Uric Acid Problem: ದೇಹದಲ್ಲಿ ಯೂರಿಕ್ ಆಮ್ಲದ ಮಟ್ಟ ಹೆಚ್ಚಾದರೆ ಯಾವ ಸಮಸ್ಯೆ ಕಾಡುತ್ತವೆ? ಪರಿಹಾರವೇನು?

ಗೌಟ್ ಒಂದು ರೀತಿಯ ಸಂಧಿವಾತ ಕಾಯಿಲೆ ಆಗಿದೆ. ಗೌಟ್ ಕಾಯಿಲೆ ಉಂಟಾದಾಗ ಕೀಲುಗಳಲ್ಲಿ ತೀವ್ರವಾದ ನೋವು ಉಂಟಾಗುತ್ತದೆ. ದೇಹದಲ್ಲಿ ಹೆಚ್ಚು ಯೂರಿಕ್ ಆಮ್ಲ ಇದ್ದರೆ, ಹೈಪರ್ಯುರಿಸೆಮಿಯಾ ಸಂಭವಿಸಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಯೂರಿಕ್ ಆಮ್ಲ (Uric Acid) ರಕ್ತದಲ್ಲಿ (Blood) ಕಾಣಿಸಿಕೊಳ್ಳುವ ಕೆಟ್ಟ ಹಾಗೂ ಕೊಳಕು (Dirty) ವಸ್ತು ಆಗಿದೆ. ದೇಹವು (Body) ಪ್ಯೂರಿನ್ ಎಂಬ ರಾಸಾಯನಿಕಗಳನ್ನು (Chemicals) ವಿಭಜನೆ ಮಾಡಿದಾಗ ಯೂರಿಕ್ ಆಮ್ಲ ಉತ್ಪತ್ತಿ ಆಗುತ್ತದೆ. ಹೆಚ್ಚಿನ ಯೂರಿಕ್ ಆಮ್ಲ ರಕ್ತದಲ್ಲಿಯೇ ಕರಗಿ ಹೋಗುತ್ತದೆ. ಇದು ಮೂತ್ರ ಪಿಂಡಗಳ ಮೂಲಕ ಹಾದು ಹೋಗುತ್ತದೆ. ಮತ್ತು ಮೂತ್ರದ ಮೂಲಕ ದೇಹದಿಂದ ಹೊರ ಹಾಕಲ್ಪಡುತ್ತದೆ. ಪ್ಯೂರಿನ್‌ಗಳಲ್ಲಿ ಸಮೃದ್ಧವಾಗಿರುವ ಆಹಾರಗಳ ಸೇವನೆ ಮಾಡಿದಾಗ ಮತ್ತು ಪಾನೀಯಗಳನ್ನು ಕುಡಿದಾಗ ರಕ್ತದಲ್ಲಿ ಯೂರಿಕ್ ಆಮ್ಲದ ಮಟ್ಟ ಹೆಚ್ಚಾಗುತ್ತದೆ. ರಕ್ತದಲ್ಲಿನ ಯೂರಿಕ್ ಆಮ್ಲದ ಹೆಚ್ಚಳ ಗೌಟ್ ರೋಗ ಹೆಚ್ಚಿಸುವ ಸಂಭವ ಇರುತ್ತದೆ.

    ಯೂರಿಕ್ ಆಮ್ಲದ ಮಟ್ಟ ಹೆಚ್ಚಾದಾಗ ಗೌಟ್ ಕಾಯಿಲೆ ಉಂಟಾಗುತ್ತದೆ

    ಗೌಟ್ ಒಂದು ರೀತಿಯ ಸಂಧಿವಾತ ಕಾಯಿಲೆ ಆಗಿದೆ. ಗೌಟ್ ಕಾಯಿಲೆ ಉಂಟಾದಾಗ ಕೀಲುಗಳಲ್ಲಿ ತೀವ್ರವಾದ ನೋವು ಉಂಟಾಗುತ್ತದೆ. ದೇಹದಲ್ಲಿ ಹೆಚ್ಚು ಯೂರಿಕ್ ಆಮ್ಲ ಇದ್ದರೆ, ಹೈಪರ್ಯುರಿಸೆಮಿಯಾ ಸಂಭವಿಸಬಹುದು. ಇದು ಯೂರಿಕ್ ಆಸಿಡ್ 'ಸ್ಫಟಿಕಗಳು' ರೂಪುಗೊಳ್ಳುವ ಸ್ಥಿತಿಯಾಗಿದೆ.

    ಯೂರಿಕ್ ಆಸಿಡ್ ಮಟ್ಟಕ್ಕೆ ಚಿಕಿತ್ಸೆ ನೀಡದಿದ್ದರೆ ಮೂಳೆ, ಕೀಲು ಮತ್ತು ಅಂಗಾಂಶಕ್ಕೆ ಹಾನಿ

    ಈ ಹರಳುಗಳು ಕೀಲುಗಳಲ್ಲಿ ಸಂಗ್ರಹವಾಗಿ ಸಂಧಿವಾತ ಸಮಸ್ಯೆಗೆ ಕಾರಣವಾಗುತ್ತವೆ. ಅಷ್ಟೇ ಅಲ್ಲದೇ, ಕಿಡ್ನಿ ಕಲ್ಲುಗಳ ರಚನೆಗೂ ಕಾರಣವಾಗುತ್ತವೆ. ಹೆಚ್ಚಿನ ಯೂರಿಕ್ ಆಸಿಡ್ ಮಟ್ಟಕ್ಕೆ ಚಿಕಿತ್ಸೆ ನೀಡದೆ ಹಾಗೇ ಬಿಟ್ಟರೆ ಮೂಳೆ, ಕೀಲು ಮತ್ತು ಅಂಗಾಂಶಕ್ಕೆ ಹಾನಿ ಉಂಟಾಗುತ್ತದೆ. ಜೊತೆಗೆ ಕಿಡ್ನಿ ಕಾಯಿಲೆ, ಹೃದ್ರೋಗಕ್ಕೂ ಕಾರಣವಾಗಬಹುದು.

    ಇದನ್ನೂ ಓದಿ: ಬಾದಾಮಿ ತಿಂದು ಸಿಪ್ಪೆ ಎಸೆಯೋ ಮುನ್ನ ಅದರ ಪ್ರಯೋಜನ ತಿಳಿಯಿರಿ!

    ಯೂರಿಕ್ ಆಮ್ಲದ ಮಟ್ಟ ಕಡಿಮೆ ಮಾಡಲು ಕೊತ್ತಂಬರಿ ಸೊಪ್ಪು

    ಕೊತ್ತಂಬರಿ ಸೊಪ್ಪಿನ ಹಸಿರು ಎಲೆಗಳು ಆಹಾರದ ರುಚಿ ಹೆಚ್ಚಿಸುತ್ತದೆ. ರಕ್ತದಲ್ಲಿನ ಕ್ರಿಯಾಟಿನ್ ಮತ್ತು ಯೂರಿಕ್ ಆಸಿಡ್ ಮಟ್ಟ ಕಡಿಮೆ ಮಾಡಲು ನೀವು ಕೊತ್ತಂಬರಿ ಸೊಪ್ಪನ್ನು ಬಳಸಿ.

    ಕೊತ್ತಂಬರಿಯಲ್ಲಿ ಫೈಬರ್, ಕಬ್ಬಿಣ, ಮ್ಯಾಂಗನೀಸ್ ಮತ್ತು ಮೆಗ್ನೀಸಿಯಮ್ನ ಉತ್ತಮ ಮೂಲವಾಗಿದೆ. ಪ್ರೋಟೀನ್ ಜೊತೆಗೆ, ಎಲೆಗಳು ವಿಟಮಿನ್ ಸಿ ಮತ್ತು ವಿಟಮಿನ್ ಕೆ ಹೊಂದಿವೆ. ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಥಯಾಮಿನ್, ರಂಜಕ ಮತ್ತು ನಿಯಾಸಿನ್‌ನಂತಹ ಖನಿಜಗಳು ಸಹ ಇದರಲ್ಲಿವೆ.

    ಕೊತ್ತಂಬರಿ ಸೊಪ್ಪನ್ನು ಬಳಸುವುದು ಹೇಗೆ?

    ಕೊತ್ತಂಬರಿ ಸೊಪ್ಪು ತೆಗೆದುಕೊಳ್ಳಿ, ಎಲೆಗಳನ್ನು ಚೆನ್ನಾಗಿ ತೊಳೆಯಿರಿ. ನಂತರ, ಎಲೆಗಳನ್ನು ಉಪ್ಪು ನೀರಿನಲ್ಲಿ ಅರ್ಧ ಘಂಟೆಯವರೆಗೆ ಮುಳುಗಿಸಿ. ಬೇರುಗಳನ್ನು ಕತ್ತರಿಸಿ 10 ನಿಮಿಷಗಳ ಕಾಲ ಮುಚ್ಚಿದ ಪಾತ್ರೆಯಲ್ಲಿ ಎರಡು ಗ್ಲಾಸ್ ನೀರಿನಲ್ಲಿ ಕುದಿಸಿ. ಮುಚ್ಚಳವನ್ನು ತೆಗೆಯದೆ ತಣ್ಣಗಾಗಲು ಬಿಡಿ. ಖಾಲಿ ಹೊಟ್ಟೆಯಲ್ಲಿ ಈ ದ್ರವವನ್ನು ಸೇವಿಸಿ.

    ಯೂರಿಕ್ ಆಮ್ಲ ಮಟ್ಟ ಕಡಿಮೆ ಮಾಡಲು ಬೇ ಎಲೆ ಬಳಸಿ

    ಅಧ್ಯಯನದ ಪ್ರಕಾರ, ಬೇ ಎಲೆಗಳನ್ನು ಅಡುಗೆಮನೆಯಲ್ಲಿ ಮಸಾಲೆಯಲ್ಲಿ ಬಳಸುತ್ತಾರೆ. ಇದು ಆಹಾರದ ರುಚಿ ಹೆಚ್ಚಿಸುತ್ತದೆ. ಜೊತೆಗೆ ಯೂರಿಕ್ ಆಮ್ಲವನ್ನು ಕಡಿಮೆ ಮಾಡುವ ಗಿಡಮೂಲಿಕೆಗಳ ಪರಿಹಾರದಲ್ಲಿ ಒಂದಾಗಿದೆ.

    ಬೇ ಎಲೆಯಲ್ಲಿ ವಿಟಮಿನ್ ಸಿ, ವಿಟಮಿನ್ ಎ ಮತ್ತು ಫೋಲಿಕ್ ಆಮ್ಲವಿದ್ದು ದೇಹದ ಆರೋಗ್ಯಕ್ಕೆ ಒಳ್ಳೆಯದು. ಹೆಚ್ಚಿನ ಯೂರಿಕ್ ಆಮ್ಲವನ್ನು ಕಡಿಮೆ ಮಾಡಲು ಬೇ ಎಲೆಗಳನ್ನು ಪರಿಣಾಮಕಾರಿಯಾಗಿದೆ.

    ಬೇ ಎಲೆ ಬಳಸುವುದು ಹೇಗೆ?

    10-25 ಬೇ ಎಲೆಗಳನ್ನು ತೆಗೆದುಕೊಂಡು ಮೂರು ಗ್ಲಾಸ್ ನೀರು ತೆಗೆದುಕೊಂಡು, ಬೇ ಎಲೆ ಸ್ಪಷ್ಟವಾಗುವವರೆಗೆ ನೀರಿನಿಂದ ತೊಳೆಯಿರಿ. ಒಂದು ಲೋಟ ನೀರು ಹಾಕಿ ಬೇ ಎಲೆಗಳನ್ನು ಕುದಿಸಿ. ನಂತರ ಸೋಸಿ ದಿನಕ್ಕೆ ಎರಡು ಬಾರಿ ಬೇ ಎಲೆ ನೀರು ಕುಡಿಯಿರಿ.

    ಇದನ್ನೂ ಓದಿ: ನೀವು ಬಳಸುವ ಟೂತ್ ಪೇಸ್ಟ್ ನಿಮ್ಮ ಹಲ್ಲುಗಳಿಗೆ ಎಷ್ಟು ಉತ್ತಮ ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ

    ವೀಳ್ಯದೆಲೆ

    ವೀಳ್ಯದೆಲೆ ಯೂರಿಕ್ ಆಸಿಡ್ ಮಟ್ಟ ಕಡಿಮೆ ಮಾಡಲು ಸಹಾಯಕ. ವೀಳ್ಯದೆಲೆ ಸಾರವನ್ನು ನೀಡಿದ ಇಲಿಗಳ ಯೂರಿಕ್ ಆಮ್ಲದ ಮಟ್ಟವು 8.09mg/dl ನಿಂದ 2.02mg/dl ಗೆ ಕಡಿಮೆ ಆಗಿದೆ. ಇದಕ್ಕಾಗಿ ನೀವು ವೀಳ್ಯದೆಲೆ ತಿನ್ನಬಹುದು. ಆದರೆ ತಂಬಾಕು ಬಳಸಬೇಡಿ.
    Published by:renukadariyannavar
    First published: