Health Tips: 30ರ ವಯಸ್ಸಿನಲ್ಲಿ ಗರ್ಭಧಾರಣೆಗೆ ತಯಾರಿ: ಇಲ್ಲಿದೆ ಒಂದಿಷ್ಟು ಮಾಹಿತಿ

ಗರ್ಭಧಾರಣೆಯನ್ನು ಮುಂದೂಡುತ್ತಿರುವವರಲ್ಲಿ ನೀವೂ ಕೂಡ ಒಬ್ಬರಾಗಿದ್ದರೆ, ಅದರ ಅನುಕೂಲ ಮತ್ತು ಅನಾನುಕೂಲಗಳನ್ನು ಮೊದಲು ಪರಿಶೀಲಿಸಿಕೊಳ್ಳಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ತಾಯ್ತನ  (Motherhood) ಒಂದು ವರದಾನ. ಗರ್ಭಾವಸ್ಥೆಯಲ್ಲಿ ಒಬ್ಬ ಮಹಿಳೆಯಲ್ಲಿ ಆಗುವ ದೈಹಿಕ ಮತ್ತು ಮಾನಸಿಕ ರೂಪಾಂತರದ ಬಗ್ಗೆ ನಮಗೆಲ್ಲ ತಿಳಿದೇ ಇದೆ. ಬಹುಪಾಲು ಮಹಿಳೆಯರು ತಮ್ಮ ಜೀವನದಲ್ಲಿ ಈ ಹಂತವನ್ನು ಹಾದು ಹೋಗಿರುತ್ತಾರೆ. ಆದರೆ ತಾಯ್ತನವನ್ನು ಹೊಂದಲು ಸೂಕ್ತವಾದ ವಯಸ್ಸು ಯಾವುದೆಂದು ಗೊತ್ತೇ? ವೈದ್ಯರ ಪ್ರಕಾರ ಮಹಿಳೆಯರು 35 ವರ್ಷಕ್ಕೆ ಮೊದಲು ಗರ್ಭಿಣಿ ಆಗಬೇಕು. ಆದರೆ, ಆಧುನಿಕ ಕಾಲದಲ್ಲಿ , ನಾನಾ ಕಾರಣಗಳಿಂದಾಗಿ ಮಹಿಳೆಯರು ತಡವಾಗಿ ಗರ್ಭಧಾರಣೆ ಮಾಡಿಕೊಳ್ಳುತ್ತಿರುವುದನ್ನು ಕಾಣಬಹುದು.

ಹ್ಯೂಮನ್ ಒವೇರಿಯನ್ ರಿಸರ್ವ್ ಎಂಬ ಹೆಸರಿನ ಅಧ್ಯಯನವೊಂದರ ಪ್ರಕಾರ, 30 ವರ್ಷ ದಾಟಿದ ನಂತರ, ಮೇಲ್ಪಟ್ಟ ನಂತರ ಗರ್ಭಿಣಿ ಆಗುವ ಸಾಧ್ಯತೆಗಳು ಕಡಿಮೆ ಆಗತೊಡಗುತ್ತವೆ. ಗರ್ಭಧಾರಣೆಯನ್ನು ಮುಂದೂಡುತ್ತಿರುವವರಲ್ಲಿ ನೀವೂ ಕೂಡ ಒಬ್ಬರಾಗಿದ್ದರೆ, ಅದರ ಅನುಕೂಲ ಮತ್ತು ಅನಾನುಕೂಲಗಳನ್ನು ಮೊದಲು ಪರಿಶೀಲಿಸಿಕೊಳ್ಳಿ.

ಸಾಂದರ್ಭಿಕ ಚಿತ್ರ


30ರ ವಯಸ್ಸಿನಲ್ಲಿ ಗರ್ಭಿಣಿ ಆಗಬಹುದೇ?

30 ರ ವಯಸ್ಸಿನಲ್ಲಿ ನೀವು ನೈಸರ್ಗಿಕವಾಗಿ ಗರ್ಭಿಣಿಯಾಗಲು ಸಾಧ್ಯವಿದೆ. ಆದರೆ ನಿಮ್ಮ ಸಮಯ ಓಡುತ್ತಿದೆ. ಮುಖ್ಯವಾಗಿ 30ರ ವಯಸ್ಸಿನ ಅಂತ್ಯದಲ್ಲಿ. ಸೊಸೈಟಿ ಫಾರ್ ಅಸಿಸ್ಟೆಡ್ ರಿಪ್ರೊಡಕ್ಟಿವ್ ಟೆಕ್ನಾಲಜಿ ಪ್ರಕಾರ, 40 ವರ್ಷ ವಯಸ್ಸಿನ ನಂತರ, ಸಂತಾನೋತ್ಪತ್ತಿ ಚಿಕಿತ್ಸೆಯ ಯಶಸ್ಸಿನ ಪ್ರಮಾಣವು ಕಡಿಮೆಯಾಗುತ್ತದೆ. 35 ರಿಂದ 37 ವರ್ಷ ವಯಸ್ಸಿನ ಮಹಿಳೆಯರಲ್ಲಿ ನೇರ ಜನನದ ಪ್ರಮಾಣವು ಶೇಕಡಾ 42 ರಷ್ಟು ಮತ್ತು 38 ರಿಂದ 40 ವರ್ಷ ವಯಸ್ಸಿನ ಮಹಿಳೆಯರಿಗೆ ಶೇಕಡಾ 26.6ರಷ್ಟು ಇರುತ್ತದೆ.

ಗರ್ಭಧಾರಣೆಗೆ ತಯಾರಾಗುವುದು ಹೇಗೆ?

ನಿಮ್ಮ ವಯಸ್ಸಿನ ಹೊರತಾಗಿ, ಜೀವನಶೈಲಿಯಲ್ಲೂ ಕೊಂಚ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾದ ಅಗತ್ಯವಿರುತ್ತದೆ. ಆಹಾರ ಸೇವನೆಯ ಅಭ್ಯಾಸದಲ್ಲೂ ಬದಲಾವಣೆ ಅಗತ್ಯ. ಈ ಸಂದರ್ಭದಲ್ಲಿ ಮದ್ಯಪಾನ ಮತ್ತು ಧೂಮಪಾನ ಮಾಡದಂತೆಯೂ ವೈದ್ಯರು ಸಲಹೆ ನೀಡುತ್ತಾರೆ. ಫಿಟ್ ಆಗಿರುವುದು ಮತ್ತು ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದು ಕೂಡ ಅಗತ್ಯ.

ಇದನ್ನೂ ಓದಿ: Lifestyle: ಅವಳಿ ಶಿಶುಗಳ ಆರೈಕೆ ಮಾಡಲು ಇಲ್ಲಿವೆ ಕೆಲವು ಸಲಹೆಗಳು

ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳ ಪ್ರಕಾರ, ನೀವು ಮಗು ಮಾಡಿಕೊಳ್ಳಲು ನಿರ್ಧರಿಸಿದ ತಕ್ಷಣ, 400 ಎಂಸಿಜಿ ಪ್ರಮಾಣವುಳ್ಳ ನಿತ್ಯ ಸೇವನೆಯ ಫಾಲಿಕ್ ಆಮ್ಲ ಪೂರೈಕೆಯ ಮಾತ್ರೆಗಳನ್ನು ತೆಗೆದುಕೊಳ್ಳಲು ಆರಂಭಿಸಬೇಕು.ಪೋಲಿಕ್ ಅಮ್ಲದ ಪೂರೈಕೆ ಸ್ಪೈನಾ ಬೈಫೀಡಾದಂತಹ ನರ ಕೊಳವೆಯ ಅಸಹಜತೆಗಳ ಸಾಧ್ಯತೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಎಂಬುವುದು ಕಂಡು ಬಂದಿದೆ.

ನಿಮಗೆ ಫಲವತ್ತತೆಯ ಸಮಸ್ಯೆ ಇದ್ದರೆ ಏನು ಮಾಡಬೇಕು?

ನೀವು 35 ವರ್ಷ ವಯಸ್ಸಿನವರು ಅಥವಾ ಅದಕ್ಕಿಂತಲೂ ಚಿಕ್ಕವರಾಗಿದ್ದರೆ, ಒಂದು ವರ್ಷದ ನಿಯಮಿತ ಸಂಭೋಗದ ನಂತರವೂ ಗರ್ಭಿಣಿ ಆಗದಿದ್ದರೆ, ಇದು ವೈದ್ಯರನ್ನು ಕಾಣುವ ಸಮಯ ಎಂದರ್ಥ. ನೀವು ಗರ್ಭಿಣಿ ಆಗದೇ ಇರುವುದಕ್ಕೆ ಯಾವುದಾದರೂ ವೈದ್ಯಕೀಯ ಸಮಸ್ಯೆಗಳು ಇವೆಯೇ ಎಂಬುದನ್ನು ತಿಳಿಯಲು ಅವರು ರಕ್ತ ಪರೀಕ್ಷೆಗಳನ್ನು ಮಾಡುತ್ತಾರೆ. 36ರ ವಯಸ್ಸನ್ನು ದಾಟಿದವರು , ಆದಷ್ಟು ಬೇಗನೇ ವೈದ್ಯರನ್ನು ಕಾಣುವುದು ಒಳಿತು. ವೆಬ್‍ಎಂಡಿಯಲ್ಲಿ ಪ್ರಕಟವಾದ ಲೇಖನವೊಂದರ ಪ್ರಕಾರ, ನೀವು ಅಥವಾ ನಿಮ್ಮ ಸಂಗಾತಿ ಮೊದಲೇ, ಮಗುವಿನಂತೆ ಇಳಿಯದ ವೃಷಣ ಅಥವಾ ಪಾಲಿಸಿಸ್ಟಿಕ್ ಓವರಿಯ ಹಿನ್ನೆಲೆ ಹೊಂದಿದ್ದರೆ, ಗರ್ಭಧಾರಣೆಯ ಸಾಧ್ಯತೆಗಳನ್ನು ಕುಂಠಿತಗೊಳಿಸಬಹುದು.
First published: