Mango Fair: ನೀವು ಮಾವು ಪ್ರಿಯರೇ? ನಿಮಗಾಗಿ ಇಲ್ಲಿ ನಡೀತಿದೆ 'ಮಾವಿನ ಮೇಳ', ಒಮ್ಮೆ ಭೇಟಿ ನೀಡಿ

ಜೂನ್ 20ರಿಂದ ಹಾಪ್ ಕಾಮ್ಸ್ ಬೆಂಗಳೂರಿನ ನಾಗವಾರ ಜಂಕ್ಷನ್ ಬಳಿಯಿರುವ ಎಲಿಮೆಂಟ್ಸ್ ಮಾಲ್‌ನಲ್ಲಿ ಮಾವು ಮೇಳವನ್ನು ಆಯೋಜಿಸಿದೆ. ಈ ಮೇಳದಲ್ಲಿ ಬಗೆಬಗೆಯ ಮಾವುಗಳ ರುಚಿಯನ್ನು ನೋಡುವುದು ಮಾತ್ರವಲ್ಲದೆ ಮಾವು ಕೃಷಿಯ ಬಗ್ಗೆಯೂ ನೀವು ಮಾಹಿತಿ ಪಡೆದುಕೊಳ್ಳಬಹುದಾಗಿದೆ.

ಜೂನ್ 20ರಿಂದ ಹಾಪ್ ಕಾಮ್ಸ್ ಬೆಂಗಳೂರಿನ ನಾಗವಾರ ಜಂಕ್ಷನ್ ಬಳಿಯಿರುವ ಎಲಿಮೆಂಟ್ಸ್ ಮಾಲ್‌ನಲ್ಲಿ ಮಾವು ಮೇಳವನ್ನು ಆಯೋಜಿಸಿದೆ. ಈ ಮೇಳದಲ್ಲಿ ಬಗೆಬಗೆಯ ಮಾವುಗಳ ರುಚಿಯನ್ನು ನೋಡುವುದು ಮಾತ್ರವಲ್ಲದೆ ಮಾವು ಕೃಷಿಯ ಬಗ್ಗೆಯೂ ನೀವು ಮಾಹಿತಿ ಪಡೆದುಕೊಳ್ಳಬಹುದಾಗಿದೆ.

ಜೂನ್ 20ರಿಂದ ಹಾಪ್ ಕಾಮ್ಸ್ ಬೆಂಗಳೂರಿನ ನಾಗವಾರ ಜಂಕ್ಷನ್ ಬಳಿಯಿರುವ ಎಲಿಮೆಂಟ್ಸ್ ಮಾಲ್‌ನಲ್ಲಿ ಮಾವು ಮೇಳವನ್ನು ಆಯೋಜಿಸಿದೆ. ಈ ಮೇಳದಲ್ಲಿ ಬಗೆಬಗೆಯ ಮಾವುಗಳ ರುಚಿಯನ್ನು ನೋಡುವುದು ಮಾತ್ರವಲ್ಲದೆ ಮಾವು ಕೃಷಿಯ ಬಗ್ಗೆಯೂ ನೀವು ಮಾಹಿತಿ ಪಡೆದುಕೊಳ್ಳಬಹುದಾಗಿದೆ.

  • Share this:
ಬೇಸಿಗೆ (Summer) ಎಂದರೆ ಒಂದೆಡೆ ಸುಡು ಬಿಸಿಲೆಂಬ ಕಿರಿಕಿರಿ ಉಂಟಾದರೆ ಇನ್ನೊಂದೆಡೆ ಹಣ್ಣುಗಳ (Fruits) ರಾಜನೆಂದೇ ಖ್ಯಾತಿ ಪಡೆದಿರುವ ಮಾವಿನ ಹಣ್ಣಿನ (Mango Fruit) ಸೀಸನ್ (Season) ಎಂದು ನೆನೆದು ಮನದಲ್ಲಿ ಸಂತಸವೂ ಆಗುತ್ತದೆ. ಹೌದು, ಮಾವಿಲ್ಲದೆ ಬೇಸಿಗೆಯನ್ನೂ ನೆನೆಸಿಕೊಳ್ಳಲೂ ಸಹ ಕಷ್ಟವಾಗಬಹುದು. ಹಣ್ಣುಗಳ ರಾಜನೆಂದೇ (King of fruits) ಖ್ಯಾತಿ ಪಡೆದ ಮಾವು ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಪ್ರತಿಯೊಬ್ಬರೂ ಮಾವಿನ ಹಣ್ಣಿನ ರುಚಿಯನ್ನು ಬಾಯಿ ಚಪ್ಪರಿಸಿ ಆಸ್ವಾದಿಸುತ್ತಾರೆ. ಮಾವಿನ ಹಣ್ಣುಗಳಿಗೆ ಯಾವುದೇ ಭೇದ-ಭಾವಗಳಿಲ್ಲ, ಕಿರಿಯರಿಂದ ಹಿಡಿದು ಹಿರಿಯರವರೆಗೂ ಎಲ್ಲರೂ ಈ ಹಣ್ಣಿನ ಅಪ್ಪಟ ಅಭಿಮಾನಿಗಳು ಎಂದರೆ ತಪ್ಪಾಗಲಾರದು. ರಸಭರಿತವಾದ ಮಾವಿನ ಹಣ್ಣು ಅಂದರೆ ಎಲ್ಲರಿಗೂ ಪಂಚಪ್ರಾಣ.

ಈಗಲೂ ಒಂದೊಮ್ಮೆ ಹಳ್ಳಿಗಳ ಸುತ್ತಮುತ್ತ ಒಂದು ರೌಂಡು ಹೊಡೆದರೆ ಸಾಕು ದಾರಿ ಬದಿಯಲ್ಲಿ ಮಾವಿನ ಮರಗಳು ಕಣ್ಣಿಗೆ ಕಾಣುತ್ತವೆ. ಬೇಸಿಗೆಯ ಸಮಯದಲ್ಲಿ ಚಿಗುರೊಡೆದು ಕಾಯಿ ಬಿಟ್ಟಾಗ ಮೊದಲಿಗೆ ನೆನಪಾಗುವುದೇ ಬಾಯಲ್ಲಿ ನೀರೂರಿಸುವ ಮಾವಿನ ಕಾಯಿಯ ಉಪ್ಪಿನ ಕಾಯಿಗಳು.

ಹೀಗೆ ಕಾಯಿಯಾಗುವ ಮಾವು ಬೇಸಿಗೆ ಕಾಲ ಮಧ್ಯಕ್ಕೆ ಬರುತ್ತಿದ್ದಂತೆ ಪಕ್ವವಾಗತೊಡಗುತ್ತವೆ. ಈಗ ಏನಿದ್ದರೂ ಮಾವಿನ ಹಣ್ಣುಗಳ ಸಂತೆ. ಈಗ ಮಾರುಕಟ್ಟೆಯ ಒಂದು ಸುತ್ತು ಹೊಡೆದರೂ ಅಲ್ಲಲ್ಲಿ ನಮಗೆ ವಿವಿಧ ಬಗೆಯ ಮಾವಿನ ಹಣ್ಣುಗಳು ಕಣ್ಣಿಗೆ ಕಾಣುತ್ತವೆ ಎಂದರೂ ತಪ್ಪಾಗಲಾರದು. ಹೌದು ನಾವು ಬಹುವಾಗಿ ಮೆಚ್ಚುವ ಮಾವಿನ ಹಣ್ಣುಗಳಲ್ಲಿ ವಿವಿಧ ತಳಿಗಳಿವೆ. ಪ್ರತಿ ತಳಿಗಳ ಮಾವು ತನ್ನದೆ ಆದ ವೈಶಿಷ್ಟ್ಯವನ್ನು ಹೊಂದಿವೆ. ಭಾರತದಲ್ಲಿ ಸಾಕಷ್ಟು ಬಗೆಯ ಮಾವಿನ ಹಣ್ಣುಗಳು ಲಭ್ಯವಿದ್ದು ಜನರು ಸಾಮಾನ್ಯವಾಗಿ ಎಲ್ಲ ಬಗೆಯ ಮಾವಿನ ಹಣ್ಣುಗಳನ್ನು ಆಸ್ವಾದಿಸುತ್ತಾರೆ.

ಇದನ್ನೂ ಓದಿ:  Watermelon Benefits: ವ್ಯಾಯಾಮದ ನಂತ್ರ ಕಲ್ಲಂಗಡಿ ಹಣ್ಣು ಯಾಕೆ ಬೆಸ್ಟ್? ವಾಟರ್​ಮೆಲನ್ ಅದ್ಭುತ ಆರೋಗ್ಯ ಗುಣಗಳಿವು

ಬೆಂಗಳೂರಿನಲ್ಲಿ ನಡೀತಿದೆ ಮಾವಿನ ಹಣ್ಣಿನ ಮೇಳ
ಇಲ್ಲಿ ಹೇಳಬೇಕಾದ ಮತ್ತೊಂದು ವಿಷಯವೆಂದರೆ ಸಾಮಾನ್ಯವಾಗಿ ಬೇಸಿಗೆಯ ಸಂದರ್ಭಗಳಲ್ಲಿ ಬೆಂಗಳೂರಿನಂತಹ ಪ್ರಮುಖ ನಗರಗಳಲ್ಲಿ ಮಾವಿನ ಹಣ್ಣಿನ ಮೇಳಗಳು ನಡೆಯುವುದು ಮಾಮೂಲು. ಈ ಮೇಳಗಳ ವೈಶಿಷ್ಟ್ಯವೆಂದರೆ ಒಂದೇ ಸೂರಿನಡಿ ಜನರಿಗೆ ವಿವಿಧ ಭಾಗಗಳ ರೈತರಿಂದ ಬೆಳೆಯಲಾದ ಬಗೆ ಬಗೆಯ ಮಾವಿನ ಹಣ್ಣುಗಳ ದರ್ಶನ ಸಿಗುವುದು. ಕೇವಲ ಮಾವಿನ ಹಣ್ಣುಗಳು ಮಾತ್ರವಲ್ಲದೆ ಇಂತಹ ಮೇಳಗಳಲ್ಲಿ ಮಾವಿನಿಂದ ತಯಾರಿಸಲಾದ ಇತರೆ ವಿಶಿಷ್ಟ ಖಾದ್ಯಗಳೂ ಸಹ ದೊರಕುತ್ತವೆ. ಮಾವಿನ ಹಣ್ಣಿನಿಂದ ಹಲ್ವ, ರಸಾಯನ, ಮಾಂಳ, ಜ್ಯೂಸು, ಹೀಗೆ ಅನೇಕ ರೀತಿಯ ಡೆಸರ್ಟ್ಗಳನ್ನು ಮಾಡುತ್ತಾರೆ.

ಹಾಪ್‌ಕಾಮ್ಸ್ ಸಹಯೋಗದಲ್ಲಿ ಮಾವು ಮೇಳ

ಇಷ್ಟೇಲ್ಲ ನಾವು ಮಾವಿನ ಹಣ್ಣುಗಳ ಬಗ್ಗೆ ಯಾಕೆ ಹೇಳುತ್ತಿದ್ದೇವೆ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿರಬಹುದಲ್ಲವೆ..? ಖಂಡಿತ, ಅದಕ್ಕೆ ಉತ್ತರವೆಂದರೆ ಬೆಂಗಳೂರಿನಲ್ಲಿ ನಡೆಯುವ ಮಾವಿನ ಮೇಳ. ಹೌದು, ಈ ಮಾವು ಪ್ರಿಯರಿಗೆ ಒಂದು ಗುಡ್ ನ್ಯೂಸ್ ಇದೆ. ಅದೇನೆಂದರೆ ಬರುವ ಜೂನ್ 20ರಿಂದ ಹಾಪ್ ಕಾಮ್ಸ್ ಸಂಸ್ಥೆ ಬೆಂಗಳೂರಿನ ನಾಗವಾರ ಜಂಕ್ಷನ್ ಬಳಿಯಿರುವ ಎಲಿಮೆಂಟ್ಸ್ ಮಾಲ್ ನಲ್ಲಿ ಮಾವು ಮೇಳವನ್ನು ಆಯೋಜಿಸಿದೆ. ಈ ಮೇಳದಲ್ಲಿ ಬಗೆಬಗೆಯ ಮಾವುಗಳ ರುಚಿಯನ್ನು ನೋಡುವುದು ಮಾತ್ರವಲ್ಲದೆ ಮಾವು ಕೃಷಿಯ ಬಗ್ಗೆಯೂ ನೀವು ಮಾಹಿತಿ ಪಡೆದುಕೊಳ್ಳಬಹುದಾಗಿದೆ.

ವಿವಿಧ ಮಾವಿನ ಹಣ್ಣುಗಳ ಪ್ರದರ್ಶನ
ಇಲ್ಲಿ ನಡೆಯುವ ಈ ಮಾವು ಮೇಳದಲ್ಲಿ ಬಾದಾಮಿ, ರಸಪುರಿ, ಬೈಗಾನಪಲ್ಲಿ, ಮಲ್ಲಿಕಾ, ಮಲ್ಗೋವಾ, ಸಿಂಧೂರ, ಕೇಸರ್ ಮತ್ತು ತೋತಾಪುರಿ ಸೇರಿದಂತೆ ವಿವಿಧ ಮಾವಿನ ಹಣ್ಣುಗಳು ಪ್ರದರ್ಶನಗೊಳ್ಳುವುದಲ್ಲದೆ ಮಾರಾಟಕ್ಕೂ ಲಭ್ಯವಿದೆ. ಕೇವಲ ಮಾವು ಮಾರಾಟವಲ್ಲದೆ ತಜ್ಞರು ಮಾವಿನ ಹಣ್ಣುಗಳ ಕುರಿತ ಕೃಷಿ ಪದ್ಧತಿ,ಅದನ್ನು ನಾಟಿ ಮಾಡುವ ವಿಧಾನ ಮತ್ತು ವಿವಿಧ ಸಂಸ್ಕರಣಾ ಸಾಮಗ್ರಿಗಳ ತಯಾರಿಕೆಯ ಬಗ್ಗೆ ಸಂದರ್ಶಕರಿಗೆ ಮಾಹಿತಿ ನೀಡಲಿದ್ದಾರೆ.

ಇದನ್ನೂ ಓದಿ:  Health Tips: ಮಧುಮೇಹ ಇರುವವರು ಮಾವಿನಹಣ್ಣು ತಿನ್ನಬಹುದಾ? ತಜ್ಞರು ಏನ್ ಹೇಳ್ತಾರೆ?

ಹಾಗಾಗಿ ಮಾವಿನ ಹಣ್ಣಿನ ಆಸಕ್ತರು ಈ ಸುವರ್ಣಾವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ಮುಂದಿನ ಜೂನ್ 20ರ ಮಧ್ಯಾಹ್ನ 12 ಗಂಟೆಗೆ ಪ್ಲಾಂಟರ್ಸ್ ಕೋ ಆಪರೇಟಿವ್ ಸೇಲ್ಸ್ ಮತ್ತು ಪ್ರೊಸೆಸಿಂಗ್ ಅಸೋಸಿಯೇಷನ್ನಿನ ಅಧ್ಯಕ್ಷರಾದ ಎನ್.ದೇವರಾಜ್ ಅವರು ಈ ಮಾವಿನ ಮೇಳವನ್ನು ಉದ್ಘಾಟಿಸಲಿದ್ದಾರೆ. ಇಂದೇ ನಿಮ್ಮ ವೇಳಾಪಟ್ಟಿ ಸಿದ್ಧಪಡಿಸಿಕೊಳ್ಳಿ ಹಾಗೂ ಮಾವಿನ ಮೇಳಕ್ಕೆ ಹಾಜರಾಗಿ ಮನತಣಿವಷ್ಟು ಮಾವಿನ ರುಚಿ ಆಸ್ವಾದಿಸಿರಿ.
Published by:Ashwini Prabhu
First published: