Disease From Pigeons: ಚೆಂದ ಅಂತ ಪಾರಿವಾಳ ಸಾಕೋಕೆ ಹೋಗ್ಬೇಡಿ, ಆರೋಗ್ಯ ನಿಮ್ದೇ ಹಾಳಾಗೋದು

ಪಾರಿವಾಳ

ಪಾರಿವಾಳ

ಸಿಟಿಗಳಲ್ಲಿ ಪಾರಿವಾಳಗಳು ಇಲ್ಲದಂತಹ ಜಾಗವೇ ಇಲ್ಲ ಎನ್ನಬಹುದು. ಅದರಲ್ಲೂ ಪಾರಿವಾಳಗಳು ಹೆಚ್ಚಿನ ಬೆಂಗಳೂರಿಗರಿಗೆ ಕುಟುಂಬವಾಗಿಬಿಟ್ಟಿವೆ. ಆದರೆ ಈ ಪಾರಿವಾಳಗಳನ್ನು ಮನೆಯಲ್ಲಿ ಸಾಕುವುದರಿಂದ ಗಂಭೀರ ಆರೋಗ್ಯದ ಸಮಸ್ಯೆ ಎದುರಾಗಬಹುದು ಎಂದು ತಜ್ಞರು ಹೇಳುತ್ತಾರೆ.

  • Share this:

ಸಿಟಿಗಳಲ್ಲಿ ಪಾರಿವಾಳಗಳು (Pigeon) ಇಲ್ಲದಂತಹ ಜಾಗವೇ ಇಲ್ಲ ಎನ್ನಬಹುದು. ಅದರಲ್ಲೂ ಪಾರಿವಾಳಗಳು ಹೆಚ್ಚಿನ ಬೆಂಗಳೂರಿಗರಿಗೆ ಕುಟುಂಬವಾಗಿಬಿಟ್ಟಿವೆ. ಇಷ್ಟವಿರಲಿ ಅಥವಾ ಇಲ್ಲದಿರಲಿ, ಮನೆಯ (House) ಒಂದಷ್ಟು ಜಾಗಗಳನ್ನು ಅವು ಆಕ್ರಮಿಸಿಕೊಂಡಿರುತ್ತವೆ. ಬಾಲ್ಕನಿಗಳು (Balcony), ಸೂರು ಮತ್ತು ಗೋಡೆಯ ಅಂಚುಗಳನ್ನು ಅವು ತಮ್ಮದಾಗಿಸಿಕೊಂಡಿರುತ್ತವೆ. ನೀವು ಅವುಗಳನ್ನು ಓಡಿಸಿದರೂ ಮತ್ತೆ ಬಂದು ಕುಳಿತುಕೊಳ್ಳಲು ಅವಕ್ಕೆ ಮುಜುಗರವೇನೂ ಇಲ್ಲ. ಆದ್ರೆ ಕೆಲವೊಂದಿಷ್ಟು ಜನರು ಪಾಪ ಎಂದು ಅವುಗಳಿಗೆ ಆಹಾರ ನೀಡುತ್ತಾರೆ. ಆದರೆ ಪಾರಿವಾಳಗಳ ಹಿಕ್ಕೆ ಹಾಗೂ ಅದರ ಗರಿಗಳು ನಮ್ಮ ಆರೋಗ್ಯಕ್ಕೆ (Health) ಹಾನಿಕರವಾಗಿವೆ.


ಹಿಕ್ಕೆ, ಗರಿಗಳಿಂದ ಉಂಟಾಗಬಹುದು ಶ್ವಾಸಕೋಶದ ಸಮಸ್ಯೆ


ವೈದ್ಯರು ಹೇಳುವ ಪ್ರಕಾರ, ಪಾರಿವಾಳದ ಹಿಕ್ಕೆ ಹಾಗೂ ಗರಿಗಳು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಅವುಗಳು ಕೆಲವು ಜನರಲ್ಲಿ ಅತಿಸೂಕ್ಷ್ಮ ನ್ಯುಮೋನಿಟಿಸ್ (HP) ಮತ್ತು ದೀರ್ಘಕಾಲದ ನ್ಯುಮೋನಿಟಿಸ್ (CHP) ಪ್ರಚೋದಿಸಬಹುದು.


"ಪಾರಿವಾಳಗಳೊಂದಿಗಿನ ಸಂಪರ್ಕವು ಕೆಲವು ಜನರಲ್ಲಿ ಶ್ವಾಸಕೋಶಕ್ಕೆ ತೀವ್ರ ಹಾನಿಯನ್ನು ಉಂಟುಮಾಡಬಹುದು" ಎಂದು ಅಪೋಲೋ ಆಸ್ಪತ್ರೆಯ ಶ್ವಾಸಕೋಶಶಾಸ್ತ್ರದ ಮುಖ್ಯಸ್ಥ ಡಾ.ರವೀಂದ್ರ ಮೆಹ್ತಾ ಹೇಳುತ್ತಾರೆ.


ಇದನ್ನೂ ಓದಿ: ಇಂತಹ ನಡವಳಿಕೆಗಳು ನಿಮ್ಮ ಆತ್ಮವಿಶ್ವಾಸವನ್ನು ಕುಗ್ಗುವಂತೆ ಮಾಡಬಹುದು!


ಪಾರಿವಾಳಗಳ ಮೇಲಿನ ಪ್ರೀತಿಯಿಂದ ಬಂದಿತ್ತು ಗಂಭೀರ ಕಾಯಿಲೆ!
ಪರಮೇಶ್ವರ್‌ (ಹೆಸರು ಬದಲಾಯಿಸಲಾಗಿದೆ) ಎಂಬುವವರಿಗೆ 53 ವರ್ಷ ವಯಸ್ಸು. ಅವರಿಗೆ ಎರಡು ವರ್ಷಗಳ ಹಿಂದೆ ನಿರಂತರ ಕೆಮ್ಮು, ಜ್ವರ ಆಗಾಗ ಕಾಣಿಸಿಕೊಳ್ಳುತ್ತಿತ್ತು. ಅಂದಹಾಗೆ ಅವರು ಧೂಮಪಾನ ಕೂಡ ಮಾಡುತ್ತಿರಲಿಲ್ಲ. ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಹೊಂದಿದ್ದರೂ ಅದು ನಿಯಂತ್ರಣದಲ್ಲೇ ಇತ್ತು. ಜೊತೆಗೆ ಅವರಿಗೆ ಅಸ್ತಮಾ ಸಹ ಇರಲಿಲ್ಲ. ಈ ವಿಷಯದಲ್ಲಿ ಫ್ಯಾಮಿಲಿ ಹಿಸ್ಟರಿಯಲ್ಲೂ ಅಂತಹ ಯಾವುದೇ ಸಮಸ್ಯೆ ಇರಲಿಲ್ಲ.


ಆದರೆ ನಂತರ ತಿಳಿದು ಬಂದಿದ್ದೇನೆಂದರೆ ಪರಮೇಶ್ವರ್‌ ಅವರು ನಾಲ್ಕು ಪಾರಿವಾಳಗಳನ್ನು ಹೊಂದಿದ್ದರು. ಅಲ್ಲದೆ, ಅವರ ಬಾಲ್ಕನಿಯು ಪಾರಿವಾಳಗಳಿಗೆ ಆಶ್ರಯವಾಗಿತ್ತು. ಅವರು ಪಾರಿವಾಳಗಳಿಗೆ ಆಹಾರವನ್ನು ನೀಡುತ್ತಿದ್ದರು ಎಂದು ಗೊತ್ತಾಯಿತು ಎಂದು ಮಣಿಪಾಲ್ ಆಸ್ಪತ್ರೆಯ ಶ್ವಾಸಕೋಶ ಮತ್ತು ನಿದ್ರೆ ಔಷಧ ವಿಭಾಗದ ಮುಖ್ಯಸ್ಥ ಡಾ. ಸತ್ಯನಾರಾಯಣ ಮೈಸೂರು ಮಾಹಿತಿ ನೀಡುತ್ತಾರೆ.


ಪಾರಿವಾಳ


ನಂತರದಲ್ಲಿ ಪರಮೇಶ್ವರ್‌ ಅವರ ಶ್ವಾಸಕೋಶದ ಪರೀಕ್ಷೆಗೆ ಮಾಡಲಾಯ್ತು. ಅವರ ಶ್ವಾಸಕೋಶದ ವಿಸ್ತರಣೆಯು ಕಡಿಮೆಯಾಗಿತ್ತು. ಹೆಚ್ಚಿನ ರೆಸಲ್ಯೂಶನ್ CT ಎದೆಯ ಸ್ಕ್ಯಾನ್ ಹಲವಾರು ಗಂಟುಗಳನ್ನು ತೋರಿಸಿದೆ ಎಂದು ಡಾ. ಸತ್ಯನಾರಾಯಣ ಮೈಸೂರು ಮಾಹಿತಿ ನೀಡಿದ್ದಾರೆ.


ಇದೆಲ್ಲ ತಿಳಿದ ನಂತರ ಪರಮೇಶ್ವರ್‌, ಪಾರಿವಾಳಗಳಿಗೆ ಆಹಾರ ನೀಡೋದನ್ನು ಸಂಪೂರ್ಣವಾಗಿ ನಿಲ್ಲಿಸಿದರು. ಅಲ್ಪಾವಧಿಗೆ ಡಾಕ್ಸಿಸೈಕ್ಲಿನ್ ಮತ್ತು ಸ್ಟೀರಾಯ್ಡ್ಗಳೊಂದಿಗೆ ಚಿಕಿತ್ಸೆ ಪಡೆದರು. ಈಗ ಅವರು ಆರೋಗ್ಯವಾಗಿದ್ದಾರೆ. ಆದರೆ ಶ್ವಾಸಕೋಶದ ಫೈಬ್ರೋಸ್ಡ್ ಭಾಗಗಳನ್ನು ರಿಡೀಮ್ ಮಾಡಲು ಸಾಧ್ಯವಾಗದಿರಬಹುದು ಎಂದು ಡಾ. ಸತ್ಯನಾರಾಯಣ ಮೈಸೂರು ಹೇಳಿದ್ದಾರೆ


ಗಾಳಿಯಿಂದಲೂ ಉಂಟಾಗಬಹುದು ಗಂಭೀರ ಸಮಸ್ಯೆ!
58 ವರ್ಷದ ಎನ್‌ಜಿಒಗಳ ಸಲಹೆಗಾರರಾದ ಗೋಪಿ ವೆಂಕಟರಾಮನ್‌ಗೆ 2019 ರಲ್ಲಿ ಕೆಮ್ಮು, ಉಸಿರಾಟದ ತೊಂದರೆ ಮತ್ತು ಆಯಾಸದಂತಹ ರೋಗಲಕ್ಷಣಗಳು ಕಾಣಿಸಿಕೊಂಡವು. ಗೋಪಿ ಅವರು ತಮ್ಮ ಮನೆಯಲ್ಲಿ ಪಾರಿವಾಳದ ಬಲೆ ಅಳವಡಿಸಿದ್ದರು. ಆದರೆ ಅಲ್ಲಿನ ಕಾಮನ್‌ ಏರಿಯಾಗಳಿಗೆ ಪಾರಿವಾಳದ ಬಲೆಯನ್ನು ಹಾಕಲಾಗಿರಲಿಲ್ಲ. ಆದ್ದರಿಂದ ಅಂಥ ಜಾಗಗಳಲ್ಲಿ ಪಾರಿವಾಳಗಳು ಬರುವುದು, ಅವುಗಳ ಹಿಕ್ಕೆ, ಅವುಗಳ ಗರಿಗಳು ಬೀಳುವುದು ಸಾಮಾನ್ಯವಾಗಿತ್ತು.
ಅಂಥ ಗಾಳಿಗಳಿಗೆ ಒಡ್ಡಿಕೊಂಡ ಗೋಪಿಯವರಿಗೆ ರೋಗಲಕ್ಷಣಗಳು ಉಲ್ಬಣಗೊಂಡಾಗ ಅವರು ಶ್ವಾಸಕೋಶ ಶಾಸ್ತ್ರಜ್ಞರನ್ನು ಸಂಪರ್ಕಿಸಿದರು. ಸಿಟಿ ಸ್ಕ್ಯಾನ್ಗೆ ಒಳಗಾದರು. ಇದು CHP ಎಂದು ಕಂಡುಹಿಡಿಯಲಾಗಿದ್ದು, ಇದು ಶ್ವಾಸಕೋಶದ ಬಯಾಪ್ಸಿ ಮೂಲಕ ಮತ್ತಷ್ಟು ದೃಢೀಕರಿಸಲ್ಪಟ್ಟಿದೆ" ಎಂದು ಗೋಪಿ ಹೇಳಿದ್ದಾರೆ.


CHP ಹೊಂದಿರುವ ಜನರು ಸಾಮಾನ್ಯವಾಗಿ ಕೆಮ್ಮು, ಉಸಿರಾಟದ ತೊಂದರೆ ಮತ್ತು ಕಡಿಮೆ ರಕ್ತದ ಆಮ್ಲಜನಕದ ಮಟ್ಟವನ್ನು ಹೊಂದಿರುತ್ತಾರೆ. ಗೋಪಿಗೆ ಸಿಎಚ್‌ಪಿ ಇರುವುದು ಗೊತ್ತಾಗುವ ಹೊತ್ತಿಗೆ ಸ್ವಲ್ಪ ತಡವಾಗಿತ್ತು ಎಂದು ಪತಿ ವೆಂಕಟರಮಣ ನೆನಪಿಸಿಕೊಂಡರು.

top videos


    ಪ್ರಸ್ತುತ ಅವರನ್ನು ಇಮ್ಯುನೊಸಪ್ರೆಸೆಂಟ್ಸ್ ಮತ್ತು ಸ್ಟೀರಾಯ್ಡ್‌ಗಳ ಮೇಲೆ ಇರಿಸಲಾಗಿದ್ದು, ಬೇಗ ಅವರು ಗುಣಮುಖರಾಗಬಹುದು ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಪಾರಿವಾಳಗಳನ್ನು ಮನೆಯ ಬಾಲ್ಕನಿಯಲ್ಲಿ ಬಿಟ್ಟುಕೊಳ್ಳುವ ಮುನ್ನ ಎಚ್ಚರಿಕೆ ವಹಿಸಿ.

    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು