Shocking: ನಿದ್ದೆ ಇಲ್ಲದೇ ಒಬ್ಬ ಮನುಷ್ಯ ಎಷ್ಟು ದಿನ ಇರ್ತಾನೆ? ರಷ್ಯಾದಲ್ಲಿ ನಡೆದಿದ್ದ ಸಂಶೋಧನೆ ನೋಡಿ, ಬೆಚ್ಚಿ ಬೀಳ್ತೀರಾ

ಇಂದು ಹೇಳುತ್ತಿರುವುದನ್ನು ನೀವು ಓದಿದರೆ ಬೆಚ್ಚಿ ಬೀಳೋದು ಗ್ಯಾರಂಟಿ. ಒಬ್ಬ ಮನುಷ್ಯ ನಿದ್ದೆ ಇಲ್ಲದೇ ಎಷ್ಟು ದಿನ ಬದುಕಬಹುದು? ಈ ಬಗ್ಗೆ ರಷ್ಯಾದಲ್ಲಿ ಒಂದು ಅಧ್ಯಯನ ಮಾಡಲಾಗಿತ್ತು . ಅಲ್ಲಿ ಅಂದು ನಡೆದಿದ್ದೇನು? ನಿದ್ದೆ ಇಲ್ಲದೇ ಮನುಷ್ಯರು ಎಷ್ಟು ದಿನ ಇದ್ದರು?ಇದಕ್ಕೆಲ್ಲಾ ಉತ್ತರ ಇಲ್ಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಎಷ್ಟೇ ಆಯಾಸ ಆಗಿದ್ದರು ಸ್ವಲ್ಪ ಹೊತ್ತು ನಿದ್ದೆ (Sleep) ಮಾಡಿ ಎದ್ದರೆ ಸಾಕು ಎಲ್ಲ ಮಂಗಮಾಯಾವಗಿರುತ್ತೆ. ನಿದ್ದೆ ಮನುಷ್ಯನ ಆರೋಗ್ಯ (Human Health) ದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಿದ್ದೆ ಇಲ್ಲದೆ 2 ದಿನ ಇರಲು ಆಗುವುದಿಲ್ಲ. ಮನುಷ್ಯನ ಆರೋಗ್ಯ ಚೆನ್ನಾಗಿರಬಕು ಎಂದರೆ 8 ರಿಂದ 9 ಗಂಟೆ ನಿದ್ದೆ ಮಾಡಬೇಕು. ನಿದ್ದೆ ಇಲ್ಲದಿದ್ದರೆ ಮನುಷ್ಯನಿಗೆ ಕೋಪ (Angry) , ಉದ್ವೇಗ ಎಲ್ಲವೂ ಹೆಚ್ಚಾಗುತ್ತೆ. ಹೀಗಾಗಿನೇ ನಿದ್ದೆ ಮಾಡುವುದು ಎಲ್ಲ ರೋಗಗಳಿಗೂ ಮದ್ದು ಅಂತಾರೆ. ರಾತ್ರಿ ಸರಿಯಾಗಿ ನಿದ್ದೆಯಾದರೇ ದಿನಪೂರ್ತಿ ಆರಾಮಾಗಿ ಇರಬಹುದು. ತುಂಬಾ ಎನರ್ಜಿ (Energy) ಯಿಂದ ದಿನ ಕಳೆಯಬಹುದು. ಇಲ್ಲಿ ನಾವು ಇಂದು ಹೇಳುತ್ತಿರುವುದನ್ನು ನೀವು ಓದಿದರೆ ಬೆಚ್ಚಿ ಬೀಳೋದು ಗ್ಯಾರಂಟಿ. ಒಬ್ಬ ಮನುಷ್ಯ ನಿದ್ದೆ ಇಲ್ಲದೇ ಎಷ್ಟು ದಿನ ಬದುಕಬಹುದು? ಈ ಬಗ್ಗೆ ರಷ್ಯಾ (Russia) ದಲ್ಲಿ ಒಂದು ಅಧ್ಯಯನ ಮಾಡಲಾಗಿತ್ತು . ಅಲ್ಲಿ ಅಂದು ನಡೆದಿದ್ದೇನು? ನಿದ್ದೆ ಇಲ್ಲದೇ ಮನುಷ್ಯರು ಎಷ್ಟು ದಿನ ಇದ್ದರು?ಇದಕ್ಕೆಲ್ಲಾ ಉತ್ತರ ಇಲ್ಲಿದೆ.

ರಷ್ಯಾದಲ್ಲಿ ನಡೆದಿತ್ತು ಭಯಾನಕ  ಸಂಶೋಧನೆ!

ರಷ್ಯಾ ದೇಶದಲ್ಲಿ ಸೈನ್ಟಿಸ್ಟ್​ಗಳು ನಿದ್ದೆ ಬಗ್ಗೆ ಅಧ್ಯಯನ ಒಂದನ್ನು ಮಾಡಲು ಮುಂದಾಗಿದ್ದರು. ಯುದ್ಧದ ಸಮಯದಲ್ಲಿ ಯೋಧರು ನಿದ್ದೆ ಮಾಡದೇ ಹೋರಾಡಬೇಕೆಂಬ ಆಸೆ ಈ ಸಂಶೋಧಕರದ್ದು. ಮೊದಲು ಇದಕ್ಕಾಗಿ ಅವರು ಕೆಮಿಕಲ್ ಒಂದನ್ನು ಸಿದ್ದಪಡಿಸಿದ್ದರು. ಇದನ್ನು ನೇರವಾಗಿ ಯೋಧರ ಮೇಲೆ ಸಂಶೋಧನೆ ಮಾಡದೇ, ರಷ್ಯಾ ಜೈಲಿನಲ್ಲಿದ್ದ ಖೈದಿಗಳ ಮೇಲೆ ಪ್ರಯೋಗ ಮಾಡಲು ಮುಂದಾದರು. ಖೈದಿಗಳ ಬಳಿ ಹೋಗಿ ನೀವು ಸಂಶೋಧನೆಗೆ ಒಪ್ಪಿದರೆ ಜೈಲಿನಿಂದ ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಇದಕ್ಕೆ ಖೈದಿಗಳು ಕೂಡ ಒಪ್ಪಿಕೊಂಡರು.

ಕೆಮಿಕಲ್​ ಇದ್ದ ರೂಮ್​ ಸೇರಿದ್ದ 5 ಖೈದಿಗಳು!

ಖೈದಿಗಳ ಒಪ್ಪಿಗೆ ಮೇರೆಗೆ ಕೆಮಿಕಲ್​ ಇದ್ದ ರೂಮಿಗೆ ಅವರನ್ನು ಕಳುಹಿಸಿ ಹೊರಗಡೆಯಿಂದ ಲಾಕ್​ ಮಾಡಲಾಗಿತ್ತು. ಒಂದು ದಿನ ಎಂದಿನಂತೆ ನಿದ್ದೆ ಇಲ್ಲದೇ ಎಲ್ಲರು ಆರಾಮಾಗಿದ್ದರು. 30 ದಿನ ಕಳೆದರೆ  ಮನೆಗೆ ಹೋಗುವ ಆಸೆಯಲ್ಲಿ ಅವರು ಇದ್ದರು. 3 ದಿನಗಳ ಬಳಿಕ ಅವರಲ್ಲಿ ಕೆಲವೊಂದು ಬದಲಾವಣೆ ಆಗುತ್ತಾ ಹೋಗುತ್ತದೆ. ಐವರಲ್ಲಿ ಒಬ್ಬ ಮಾತ್ರ ಕಿರುಚಿ ಸಹಾಯಕ್ಕೆ ಅಂಗಲಾಚುತ್ತಾನೆ. ಆದರೆ, ಯಾರೂ ಕೂಡ ಬರುವುದಿಲ್ಲ. 3 ಗಂಟೆಗೂ ಹೆಚ್ಚು ಕಾಲ ಆ ಖೈದಿ ಕಿರುಚುತ್ತಲೇ ಇದ್ದನಂತೆ. ಉಳಿದವರು ಕಿರುಚುವುದು ಕೇಳದ ಹಾಗೇ ತಮ್ಮ ಪಾಡಿಗೆ ಇದ್ದರಂತೆ.
View this post on Instagram


A post shared by Agon (@projectnightfall)

ಇದನ್ನೂ ಓದಿ: ನೀವು ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಹಾಗಿದ್ರೆ ಈ ಆಹಾರಗಳನ್ನು ಒಮ್ಮೆ ಸೇವಿಸಿ ನೋಡಿ

ಕಿರುಚಿ ಕಿರುಚಿ ಪ್ರಾಣ ಬಿಟ್ಟಿದ್ದ ಒಬ್ಬ ಖೈದಿ

3 ಗಂಟೆಗೂ ಹೆಚ್ಚು ಕಾಲ ಕಿರುಚಿದ್ದ  ವ್ಯಕ್ತಿ ಗಂಟಲು ಹರಿದಿತ್ತು. ಆತ ಅಲ್ಲೇ ಪ್ರಾಣಬಿಟ್ಟಿದ್ದ. ಇನ್ನೂ ಉಳಿದವರು ನಿದ್ದೆ ಇಲ್ಲದೇ ಗೋಡೆಗಳಿಗೆ ಡಿಚ್ಚಿ ಹೊಡೆಯುತ್ತಾ ಕಾಲ ಕಳೆಯುತ್ತಿದ್ದರು. ಇದಾದ ಮತ್ತೆರೆಡು ದಿನ ಬಿಟ್ಟು ಸಂಶೋಧಕರು ಬಂದು  ಆ ರೂಮಿನ ಕಿಟಕಿಯಿಂದ ನೋಡಿದ್ದಾರೆ. ಯಾರೂ ಕಾಣಿಸಿಲ್ಲ. ಚೂರು ಶಬ್ದವಿಲ್ಲದ್ದನ್ನು ಕಂಡು ಗಾಬರಿಯಾಗಿದ್ದರು. ಕೂಡಲೇ ಬಾಗಿಲು ತೆರೆದು ನೋಡಿದ್ದಾರೆ. ಆಗ ಅವರಿಗೆ ದೊಡ್ಡ ಆಘಾತ ಎದುರಾಗಿತ್ತು. ಊಹೆಗೂ  ನಿಲುಕದ್ದು ನಡೆದುಹೋಗಿತ್ತು. ಅದೇನು ಅಂತೀರಾ ಈ ಕೆಳಗಿರುವ ಫೋಟೋ ನೋಡಿ.

ಸಂಶೋಧನೆಗೆ ಒಳಗಾದ ಖೈದಿ ಅಂತ ವೈರಲ್ ಆದ ಚಿತ್ರ


ಇದನ್ನೂ ಓದಿ:ಶೀತ ಕೆಮ್ಮಿಗೆ ರಾಮಬಾಣವಂತೆ ಈ ಸಾಂಬಾರ್ ಸೊಪ್ಪು

ಕೆಮಿಕಲ್​ ಸೈಡ್​ ಎಫೆಕ್ಟ್​ನಿಂದ ಪ್ರಾಣ ಬಿಟ್ಟ ಖೈದಿಗಳು!

ಬಾಗಿಲು ತೆರೆದು ನೋಡಿದಾಗ ಎಲ್ಲರೂ ತುಂಬಾ ವಿಚಿತ್ರವಾಗಿ ಆಡುತ್ತಿದ್ದರು. ಎಲ್ಲರೂ ಅವರ ದೇಹಗಳನ್ನೇ ತಿಂದಿದ್ದರು. ಮತ್ತೊಬ್ಬ ತನ್ನ ಕಾಲುಗಳನ್ನು ತಿಂದು, ತೇವಳಿಕೊಂಡೇ ಹೋಗುತ್ತಿದ್ದನಂತೆ. ಅವರೆಲ್ಲ ಮತ್ತೆ ಸಂಶೋಧಕರು ನೀಡಿದ್ದ ಕೆಮಿಕಲ್​ ನೀಡುವಂತೆ ಕಿರುಚಾಡಿದ್ದರಂತೆ. ಕೊನೆಗೆ ವೈದ್ಯರು ಅವರಿಗೆಲ್ಲ ಚಿಕಿತ್ಸೆ ನೀಡಿದ್ದರು. ಆದರೂ ಕೊನೆಯಲ್ಲಿ ಅವರನ್ನು ಉಳಿಸಿಕೊಳ್ಳಲಾಗಲಿಲ್ಲ. ಅವರ ಅತಿರೇಖದ ವರ್ತನೆ ಕಂಡು ಸಂಶೋಧಕರೆ ಗುಂಡಿಕ್ಕಿ ಕೊಂದರು. ಸಾಯುವಾಗಲು ಖೈದಗಳು ಇದೇನಾ ಬಿಡುಗಡೆ ಎಂದು ಜೋರಾಗಿ ಕೂಗುತ್ತಿದ್ದರಂತೆ.
Published by:Vasudeva M
First published: