• Home
  • »
  • News
  • »
  • lifestyle
  • »
  • Weight Loss: ಬೇಗ ತೂಕ ಇಳಿಸಬೇಕು ಎಂದ್ರೆ ನಿಮ್ಮ ಡಯಟ್​ನಲ್ಲಿರಲಿ ಈ ಪದಾರ್ಥಗಳು

Weight Loss: ಬೇಗ ತೂಕ ಇಳಿಸಬೇಕು ಎಂದ್ರೆ ನಿಮ್ಮ ಡಯಟ್​ನಲ್ಲಿರಲಿ ಈ ಪದಾರ್ಥಗಳು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ದೀರ್ಘಕಾಲದ ಕೆಮ್ಮು ಅಸ್ತಮಾ ಮೂತ್ರಪಿಂಡ ಕಲ್ಲು ಮತ್ತು ಅನಿಯಮಿತ ಅವಧಿ ಸಮಸ್ಯೆ ಕಂಡು ಹಿಡಿಯಲು ಬೇಳೆ ಕಾಳು ಸೇವನೆ ತುಂಬಾ ಪ್ರಯೋಜನಕಾರಿ ಆಗಿದೆ. ಈ ಬೇಳೆ ಕಾಳು ಎಲ್ಲಾ ಪೋಷಕಾಂಶಗಳನ್ನು ಹೊಂದಿದೆ. ಇದು ತೂಕ ಕಡಿಮೆ ಮಾಡುತ್ತದೆ.

  • Share this:

    ಹೆಚ್ಚುತ್ತಿರುವ ತೂಕ ಇಳಿಸುವುದು (Weight Loss) ಹೇಗೆ ಎಂದು ನೀವು ಚಿಂತೆ ಮಾಡ್ತಿದ್ದೀರಾ? ಡೋಂಟ್ ವರಿ. ತೂಕ ನಷ್ಟಕ್ಕೆ ಹಲವು ವಿಧಾನಗಳು (Methods) ಲಭ್ಯ ಇವೆ. ತೂಕ ಇಳಿಸೋದು ಕಷ್ಟಕರವಲ್ಲ. ಆದರೆ ಸರಿಯಾದ ವಿಧಾನ ಆಯ್ಕೆ ಮಾಡಿಕೊಳ್ಳುವುದು ತುಂಬಾ ಮುಖ್ಯ. ಅನೇಕ ಆಹಾರಗಳು (Food) ತೂಕ ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಆದರೆ ಕೆಲವೊಮ್ಮೆ ಆಹಾರದ ಮೂಲಕ ತೂಕ ಇಳಿಕೆ ಪ್ರಕ್ರಿಯೆ ಮಾರ್ಗ ನಿಮಗೆ ಸರಿಯಾಗಿ ಕೆಲಸ (Work) ಮಾಡುವುದಿಲ್ಲ. ಅದಕ್ಕಾಗಿ ನೀವು ಬೇಳೆ ಕಾಳು ಸೇವನೆ ಪರೀಕ್ಷೆ ಮೂಲಕ ತೂಕ ಇಳಿಕೆಗೆ ಹೆಜ್ಜೆ ಇಡುವುದು ಮುಖ್ಯ. ಇದು ತೂಕ ನಷ್ಟ ತುಂಬಾ ಸುಲಭ ಆಗುವಂತೆ ನೋಡಿಕೊಳ್ಳುತ್ತದೆ.


    ದೀರ್ಘಕಾಲದ ಕೆಮ್ಮು, ಆಸ್ತಮಾ, ಮೂತ್ರಪಿಂಡ ಕಲ್ಲು ಮತ್ತು ಅನಿಯಮಿತ ಅವಧಿ ಸಮಸ್ಯೆ ಕಂಡು ಹಿಡಿಯಲು ಬೇಳೆ ಕಾಳು ಸೇವನೆ ತುಂಬಾ ಪ್ರಯೋಜನಕಾರಿ ಆಗಿದೆ. ಈ ಬೇಳೆ ಕಾಳು ಎಲ್ಲಾ ಪೋಷಕಾಂಶಗಳನ್ನು ಹೊಂದಿದೆ. ಇದು ತೂಕ ಕಡಿಮೆ ಮಾಡುತ್ತದೆ. ಈ ಬೇಳೆ ಕಾಳನ್ನು ಕುಲ್ತಿ ದಾಲ್ ಎಂದು ಕರೆಯುತ್ತಾರೆ.


    ಕುಲ್ತಿ ದಾಲ್ ತಿನ್ನುವುದು ಹೇಗೆ ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ನಾವು ಇಲ್ಲಿ ತಿಳಿಯೋಣ.


    ಇದನ್ನೂ ಓದಿ: ಅಜೀರ್ಣ ಸಮಸ್ಯೆಗೆ ಈ ಕಾಳು ಪರಿಹಾರ ಅನ್ನುತ್ತೆ ಆಯುರ್ವೇದ!


    ಕುಲ್ತಿ ದಾಲ್ ತೂಕ ಕಡಿಮೆ ಮಾಡಲು ಈ ಪೋಷಕಾಂಶ ಹೊಂದಿದೆ


    ಕುಲ್ತಿ ದಾಲ್ ಪ್ರೋಟೀನ್‌ನ ಅತ್ಯುತ್ತಮ ಮೂಲ ಆಗಿದೆ ಎಂದು ಹೇಳಲಾಗುತ್ತದೆ. ಪ್ರೋಟೀನ್ ನಿಮ್ಮ ಚಯಾಪಚಯ ವೇಗ ಆಗಿಸುತ್ತದೆ. ನಿಮ್ಮ ಹೊಟ್ಟೆಯನ್ನು ದೀರ್ಘಕಾಲದವರೆಗೆ ತುಂಬಿರುತ್ತದೆ. ಈ ಕಾರಣ ಕ್ಯಾಲೋರಿ ಸೇವನೆ ಕಡಿಮೆ ಆಗುತ್ತದೆ. ಕೇವಲ 100 ಗ್ರಾಂ ಕುಲ್ತಿ ದಾಲ್ ನಿಂದ 22 ಗ್ರಾಂ ಪ್ರೊಟೀನ್ ಸಿಗುತ್ತದೆ.


    ಕ್ಯಾಲೋರಿಗಳು ಕಡಿಮೆ ಇದೆ


    ಕುಲ್ತಿ ದಾಲ್ ಕಡಿಮೆ ಕ್ಯಾಲೋರಿ ಅಂಶಕ್ಕೆ ಹೆಸರುವಾಸಿ ಆಗಿದೆ. ಈ ಕಾರಣದಿಂದ ತೂಕ ನಷ್ಟದ ಆಹಾರದಲ್ಲಿ ಇದನ್ನು ಸುಲಭವಾಗಿ ಸೇರಿಸಲು ಸೂಚಿಸಲಾಗುತ್ತದೆ. ತೂಕ ನಷ್ಟಕ್ಕೆ ಕಡಿಮೆ ಕ್ಯಾಲೋರಿ ಆಹಾರ ಸೇವಿಸಬೇಕು. ಇದು ಆರೋಗ್ಯ ಸಮಸ್ಯೆಗಳನ್ನು ದೂರವಿಡುತ್ತದೆ. ಮತ್ತು ತೂಕ ಕಡಿಮೆ ಮಾಡಲು ಕಡಿಮೆ ಪ್ರಯತ್ನ ಮಾಡಬೇಕಾಗುತ್ತದೆ.


    ಕುಲ್ತಿ ದಾಲ್ ಫೈಬರ್ ನಲ್ಲಿ ಸಮೃದ್ಧವಾಗಿದೆ


    ಕುಲ್ತಿ ದಾಲ್ ಪ್ರೋಟೀನ್‌ ನಲ್ಲಿ ಸಮೃದ್ಧ ಆಗಿದೆ. ಮತ್ತು ಕಡಿಮೆ ಕ್ಯಾಲೋರಿ ಹೊಂದಿದೆ. ಇದು ನಿಮ್ಮ ಜೀರ್ಣಕ್ರಿಯೆಗೆ ತುಂಬಾ ಪ್ರಯೋಜನಕಾರಿ. ತೂಕ ಇಳಿಸಲು ಫೈಬರ್ ಸೇವನೆ ಬಹಳ ಮುಖ್ಯ.


    100 ಗ್ರಾಂ ಕುಲ್ತಿ ದಾಲ್ ನ್ನು ಸೇವಿಸುವುದು ಸುಮಾರು 8 ಗ್ರಾಂ ಫೈಬರ್ ಇರುವುದು ನೀವು ನೋಡಬಹುದು. ಹಾಗಾಗಿ ಇದನ್ನು ತೂಕ ನಷ್ಟ ಆಹಾರದಲ್ಲಿ ಸೇರಿಸಿ.


    ಕುಲ್ತಿ ದಾಲ್ ಚಯಾಪಚಯ ಹೆಚ್ಚಿಸುತ್ತದೆ


    ಹೆಚ್ಚು ಕ್ಯಾಲೋರಿ ವೇಗವಾಗಿ ಕಳೆದುಕೊಳ್ಳಲು ವೇಗದ ಚಯಾಪಚಯ ಕ್ರಿಯೆ ಅಗತ್ಯವಿದೆ. ಚಯಾಪಚಯ ಕ್ರಿಯೆಯು ದೇಹದಲ್ಲಿ ಕಾರ್ಬೋಹೈಡ್ರೇಟ್‌ಗಳು ಮತ್ತು ಕೊಬ್ಬನ್ನು ಸುಡುತ್ತದೆ. ಮತ್ತು ಅವುಗಳನ್ನು ಶಕ್ತಿಗಾಗಿ ಬಳಸುತ್ತದೆ. ಕುಲ್ತಿ ದಾಲ್ ತಿನ್ನುವ ಮೂಲಕ ಚಯಾಪಚಯ ವೇಗ ಆಗಿಸುತ್ತದೆ. ಇದು ತೂಕ ನಷ್ಟ ತ್ವರಿತವಾಗಲು ಸಹಕಾರಿ.


    ಕುಲ್ತಿ ದಾಲ್ ತೂಕ ಇಳಿಸುವ ಪಾಕ ವಿಧಾನ


    ಒಂದು ಕಪ್ ಕುಲ್ತಿ ಬೇಳೆಯನ್ನು ರಾತ್ರಿ ನೆನೆಸಿಡಿ. ಮರುದಿನ ನೆನಸಿದ ಬೇಳೆಯನ್ನು ಮೂರು ಕಪ್ ನೀರು ಹಾಕಿ ಬೇಯಿಸಿ. ಅದಕ್ಕೆ ಉಪ್ಪು ಮತ್ತು ಅರಿಶಿನ ಪುಡಿ ಹಾಕಿ ಬೇಯಿಸಿ. ನಂತರ ಬಾಣಲೆಯಲ್ಲಿ ತುಪ್ಪವನ್ನು ಬಿಸಿ ಮಾಡಿ ಮತ್ತು ಜೀರಿಗೆ ಹುರಿಯಿರಿ.


    ಇದನ್ನೂ ಓದಿ: ಹಣ್ಣುಗಳ ಸೇವನೆ ಎಷ್ಟು ಅನುಕೂಲಕರ? ಇವುಗಳ ಜೊತೆ ಬೇರೆ ಏನನ್ನು ತಿನ್ನಬೇಕು?


    ಈಗ ಇಂಗು ಹಾಕಿ ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕತ್ತರಿಸಿದ ಈರುಳ್ಳಿ, ಟೊಮೆಟೊ, ಕೆಂಪು ಮೆಣಸಿನ ಪುಡಿ, ಉಪ್ಪು ಮತ್ತು ಕೊತ್ತಂಬರಿ ಪುಡಿ ಸೇರಿಸಿ ಫ್ರೈ ಮಾಡಿ. ಮೂರು ನಿಮಿಷ ಬೇಯಿಸಿ. ಅದಕ್ಕೆ ಕುಲ್ತಿ ದಾಲ್ ಸೇರಿಸಿ 4 ನಿಮಿಷ ಬೇಯಿಸಿ. ಕೊತ್ತಂಬರಿ ಸೊಪ್ಪನ್ನು ಹಾಕಿ ತಿನ್ನಿ.

    Published by:renukadariyannavar
    First published: