Bride Weight Loss: ಮದುವೆ ಡೇಟ್ ಹತ್ತಿರ ಇದ್ಯಾ? ಮದುಮಗಳು ತೂಕ ಇಳಿಸಲು ಕೆಲವು ಸಲಹೆ

ಮದುವೆಯಲ್ಲಿ ಸ್ಲಿಮ್ ಆಗಿ ಕಾಣಬೇಕು. ಫೋಟೋಗಳು ಚೆನ್ನಾಗಿ ಬರಬೇಕು. ಡ್ರೆಸ್ ಸರಿಯಾಗಿ ಫಿಟ್ ಆಗಬೇಕು. ಹೀಗೆ ಇಚ್ಛೆ ಹೊಂದಿರುವ ಪ್ರತೀ ಮದುಮಗಳು ಮದುವೆ ಹತ್ತಿರ ಬರುತ್ತಿದ್ದಂತೆ ಸ್ಟ್ರಿಕ್ಟ್ ಡಯಟ್, ವರ್ಕೌಟ್ ಮಾಡಿ ತೂಕ ಇಳಿಸಲು ಶ್ರಮಿಸುತ್ತಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಮದುವೆ (Marriage) ಅನ್ನೋದು ಎಲ್ಲರ ಕನಸು (Dream). ತಮ್ಮ ಮದುವೆಯಲ್ಲಿ ಎಲ್ಲರಿಗಿಂತ ಸುಂದರವಾಗಿ (Beautiful) ಕಾಣಬೇಕು. ಸುಂದರವಾದ ಡ್ರೆಸ್ (Dress) ಹಾಕಬೇಕು. ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿರಬೇಕು ಎಂಬುದು ಪ್ರತಿ ವಧುವಿನ (Bride) ಇಚ್ಛೆ. ಕೇವಲ ಡ್ರೆಸ್, ಒಡವೆ ಮಾತ್ರ ಅಲ್ಲ. ತಾನು ಮದುವೆಯಲ್ಲಿ ಸ್ಲಿಮ್ ಆಗಿ ಕಾಣಬೇಕು. ಫೋಟೋಗಳು ಚೆನ್ನಾಗಿ ಬರಬೇಕು. ಡ್ರೆಸ್ ಸರಿಯಾಗಿ ಫಿಟ್ ಆಗಬೇಕು. ಹೀಗೆ ಇಚ್ಛೆ ಹೊಂದಿರುವ ಪ್ರತೀ ಮದುಮಗಳು ಮದುವೆ ಹತ್ತಿರ ಬರುತ್ತಿದ್ದಂತೆ ಸ್ಟ್ರಿಕ್ಟ್ ಡಯಟ್, ವರ್ಕೌಟ್ ಮಾಡಿ ತೂಕ ಇಳಿಸಲು ಶ್ರಮಿಸುತ್ತಾರೆ. ಪ್ರಪಂಚದ ಪ್ರತಿಯೊಬ್ಬ ವಧು-ವರರು ತಮ್ಮ ಮದುವೆಯಲ್ಲಿ ಪರಿಪೂರ್ಣ ಮತ್ತು ಸುಂದರವಾಗಿ ಕಾಣಲು ಬಯಸುತ್ತಾರೆ.

    ಮದುಮಗಳು ತೂಕ ಇಳಿಕೆಗೆ ಏನು ಮಾಡಬೇಕು?

    ಹಾಗಾಗಿ ವಧು ಎಲ್ಲ ರೀತಿಯ ಪ್ರಯತ್ನ ಮಾಡುತ್ತಾಳೆ ಮತ್ತು ಟೆನ್ಷನ್‌ ತೆಗೆದುಕೊಳ್ಳಲು ಶುರು ಮಾಡುತ್ತಾಳೆ. ತಾನು ದಪ್ಪ ಇದ್ದರೆ ಊಟ ಬಿಟ್ಟು, ಡಯಟ್ ಮಾಡಿ, ವ್ಯಾಯಾಮ ಮಾಡಿ ಸಣ್ಣ ಆಗಲು ಟ್ರೈ ಮಾಡುತ್ತಾರೆ. ಹೆಚ್ಚಿದ ತೂಕ ಅನೇಕ ವಧುಗಳನ್ನು ಸ್ಟ್ರೆಸ್ ಗೆ ತುತ್ತಾಗುವಂತೆ ಮಾಡುತ್ತದೆ.

    ತುಂಬಾ ವಧುಗಳು ಹೆಚ್ಚಿದ ತೂಕದಿಂದಾಗಿ ತೊಂದರೆ ಅನುಭವಿಸುವುದು ಮತ್ತು ಉದ್ವೇಗಕ್ಕೆ ಒಳಗಾಗುತ್ತಾರೆ. ತೂಕ ಬೇಗ ಕಡಿಮೆ ಮಾಡುವ ಸರಿಯಾದ ವಿಧಾನ ಗೊತ್ತಾಗದೇ ಒದ್ದಾಡುತ್ತಾರೆ. ಆದ್ದರಿಂದ ಗಾಬರಿಯಾಗುವುದು ಬೇಡ. ಆದರೆ ಕೆಲವು ಸಲಹೆ ಅಳವಡಿಸಿಕೊಳ್ಳುವ ಮೂಲಕ ನೀವು ತೂಕ ಇಳಿಸಿಕೊಳ್ಳಬಹುದು.

    ಇದನ್ನೂ ಓದಿ: ನಿಮ್ಮದು ಸೂಕ್ಷ್ಮ ತ್ವಚೆಯಾ? ಸ್ಕಿನ್ ಕೇರ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ

    ಮನೆಯಲ್ಲಿಯೇ ವಧುಗಳು ತೂಕ ಇಳಿಸಲು ಸಲಹೆ

    ಮದುವೆಯ ತಯಾರಿಯಲ್ಲಿರುವ ಮದುಮಗಳಿಗೆ ಹೊರಗೆ ಹೋಗಿ ಜಿಮ್, ವರ್ಕೌಟ್ ಮಾಡಲು ಸಮಯ ಇರುವುದಿಲ್ಲ. ಇಂತಹ ಸ್ಥಿತಿಯಲ್ಲಿ ಮನೆಯಲ್ಲಿಯೇ ವಧುಗಳು ನಿಮ್ಮ ತೂಕ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಅದು ಹೇಗೆಂದು ತಿಳಿಯೋಣ.

    ಇದಕ್ಕಾಗಿ ವಧುಗಳು ಆಹಾರದಲ್ಲಿ ಕೆಲವು ಬದಲಾವಣೆ ಮಾಡಬೇಕು. ಮದುವೆಗೂ ಮುನ್ನ ನಿಮ್ಮ ತೂಕವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕಾದರೆ ಇಲ್ಲಿ ಹೇಳಲಾದ ಕೆಲವು ಕ್ರಮಗಳನ್ನು ಅನುಸರಿಸಿ. ಹಾಗಾದರೆ ನಿಮ್ಮ ತೂಕ ನಷ್ಟವನ್ನು ಹೇಗೆ  ಮಾಡಬೇಕೆಂಉ ತಿಳಿಯಿರಿ.

    ಮದುವೆಗೆ ಒಂದು ತಿಂಗಳ ಮೊದಲು

    - ಬೆಳಿಗ್ಗೆ ಮೊದಲು ಎರಡು ಲೋಟ ನೀರು ಕುಡಿಯಿರಿ ಮತ್ತು ನೆನೆಸಿದ ಬಾದಾಮಿ ತಿನ್ನಿರಿ

    - ಬೆಳಗಿನ ಉಪಾಹಾರಕ್ಕಾಗಿ ಒಂದು ಬೌಲ್ ಓಟ್ಸ್, ಗಂಜಿ, ಪೋಹಾ, ಉಪ್ಮಾ ಅಥವಾ ಸ್ಯಾಂಡ್‌ವಿಚ್ ಸೇವಿಸಿ

    - ಬೆಳಗಿನ ಉಪಾಹಾರದ ನಂತರ, ಒಂದು ಲೋಟ ಹಣ್ಣು ಮತ್ತು ಒಂದು ಲೋಟ ಮಜ್ಜಿಗೆ ತೆಗೆದುಕೊಳ್ಳಿ.

    - ಮಧ್ಯಾಹ್ನದ ಊಟಕ್ಕೆ ಸಲಾಡ್ ಮತ್ತು ಎರಡು ರೊಟ್ಟಿ ಅಥವಾ ಒಂದು ಬೌಲ್ ಬ್ಯಾಗೆಟ್ ರೈಸ್, ತರಕಾರಿ ಮತ್ತು ಉದ್ದಿನಬೇಳೆ ಸೇವಿಸಿ.

    - ಸಂಜೆ ಒಂದು ಕಪ್ ಹಸಿರು ಚಹಾ ಮತ್ತು ಒಂದು ಹಿಡಿ ಮೊಳಕೆ ಬಂದ ಕಾಳುಗಳು

    - ರಾತ್ರಿ 8 ಗಂಟೆಯ ಮೊದಲು ಊಟ ಮಾಡಲು ಪ್ರಯತ್ನಿಸಿ. ಸೂಪ್ ಅಥವಾ ಸಲಾಡ್ ಮತ್ತು ಎರಡು ರೊಟ್ಟಿ ಮತ್ತು ತರಕಾರಿ ಆಹಾರದಲ್ಲಿ ಸೇರಿಸಿ .

    - ಮಲಗುವ ವೇಳೆಗೆ ಟೋನ್ ಮಾಡಿದ ಹಾಲು ಸೇವಿಸಿ

    ಮದುವೆಗೆ ಒಂದು ವಾರದ ಮೊದಲು ಡಯಟ್ ಪ್ಲಾನ್

    - ಬೆಳಿಗ್ಗೆ ಎರಡು ಲೋಟ ನೀರು ಮತ್ತು ನೆನೆಸಿದ 10 ಬಾದಾಮಿ ಸೇವಿಸಿ.

    - ಬೆಳಗಿನ ಊಟದಲ್ಲಿ ಒಂದು ಸುಟ್ಟ ಬಹುಧಾನ್ಯ ಬ್ರೆಡ್ ಮತ್ತು ಒಂದು ಲೋಟ ಹಾಲು

    - ಬೆಳಗಿನ ಉಪಾಹಾರದ ನಂತರ ಒಂದು ಬಟ್ಟಲು ಹಣ್ಣು

    - ಮಧ್ಯಾಹ್ನದ ಊಟದಲ್ಲಿ ಸಲಾಡ್, ರೊಟ್ಟಿ ಅಥವಾ ಅರ್ಧ ಬೌಲ್ ಬ್ರೌನ್ ರೈಸ್, ತರಕಾರಿ ಮತ್ತು ಬೇಳೆಕಾಳು ತೆಗೆದುಕೊಳ್ಳಿ.

    ಇದನ್ನೂ ಓದಿ: ಕೀಲು ನೋವು ಸಮಸ್ಯೆಗೆ ಪರಿಹಾರ ನೀಡಲು ಯಾವ ಹಣ್ಣುಗಳ ಸೇವನೆ ಮಾಡುವುದು ಉತ್ತ,ಮ ಗೊತ್ತಾ?

    - ಮೊಳಕೆ ಕಾಳುಗಳು ಸಂಜೆ ಒಂದು ಲೋಟ ಹಣ್ಣಿನ ರಸದೊಂದಿಗೆ ಸೇವಿಸಬಹುದು.

    - ರಾತ್ರಿಯ ಊಟಕ್ಕೆ ಸೂಪ್ , ಒಂದು ರೋಟಿ ತರಕಾರಿ ಸೇವಿಸಿ

    - ಮಲಗುವ ಮುನ್ನ ಒಂದು ಕಪ್ ಟೋನ್ಡ್ ಹಾಲು ಸೇವಿಸಿ.
    Published by:renukadariyannavar
    First published: