ ಬೇಕಾಗಿಲ್ಲ ಅತಿ ಶೀಘ್ರದಲ್ಲಿ ಮದುವೆ ಆಗಲಿದೆ ಎಂದು ಸೂಚಿಸುತ್ತದೆ..

  3)ಶಿಲ್ಪಿ ಕಾಣಿಸಿದ್ರೆ: ಹುಡುಗಿ ಮೂರ್ತಿ ಮಾಡುವ ಶಿಲ್ಪಿಯನ್ನ ಕನಸಿನಲ್ಲಿ ನೋಡಿದರೆ ಅವಳು ಇಷ್ಟಪಡುವಂತಹ ಹುಡುಗ ಅವಳಿಗೆ ಸಿಗಲಿದ್ದಾನೆ ಎಂದು ಸೂಚಿಸುತ್ತದೆ ಹಾಗೆ ಅತಿ ಶೀಘ್ರದಲ್ಲಿ ಮದುವೆಯಾಗುತ್ತದೆ.

  4)ನಿಶ್ಚಿತಾರ್ಥದ ಕನಸು: ಹುಡುಗ ಕನಸಿನಲ್ಲಿ ಅವನದೇ ನಿಶ್ಚಿತಾರ್ಥವನ್ನು ನೋಡಿದರೆ ಮುಂದಿನ ದಿನಗಳಲ್ಲಿ ಅವನಿಗೆ ಇಷ್ಟಪಡುವಂತಹ ಹಾಗೆ ಹೆಚ್ಚು ಪ್ರೀತಿಸುವಂತಹ ಹುಡುಗಿ ಅವನ ಕೈ ಹಿಡಿಯಲಿದ್ದಾಳೆ ಎಂದು ಸೂಚಿಸುತ್ತದೆ

  5)ಜೇನುತುಪ್ಪ ಕಾಣಿಸಿದ್ರೆ: ಸ್ವಪ್ನಶಾಸ್ತ್ರದ ಪ್ರಕಾರ, ಕನಸಿನಲ್ಲಿ ಜೇನುತುಪ್ಪವನ್ನು ಕಾಣುವುದು ಜೀವನದ ಶುಭ ಸಂಕೇತವಾಗಿದೆ. ಆದರೆ ಇದಕ್ಕೂ ಮದುವೆಗೂ ಏನು ಸಂಬಂಧ..? ಶುಭ ಸಂಕೇತವೆಂದರೆ ಬೇರೆ ಶುಭ ಕಾರ್ಯಗಳೂ ಆಗಿರಬಹುದಲ್ಲವೇ ಎಂದು ನೀವು ಕೇಳಬಹುದು. ಹೌದು, ಇದು ಬೇರೆ ಶುಭ ಕಾರ್ಯವನ್ನೂ ಸೂಚಿಸಬಹುದು. ಆದರೆ ಕನಸಿನಲ್ಲಿ ಸ್ವತಃ ನೀವೇ ನಿಮ್ಮ ಕೈಯಿಂದ ಆ ಜೇನುತುಪ್ಪವನ್ನು ತಿನ್ನುತ್ತಿದ್ದರೆ ಮಾತ್ರ ಸದ್ಯದಲ್ಲೇ ನಿಮಗೆ ವಿವಾಹವಾಗುತ್ತದೆ ಎಂದರ್ಥ.

  6)ಚಿನ್ನದ ಆಭರಣ ಉಡುಗೊರೆ: ನಿಮ್ಮ ಕನಸಿನಲ್ಲಿ ನೀವು ಆಕಾಶದಲ್ಲಿ ವರ್ಣರಂಜಿತ ಕನಸನ್ನು ಕಾಣುವಂತ ದೃಶ್ಯ ಕಂಡರೆ ನೀವು ನಿಮ್ಮ ಇಷ್ಟದ ಸಂಗಾತಿಯನ್ನೇ ವಿವಾಹವಾಗುತ್ತೀರಿ. ಇದನ್ನು ಹೊರತುಪಡಿಸಿ ಇನ್ನು ನೀವು ಕನಸಿನಲ್ಲಿ ಬೇರೆಯವರಿಗೆ ಚಿನ್ನದ ಆಭರಣವನ್ನು ಉಡುಗೊರೆಯಾಗಿ ನೀಡುವಂತ ದೃಶ್ಯವನ್ನು ಕಂಡರೆ ನಿಮ್ಮ ಬಾಳ ಸಂಗಾತಿಯು ಅತ್ಯಂತ ಶ್ರೀಮಂತನಾಗಿರುತ್ತಾನೆ ಎಂದರ್ಥ.

  ಇದನ್ನೂ ಓದಿ: ಕನಸಿನಲ್ಲಿ ನಮ್ಮ ಪೂರ್ವಜರು ಕಾಣಿಸಿಕೊಂಡ್ರೆ ಶುಭವೋ..? ಅಶುಭವೋ...?

  7)ಮಳೆಬಿಲ್ಲು ಅಥವಾ ನವಿಲುಗರಿ: ಸ್ವಪ್ನಶಾಸ್ತ್ರದ ಪ್ರಕಾರ, ನಿದ್ರೆಯಲ್ಲಿ ನಿಮಗೆ ಯಾರಾದರೂ ನವಿಲು ಗರಿಯಿಂದ ಗಾಳಿ ಹಾಕುವಂತೆ ಕನಸು ಕಂಡರೆ ನೀವು ಸದ್ಯದಲ್ಲೇ ನಿಮ್ಮ ಮದುವೆಗೆ ಅಡ್ಡಿಯಾಗಿರುವ ಎಲ್ಲಾ ಅಡೆತಡೆಗಳಿಂದ ಮುಕ್ತರಾಗುವಿರಿ ಎಂದು ಅರ್ಥೈಸಿಕೊಳ್ಳಿ. ಇದಲ್ಲದೇ ಕನಸಿನಲ್ಲಿ ನೀವು ಮಳೆಬಿಲ್ಲನ್ನು ಕಂಡರೂ ಕೂಡ ಅದು ನಿಮಗೆ ನಿಮ್ಮ ಮದುವೆಯ ಮುನ್ಸೂಚನೆಯನ್ನು ನೀಡುತ್ತದೆ.
  Published by:ranjumbkgowda1 ranjumbkgowda1
  First published: