Health Tips: ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದೀರಾ..? ಹಾಗಾದ್ರೆ ಈ ವ್ಯಾಯಾಮ ಮಾಡಿ

ಅಧಿಕ ರಕ್ತದೊತ್ತಡವು ಸ್ವತಃ ಮಾರಣಾಂತಿಕವಲ್ಲದಿದ್ದರೂ, ಇದು ಕಾಲಾಂತರದಲ್ಲಿ ಪಾರ್ಶ್ವವಾಯುವಿಗೆ ಕಾರಣವಾಗಬಹುದು, ಅಲ್ಲದೆ ಇದು ಹೃದಯ ಕಾಯಿಲೆಗೆ ಕಾರಣವಾಗಬಹುದು. ಹೀಗಾಗಿ ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳು ಈ ವ್ಯಾಯಾಮ ಮಾಡಿದ್ರೆ ಸಾಕು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಈ ಅಧಿಕ ರಕ್ತದೊತ್ತಡವು ನಮಗೆ ಗೊತ್ತಿಲ್ಲದಂತೆಯೇ ನಮ್ಮ ದೇಹದ ಆರೋಗ್ಯದ ಮೇಲೆ ಭಾರಿ ಪರಿಣಾಮ ಬೀರುತ್ತದೆ. ಹಾಗಂತ ಇದು ನಮ್ಮ ನಿಯಂತ್ರಣಕ್ಕೆ ಸಿಗುವುದಿಲ್ಲ ಎಂದು ಹೇಳುವುದು ತಪ್ಪಾಗುತ್ತದೆ. ನಾವು ನಮ್ಮ ರಕ್ತದೊತ್ತಡವನ್ನು ಆಗಾಗ್ಗೆ ಪರೀಕ್ಷಿಸಿಕೊಳ್ಳುತ್ತಾ, ಪ್ರತಿದಿನ ವ್ಯಾಯಾಮ ಮಾಡುತ್ತಾ, ನಮ್ಮ ಜೀವನಶೈಲಿಯಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿಕೊಂಡರೆ ನಮಗಿರುವ ಅಧಿಕ ರಕ್ತದೊತ್ತಡದ ಮೇಲೆ ನಾವು ನಿಯಂತ್ರಣ ಸಾಧಿಸಬಹುದು. ಅಧಿಕ ರಕ್ತದೊತ್ತಡವು ಆರಂಭದಲ್ಲಿ ಹೆಚ್ಚಿನ ರೋಗಲಕ್ಷಣಗಳನ್ನು ತೋರಿಸದೆ ಇದ್ದರೂ, ಅಪಧಮನಿಯ ವಿರುದ್ಧ ಹೆಚ್ಚುವರಿ ಒತ್ತಡವನ್ನು ನಾವು ಗಮನಿಸದೆ ಬಿಟ್ಟರೆ, ಇದು ಮುಂದೆ ಹೃದ್ರೋಗಕ್ಕೆ ಕಾರಣವಾಗಬಹುದು.

ಅಧಿಕ ರಕ್ತದೊತ್ತಡವು ಸ್ವತಃ ಮಾರಣಾಂತಿಕವಲ್ಲದಿದ್ದರೂ, ಇದು ಕಾಲಾಂತರದಲ್ಲಿ ಪಾರ್ಶ್ವವಾಯುವಿಗೆ ಕಾರಣವಾಗಬಹುದು, ಅಲ್ಲದೆ ಇದು ಹೃದಯ ಕಾಯಿಲೆಗೆ ಕಾರಣವಾಗಬಹುದು.

ಸಾಂದರ್ಭಿಕ ಚಿತ್ರ


ನಿಮಗಿರುವ ಅಧಿಕ ರಕ್ತದೊತ್ತಡವನ್ನು ಹೇಗೆ ಕಡಿಮೆ ಮಾಡಿಕೊಳ್ಳುವುದು?

ನಿಮ್ಮ ರಕ್ತದೊತ್ತಡವು 140/90 ರಷ್ಟಿದ್ದರೆ, ಅದನ್ನು ಅಧಿಕ ರಕ್ತದೊತ್ತಡ ಎಂದು ಪರಿಗಣಿಸಲಾಗುತ್ತದೆ ಮತ್ತು ಇದು 180/120 ಅನ್ನು ತಲುಪಿದರೆ ಅಥವಾ ಮೀರಿದರೆ, ಇದನ್ನು ತೀವ್ರ ಅಧಿಕ ರಕ್ತದೊತ್ತಡ ಎಂದು ಕರೆಯಲಾಗುತ್ತದೆ. ಅಧಿಕ ರಕ್ತದೊತ್ತಡ ಅಪಾಯ ಅಥವಾ ನಿರ್ವಹಣೆಯು ಮುಖ್ಯವಾಗಿ ಜೀವನಶೈಲಿ, ಆಹಾರ ಮತ್ತು ತಾಲೀಮು ಮಟ್ಟಗಳನ್ನು ಅವಲಂಬಿಸಿರುತ್ತದೆ.

ಈ ಬದಲಾವಣೆ ಒಂದೆರಡು ದಿನಗಳಲ್ಲಿ ಫಲಿತಾಂಶ ನೀಡುವುದಿಲ್ಲ. ಕಾಲಾಂತರದಲ್ಲಿ, ಅನಾರೋಗ್ಯಕರ ಆಹಾರ ಪದ್ಧತಿಗಳು ಮತ್ತು ಜಡ ಜೀವನಶೈಲಿಯನ್ನು ನೀವು ರೂಢಿಸಿಕೊಂಡರೆ, ಅದು ನಿಮ್ಮ ರಕ್ತದೊತ್ತಡವನ್ನು ಅಧಿಕ ಗೊಳಿಸಿ ಅಪಾಯ ಹೆಚ್ಚಿಸಬಹುದು.

ಇದನ್ನೂ ಓದಿ: ದಿನಕ್ಕೊಂದು ಎಳನೀರು ಕುಡಿಯಿರಿ..ನಿಮ್ಮೆಲ್ಲಾ ಸಮಸ್ಯೆಗಳಿಗೆ ಗುಡ್​ ಬಾಯ್​ ಹೇಳಿರಿ

ನಿಮಗೆ ಅಧಿಕ ರಕ್ತದೊತ್ತಡವಿದ್ದರೆ ನೀವು ಆತಂಕ ಪಡುವ ಅವಶ್ಯಕತೆ ಇಲ್ಲ. ಜಾಗರೂಕತೆ ತುಂಬಾನೇ ಮುಖ್ಯವಾಗುತ್ತದೆ. ಪ್ರತಿದಿನ ತಪ್ಪದೆ ಉತ್ತಮ ತಾಲೀಮು, ಉತ್ತಮ ಪೌಷ್ಟಿಕವಾದ ಆಹಾರವನ್ನು ಸಮಯಕ್ಕೆ ಸರಿಯಾಗಿ ಸೇವಿಸುವುದರಿಂದ ನಿಮ್ಮ ಅಧಿಕ ರಕ್ತದೊತ್ತಡ ನಿಯಂತ್ರಿಸಿಕೊಳ್ಳಬಹುದು.

ಇದನ್ನು ಮಾಡುವುದರಿಂದ ನಿಮಗಿರುವ ಅಧಿಕ ರಕ್ತದೊತ್ತಡವನ್ನು ತ್ವರಿತವಾಗಿ ಕಡಿಮೆ ಮಾಡಿಕೊಳ್ಳಬಹುದು

ತಜ್ಞರ ಪ್ರಕಾರ, ಐಸೋಮೆಟ್ರಿಕ್ ಹ್ಯಾಂಡ್‌ಗ್ರಿಪ್ ಅನ್ನು ಪ್ರತಿದಿನ ಮಾಡುವುದರಿಂದ ನಿಮ್ಮ ಅಧಿಕ ರಕ್ತದೊತ್ತಡವನ್ನು ತ್ವರಿತವಾಗಿ ಕಡಿಮೆ ಮಾಡಿಕೊಳ್ಳಬಹುದು ಎಂದು ಹೇಳಿದ್ದಾರೆ. ನೀವು ಇದನ್ನು ಮಾಡಲು ಎಲ್ಲಿಯೂ ಹೋಗಬೇಕಿಲ್ಲ. ಕೇವಲ ನೀವು ಒಂದು ಜಾಗದಲ್ಲಿ ಕುಳಿತುಕೊಂಡು ಐಸೋಮೆಟ್ರಿಕ್ ಹ್ಯಾಂಡ್‌ಗ್ರಿಪ್ ಅನ್ನು ಹಿಸುಕುವುದು ನಿಮ್ಮ ದೇಹಕ್ಕೆ ಸಿಸ್ಟೋಲಿಕ್ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: Hypertension: ಅಧಿಕ ರಕ್ತದೊತ್ತಡಕ್ಕೆ ಈ ಹಣ್ಣಿನ ಜ್ಯೂಸ್​ ರಾಮಬಾಣ..!

ಹೀಗೆ ಎಂಟು ವಾರಗಳ ಕಾಲ ನೀವು ಮಾಡುವುದರಿಂದ, ನಿಮ್ಮ ರಕ್ತದೊತ್ತಡದ ರೀಡಿಂಗ್ ಅನ್ನು 8 ರಿಂದ 10 ಎಂಎಂಎಚ್‌ಜಿಯಷ್ಟು ಕಡಿಮೆ ಮಾಡುತ್ತದೆ. ಆದರೂ, ಅಧಿಕ ರಕ್ತದೊತ್ತಡ ಬಿಕ್ಕಟ್ಟಿನ ಅಪಾಯ ತಪ್ಪಿಸಲು ಇದನ್ನು ಅಭ್ಯಾಸ ಮಾಡುವ ಮೊದಲು ಒಮ್ಮೆ ನಿಮ್ಮ ವೈದ್ಯರೊಂದಿಗೆ ಇದರ ಬಗ್ಗೆ ಮಾತನಾಡಿ ಅವರಿಂದ ಸೂಕ್ತವಾದ ಸಲಹೆ ಪಡೆದುಕೊಳ್ಳುವುದು ಒಳ್ಳೆಯದು.

ನಿಮ್ಮ ರಕ್ತದೊತ್ತಡವು 180/120 ಇದ್ದರೆ, ಈ ಕೆಳಗಿನ ರೋಗ ಲಕ್ಷಣಗಳನ್ನು ನೀವು ಅನುಭವಿಸುತ್ತಿರಿ

ನಿಮ್ಮ ರಕ್ತದೊತ್ತಡವು 180/120 ಆಗಿದ್ದರೆ ಅದು ನಿಮಗೆ ಕೆಲವು ರೋಗಲಕ್ಷಣಗಳನ್ನು ತೋರಿಸುತ್ತದೆ. ಅವುಗಳಲ್ಲಿ ಮುಖ್ಯವಾದವುಗಳು ಎಂದರೆ ತೀವ್ರ ಆತಂಕವಾಗುವುದು, ತೀವ್ರ ಎದೆ ನೋವು, ಗೊಂದಲದೊಂದಿಗೆ ತಲೆನೋವು, ಮಸುಕಾದ ದೃಷ್ಟಿ, ವಾಕರಿಕೆ ಮತ್ತು ವಾಂತಿ ಆಗಿವೆ. ಈ ಸ್ಥಿತಿಯು ಆಂತರಿಕ ಅಂಗಾಂಗಗಳಿಗೆ ಹಾನಿ ಉಂಟು ಮಾಡಬಹುದು ಮತ್ತು ಕಾಲಾಂತರದಲ್ಲಿ ಇದು ಮಾರಣಾಂತಿಕವಾಗಬಹುದು.
First published: