Rice: ಮಧುಮೇಹ, ಪಿಸಿಒಎಸ್ ಸಮಸ್ಯೆ ಇದ್ದವರು ಅನ್ನ ಸೇವಿಸಬಹುದೇ? ಏನಂತಾರೆ ತಜ್ಞರು

ಮಹಿಳೆಯರಲ್ಲಿ ಒಂದು ಸಾಮಾನ್ಯ ಹಾರ್ಮೋನ್ ಅಸ್ವಸ್ಥತೆಯಾಗಿದ್ದು, ಇದು ಬದಲಾದ ಜೀವನಶೈಲಿ, ಆಹಾರ ಪದ್ಧತಿ ಮತ್ತು ಇತರ ಅಂಶಗಳೊಂದಿಗೆ ಉಂಟಾಗುತ್ತದೆ. ಇತರ ವಿಷಯಗಳಲ್ಲಿ, ಪಿಸಿಒಎಸ್ ನ ಹೆಚ್ಚು ಪರಿಣಾಮಗಳಲ್ಲಿ ಒಂದು ಟೈಪ್ 2 ಮಧುಮೇಹವು ನಂತರ ಸಂಭವಿಸುತ್ತದೆ. ಪಿಸಿಒಎಸ್ ಹೊಂದಿರುವ ಮಹಿಳೆಯರು ಮಧುಮೇಹವನ್ನು ಕೂಡ ಹೊಂದುವ ನಾಲ್ಕು ಪಟ್ಟು ಹೆಚ್ಚಿನ ಅಪಾಯವನ್ನು ಹೊಂದಿದ್ದಾರೆ ಎಂದು ಹಲವಾರು ಅಧ್ಯಯನಗಳು ಸೂಚಿಸುತ್ತವೆ.

ಅನ್ನ

ಅನ್ನ

  • Share this:

ಸಾಮಾನ್ಯವಾಗಿ ದೇಹದ ತೂಕ ಕಡಿಮೆ ಮಾಡುವ (Body weight Loss) ಪ್ರಯತ್ನದಲ್ಲಿರುವವರಿಗೆ ತುಂಬಾ ಜನರು (People) ನೀಡುವ ಒಂದು ಸಲಹೆ ಎಂದರೆ ರಾತ್ರಿ ಹೊತ್ತು ಅನ್ನವನ್ನು (Rice) ತಿನ್ನಬೇಡಿ ಎಂದಾಗಿದ್ದು ಲಘುವಾದ ರೋಟಿ ಅಥವಾ ಚಪಾತಿ ತಿನ್ನಬೇಕು ಎಂದರ್ಥವಾಗಿದೆ. ಆದರೆ ಇನ್ನೂ ಕೆಲವು ಅಸ್ವಸ್ಥತೆಗಳು ಮತ್ತು ರೋಗಗಳು (Diseases) ನಮ್ಮನ್ನು ಆವರಿಸಿಕೊಂಡಾಗ ವೈದ್ಯರು (Doctors) ನಮಗೆ ಸಂಪೂರ್ಣವಾಗಿ ಅನ್ನವನ್ನು ಸೇವಿಸಬೇಡಿ ಎಂದು ಹೇಳುವುದನ್ನು ಸಹ ನಾವು ಕೇಳಿರುತ್ತೇವೆ. ಅದರಲ್ಲೂ ನಮಗೆ ಸಕ್ಕರೆ ಕಾಯಿಲೆ (Diabetes) ಇದ್ದರೆ ಅಂತೂ ವೈದ್ಯರು ಅನ್ನವನ್ನು ಮಿತವಾಗಿ ಸೇವಿಸಿ ಅಥವಾ ಪೂರ್ತಿಯಾಗಿ ಬಿಡಿ ಅಂತ ಹೇಳುತ್ತಾರೆ.


ಪಾಲಿಸಿಸ್ಟಿಕ್ ಓವೇರಿಯನ್ ಸಿಂಡ್ರೋಮ್ (ಪಿಸಿಒಎಸ್) ಮಹಿಳೆಯರಲ್ಲಿ ಒಂದು ಸಾಮಾನ್ಯ ಹಾರ್ಮೋನ್ ಅಸ್ವಸ್ಥತೆಯಾಗಿದ್ದು, ಇದು ಬದಲಾದ ಜೀವನಶೈಲಿ, ಆಹಾರ ಪದ್ಧತಿ ಮತ್ತು ಇತರ ಅಂಶಗಳೊಂದಿಗೆ ಉಂಟಾಗುತ್ತದೆ. ಇತರ ವಿಷಯಗಳಲ್ಲಿ, ಪಿಸಿಒಎಸ್ ನ ಹೆಚ್ಚು ಪರಿಣಾಮಗಳಲ್ಲಿ ಒಂದು ಟೈಪ್ 2 ಮಧುಮೇಹವು ನಂತರ ಸಂಭವಿಸುತ್ತದೆ. ಪಿಸಿಒಎಸ್ ಹೊಂದಿರುವ ಮಹಿಳೆಯರು ಮಧುಮೇಹವನ್ನು ಕೂಡ ಹೊಂದುವ ನಾಲ್ಕು ಪಟ್ಟು ಹೆಚ್ಚಿನ ಅಪಾಯವನ್ನು ಹೊಂದಿದ್ದಾರೆ ಎಂದು ಹಲವಾರು ಅಧ್ಯಯನಗಳು ಸೂಚಿಸುತ್ತವೆ.


ಪಿಸಿಒಎಸ್ ಅಥವಾ ಮಧುಮೇಹವನ್ನು ಹೊಂದಿದ್ದರೆ ಅನ್ನ ತಿನ್ನಬಹುದೇ?
ಎರಡೂ ಪರಿಸ್ಥಿತಿಗಳಲ್ಲಿ, ತಜ್ಞರು ಆರೋಗ್ಯಕರ ಆಹಾರಗಳನ್ನು ಸೇವಿಸುವ ಮತ್ತು ತೂಕ ನಷ್ಟದ ಮೇಲ್ವಿಚಾರಣೆಯ ಪ್ರಾಮುಖ್ಯತೆಯನ್ನು ಒತ್ತಿ ಹೇಳುತ್ತಾರೆ. ಅನ್ನದಂತಹ ಸಂಸ್ಕರಿಸಿದ ಕಾರ್ಬೋಹೈಡ್ರೇಟ್ ಗಳ ಸೇವನೆಯನ್ನು ಬಲವಾಗಿ ತಿರಸ್ಕರಿಸಲಾಗುತ್ತದೆ. ಆದ್ದರಿಂದ, ನೀವು ಪಿಸಿಒಎಸ್ ಅಥವಾ ಮಧುಮೇಹವನ್ನು ಹೊಂದಿದ್ದರೆ ಅನ್ನ ತಿನ್ನುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕೇ ಅಂತ ಅನೇಕರಿಗೆ ಪ್ರಶ್ನೆಯೊಂದು ಕಾಡುತ್ತಿರುತ್ತದೆ.


ಪೌಷ್ಟಿಕ ತಜ್ಞೆ ಭಕ್ತಿ ಕಪೂರ್ ಏನ್ ಹೇಳ್ತಿದ್ದಾರೆ ನೋಡಿ 
ಪೌಷ್ಟಿಕ ತಜ್ಞೆ ಭಕ್ತಿ ಕಪೂರ್ ಅವರು "ನೀವು ಪಿಸಿಒಎಸ್ ಅಥವಾ ಮಧುಮೇಹವನ್ನು ಹೊಂದಿದ್ದರೂ ಸಹ ನೀವು ಅನ್ನವನ್ನು ತಿನ್ನಬಹುದು, ಆದರೆ ಅದು ಒಂದು ಮಿತಿಯಲ್ಲಿರುವುದು ಮುಖ್ಯವಾಗುತ್ತದೆ. ನಿಮ್ಮ ಊಟವು ಪಲ್ಯ ಮತ್ತು ಸಲಾಡ್ ರೂಪದಲ್ಲಿ ಸಾಕಷ್ಟು ತರಕಾರಿಗಳನ್ನು ಮತ್ತು ಪ್ರೋಟೀನ್‌ಗಾಗಿ ಸ್ವಲ್ಪ ದಾಲ್, ಮೊಸರು ಅಥವಾ ಮಾಂಸವನ್ನು ಒಳಗೊಂಡಿರಬೇಕು" ಎಂದು ತಜ್ಞರು ಹೇಳುತ್ತಾರೆ.


ಇದನ್ನೂ ಓದಿ:  Multivitamin Deficiency: ಅತಿಯಾಗಿ ಆಯಾಸವಾಗುತ್ತಾ? ದೇಹಕ್ಕೆ ಮಲ್ಟಿವಿಟಮಿನ್ ಅಗತ್ಯವಾಗಿ ಬೇಕು

ಪಿಸಿಒಎಸ್ ಮತ್ತು ಮಧುಮೇಹದ ಸಂದರ್ಭದಲ್ಲಿ ಆಹಾರ ಮತ್ತು ದೈಹಿಕ ಚಟುವಟಿಕೆಯ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ ಅವರು "ಪ್ರತಿದಿನ, ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟ ಏರಿಕೆಯಾಗುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ನೀವು ನಿಮ್ಮ ಆಹಾರವನ್ನು ಮೇಲ್ವಿಚಾರಣೆ ಮಾಡಬೇಕು. ಆದ್ದರಿಂದ, ಕಡಿಮೆ ಜಿಐ (ಗ್ಲೈಸೆಮಿಕ್ ಇಂಡೆಕ್ಸ್) ಆಹಾರಗಳನ್ನು ಸೇವಿಸುವುದು ಮುಖ್ಯವಾಗುತ್ತದೆ.


ಅತಿಯಾಗಿ ಅಣ್ಣ ಸೇವನೆ ಒಳ್ಳೆಯದಲ್ಲವಂತೆ 
ಇದಕ್ಕೆ ವ್ಯತಿರಿಕ್ತವಾಗಿ, ಅನ್ನವು ಕಾರ್ಬೋಹೈಡ್ರೇಟುಗಳಲ್ಲಿ ಹೇರಳವಾಗಿದೆ ಮತ್ತು ಹೆಚ್ಚಿನ ಜಿಐ ಅನ್ನು ಹೊಂದಿದೆ. ಹೀಗಾಗಿ, "ನಿಮಗೆ ಮಧುಮೇಹ ಅಥವಾ ಪಿಸಿಒಎಸ್ ಇದ್ದರೆ, ನೀವು ತುಂಬಾ ಜಾಸ್ತಿ ಅನ್ನ ತಿನ್ನಬಾರದು" ಎಂದು ಅವರು ಸಲಹೆ ನೀಡಿದರು.


ಅಕ್ಕಿಯನ್ನು ಬೇಯಿಸುವಾಗ ಈ ಸಲಹೆಗಳನ್ನು ಫಾಲೋ ಮಾಡಿ
ಕಪೂರ್ ಪ್ರಕಾರ, ನೀವು ಅಕ್ಕಿಯನ್ನು ಬೇಯಿಸುವ ವಿಧಾನವು ಅದರ ಪಿಷ್ಟದ ಅಂಶದ ಮೇಲೆ ನಿರ್ಣಾಯಕ ಪರಿಣಾಮ ಬೀರುತ್ತದೆ. ಹಾಗಾಗಿ ಸರಿಯಾದ ಕ್ರಮದಲ್ಲಿ ಅಕ್ಕಿಯನ್ನು ಬೇಯಿಸಲು ಅವರು ಈ ಕೆಳಗಿನ ಸಲಹೆಗಳನ್ನು ಸೂಚಿಸಿದ್ದಾರೆ.


ಇದನ್ನೂ ಓದಿ:  Health Care Tips: ಮಹಿಳೆಯರಿಗಿಂತ ಪುರುಷರಿಗೆ ಯಾಕೆ ಬೇಕು ಹೆಚ್ಚಿನ ಕ್ಯಾಲೋರಿ?

  • ಅಕ್ಕಿಯನ್ನು ಬೇಯಿಸುವಾಗ ಯಾವಾಗಲೂ ನೀರನ್ನು ಬಸಿದು ನಂತರ ಅದಕ್ಕೆ ಒಂದು ಟೀ ಸ್ಪೂನ್ ಕೊಬ್ಬರಿ ಎಣ್ಣೆ ಅಥವಾ ತುಪ್ಪವನ್ನು ಸೇರಿಸಬೇಕು.

  • ಪ್ರತಿರೋಧಕ ಪಿಷ್ಟವನ್ನು ಹೆಚ್ಚಿಸಲು ಮತ್ತು ಕ್ಯಾಲೋರಿಗಳನ್ನು 60%ದಷ್ಟು ಕಡಿಮೆ ಮಾಡಲು ಇದನ್ನು 12 ಗಂಟೆಗಳ ಕಾಲ ಹಾಗೆ ಬಿಡಿ. ಹೀಗೆ ಮಾಡುವುದರಿಂದ ಗ್ಲುಕೋಸ್ ಏರಿಕೆಯನ್ನು ಕಡಿಮೆ ಮಾಡುತ್ತದೆ ಮತ್ತು ನಿಮ್ಮ ಕರುಳಿನ ಆರೋಗ್ಯಕ್ಕೂ ಸಹ ತುಂಬಾ ಪ್ರಯೋಜನವನ್ನು ಇದು ನೀಡುತ್ತದೆ.

  • ನೀವು ಸೇವಿಸುವ ಅನ್ನವು ತುಂಬಾನೇ ಬಿಸಿಯಾಗಿರಲು ಬಯಸಿದರೆ, ಪ್ರತಿರೋಧಕ ಪಿಷ್ಟದ ಅಂಶವನ್ನು ಬದಲಾಯಿಸದೆ ನೀವು ಅದನ್ನು ಮತ್ತೆ ಬಿಸಿ ಮಾಡಬಹುದು.

Published by:Ashwini Prabhu
First published: