Weight Loss Drink: ತೂಕ ಇಳಿಸಲು ಪ್ರಯತ್ನಿಸುತ್ತಿದ್ದರೆ ಬೆಳಗ್ಗೆ ಚಹಾ ಬದಲು ಈ ಪಾನೀಯ ಸೇವಿಸಿ

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವ ಅಭ್ಯಾಸ ಬಿಡಬೇಕು ಎಂದು ಪ್ರಯತ್ನ ಮಾಡುವವರು ಕೆಲವೇ ದಿನಗಳಲ್ಲಿ ಮತ್ತೆ ಮೊದಲಿನ ಅಭ್ಯಾಸಕ್ಕೆ ಮರಳುತ್ತಾರೆ. ಅದಾಗ್ಯೂ ಚಹಾದ ಅಭ್ಯಾಸ ಬಿಟ್ಟು ಆರೋಗ್ಯಕರ ಮತ್ತು ತೂಕ ಇಳಿಕೆಯ ನೀರು ಕುಡಿಯುವುದು ಉತ್ತಮ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಕೆಲವರಿಗೆ ಬೆಳಗ್ಗೆ (Morning) ಎದ್ದ ತಕ್ಷಣ ಟೀ (Tea) ಕುಡಿಯುವ ಅಭ್ಯಾಸ (Drinking Habit) ಇರುತ್ತದೆ. ಬೆಳಗ್ಗೆ ಎದ್ದ ಕೂಡಲೇ ಟೀ ಕುಡಿಯುವ ಅಭ್ಯಾಸ ಭಾರತೀಯರಲ್ಲಿ (Indians) ಬಹುತೇಕರಲ್ಲಿ ನಾವು ಕಾಣುತ್ತೇವೆ. ಆದರೆ ಇಂದಿನ ದಿನಗಳಲ್ಲಿ ನೀವು ಹೆಚ್ಚುತ್ತಿರುವ ತೂಕ ಕಡಿಮೆ (Weight Loss) ಮಾಡಲು ಬಯಸಿದರೆ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸಕ್ಕರೆ ಹಾಕಿ ಮಾಡಿದ ಚಹಾ ಕುಡಿಯುವ ಅಭ್ಯಾಸವನ್ನ ತಪ್ಪಿಸಬೇಕು. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವುದು  ಇದು ನಿಮ್ಮ ತೂಕ ಹೆಚ್ಚಿಸುವ ಕೆಲಸ ಮಾಡುತ್ತದೆ. ಚಹಾ ಕುಡಿಯುವುದರ ಅನಾನುಕೂಲತೆಗಳನ್ನು ಗಮನದಲ್ಲಿ ಇಟ್ಟುಕೊಂಡು ಕೆಲವರು ತಮ್ಮ ಚಟ ಬಿಡಲು ಪ್ರಯತ್ನ ಪಡುತ್ತಾರೆ.

    ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವ ಅಭ್ಯಾಸ ಬಿಡಬೇಕು. ಎಂದು ಪ್ರಯತ್ನ ಮಾಡುವವರು  ಕೆಲವೇ ದಿನಗಳಲ್ಲಿ ಮತ್ತೆ ಮೊದಲಿನ ಅಭ್ಯಾಸಕ್ಕೆ ಮರಳುತ್ತಾರೆ. ಅದಾಗ್ಯೂ ಚಹಾದ ಅಭ್ಯಾಸ ಬಿಟ್ಟು ಆರೋಗ್ಯಕರ ಮತ್ತು ತೂಕ ಇಳಿಕೆಯ ನೀರು ಕುಡಿಯುವುದು ಉತ್ತಮ. ಬೇಸಿಗೆಯು ಅದಕ್ಕೆ ಉತ್ತಮ ಸಮಯ.

    ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವುದನ್ನು ಬಿಡಿ.. ಆರೋಗ್ಯಕರ ಡ್ರಿಂಕ್ ಸೇವಿಸಿ

    ನೀವು ಹೆಚ್ಚು ತೂಕ ಹೊಂದಿದ್ದರೆ, ಹೆಚ್ಚುತ್ತಿರುವ ತೂಕವನ್ನು ಕಡಿಮೆ ಮಾಡಲು ಯತ್ನಿಸುತ್ತಿದ್ದರೆ ಬೆಳಗ್ಗೆ ಚಹಾದ ಬದಲು ವೇಟ್ ಲಾಸ್ ಟ್ರಿಂಕ್ ಕುಡಿಯಿರಿ. ಇದು ನಿಮ್ಮ ತೂಕ ಇಳಿಸುವ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ ಮತ್ತು ನಿಮ್ಮ ಒಟ್ಟಾರೆ ಆರೋಗ್ಯವೂ ಉತ್ತಮವಾಗಿರುತ್ತದೆ.

    ಇದನ್ನೂ ಓದಿ: ಕೀಲು, ಸೊಂಟ ನೋವಿನ ಸಮಸ್ಯೆ ಕಾಡುತ್ತಿದೆಯೇ? ಹಾಗಿದ್ದರೆ ಈ ಪದಾರ್ಥಗಳನ್ನು ನಿಮ್ಮ ಡಯಟ್ ನಲ್ಲಿ ಸೇರಿಸಿ

    ಬ್ಲ್ಯಾಕ್ ಕಾಫಿ

    ನಿಮಗೆ ತುಂಬಾ ಟೀ ಕುಡಿಯಬೇಕು ಅನಿಸಿದರೆ ಬೆಳಗ್ಗೆ ಟೀ ಬದಲು ಕಾಫಿ ಕುಡಿಯಬಹುದು. ಕಪ್ಪು ಕಾಫಿ ಕುಡಿಯುವುದು ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕಾಫಿಯಲ್ಲಿ ಕೆಫೀನ್ ಇದ್ದು ಇದು ಶಕ್ತಿಯ ಸೇವನೆ ಕಡಿಮೆ ಮಾಡುತ್ತದೆ. ಮತ್ತು ಚಯಾಪಚಯ ಹೆಚ್ಚಿಸುತ್ತದೆ.

    ಗ್ರೀನ್ ಟೀ

    ತೂಕ ನಷ್ಟಕ್ಕೆ ಮತ್ತೊಂದು ಉತ್ತಮ ಪಾನೀಯವೆಂದರೆ ಗ್ರೀನ್ ಟೀ. ಇದರಲ್ಲಿ ಎಪಿಗಲ್ಲೊಕಾಟೆಚಿನ್ ಗ್ಯಾಲೇಟ್ ಎಂಬ ಉತ್ಕರ್ಷಣ ನಿರೋಧಕವಿದೆ. ಇದು ಕೊಬ್ಬನ್ನು ಸುಡುವಲ್ಲಿ ಸಹಾಯ ಮಾಡುತ್ತದೆ. ಪ್ರತಿನಿತ್ಯ ಗ್ರೀನ್ ಟೀ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ.

    ನೀವು ಚಹಾದ ಬದಲು ಪ್ರತಿದಿನ ಬೆಳಿಗ್ಗೆ ಹಸಿರು ಚಹಾ ಸೇವಿಸಿದರೆ ನಿಮ್ಮ ತೂಕವು ಸುಲಭವಾಗಿ ಕಡಿಮೆಯಾಗುತ್ತದೆ. ಗ್ರೀನ್ ಟೀ ಕುಡಿಯುವುದರಿಂದ ದೇಹದಲ್ಲಿ ಕೊಬ್ಬು ಸಂಗ್ರಹವಾಗಲ್ಲ.

    ಆಪಲ್ ಸೈಡರ್ ವಿನೆಗರ್

    ಆಪಲ್ ಸೈಡರ್ ವಿನೆಗರ್ ನಿಮ್ಮ ಚಯಾಪಚಯ ಸುಧಾರಿಸುತ್ತದೆ. ಇದು ಅಸಿಟಿಕ್ ಆಸಿಡ್ ಎಂಬ ಕೊಬ್ಬನ್ನು ಸುಡುವ ಸಂಯುಕ್ತ ಹೊಂದಿರುತ್ತದೆ. ಇದು ಇನ್ಸುಲಿನ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಒಂದು ಲೋಟ ನೀರಿನಲ್ಲಿ ಒಂದು ಚಮಚ ಆಪಲ್ ಸೈಡರ್ ಅನ್ನು ಕುಡಿಯುವುದರಿಂದ ನಿಮಗೆ ದೀರ್ಘಕಾಲ ಹಸಿವಾಗುವುದಿಲ್ಲ.

    ನಿಂಬೆ ಪಾನಕ

    ನಿಂಬೆ ನೀರು ತೂಕ ನಷ್ಟಕ್ಕೆ ಸುಲಭ ಮತ್ತು ಅತ್ಯಂತ ಪರಿಣಾಮಕಾರಿ ಪರಿಹಾರ. ಪ್ರತಿನಿತ್ಯ ನಿಂಬೆ ನೀರು ಕುಡಿಯುವುದರಿಂದ ಚಯಾಪಚಯ ಕ್ರಿಯೆ ಹೆಚ್ಚುತ್ತದೆ. ಈ ಕಾರಣದಿಂದಾಗಿ, ತೂಕವು ತ್ವರಿತವಾಗಿ ಕಡಿಮೆಯಾಗುತ್ತದೆ. ನಿಂಬೆ ಪಾನಕದಲ್ಲಿ ಕಡಿಮೆ ಕ್ಯಾಲೋರಿ ಮತ್ತು ವಿಟಮಿನ್ ಸಿ ಸಮೃದ್ಧವಾಗಿದೆ.

    ಇದನ್ನೂ ಓದಿ: ನೀವು ತೂಕ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ಹಗ್ಗದ ಜಂಪಿಂಗ್ ಪ್ರಯೋಜನಕಾರಿ   

    ತೆಂಗಿನ ನೀರು

    ತೆಂಗಿನ ನೀರು ತೂಕ ಕಳೆದುಕೊಳ್ಳಲು ಸಹಕಾರಿ. ಪೋಷಕಾಂಶಗಳಿಂದ ಕೂಡಿದೆ. ತೆಂಗಿನ ನೀರಿನಲ್ಲಿ ಕ್ಯಾಲೊರಿಗಳು ಅತ್ಯಲ್ಪ. ಜೀರ್ಣಕ್ರಿಯೆಯ ಜೊತೆಗೆ ಚಯಾಪಚಯವನ್ನು ಹೆಚ್ಚಿಸುತ್ತದೆ. ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.
    Published by:renukadariyannavar
    First published: