Sleep: ನಾಚಿಕೆ ಪಡಬೇಡಿ! ರಾತ್ರಿ ನಿದ್ದೆ ಬರ್ತಿಲ್ಲ ಅಂದ್ರೆ ಈ ಮೂರು ಕೆಲಸ ಸರಿಯಾಗಿ ಮಾಡಿ, ಆಮೇಲೆ ನೋಡಿ

ನಿದ್ದೆ ಪ್ರತಿ ವ್ಯಕ್ತಿಗೂ ಅಗತ್ಯಗಳಲ್ಲಿ ಅಗತ್ಯ. ಊಟ ಸರಿಯಿಲ್ಲದಿದ್ದರೂ ಹೇಗೊ ಬದುಕಿ ಬಿಡಬಹುದು ಆದರೆ ನಿದ್ದೆ ಇಲ್ಲ ಎಂದರೆ ಹುಚ್ಚರಾಗುವುದು ಖಂಡಿತ. ಹಾಗಿದ್ರೆ ಕಳೆದ ರಾತ್ರಿ ನಿಮಗೆ ಸಾಕಷ್ಟು ನಿದ್ದೆ ಆಗಿಲ್ಲ ಎಂದಾಗ ನೀವು ಏನು ಮಾಡಬೇಕು? ಎಂಬುದರ ಕುರಿತು ನಾವು ಇಂದು ಈ ಲೇಖನದಲ್ಲಿ ಚರ್ಚೆ ಮಾಡೋಣ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಕಳೆದ ರಾತ್ರಿ ಸರಿಯಾಗಿ ನಿದ್ದೆ(Sleep) ಮಾಡಿಲ್ಲವೇ? ಯಾಕೆ? ಏನಾಯಿತು? ಎಂಬೆಲ್ಲ ಪ್ರಶ್ನೆಗಳನ್ನು ಪ್ರತಿಯೊಬ್ಬರೂ ಒಂದಲ್ಲ ಒಂದು ಸಲ ಎದುರಿಸಿಯೇ ಇರುತ್ತೇವೆ. ಹೌದು ಒಬ್ಬ ವ್ಯಕ್ತಿಯ ಕಣ್ಣು (Eyes) ನೋಡಿದರೆ ಸಾಕು ಅವನು ಸರಿಯಾಗಿ ನಿದ್ದೆ ಮಾಡಿದ್ದಾನೋ ಇಲ್ಲವೋ ಎಂಬುದು ಸುಲಭವಾಗಿ ಕಂಡು ಹಿಡಿಯಬಹುದು. ನಿದ್ದೆ ಪ್ರತಿ ವ್ಯಕ್ತಿಗೂ (Person) ಅಗತ್ಯಗಳಲ್ಲಿ ಅಗತ್ಯ. ಊಟ ಸರಿಯಿಲ್ಲದಿದ್ದರೂ ಹೇಗೊ ಬದುಕಿ ಬಿಡಬಹುದು ಆದರೆ ನಿದ್ದೆ ಇಲ್ಲ ಎಂದರೆ ಹುಚ್ಚರಾಗುವುದು ಖಂಡಿತ. ಹಾಗಿದ್ರೆ ಕಳೆದ ರಾತ್ರಿ (Night) ನಿಮಗೆ ಸಾಕಷ್ಟು ನಿದ್ದೆ ಆಗಿಲ್ಲ ಎಂದಾಗ ನೀವು ಏನು ಮಾಡಬೇಕು? ಎಂಬುದರ ಕುರಿತು ನಾವು ಇಂದು ಈ ಲೇಖನದಲ್ಲಿ ಚರ್ಚೆ ಮಾಡೋಣ.

ಇನ್ನೆನ್ನು ರಾತ್ರಿ ನಿದ್ದೆ ಸರಿಯಾಗಿ ಬರದಿದ್ದಾಗ ನಾವು ನಮ್ಮ ಮಲಗುವ ಕೋಣೆಯನ್ನು ಬದಲಿಸಬಹುದು, ಅಥವಾ ಊಟ ಮತ್ತು ತಿಂಡಿಯನ್ನು ಬದಲಿಸಿ ಮಲಗಿದರೂ ಸರಿಯಾಗಿ ನಿದ್ದೆ ಬರದಿದ್ದಾಗ ಏನು ಮಾಡಬೇಕೆಂದು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾನಿಲಯದ ಸ್ಲೀಪ್ ಮತ್ತು ಸಿರ್ಕಾಡಿಯನ್ ಆರೋಗ್ಯ ಕಾರ್ಯಕ್ರಮದ ನಿರ್ದೇಶಕರಾದ ಫಿಯೋನಾ ಬಾರ್ವಿಕ್ ಅವರು ರಾತ್ರಿ ಸರಿಯಾಗಿ ನಿದ್ದೆ ಬರದಿದ್ದಾಗ ಏನು ಮಾಡಬೇಕೆಂದು ಸ್ಪಷ್ಟವಾಗಿ ಇಲ್ಲಿ ತಿಳಿಸಿದ್ದಾರೆ.

ಕಳೆದ ರಾತ್ರಿ ನಿಮಗೆ ಸರಿಯಾಗಿ ನಿದ್ದೆ ಬಂದಿಲ್ಲವೆಂದ್ರೆ ಈ ಮೂರು ಕೆಲಸಗಳನ್ನು ನೀವು ತಪ್ಪದೇ ಮಾಡಲೇಬೇಕಾಗುತ್ತದೆ. ಹಾಗಿದ್ರೆ ಆ ಕೆಲಸಗಳು ಯಾವವು ಎಂಬುದನ್ನು ಇಲ್ಲಿ ತಿಳಿಯೋಣ.

ಆ ಮೂರು ಕೆಲಸಗಳು ಯಾವುವು?
1. ತಡವಾಗಿ ಮಲಗುವ ಅಭ್ಯಾಸಕ್ಕೆ ಗುಡ್‌ಬೈ ಹೇಳಿ
ಹೌದು ತಡವಾಗಿ ಮಲಗುವುದು ನಮ್ಮ ದೇಹಕ್ಕೆ ಯಾವಾಗಲೂ ಒಳ್ಳೆಯದು ಅಲ್ಲ. ತಡವಾಗಿ ಮಲಗುವುದರಿಂದ ಅನೇಕ ರೋಗಗಳಿಗೆ ನಾವು ಮುಂದೆ ಬಲಿಯಾಗುವ ಸಂಭವ ಹೆಚ್ಚು.

ಇದನ್ನೂ ಓದಿ: Weight Loss: ಸಕ್ಕರೆಯಿಂದ ಮಾಡಿದ ಪದಾರ್ಥ ಸೇವನೆ ಬಿಡಿ ಪರ್ಯಾಯ ಪದಾರ್ಥ ಸೇವಿಸಿ, ತೂಕ ಇಳಿಸಿ!

“ದೇಹದಲ್ಲಿ ನಿದ್ದೆಯನ್ನು ಉಂಟು ಮಾಡುವ ಅಂಶಗಳಿಂದ ದಿನದ 24 ಗಂಟೆಯು ದೇಹದ ಜೈವಿಕ ಅಂಶಗಳು ಏರಿಳಿತವಾಗುತ್ತಿರುತ್ತವೆ. ಇದು ನಮ್ಮ ಶರೀರಶಾಸ್ತ್ರ ಮತ್ತು ನಡವಳಿಕೆಯನ್ನು ನಿಯಂತ್ರಿಸುತ್ತದೆ. ಇದರ ಪರಿಣಾಮವಾಗಿ ನಾವು ನಿದ್ದೆ ಅಥವಾ ಎಚ್ಚರಿಕೆಯ ಅನುಭವವನ್ನು ಅನುಭವಿಸುತ್ತೆವೆ” ಎಂದು ಡಾ. ಬಾರ್ವಿಕ್ ಹೇಳುತ್ತಾರೆ.

2. ಸೂರ್ಯನ ಬೆಳಕಿನಲ್ಲಿ ವಾಕ್‌ ಮಾಡಿ
ನೀವು ಮುಂಜಾನೆ ಎದ್ದ ನಂತರ ಸಾಧ್ಯವಾದಷ್ಟು ಬೇಗ ಸೂರ್ಯನ ಬೆಳಕಿನಲ್ಲಿ ವಾಕ್‌ ಮಾಡುವುದು ಮರೆಯಬೇಡಿ. ಇದರಿಂದ ನಿಮ್ಮ ಮೆದುಳು ಚುರುಕುಗೊಂಡು, ರಾತ್ರಿಯ ಸಮಯಕ್ಕೆ ಉತ್ತಮ ನಿದ್ದೆ ನೀಡುವಲ್ಲಿ ಈ ವಾಕ್‌ ಬಹಳ ಪ್ರಯೋಜನಕಾರಿ ಆಗಿದೆ.

"ನಮ್ಮ ಮುಖ್ಯವಾದ ನಿದ್ದೆ-ಪ್ರಚೋದಕ ಹಾರ್ಮೋನ್ ಮೆಲಟೋನಿನ್ ನಮ್ಮ ದೇಹದ ವ್ಯವಸ್ಥೆಯನ್ನು ನಿಧಾನವಾಗಿ ತೊರೆಯುವುದರಿಂದ ಬೆಳಿಗ್ಗೆ ನಾವು ಹೆಚ್ಚಿನ ಆಕಳಿಕೆಗಳನ್ನು ಅನುಭವಿಸುತ್ತೇವೆ. ಹಗಲಿನ ಸೂರ್ಯನ ಬೆಳಕು ನಿದ್ದೆಯ ಹಾರ್ಮೊನ್‌ ಆದ ಮೆಲಟೋನಿನ್‌ ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದರಿಂದ ರಾತ್ರಿ ಉತ್ತಮ ನಿದ್ದೆ ಆಗುವುದರ ಜೊತೆ ಬೆಳಿಗ್ಗೆ ಬೇಗ ಎದ್ದೇಳುವ ಅಭ್ಯಾಸವು ರೂಢಿ ಆಗುತ್ತದೆ. ದೈಹಿಕ ಚಟುವಟಿಕೆಗಳು, ಒಂದು ಸಣ್ಣ ವಾಕ್‌ ನಿಮ್ಮನ್ನು ಮತ್ತಷ್ಟು ಉತ್ಸಾಹದ ವ್ಯಕ್ತಿಯನ್ನಾಗಿಸುತ್ತದೆ” ಎಂದು ಡಾ. ಬಾರ್ವಿಕ್‌ ಹೇಳುತ್ತಾರೆ.

3. ಮುಂದಿನ ರಾತ್ರಿ ಸ್ವಲ್ಪ ಬೇಗನೆ ಮಲಗಿ
ಈ ಹಿಂದಿನ ದಿನ ನಿದ್ದೆಯಿಲ್ಲದ ರಾತ್ರಿಯು ನಮ್ಮನ್ನು ತುಂಬಾ ಜಡ ವ್ಯಕ್ತಿಗಳಾನ್ನಾಗಿ ಮಾಡಿರುತ್ತದೆ. ಆದ್ದರಿಂದ ಹಿಂದಿನ ದಿನ ಸರಿಯಾಗಿ ನಿದ್ದೆ ಮಾಡಿಲ್ಲ ಎಂದರೆ ನೀವು ಈ ದಿನ ಸ್ವಲ್ಪ ಬೇಗನೆ ನಿದ್ದೆಗೆ ಜಾರುವ ಅಭ್ಯಾಸವನ್ನು ಮಾಡಿಕೊಳ್ಳಿ. ಇದರಿಂದ ನಮ್ಮ ದೇಹದ ಜೈವಿಕ ಕ್ರಿಯೆ ಸುಗಮವಾಗಿ ನಡೆಯುತ್ತದೆ. ಇದರಿಂದ ಯಾವುದೇ ಆರೋಗ್ಯ ದುಷ್ಟಪರಿಣಾಮಗಳು ಉಂಟಾಗುವುದಿಲ್ಲ.

ಇದನ್ನೂ ಓದಿ:  Thinking: ಯೋಚ್ನೆ ಮಾಡಿ ಮಾಡಿನೇ ಸುಸ್ತಾಗ್ತಿದೆಯಾ? ಇದರಿಂದ ಚೇತರಿಸಿಕೊಳ್ಳುವುದು ಹೇಗೆ?

ಇದರ ಕುರಿತು ಡಾ. ಬಾರ್ವಿಕ್‌ ಅವರು "ಕಳೆದ ರಾತ್ರಿ ನಿದ್ದೆ ಸರಿಯಾಗಿಲ್ಲವೆಂದರೆ ಮುಂದಿನ ರಾತ್ರಿ ಉತ್ತಮ ನಿದ್ದೆ ಮಾಡುವುದು ನಿಮ್ಮ ಆದ್ಯತೆ ಆಗಬೇಕು. ಆದ್ದರಿಂದ ಬೇಗ ಮಲಗುವುದು ಇದಕ್ಕೆ ಇರುವ ಏಕೈಕ ಪರಿಹಾರ ಅಗಿದೆ ಎಂದು ಹೇಳಿದರು.
Published by:Ashwini Prabhu
First published: