Summer Places: ಬಿಸಿಲಿಗೆ ಬೇಸತ್ತಿದ್ದರೆ ದೇಶದ ಈ ಸ್ಥಳಗಳಿಗೆ ಹೋಗಿ ಚಿಲ್ ಮಾಡಿ ಬನ್ನಿ

ದೆಹಲಿ-ಎನ್‌ಸಿಆರ್‌ನಲ್ಲಿ ತಾಪಮಾನವು ಈಗಾಗಲೇ 44 ಡಿಗ್ರಿ ಸೆಲ್ಸಿಯಸ್ ಅನ್ನು ದಾಟಿದೆ. ಬೇಸಿಗೆಯ ಬೇಗೆಯಿಂದ ಪಾರಾಗಲು ಮತ್ತು ವಿಶ್ರಾಂತಿ ಪಡೆಯಲು ನೀವು ಬಯಸಿದರೆ ಗಿರಿಧಾಮಗಳತ್ತ ಸಾಗಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಶಿಮ್ಲಾ (Shimla), ಮನಾಲಿ (Manali) ಮತ್ತು ಧರ್ಮಶಾಲಾ (Dharma Shala) ಗಿರಿಧಾಮಗಳು ಯಾವಾಗಲೂ ದೆಹಲಿ (Delhi) ಎನ್‌ಸಿಆರ್‌ನಲ್ಲಿ (NCR) ವಾಸಿಸುವ ಜನರಿಗೆ (People) ಬೇಸಿಗೆಗೆ ಹೋಗಲು ಒಳ್ಳೆಯ ಟೂರಿಸ್ಟ್ (Tourist) ಸ್ಥಳಗಳಾಗಿವೆ. ಜನರು ವಿಶ್ರಾಂತಿಗಾಗಿ ತಿರುಗಾಡಲು ಹೋಗಲು ಪ್ಲಾನ್ ಮಾಡಿದರೆ ಮೊದಲು ಇವೇ ಸ್ಥಳಗಳ ಬಗ್ಗೆ ಯೋಚನೆ ತಲೆಗೆ ಬರುತ್ತದೆ. ಬಿಸಿಲು ಹೆಚ್ಚಾಗುತ್ತಿದ್ದಂತೆ ಈ ಸ್ಥಳಗಳಲ್ಲಿ ಜನಸಂದಣಿ ಹೆಚ್ಚು ಸೇರುತ್ತ ಹೋಗುತ್ತದೆ. ಸೌಂದರ್ಯ, ಪ್ರಕೃತಿಯ ವಿಹಂಗಮ ನೋಟ ಹೊಂದಿರುವ ಮತ್ತು ಜನಸಂದಣಿಯ ದೃಷ್ಟಿಯಿಂದ ಪ್ರಸಿದ್ಧವಾದ ಹಿಲ್‌ಸ್ಟೇಷನ್‌ಗಿಂತ ಕಡಿಮೆ ಏನೂ ಇಲ್ಲದ ಎಂಟು ಗಿರಿಧಾಮಗಳ ಬಗ್ಗೆ ನಾವು ಇಂದು ಇಲ್ಲಿ ನೋಡೋಣ.

    ದೆಹಲಿ-ಎನ್‌ಸಿಆರ್‌ನಲ್ಲಿ ಹೆಚ್ಚಿದ ತಾಪಮಾನ

    ದೆಹಲಿ-ಎನ್‌ಸಿಆರ್‌ನಲ್ಲಿ ತಾಪಮಾನವು ಈಗಾಗಲೇ 44 ಡಿಗ್ರಿ ಸೆಲ್ಸಿಯಸ್ ಅನ್ನು ದಾಟಿದೆ. ಬೇಸಿಗೆಯ ಬೇಗೆಯಿಂದ ಪಾರಾಗಲು ಮತ್ತು ವಿಶ್ರಾಂತಿ ಪಡೆಯಲು ನೀವು ಬಯಸಿದರೆ ಗಿರಿಧಾಮಗಳತ್ತ ಸಾಗಬಹುದು. ಜನರು ಈಗಾಗಲೇ ಪ್ರಸಿದ್ಧ ಗಿರಿಧಾಮದತ್ತ ಹೋಗುತ್ತಿದ್ದಾರೆ.

    ದೆಹಲಿ-ಎನ್‌ಸಿಆರ್‌ನಲ್ಲಿ ವಾಸಿಸುವವರಿಗೆ ಶಿಮ್ಲಾ, ಮನಾಲಿ ಮತ್ತು ಧರ್ಮಶಾಲಾದಂತಹ ಗಿರಿಧಾಮಗಳು ಮಾತ್ರ ಉಳಿದಿವೆಯಂತೆ. ಬಿಸಿಲು ಹೆಚ್ಚಾದ ತಕ್ಷಣ ಈ ಸ್ಥಳಗಳಲ್ಲಿ ಜನಸಂದಣಿ ಸೇರುವುದು ಇದೇ ಕಾರಣಕ್ಕೆ.

    ಇದನ್ನೂ ಓದಿ: ಏನು ಮಾಡಿದರೂ ಹೊಟ್ಟೆ ಭಾಗದ ಬೊಜ್ಜು ಕರಗುತ್ತಿಲ್ಲವೇ? ಈ ಸಿಂಪಲ್ ಟಿಪ್ಸ್ ಒಮ್ಮೆ ಟ್ರೈ ಮಾಡಿ

    ಸೌಂದರ್ಯದ ದೃಷ್ಟಿಯಿಂದಲೂ ಪ್ರಸಿದ್ಧ ಗಿರಿಧಾಮಕ್ಕಿಂತ ಕಡಿಮೆಯಿಲ್ಲದ, ಇಲ್ಲಿರುವ ಜನಸಂದಣಿಯಿಲ್ಲದ ಅಂತಹ 8 ಗಿರಿಧಾಮಗಳ ಬಗ್ಗೆ ಇಂದು ನಿಮಗೆ ಹೇಳೋಣ.

    ಉತ್ತರಾಖಂಡದ ಔಲಿ

    ಶಿಮ್ಲಾ ಬದಲಿಗೆ ನೀವು ಉತ್ತರಾಖಂಡದಲ್ಲಿರುವ ಔಲಿಯ ಕಡೆಗೆ ಹೋಗುವುದು ಉತ್ತಮ. ದೆಹಲಿ-ಎನ್‌ಸಿಆರ್‌ನಲ್ಲಿ ಬಿಸಿಯ ತಾಪಮಾನ ಹೆಚ್ಚಾದ ಕೂಡಲೇ ಜನರು ಮೊದಲು ಶಿಮ್ಲಾ ಕಡೆಗೆಹೆಜ್ಜೆಯಿಡುತ್ತಾರೆ. ಈ ಕಾರಣಕ್ಕಾಗಿಯೇ ಇಲ್ಲಿ ಬೇಸಿಗೆಯಲ್ಲಿ ದೆಹಲಿ-ಮುಂಬೈಗಳಂತೆ ಜನಜಂಗುಳಿ ಇರುತ್ತದೆ.

    ಹಿಮಾಚಲ ಪ್ರದೇಶದ ಕಸೌಲಿ ಅಥವಾ ಚೈಲ್‌

    ಅಲ್ಲಿಂದ ನೀವು ಭಾರತದ ಎರಡನೇ ಅತಿ ಎತ್ತರದ ಶಿಖರ ನಂದಾದೇವಿಯ ನೋಟ ನೋಡಲು ಸಾಧ್ಯ ಆಗುತ್ತದೆ. ನೀವು ಬಯಸಿದರೆ ಹಿಮಾಚಲ ಪ್ರದೇಶದ ಕಸೌಲಿ ಅಥವಾ ಚೈಲ್‌ಗೆ ಹೋಗಬಹುದು. ಅಲ್ಲಿ ನೀವು ಶಿಮ್ಲಾಕ್ಕಿಂತ ಕಡಿಮೆ ಜನಸಂದಣಿ ಇರುತ್ತದೆ.

    ಮಸ್ಸೂರಿ

    ಬೇಸಿಗೆ ರಜಾದಿನಗಳಲ್ಲಿ, ಜನರು ಮಾಲ್ ರೋಡ್‌ನಿಂದ ಕೆಂಪ್ಟಿ ಫಾಲ್ಸ್‌ವರೆಗೆ ಮಸ್ಸೂರಿಯಲ್ಲಿ ಸೇರುತ್ತಾರೆ. ಹೋಟೆಲ್‌ಗಳಲ್ಲಿ ಕೊಠಡಿಗಳು ಸಿಗುತ್ತಿಲ್ಲ. ಇದು ಪ್ರವಾಸಿಗರಿಗೆ ಉತ್ತಮ ಸ್ಥಳವಾಗಿದೆ. ಮಸ್ಸೂರಿಯಿಂದ ಸ್ವಲ್ಪ ದೂರದಲ್ಲಿರುವ ಧನೌಲ್ಟಿ ಅಥವಾ ಕನಾಟಾಲ್‌ಗೂ ತೆರಳಬಹುದು. ಇಲ್ಲಿ ಜನಸಂದಣಿ ಕಡಿಮೆ.

    ಹಿಮಾಚಲ ಪ್ರದೇಶದ ಸ್ಪಿತಿ ಕಣಿವೆ

    ಲೇಹ್ ಬದಲಿಗೆ ಸ್ಪಿತಿ ಕಣಿವೆಗೆ ಹೋದರೆ ಉತ್ತಮ. ಹಿಮಾಚಲ ಪ್ರದೇಶದಲ್ಲಿರುವ ಸ್ಪಿತಿ ಕಣಿವೆಯನ್ನು ಲಿಟಲ್ ಟಿಬೆಟ್ ಎಂದು ಕರೆಯುತ್ತಾರೆ. ಪರ್ವತಗಳು ಮತ್ತು ಹಿಮನದಿಗಳಿಂದ ಸುತ್ತುವರೆದಿರುವ ಈ ಪ್ರದೇಶ ಪ್ರವಾಸಿಗರನ್ನು ಸ್ವಾಗತಿಸುತ್ತದೆ. ಇಲ್ಲಿ ಅನೇಕ ಮಠಗಳು ಮತ್ತು ಸಣ್ಣ ಹಳ್ಳಿಗಳಿವೆ.

    ಹಿಮಾಚಲ ಪ್ರದೇಶದ ಕುಫ್ರಿ

    ಹಿಮಾಚಲ ಪ್ರದೇಶದ ಕುಫ್ರಿ ಕೂಡ ಪ್ರವಾಸಿಗರಲ್ಲಿ ಬಹಳ ಪ್ರಸಿದ್ಧವಾಗಿದೆ. ಇಲ್ಲಿ ಸ್ವಲ್ಪ ಹೆಚ್ಚು ಜನ ಬಂದರೂ ಕೊಠಡಿ ಸಿಗುವುದು ಕಷ್ಟ. ಬದಲಿಗೆ ನೀವು ಮಶೋಬ್ರಾ ಮತ್ತು ನಹಾನ್‌ನಂತಹ ಸ್ಥಳಗಳಿಗೆ ಹೋಗಬಹುದು. ಇಲ್ಲಿನ ಹವಾಮಾನವು ಸಾಕಷ್ಟು ತಂಪಾಗಿರುತ್ತದೆ ಮತ್ತು ರಜಾದಿನ ಕಳೆಯಲು ಇದು ಸೂಕ್ತ ಸ್ಥಳ.

    ನೈನಿತಾಲ್‌ಗೆ ಭೇಟಿ ನೀಡಿ

    ನೈನಿತಾಲ್‌ಗೆ ಭೇಟಿ ನೀಡಿ. ದೆಹಲಿ-ಎನ್‌ಸಿಆರ್‌ನಲ್ಲಿ ವಾಸಿಸುವ ಜನರಿಗೆ ಅತ್ಯಂತ ಸಾಮಾನ್ಯವಾದ ಪ್ರವಾಸಿ ತಾಣ ಇದಾಗಿದೆ. ನೈನಿತಾಲ್‌ನಿಂದ ದೂರದಲ್ಲಿರುವ ರಾಣಿಖೇತ್, ಭೀಮತಾಲ್ ಅಥವಾ ಅಲ್ಮೋರಾದಂತಹ ಸ್ಥಳಕ್ಕೆ ಹೋಗಬಹುದು.

    ಪಾಲಂಪುರದ ಖಜ್ಜಿಯಾರ್ ಅಥವಾ ಪಾರ್ವತಿ ಕಣಿವೆ

    ವಾರಾಂತ್ಯದಲ್ಲಿ ಮೆಕ್ಲಿಯೋಡ್‌ಗಂಜ್, ಧರ್ಮಶಾಲಾ ಅಥವಾ ಟ್ರಯಂಡ್‌ನಂತಹ ಸ್ಥಳಗಳಿಗೆ ಭೇಟಿ ನೀಡಬಹುದು. ವಾರಾಂತ್ಯದಲ್ಲಿ ಇಲ್ಲಿ ಜನಸಂದಣಿ ಹೆಚ್ಚು. ಹಾಗಾಗಿ ನೀವು ಪಾಲಂಪುರಕ್ಕೆ ಹೋಗಬಹುದು. ಇದರ ಜೊತೆಗೆ ಖಜ್ಜಿಯಾರ್ ಅಥವಾ ಪಾರ್ವತಿ ಕಣಿವೆಗೆ ಹೋಗಬಹುದು.

    ಚಂಬಾ ಪ್ರದೇಶ

    ಡಾಲ್ಹೌಸಿಯ ದೆಹಲಿ-ಎನ್‌ಸಿಆರ್‌ನ ಅತ್ಯಂತ ಪ್ರಸಿದ್ಧ ಪ್ರವಾಸಿ ತಾಣ ಆಗಿದೆ. ಬೇಸಿಗೆಯಲ್ಲಿ ಸಾರ್ವಕಾಲಿಕ ಜನಸಂದಣಿ ಇರುತ್ತದೆ. ಇದಕ್ಕಿಂತ ಒಂದು ಗಂಟೆ ನಡೆದರೆ ಚಂಬಾ ಪ್ರದೇಶ ಸಿಗುತ್ತದೆ. ಸ್ಥಳ ತುಂಬಾ ಸುಂದರವಾಗಿದೆ.

    ಇದನ್ನೂ ಓದಿ: ಕಲ್ಲಂಗಡಿ ಬೀಜ ಎಸೆಯೋ ಬದಲು ಹೀಗೆ ತಿನ್ನಿ, ಆರೋಗ್ಯ ಲಾಭ ಬಹಳಷ್ಟಿದೆ

    ಕಸೋಲ್ ಬಳಿಯ ಚಲಾಲ್ ಹಳ್ಳಿ

    ನೀವು ಕಸೋಲ್ ಬಳಿಯ ಚಲಾಲ್ ಎಂಬ ಸಣ್ಣ ಹಳ್ಳಿಗೆ ಹೋಗಬಹುದು. ಈ ಗ್ರಾಮವು ಸುಂದರ ಮಾತ್ರವಲ್ಲದೆ ಬಜೆಟ್ ಸ್ನೇಹಿ ಪ್ರದೇಶ ಆಗಿದೆ. ಇಲ್ಲಿಂದ ಸುಮಾರು 18 ಕಿ.ಮೀ ದೂರದಲ್ಲಿರುವ ಮಲಾನಾಕ್ಕೂ ಹೋಗಿ ಬರಬಹುದು.
    Published by:renukadariyannavar
    First published: