Sexual Wellness | ಮಗುವಿಗೆ ಹಾಲುಣಿಸುವ ಹೆಂಡತಿಗೆ ಸೆಕ್ಸ್ ಸಮಯದಲ್ಲಿ ಸ್ತನ ಅದುಮಿದರೆ ಅಡ್ಡ ಪರಿಣಾಮ ಬೀರಲಿದೆಯೇ?

ಸ್ತನ ಚೀಪುವಿಕೆ ಒಂದೇ ಲೈಂಗಿಕ ಕ್ರಿಯೆಯ ಭಾಗವಲ್ಲ ಎಂಬುದನ್ನು ನೆನಪಿಡಿ. ಕಿವಿ, ಬೆನ್ನು,  ಹೊಟ್ಟೆ, ಅವಳ ಸೊಂಟದ ವಕ್ರರೇಖೆ, ಕುತ್ತಿಗೆ.. ಹೀಗೆ ಹೊಸ ಹೊಸ ಪ್ರಯೋಗಗಳಿವೆ. ಉತ್ತಮ ಲೈಂಗಿಕತೆಯು ಕಲ್ಪನೆ ಮತ್ತು ಪ್ರಯೋಗದ ಮೇಲೆ ಇದೆ ಮತ್ತು ಈ ಪರಿಸ್ಥಿತಿಯಲ್ಲಿ ಆಕೆಯ ದೇಹವನ್ನು ಹೆಚ್ಚು ಅನ್ವೇಷಿಸುವ ಒಂದು ಹೊಸ ಮಾರ್ಗವೆಂದು ಪರಿಗಣಿಸಿ, ಹಾಗೆಯೇ ಮುಂದುವರೆಯಿರಿ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಪ್ರಶ್ನೆ; ನನ್ನ ಹೆಂಡತಿಗೆ ಮೂರು ತಿಂಗಳ ಹಿಂದೆ ನಾರ್ಮಲ್ ಡೆಲಿಯಾಗಿದೆ. ಈಗ ನಾವು ಹೊಸ ಲೈಂಗಿಕ ಸಂಬಂಧ ಅನುಭವಿಸಲು ಉತ್ಸುಕರಾಗಿದ್ದೇವೆ. ಮಗುವಿಗೂ ತಾಯಿ ಈಗಲೂ ಎದೆಹಾಲು ಉಣಿಸುತ್ತಿದ್ದಾಳೆ. ಒಂದು ವೇಳೆ ಆಕೆಯೊಂದಿಗೆ ನಾನು ಸೆಕ್ಸ್ ಮಾಡುವ ಸಮಯದಲ್ಲಿ ಆಕೆಯ ಸ್ತನ ಚೀಪಿದರೆ ಅದರ ಅದುಮಿದರೆ ಅದರಿಂದ ಏನಾದರೂ ಪರಿಣಾಮವಾಗಲಿದೆಯೇ?  

ಉತ್ತರ; ಮೊದಲಿಗೆ ನಿಮಗೆ ಶುಭಾಶಯಗಳು. ನೀವು ನಿಮ್ಮ ಹೊಸ ಲೈಂಗಿಕ ಸಂಬಂಧದ ಬಗ್ಗೆ ಉತ್ಸುಕರಾಗಿರುವುದು ನನಗೆ ತುಂಬಾ ಖುಷಿಯಾಗಿದೆ.

ಮೊಲೆ ಹಾಲುಣಿಸುವ ಸಂದರ್ಭದಲ್ಲಿ ಸ್ತನ ಪ್ರಚೋದನೆಯಿಂದ ಯಾವುದೇ ಅಡ್ಡ ಪರಿಣಾಮ ಇಲ್ಲ. ಇವೆರಡು ಸಂದರ್ಭಗಳಲ್ಲಿ ಆಕೆಯ ಸ್ತನಗಳು ವಿಭಿನ್ನ ರೀತಿಯಾಗಿ ರಿಯಾಕ್ಟ್ ಮಾಡುತ್ತದೆ. ಹಾಲುಣಿಸುವ ಸ್ತನಗಳು ಅತ್ಯಂತ ಸೂಕ್ಷ್ಮವಾಗಿರುತ್ತವೆ ಮತ್ತು ಅಲ್ಲಿನ ಯಾವುದೇ ಪ್ರಚೋದನೆಯು ನಿಮ್ಮ ಹೆಂಡತಿಗೆ ಹೆಚ್ಚಿನ ನೋವನ್ನು ಉಂಟುಮಾಡಬಹುದು. ಒಂದು ವೇಳೆ, ಆಕೆಗೆ ನೋವಾಗುತ್ತಿದ್ದರೆ ಅದನ್ನು ಕೇಳಿ. ನೋವು ಉಂಟಾಗುತ್ತಿದ್ದರೆ ಆ ಕೆಲಸ ಮಾಡಬೇಡಿ.

ಹಾಲುಣಿಸುವ ತಾಯಂದಿರು ಸಾಮಾನ್ಯಕ್ಕಿಂತ ಕಡಿಮೆ ಕಾಮಾಸಕ್ತಿಯನ್ನು ಹೊಂದಿರುವುದು ಸಹ ಸಾಮಾನ್ಯವಾಗಿದೆ. ಆಗಾಗ್ಗೆ ಇದು ಯೋನಿ ಶುಷ್ಕತೆಗೆ ಕಾರಣವಾಗುತ್ತದೆ. ಸ್ತನ್ಯಪಾನ ಮಾಡುವಾಗ ದೇಹವು ಲ್ಯಾಕ್ಟೇಟ್​ಗೆ ಸಹಾಯ ಮಾಡಲು ಹೆಚ್ಚಿನ ಮಟ್ಟದ ಹಾರ್ಮೋನ್ ಪ್ರೊಲ್ಯಾಕ್ಟಿನ್ ಅನ್ನು ಉತ್ಪಾದಿಸುತ್ತದೆ ಮತ್ತು ಕಡಿಮೆ ಪ್ರಮಾಣದ ಈಸ್ಟ್ರೊಜೆನ್ ಅನ್ನು ಉತ್ಪಾದಿಸುತ್ತದೆ. ಇದು ಯೋನಿಯ ಶುಷ್ಕತೆಗೆ ಕಾರಣವಾಗಬಹುದು. ನೀವು ಲೈಂಗಿಕ ಸಂಬಂಧಗಳನ್ನು ಮರುಪ್ರಾರಂಭಿಸಲು ಪ್ರಯತ್ನಿಸಿದಾಗ ದಯವಿಟ್ಟು ಈ ವಿಷಯಗಳನ್ನು ಗಣನೆಗೆ ತೆಗೆದುಕೊಳ್ಳಿ.

ಮುಖ್ಯವಾಗಿ ಈಗ ನಿಮ್ಮ ಹೆಂಡತಿಯ ಸ್ತನಗಳ ಮುಖ್ಯ ಉದ್ದೇಶವೆಂದರೆ ನಿಮ್ಮ ಮಗುವಿಗೆ ಹಾಲುಣಿಸುವುದು. ಲೈಂಗಿಕತೆಗಾಗಿ ಹಾಲುಣಿಸುವುದನ್ನು ನಿಲ್ಲಿಸಬಾರದು ಎಂಬುದನ್ನು ದಯವಿಟ್ಟು ನೆನಪಿಡಿ. ಆದ್ದರಿಂದ ಲೈಂಗಿಕ ಸಮಯದಲ್ಲಿ ಎದೆ ಹಾಲು ಸೋರಿಕೆಯಾಗುತ್ತಿದೆಯೇ ಎಂದು ಗಮನಿಸಿ. ವಿಶೇಷವಾಗಿ ನೀವು ಮೊಲೆತೊಟ್ಟುಗಳನ್ನು ಅದುಮಲು ಪ್ರಯತ್ನಿಸಿದರೆ ಸೋರಿಕೆಯಾಗುವ ಸಂಭವ ಹೆಚ್ಚಾಗಿರುತ್ತದೆ.

ಇದನ್ನು ಓದಿ: Sexual Wellness | ಶಿಶ್ನದ ಗಾತ್ರ ಕಡಿಮೆ, ಇದು ನನ್ನನ್ನು ಲೈಂಗಿಕ ಜೀವನದಲ್ಲಿ ಕೊರಗುವಂತೆ ಮಾಡಿದೆ

ಸ್ತನ ಚೀಪುವಿಕೆ ಒಂದೇ ಲೈಂಗಿಕ ಕ್ರಿಯೆಯ ಭಾಗವಲ್ಲ ಎಂಬುದನ್ನು ನೆನಪಿಡಿ. ಕಿವಿ, ಬೆನ್ನು,  ಹೊಟ್ಟೆ, ಅವಳ ಸೊಂಟದ ವಕ್ರರೇಖೆ, ಕುತ್ತಿಗೆ.. ಹೀಗೆ ಹೊಸ ಹೊಸ ಪ್ರಯೋಗಗಳಿವೆ. ಉತ್ತಮ ಲೈಂಗಿಕತೆಯು ಕಲ್ಪನೆ ಮತ್ತು ಪ್ರಯೋಗದ ಮೇಲೆ ಇದೆ ಮತ್ತು ಈ ಪರಿಸ್ಥಿತಿಯಲ್ಲಿ ಆಕೆಯ ದೇಹವನ್ನು ಹೆಚ್ಚು ಅನ್ವೇಷಿಸುವ ಒಂದು ಹೊಸ ಮಾರ್ಗವೆಂದು ಪರಿಗಣಿಸಿ, ಹಾಗೆಯೇ ಮುಂದುವರೆಯಿರಿ.
Published by:HR Ramesh
First published: