ಕೆಲಸದ ಒತ್ತಡದಿಂದ ನಿದ್ರೆ ಬರುತ್ತಿಲ್ಲವೇ? ಹಾಗಿದ್ರೆ ಪ್ರತಿನಿತ್ಯ ಈ ಪಾನೀಯ ಕುಡಿಯಿರಿ

ಆ್ಯಪಲ್ ಸೈಡರ್ ವಿನೆಗರ್ ಮತ್ತು ಜೇನುತುಪ್ಪ ಎರಡೂ ಒತ್ತಡವನ್ನು ತೆಗೆದುಹಾಕುವಂತ ಅಂಶಗಳನ್ನು ಹೊಂದಿವೆ. ಈ ಕಾರಣದಿಂದ, ನಿಮ್ಮ ಮೆದುಳನ್ನು ನಿದ್ರಾಹೀನತೆಯಿಂದ ಮುಕ್ತಗೊಳಿಸಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

news18-kannada
Updated:July 10, 2020, 10:34 PM IST
ಕೆಲಸದ ಒತ್ತಡದಿಂದ ನಿದ್ರೆ ಬರುತ್ತಿಲ್ಲವೇ? ಹಾಗಿದ್ರೆ ಪ್ರತಿನಿತ್ಯ ಈ ಪಾನೀಯ ಕುಡಿಯಿರಿ
ಸಾಂದರ್ಭಿಕ ಚಿತ್ರ
  • Share this:
ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಹೆಚ್ಚಿನ ಜನರು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಮನೆಯಿಂದ ಕೆಲಸ ಮಾಡುವಾಗ ಸಾಮಾನ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹೆಚ್ಚಿನವರು ಕೆಲಸದ ಒತ್ತಡವನ್ನು ಅನುಭವಿಸುತ್ತಾರೆ. ಇದರಿಂದಾಗಿ ಅನೇಕರು ಇದೀಗ ನಿದ್ರೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ.
ಸಾಮಾನ್ಯವಾಗಿ ಕಾಣಿಸಿಕೊಳ್ಳು ಇಂತಹ ನಿದ್ರಾಹೀನತೆಯ ಸಮಸ್ಯೆಗೆ ಮನೆಯಿಂದಲೇ ಪರಿಹಾರ ಕೂಡ ಕಂಡುಕೊಳ್ಳಬಹುದು. ಅದಕ್ಕಾಗಿ ನೀವು ಮಾಡಬೇಕಿರುವುದು ವಿಶೇಷ ಪಾನೀಯ. ಅದನ್ನು ಹೇಗೆ ತಯಾರಿಸಬೇಕೆಂದು ಇಲ್ಲಿ ತಿಳಿಸಲಾಗಿದೆ.

ಆ್ಯಪಲ್ ಸೈಡರ್ ವಿನೆಗರ್ + ಜೇನುತುಪ್ಪ ಪಾನೀಯ:
ಈ ಪಾನೀಯವನ್ನು ಆ್ಯಪಲ್ ಸೈಡರ್ ವಿನೆಗರ್ ನೊಂದಿಗೆ ತಯಾರಿಸಲಾಗುತ್ತದೆ. ಇದು ನಿಮ್ಮ ನಿದ್ರಾಹೀನತೆಯ ಸಮಸ್ಯೆಯನ್ನು ತೆಗೆದುಹಾಕುವುದಲ್ಲದೆ, ಜೀರ್ಣಾಂಗ ವ್ಯವಸ್ಥೆಯನ್ನು ಸರಿಪಡಿಸಲು ಸಹಕಾರಿ. ಈ ಪಾನೀಯವನ್ನು ತಯಾರಿಸಲು ನೀವು ಮಾಡಬೇಕಿರುವುದು, ಒಂದು ಲೋಟ ನೀರಿಗೆ ಎರಡು ಚಮಚ ಆ್ಯಪಲ್ ಸೈಡರ್ ವಿನೆಗರ್ ಚೆನ್ನಾಗಿ ಮಿಶ್ರಣ ಮಾಡಬೇಕು. ಇದರ ನಂತರ, ಒಂದು ಚಮಚ ಜೇನುತುಪ್ಪವನ್ನು ಹಾಕಿ ಚೆನ್ನಾಗಿ ಕಲಸಿ. ಇದನ್ನು ರಾತ್ರಿ ಮಲಗುವ ಅರ್ಧ ಘಂಟೆಯ ಮೊದಲು ಕುಡಿಯಿರಿ. ಕೆಲವೇ ದಿನಗಳಲ್ಲಿ ನೀವು ಅದರ ಪ್ರಯೋಜನವನ್ನು ನೋಡುತ್ತೀರಿ.

ವೈಜ್ಞಾನಿಕವಾಗಿ ಹೇಳುವುದಾದರೆ, ಆ್ಯಪಲ್ ಸೈಡರ್ ವಿನೆಗರ್ ಮತ್ತು ಜೇನುತುಪ್ಪ ಎರಡೂ ಒತ್ತಡವನ್ನು ತೆಗೆದುಹಾಕುವಂತ ಅಂಶಗಳನ್ನು ಹೊಂದಿವೆ. ಈ ಕಾರಣದಿಂದ, ನಿಮ್ಮ ಮೆದುಳನ್ನು ನಿದ್ರಾಹೀನತೆಯಿಂದ ಮುಕ್ತಗೊಳಿಸಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಅಂದಹಾಗೆ ಈ ಪಾನೀಯವನ್ನು ಬಿಸಿ ನೀರಿನೊಂದಿಗೆ ಕುಡಿಯುವುದರಿಂದ ಮತ್ತೊಂದು ಪ್ರಯೋಜನ ನಿಮ್ಮದಾಗಿಸಿಕೊಳ್ಳಬಹುದು. ಅದೇನೆಂದರೆ ಬಿಸಿ ನೀರಿನಲ್ಲಿ ಆ್ಯಪಲ್ ಸೈಡರ್ ಹಾಗೂ ಜೇನುತುಪ್ಪ ಮಿಶ್ರ ಮಾಡಿ ಕುಡಿದರೆ ದೇಹ ತೂಕವನ್ನು ಕಡಿಮೆ ಮಾಡಲು ಮತ್ತು ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ. ಇದರ ಹೊರತಾಗಿಯೂ, ನೀವು ದೀರ್ಘಕಾಲದವರೆಗೆ ಒತ್ತಡದಲ್ಲಿದ್ದರೆ ಮತ್ತು ನಿದ್ದೆ ಸಮಸ್ಯೆಯಿಂದ ಬಳಲುತ್ತಿದ್ದರೆ ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆಯುವುದು ಉತ್ತಮ.
Published by: zahir
First published: July 10, 2020, 2:54 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading