• Home
  • »
  • News
  • »
  • lifestyle
  • »
  • Cleaning Tips: ದೀಪಾವಳಿ ಹಬ್ಬಕ್ಕೆ ಮನೆಯ ಸ್ವಚ್ಛಗೊಳಿಸ್ತಿದ್ದೀರಾ? ಈ ವಸ್ತುಗಳ ಕ್ಲೀನಿಂಗ್ ಮಾಡಲು ಮರೆಯದಿರಿ!

Cleaning Tips: ದೀಪಾವಳಿ ಹಬ್ಬಕ್ಕೆ ಮನೆಯ ಸ್ವಚ್ಛಗೊಳಿಸ್ತಿದ್ದೀರಾ? ಈ ವಸ್ತುಗಳ ಕ್ಲೀನಿಂಗ್ ಮಾಡಲು ಮರೆಯದಿರಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹಬ್ಬಕ್ಕಾಗಿ ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ. ದಸರಾ ಮುಗಿದ ತಕ್ಷಣ ಜನರು ದೀಪಾವಳಿ ತಯಾರಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ತಾರೆ. ದೀಪಾವಳಿಗೆ ಇನ್ನು ಕೆಲವೇ ದಿನಗಳು ಉಳಿದಿವೆ. ಈ ದಿನಗಳಲ್ಲಿ ಬಹುತೇಕ ಎಲ್ಲರ ಮನೆಯಲ್ಲೂ ಸ್ವಚ್ಛತಾ ಕಾರ್ಯ ಭರದಿಂದ ಸಾಗಿದೆ.

  • Share this:

    ದೀಪಗಳ ಹಬ್ಬ (Deepawali Festival) ದೀಪಾವಳಿ ಭಾರತದಲ್ಲಿ (India) ಅತ್ಯಂತ ದೊಡ್ಡ ಹಬ್ಬವಾಗಿದೆ. ದೇಶದಾದ್ಯಂತ ಬೆಳಕಿನ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ. ದೀಪಾವಳಿ ಇನ್ನೇನು ಬರಲಿದೆ. ಹೀಗಾಗಿ ಜನರು (People) ಈಗಿನಿಂದಲೇ ತಮ್ಮ ತಮ್ಮ ಮನೆಗಳ (Home) ಸ್ವಚ್ಛತೆ (Cleaning) ಮತ್ತು ಬಣ್ಣ (Color) ಹಚ್ಚುತ್ತಾರೆ. ಇದರಿಂದ ಹೆಚ್ಚು ಶ್ರಮ ಉಂಟಾಗುತ್ತದೆ. ಹೀಗಾಗಿ ಜನರು ಹೆಚ್ಚು ಸುಸ್ತಾಗುತ್ತಾರೆ. ಹಬ್ಬದ ದಿನಗಳಲ್ಲಿ ಹೆಚ್ಚು ವಿಶ್ರಾಂತಿ ತೆಗೆದುಕೊಳ್ಳಲು ಸಮಯ ಸಿಗುವುದಿಲ್ಲ. ದೀಪಾವಳಿ ಅಕ್ಟೋಬರ್ 24 ರಂದು ದೀಪಾವಳಿ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ಈ ದೀಪಗಳ ಹಬ್ಬದಲ್ಲಿ ಹೆಚ್ಚು ಸಿಹಿ ತಿಂಡಿಗಳನ್ನು ತಯಾರಿಸುತ್ತಾರೆ.


    ಹಬ್ಬಕ್ಕಾಗಿ ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ. ದಸರಾ ಮುಗಿದ ತಕ್ಷಣ ಜನರು ದೀಪಾವಳಿ ತಯಾರಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ತಾರೆ. ದೀಪಾವಳಿಗೆ ಇನ್ನು ಕೆಲವೇ ದಿನಗಳು ಉಳಿದಿವೆ. ಈ ದಿನಗಳಲ್ಲಿ ಬಹುತೇಕ ಎಲ್ಲರ ಮನೆಯಲ್ಲೂ ಸ್ವಚ್ಛತಾ ಕಾರ್ಯ ಭರದಿಂದ ಸಾಗಿದೆ.


    ದೀಪಾವಳಿ ಕ್ಲೀನಿಂಗ್ ಮಾಡುವುದು ಹೇಗೆ?


    ದೀಪಾವಳಿ ಹಬ್ಬದಂದು ಮನೆಯನ್ನು ಶುಚಿಗೊಳಿಸಲಾಗುತ್ತದೆ. ಮನೆಯಲ್ಲಿ ಲಕ್ಷ್ಮೀ ದೇವಿಯ ಆರಾಧನೆ ಮಾಡಲಾಗುತ್ತದೆ. ಹೀಗಾಗಿ ಲಕ್ಷ್ಮಿ ದೇವಿಯನ್ನು ಪ್ರಸನ್ನಳಾಗಿಸಲು ಎಲ್ಲಾ ರೀತಿಯ ತಯಾರಿ ಮಾಡಿಕೊಳ್ತಾರೆ. ಮತ್ತು ಮನೆಯ ದಾರಿದ್ರ್ಯವನ್ನು ದೇವಿ ಲಕ್ಷ್ಮೀ ಹೋಗಲಾಡಿಸುತ್ತಾಳೆ ಎಂಬ ನಂಬಿಕೆಯಿದೆ.


    ಇದನ್ನೂ ಓದಿ: ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಸಮಸ್ಯೆ ಕಡಿಮೆ ಮಾಡಲು ಯಾವ ಆಹಾರ ಸೇವಿಸಬೇಕು?


    ಮನೆಯಲ್ಲಿರುವ ವಸ್ತುಗಳನ್ನು ಶುಚಿಯಾಗಿ ಇಟ್ಟುಕೊಳ್ಳುವುದರಿಂದ ಮನೆ ಸುಂದರವಾಗಿ ಕಾಣುತ್ತದೆ. ಆದರೆ ಸ್ವಚ್ಛಗೊಳಿಸುವಿಕೆ ಮನೆಯಲ್ಲಿ ಇರುವ ಸೂಕ್ಷ್ಮಜೀವಿಗಳು ಮತ್ತು ಬ್ಯಾಕ್ಟೀರಿಯಾ ತೊಡೆದು ಹಾಕಲು ಸಹಾಯ ಮಾಡುತ್ತದೆ. ನೀವು ದೀಪಾವಳಿಗಾಗಿ ಮನೆಯ ಕ್ಲೀನಿಂಗ್ ಮಾಡಲು ಪ್ರಾರಂಭಿಸಿದ್ದರೆ, ಯಾವುದೇ ವೆಚ್ಚದಲ್ಲಿ ನೀವು ಸ್ವಚ್ಛಗೊಳಿಸಬೇಕಾದ ಕೆಲವು ವಸ್ತುಗಳು ಮನೆಯಲ್ಲಿವೆ.


    ಈ ವಸ್ತುಗಳನ್ನು ಸ್ವಚ್ಛ ಮಾಡಲು, ದೀಪಾವಳಿಗಾಗಿ ಕಾಯಬೇಡಿ. ಆದರೆ ಪ್ರತಿದಿನ ಅವುಗಳನ್ನು ಸ್ವಚ್ಛಗೊಳಿಸಿ. ಅಮೇರಿಕನ್ ಪರ್ಯಾಯ ಔಷಧ ತಜ್ಞ ಡಾ. ಜೋಸೆಫ್ ಮರ್ಕೋಲಾ ಅವರ ಪ್ರಕಾರ ಪ್ರತಿದಿನ ಬಳಸುವ ಕೆಲವು ವಸ್ತುಗಳು ಬ್ಯಾಕ್ಟೀರಿಯಾ ದೊಡ್ಡ ಮನೆ. ಇದು ಸ್ವಚ್ಛವಾಗಿರಲು ಮುಖ್ಯ.


    ಟಾಯ್ಲೆಟ್ ಶೀಟ್


    ನಿಮ್ಮ ಟಾಯ್ಲೆಟ್ ಶೀಟ್ ತುಂಬಾ ಹಳೆಯದಾಗಿದ್ದರೆ ಅದನ್ನು ಬದಲಾಯಿಸಿ. ನಿಮ್ಮ ಟಾಯ್ಲೆಟ್ ಸೀಟ್ ಪ್ರತಿ ಚದರ ಇಂಚಿಗೆ ಕನಿಷ್ಠ 50 ಬ್ಯಾಕ್ಟೀರಿಯಾ ಇರುತ್ತವೆ ಎನ್ನುತ್ತಾರೆ ವೈದ್ಯರು ನಂಬುತ್ತಾರೆ. ಈಗ ನಿಮ್ಮ ಟಾಯ್ಲೆಟ್ ಶೀಟ್‌ನಲ್ಲಿ ರೋಗಗಳನ್ನು ಹರಡುವ ಎಷ್ಟು ಸೂಕ್ಷ್ಮಾಣುಗಳು ಇರಬಹುದೆಂದು ನೀವೇ ಊಹಿಸಬಹುದು.


    ಪಾತ್ರೆ ತೊಳೆಯುವ ಜುನಾ


    ಪಾತ್ರೆ ತೊಳೆಯುವ ಜುನಾ ನಿಮ್ಮ ಪಾತ್ರೆಗಳನ್ನು ಹೊಳೆಯುವಂತೆ ಮಾಡುತ್ತದೆ. ಆದರೆ ಇದು ಬ್ಯಾಕ್ಟೀರಿಯಾ ದೊಡ್ಡ ಮನೆಯಾಗಿದೆ. ನೀವು ಮಣ್ಣಿನಲ್ಲಿ ಬಳಸುವ ಸ್ಪಾಂಜ್ ಪ್ರತಿ ಚದರ ಇಂಚಿಗೆ 10 ಮಿಲಿಯನ್ ಬ್ಯಾಕ್ಟೀರಿಯಾ ಹೊಂದಿರುತ್ತದೆ.


    ಅಡುಗೆ ಮನೆಯ ತೊಟ್ಟಿ


    ಅಡುಗೆ ಮನೆಯ ತೊಟ್ಟಿಯಲ್ಲಿ ಇ. ಕೋಲಿ, ಸಾಲ್ಮೊನೆಲ್ಲಾ, ಶಿಗೆಲ್ಲ, ಕ್ಯಾಂಪಿಲೋಬ್ಯಾಕ್ಟರ್, ನೊರೊವೈರಸ್ ಮತ್ತು ಹೆಪಟೈಟಿಸ್ ಎ ಮಾರಣಾಂತಿಕ ಬ್ಯಾಕ್ಟೀರಿಯಾಗಳಾಗಿವೆ. ಇ. ಕೋಲಿ ಮೇಲ್ಮೈಯಲ್ಲಿ ಗಂಟೆಗಳ ಕಾಲ ಬದುಕುತ್ತದೆ. ಸಾಲ್ಮೊನೆಲ್ಲಾ ಸುಮಾರು ನಾಲ್ಕು ಗಂಟೆಗಳ ಕಾಲ ಬದುಕುತ್ತದೆ. ಮತ್ತು ಹೆಪಟೈಟಿಸ್ ಎ ತಿಂಗಳ ಕಾಲ ಬದುಕುತ್ತದೆ.


    ಚಾಪಿಂಗ್ ಬೋರ್ಡ್


    ಚಾಪಿಂಗ್ ಬೋರ್ಡ್ ಟಾಯ್ಲೆಟ್ ಸೀಟ್‌ಗಿಂತ 200 ಪಟ್ಟು ಹೆಚ್ಚು ಅಪಾಯಕಾರಿ ಬ್ಯಾಕ್ಟೀರಿಯಾ ಹೊಂದಿರುತ್ತದೆ. ಇದು ಸಾಲ್ಮೊನೆಲ್ಲಾ, ಇ-ಕೊಲಿ ಮತ್ತು ಕ್ಯಾಂಪಿಲೋಬ್ಯಾಕ್ಟರ್‌ನಂತಹ ಬ್ಯಾಕ್ಟೀರಿಯಾ ಹೊಂದಿರುತ್ತದೆ ಎನ್ನಲಾಗುತ್ತದೆ. ಇದು ಅನೇಕ ರೋಗಗಳಿಗೆ ಕಾರಣವಾಗುತ್ತದೆ.


    ಇದನ್ನೂ ಓದಿ: ಗರ್ಭಾವಸ್ಥೆಯಲ್ಲುಂಟಾಗುವ ಫೋಲಿಕ್ ಆಮ್ಲದ ಕೊರತೆಯಿಂದ ಯಾವೆಲ್ಲಾ ಸಮಸ್ಯೆ ಉಂಟಾಗುತ್ತದೆ? ಯಾವ ಪದಾರ್ಥಗಳು ಇದನ್ನು ಪೂರೈಸುತ್ತವೆ?


    ರಿಮೋಟ್ ಕಂಟ್ರೋಲ್ ಮತ್ತು ಮೊಬೈಲ್ ಕವರ್


    ನಿಮ್ಮ ಮನೆಯಲ್ಲಿ ಟಿವಿ, ಎಸಿ, ಕೂಲರ್ ಅಥವಾ ರಿಮೋಟ್ ಚಾಲನೆಯಲ್ಲಿರುವಂತಹ ಅನೇಕ ವಸ್ತುಗಳು ಸ್ವಚ್ಛಗೊಳಿಸಿ. ನಿಮ್ಮ ಮೊಬೈಲ್‌ನ ಹಳೆಯ ಕವರ್ ತೆಗೆದು ಸ್ವಚ್ಛವಾಗಿಡಿ. ರಿಮೋಟ್ ಶೌಚಾಲಯಕ್ಕಿಂತ 20 ಪಟ್ಟು ಹೆಚ್ಚು ಕೊಳಕಾಗಿರುತ್ತದೆ.

    Published by:renukadariyannavar
    First published: