Diabetes: ಈ ಲಕ್ಷಣಗಳು ನಿಮ್ಮ ಅನುಭವಕ್ಕೆ ಬಂದರೆ, ಒಮ್ಮೆ ಮಧುಮೇಹದ ಪರೀಕ್ಷೆ ಮಾಡಿಸಿಕೊಳ್ಳಿ

ನಿಮ್ಮ ಒಸಡುಗಳು ಅಥವಾ ನಾಲಿಗೆ ಸಹ ಮಧುಮೇಹ ಅಪಾಯದ ಬಗ್ಗೆ ಸುಳಿವು ನೀಡಬಹುದು ಎಂದು ನೀವು ಎಂದಾದರೂ ಕೇಳಿದ್ದೀರಾ..? ಇದು ನಿಮಗೆ ಸ್ವಲ್ಪ ವಿಚಿತ್ರ ಎನಿಸಬಹುದು. ನಿಮ್ಮ ಬಾಯಿಯಲ್ಲಿ ಮಧುಮೇಹದ ಬಗ್ಗೆ ಸುಳಿವು ನೀಡುವ ಕೆಲವು ಲಕ್ಷಣಗಳಿವೆ ಅವುಗಳನ್ನು ಒಮ್ಮೆ ನೋಡಿ...

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಯಾವುದೇ ಕಾಯಿಲೆ ನಮ್ಮನ್ನು ಆವರಿಸುವ ಮೊದಲು ಕೆಲವು ರೋಗ ಲಕ್ಷಣಗಳನ್ನು ಚಿಕ್ಕದಾಗಿ ನಮಗೆ ಸುಳಿವು ನೀಡುತ್ತವೆ. ಆದರೆ ನಾವು ಅದನ್ನು ಅಷ್ಟಾಗಿ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಆಗ ಆ ಚಿಕ್ಕದಾಗಿ ಶುರುವಾದಂತಹ ರೋಗ ಲಕ್ಷಣಗಳು ದಿನ ಕಳೆದಂತೆ ನಮಗೆ ಗೊತ್ತಿರದೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತದೆ. ಅದರಲ್ಲೂ ಈ ಮಧುಮೇಹ  (Diabetes) ಕಾಯಿಲೆಯು ಎಷ್ಟರ ಮಟ್ಟಿಗೆ ಹಬ್ಬಿದೆ ಎಂದರೆ ಪ್ರತಿ ಮನೆಯಲ್ಲಿ ಒಬ್ಬರು ಇದರಿಂದ ಬಳಲುತ್ತಿರುವುದನ್ನು ನಾವು ನೋಡಬಹುದು. ಈ ಕಾಯಿಲೆ ಚಿಕ್ಕ ಚಿಕ್ಕ ರೋಗ ಲಕ್ಷಣಗಳನ್ನು ನಮಗೆ ಅನುಭವಕ್ಕೆ ಬರುವಂತೆ ಮಾಡಿ ನಿಧಾನವಾಗಿ ಗಂಭೀರ ರೂಪ ಪಡೆಯುತ್ತದೆ.

ಮಧುಮೇಹ ಕಾಯಿಲೆಗೆ ತುತ್ತಾಗುವ ಮುಂಚಿತವಾಗಿಯೇ ಅದನ್ನು ಗುರುತಿಸಿ ತಮ್ಮನ್ನು ತಾವು ಸುರಕ್ಷಿತವಾಗಿ ಕಾಪಾಡಿಕೊಳ್ಳಬೇಕಾದರೆ, ಈ ರೋಗಲಕ್ಷಣಗಳನ್ನು ನಾವು ಗಮನಿಸುವುದು ತುಂಬಾ ಮುಖ್ಯ. ಪ್ರತಿಯೊಂದು ಕಾಯಿಲೆಗೂ ಕೆಲವು ರೋಗ ಲಕ್ಷಣಗಳು ಮೊದಲಿಗೆ ಎದ್ದು ಕಾಣುತ್ತವೆ. ಪ್ರಪಂಚದಾದ್ಯಂತ ಲಕ್ಷಾಂತರ ಜನರನ್ನು ಬಾಧಿಸುವ ಮತ್ತು ಅಸಂಖ್ಯಾತ ಆರೋಗ್ಯ ತೊಡಕುಗಳಿಗೆ ಕಾರಣವಾಗುವ ಮಧುಮೇಹ ಆವರಿಸುವ ಮುನ್ನ ಹಲವಾರು ರೋಗ ಲಕ್ಷಣಗಳನ್ನು ತೋರಿಸುತ್ತದೆ.

effexts of Diabetes, symptoms of Diabetes, blood sugar levels, Saliva production in mouth is impacted by blood sugar levels, ಸಕ್ಕರೆ ಕಾಯಿಲೆ, ಮಧುಮೇಹ, ರೋಗ ಲಕ್ಷಣಗಳು, ಕಾಯಿಲೆ ಲಕ್ಷಣಗಳು, ಮಧುಮೇಹ ಲಕ್ಷಣಗಳು, Diabetes, Diabetes symptoms, Diabetic patient, Sugar level, Blood sugar level, Symptoms
ಪ್ರಾತಿನಿಧಿಕ ಚಿತ್ರ


ಮಧುಮೇಹದ ಲಕ್ಷಣಗಳು

ಅದರಲ್ಲಿ, ಸಾಮಾನ್ಯ ಲಕ್ಷಣಗಳು ಎಂದರೆ ಅತಿಯಾದ ಬಾಯಾರಿಕೆ ಆಗುವುದು. ಆಗಾಗ್ಗೆ ಮೂತ್ರ ವಿಸರ್ಜನೆ, ಮಂದವಾದ ದೃಷ್ಟಿ, ಹಸಿವು ಜಾಸ್ತಿ ಆಗುವುದು ಮತ್ತು ತುಂಬಾ ತೂಕ ಕಡಿಮೆ ಆಗುವುದು. ನಿಮ್ಮ ಒಸಡುಗಳು ಅಥವಾ ನಾಲಿಗೆ ಸಹ ಮಧುಮೇಹ ಅಪಾಯದ ಬಗ್ಗೆ ಸುಳಿವು ನೀಡಬಹುದು ಎಂದು ನೀವು ಎಂದಾದರೂ ಕೇಳಿದ್ದೀರಾ..? ಇದು ನಿಮಗೆ ಸ್ವಲ್ಪ ವಿಚಿತ್ರ ಎನಿಸಬಹುದು. ನಿಮ್ಮ ಬಾಯಿಯಲ್ಲಿ ಮಧುಮೇಹದ ಬಗ್ಗೆ ಸುಳಿವು ನೀಡುವ ಕೆಲವು ಲಕ್ಷಣಗಳಿವೆ ಅವುಗಳನ್ನು ಒಮ್ಮೆ ನೋಡಿ...

ಇದನ್ನೂ ಓದಿ: Meena Birthday: ಅಮ್ಮನ ಪಡಿಯಚ್ಚು ಈ ಸ್ಟಾರ್​ ಕಿಡ್​: ನಟಿ ಮೀನಾರ ಮಗಳು ಹೇಗಿದ್ದಾಳೆ ನೋಡಿ..!

ನಮ್ಮ ಬಾಯಿ ಒಣಗುವುದು

ನಿಮ್ಮ ಬಾಯಿಯಲ್ಲಿ ಲಾಲಾರಸದ ಉತ್ಪಾದನೆಯು ರಕ್ತದಲ್ಲಿನ ಸಕ್ಕರೆ ಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಅದು ಅನಿಯಂತ್ರಿತವಾಗಿ ಹೆಚ್ಚಾದರೆ, ಲಾಲಾರಸದ ಉತ್ಪಾದನೆಯು ಕಡಿಮೆಯಾಗಬಹುದು. ನಿಮ್ಮ ಬಾಯಿಯಲ್ಲಿ ಹೆಚ್ಚುವರಿ ಶುಷ್ಕತೆಯನ್ನು ಅನುಭವಿಸಬಹುದು. ಇದರಿಂದ ಬಾಯಿಯಲ್ಲಿ ಹುಣ್ಣುಗಳು ಸಹ ಆಗಬಹುದು.

ನಿಮಗೆ ಗಾಯವಾಗಿದ್ದರೆ, ಅದು ನಿಧಾನವಾಗಿ ಗುಣವಾಗುತ್ತದೆ

ನಿಮ್ಮ ಆರೋಗ್ಯದ ಮೇಲೆ ಮಧುಮೇಹದ ಅನೇಕ ಅಡ್ಡ ಪರಿಣಾಮಗಳಲ್ಲಿ ಒಂದು ಎಂದರೆ ನಿಮಗೆ ಏನಾದರೂ ಗಾಯವಾದರೆ, ರಕ್ತದಲ್ಲಿನ ಅಧಿಕ ಸಕ್ಕರೆ ಮಟ್ಟವು ಗಾಯ ಗುಣವಾಗುವುದರ ಮೇಲೆ ಪರಿಣಾಮ ಬೀರುತ್ತದೆ. ಬಾಯಿಯ ಆರೋಗ್ಯಕ್ಕೂ ಇದು ಅನ್ವಯಿಸುತ್ತದೆ. ಬಾಯಿಯಲ್ಲಿ ಹುಣ್ಣಾದರೆ ಅದು ವಾಸಿಯಾಗಲು ತುಂಬಾ ಸಮಯ ತೆಗೆದುಕೊಳ್ಳುತ್ತದೆ.

ಸೋಂಕು ಉಂಟಾಗುವ ಸಾಧ್ಯತೆ ಹೆಚ್ಚು

ಮಧುಮೇಹ ಹೊಂದಿರುವ ಜನರ ಬಾಯಿಯಲ್ಲಿ ಅಥವಾ ನಾಲಿಗೆಯ ಮೇಲೆ ಸೋಂಕು ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ. ಈ ಸೋಂಕು ಅನಿಯಂತ್ರಿತ ಮಧುಮೇಹ ಹೊಂದಿರುವ ಜನರ ಲಾಲಾರಸದ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತದೆ.

ಇದನ್ನೂ ಓದಿ: ಕಹಿ ಸುದ್ದಿ ಜತೆ ಸಿಹಿ ಸುದ್ದಿ ಕೊಟ್ಟ Upendra: ಹೊಸ ಸಿನಿಮಾ ಟೈಟಲ್​ ಬಗ್ಗೆ ರಿಯಲ್​ ಸ್ಟಾರ್ ಹೇಳಿದ್ದು ಹೀಗೆ..!

ನಾಲಿಗೆ ಅಥವಾ ಬಾಯಿ ಉರಿಯುವುದು

ಒಣಗಿದ ಬಾಯಿಯಿಂದ ನಾಲಿಗೆಯಲ್ಲಿ ಉರಿಯನ್ನು ಅನುಭವಿಸಬಹುದು. ರೋಗಿಗಳು ತಮ್ಮ ನಾಲಿಗೆ ಮರಗಟ್ಟುವುದನ್ನು ಅನುಭವಿಸಬಹುದು ಮತ್ತು ವಯಸ್ಸಾದಂತೆ ರುಚಿಯ ಸಾಮರ್ಥ್ಯವನ್ನೂ ಕಳೆದುಕೊಳ್ಳಬಹುದು. ಇವೆಲ್ಲ ರೋಗದ ಲಕ್ಷಣಗಳು ನಿಮ್ಮಲ್ಲಿ ಕಂಡು ಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು. ಏಕೆಂದರೆ ಕಾಯಿಲೆ ಬಂದ ಮೇಲೆ ಚಿಕಿತ್ಸೆ ಪಡೆಯುವುದಕ್ಕಿಂತ ಅದನ್ನು ಬಾರದಂತೆ ನೋಡಿಕೊಳ್ಳುವುದು ಉತ್ತಮ.
Published by:Anitha E
First published: