HOME » NEWS » Lifestyle » IF YOU ARE TROUBLED BY THE PROBLEM OF FLATULENCE IN PERIODS THEN KNOW ITS CAUSES SYMPTOMS AND REMEDIES ZP

ಋತುಚಕ್ರದ ವೇಳೆ ಉಂಟಾಗುವ ಸಮಸ್ಯೆಗಳೇನು? ಅದಕ್ಕೆ ಕಾರಣ ಮತ್ತು ಪರಿಹಾರಗಳು ಇಲ್ಲಿವೆ

ಸಾಕಷ್ಟು ಪ್ರಮಾಣದಲ್ಲಿ ಮೆಗ್ನೀಸಿಯಮ್ ಸೇವಿಸುವುದರಿಂದ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ ಮತ್ತು ಪ್ರೀ ಮೆನ್ಸ್ಟ್ರುವಲ್ ಸಿಂಡ್ರೋಮ್ (ಪಿಎಂಎಸ್) ನ ಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬಾದಾಮಿ, ಕಡಲೆಕಾಯಿ, ಗೋಡಂಬಿ, ಓಟ್ ಮೀಲ್ ಮತ್ತು ಸೋಯಾ ಹಾಲು ಮೆಗ್ನೀಸಿಯಮ್ ಭರಿತ ಆಹಾರಗಳಾಗಿವೆ.

news18-kannada
Updated:May 28, 2020, 5:33 PM IST
ಋತುಚಕ್ರದ ವೇಳೆ ಉಂಟಾಗುವ ಸಮಸ್ಯೆಗಳೇನು? ಅದಕ್ಕೆ ಕಾರಣ ಮತ್ತು ಪರಿಹಾರಗಳು ಇಲ್ಲಿವೆ
periods
  • Share this:
ಪ್ರತಿ ಮಹಿಳೆಯ ಜೀವಿತಾವಧಿಯಲ್ಲಿ ಸರಾಸರಿ 450 ಬಾರಿ ಋತುಚಕ್ರವಾಗುತ್ತವೆ. ಇಂತಹ ಸಮಯದಲ್ಲಿ ಮಹಿಳೆಯರು ಪ್ರತಿ ತಿಂಗಳು ನೋವಿನ ಜೊತೆಗೆ ಗ್ಯಾಸ್ಟಿಕ್ ಸಮಸ್ಯೆ ಮತ್ತು ವಾಯು ಅಥವಾ ಹೊಟ್ಟೆ ಉಬ್ಬುವುದು ಮುಂತಾದ ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಇದರಿಂದ ದೇಹದಲ್ಲಿನ ಹಾರ್ಮೋನುಗಳ ಬದಲಾವಣೆ ಕಾಣಿಸಿಕೊಳ್ಳುತ್ತವೆ.

ಮುಟ್ಟಿನ ಸಮಯದಲ್ಲಿ ದೇಹದಲ್ಲಿ ಏನಾಗುತ್ತದೆ?

ಮೊದಲ ಹಂತದ ಪಿರಿಯಡ್ಸ್​ ಸಂದರ್ಭಗಳಲ್ಲಿ, ದೇಹದಲ್ಲಿ ಈಸ್ಟ್ರೊಜೆನ್ ಹಾರ್ಮೋನ್ ಮಟ್ಟವು ಹೆಚ್ಚಾಗುತ್ತದೆ. ಎರಡನೇ ಹಂತದಲ್ಲಿ, ಪ್ರೊಜೆಸ್ಟರಾನ್ ಹಾರ್ಮೋನ್ ಮಟ್ಟವು ಹೆಚ್ಚಾಗಲು ಪ್ರಾರಂಭಿಸುತ್ತದೆ, ಇದು ಗರ್ಭಾಶಯದ ಹೊರಪದರ (ಗೋಡೆ) ಸಿದ್ಧಪಡಿಸುತ್ತದೆ. ಗರ್ಭಾಶಯದಿಂದ ಹೊರಬರುವ ಮೊಟ್ಟೆ (ಅಂಡಾಣು) ಫಾರ್ಟ್​ಲೈಸ್ ಆಗದಿದ್ದಾಗ ಪಿರಿಯಡ್ಸ್ ಉಂಟಾಗುತ್ತದೆ. ಇದರ ನಂತರ, ದೇಹದಲ್ಲಿನ ಪ್ರೊಜೆಸ್ಟರಾನ್ ಮತ್ತು ಈಸ್ಟ್ರೊಜೆನ್ ಮಟ್ಟವು ಇದ್ದಕ್ಕಿದ್ದಂತೆ ಕಡಿಮೆಯಾಗುತ್ತದೆ.

ತಿಂಗಳ ಅವಧಿಯಲ್ಲಿ ಗ್ಯಾಸ್​ ಸಮಸ್ಯೆಗಳು, ಹೊಟ್ಟೆ ನೋವು ಮತ್ತು ವಾಯು ಋತುಸ್ರಾವದ ಲಕ್ಷಣಗಳ ಕೆಲವು ಸಾಮಾನ್ಯ ಚಿಹ್ನೆಗಳು. ಇದು ನಿಮ್ಮ ಅವಧಿ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ಸೂಚಿಸುತ್ತದೆ. 18 ರಿಂದ 55 ವರ್ಷದೊಳಗಿನ 156 ಆರೋಗ್ಯವಂತ ಮಹಿಳೆಯರ ಮೇಲೆ ನಡೆಸಿದ ಒಂದು ಸಣ್ಣ ಅಧ್ಯಯನದಲ್ಲಿ, 62% ಮಹಿಳೆಯರಿಗೆ ಮುಟ್ಟಿನ ಮೊದಲು ವಾಯು ಸಮಸ್ಯೆ ಇದೆ ಮತ್ತು 51% ಮಹಿಳೆಯರು ತಮ್ಮ ಅವಧಿಯಲ್ಲಿ ಉಬ್ಬುವುದು ಸಮಸ್ಯೆಗಳನ್ನು ಹೊಂದಿದ್ದರು.

ಪಿರಿಯಡ್ಸ್ ಸಮಯದಲ್ಲಿ ವಾಯು ಸಮಸ್ಯೆಯನ್ನು ತಪ್ಪಿಸುವುದು ಹೇಗೆ
ಆರೋಗ್ಯಕರ ಆಹಾರವನ್ನು ತೆಗೆದುಕೊಳ್ಳುವುದರಿಂದ ಋತುಸ್ರಾವದ ಅವಧಿಯಲ್ಲಿ ಗ್ಯಾಸ್ ಸಮಸ್ಯೆ ತಲೆದೂರದಂತೆ ನೋಡಿಕೊಳ್ಳಬಹುದು. ಇದಕ್ಕಾಗಿ ಕಡಿಮೆ ಉಪ್ಪು ಮತ್ತು ನಾರಿನಂಶವಿರುವ ಆಹಾರವನ್ನು ಸೇವಿಸಿ. ಏಕೆಂದರೆ ಇದು ನಿಮ್ಮ ಹೊಟ್ಟೆ ಮತ್ತು ಕರುಳಿನ ಚಲನೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದರೊಂದಿಗೆ ಸಾಕಷ್ಟು ನೀರನ್ನು ಕುಡಿಯುವ ಅಭ್ಯಾಸ ಬೆಳೆಸಿಕೊಳ್ಳಿ.

ಮೆಗ್ನೀಸಿಯಮ್ ಭರಿತ ಆಹಾರವನ್ನು ಸೇವಿಸಿ : ಸಾಕಷ್ಟು ಪ್ರಮಾಣದಲ್ಲಿ ಮೆಗ್ನೀಸಿಯಮ್ ಸೇವಿಸುವುದರಿಂದ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ ಮತ್ತು ಪ್ರೀ ಮೆನ್ಸ್ಟ್ರುವಲ್ ಸಿಂಡ್ರೋಮ್ (ಪಿಎಂಎಸ್) ನ ಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬಾದಾಮಿ, ಕಡಲೆಕಾಯಿ, ಗೋಡಂಬಿ, ಓಟ್ ಮೀಲ್ ಮತ್ತು ಸೋಯಾ ಹಾಲು ಮೆಗ್ನೀಸಿಯಮ್ ಭರಿತ ಆಹಾರಗಳಾಗಿವೆ.ಸಾಕಷ್ಟು ಪೊಟ್ಯಾಸಿಯಮ್ ಆಹಾರ ತಿನ್ನಿರಿ: ಪೊಟ್ಯಾಸಿಯಮ್ ರಕ್ತದಲ್ಲಿನ ಸೋಡಿಯಂ ಪ್ರಮಾಣವನ್ನು ಸಮತೋಲನಗೊಳಿಸುತ್ತದೆ. ಹಾಗೆಯೇ ಗ್ಯಾಸ್​ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಪಾಲಕ, ಬಾಳೆಹಣ್ಣು ಮತ್ತು ಆವಕಾಡೊವನ್ನು ಸೇವಿಸಿ, ಇದರಲ್ಲಿ ಸಾಕಷ್ಟು ಪೊಟ್ಯಾಸಿಯಮ್ ಇರುತ್ತದೆ.

ವ್ಯಾಯಾಮ: ಸ್ವಲ್ಪ ವ್ಯಾಯಾಮ ಮಾಡುವುದರಿಂದ ಒತ್ತಡ ಕಡಿಮೆಯಾಗುತ್ತದೆ. ಹಾಗೆಯೇ ಇದು ಸೆಳೆತದಂತಹ ಪಿಎಂಎಸ್ ರೋಗಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನೀವು ಬಯಸಿದರೆ, ನೀವು ಪಿರಿಯಡ್ಸ್ ಸಂದರ್ಭದಲ್ಲಿ ಯೋಗ, ಈಜು ಇತ್ಯಾದಿಗಳನ್ನು ಮಾಡಬಹುದು.

ಮನೆಮದ್ದುಗಳು: ನೀವು ಬಯಸಿದರೆ, ಋತುಸ್ರಾವದ ಅವಧಿಯಲ್ಲಿ ವಾಯು ಸಮಸ್ಯೆಯನ್ನು ತಪ್ಪಿಸಲು ಕೆಲ ಮನೆಮದ್ದುಗಳನ್ನು ಸಹ ಪ್ರಯತ್ನಿಸಬಹುದು. ಇದಕ್ಕಾಗಿ ನೀವು ಬಿಸಿ ನೀರಿನಲ್ಲಿ ಒಂದು ಟೀಸ್ಪೂನ್ ಕಪ್ಪು ಜೀರಿಗೆ (ಶಾಹಿ ಜೀರಿಗೆ)ಯನ್ನು ಹಾಕಿ ಕುಡಿದರೆ ಸಾಕು. ಇದರಿಂದ ಕೂಡ ಋತುಸ್ರಾವದ ವೇಳೆ ಗ್ಯಾಸ್ ಸಮಸ್ಯೆಯನ್ನು ತಡೆಯಬಹುದು.
First published: May 28, 2020, 5:33 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories