Weight Loss Tips: ಬೊಜ್ಜಿನ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ದರೆ ನಿಮ್ಮ ದಿನಚರಿಯಲ್ಲಿ ಮೊದಲು ಇದನ್ನು ಸೇರಿಸಿ

ಅನೇಕ ಕಾರಣಗಳಿಂದಾಗಿ ಜನರು ಸ್ಥೂಲಕಾಯ ಸಮಸ್ಯೆಗೆ ಬಲಿಯಾಗುತ್ತಿದ್ದಾರೆ. ತಿಳಿದೋ, ತಿಳಿಯದೆಯೋ ಬೊಜ್ಜು ಬೆಳೆಯುತ್ತದೆ. ಬೊಜ್ಜು ಕಡಿಮೆ ಮಾಡಲು ಎಲ್ಲಾ ಪ್ರಯತ್ನ ಮಾಡಿದರೂ ಯಾವುದೂ ಪ್ರಯೋಜನ ಆಗಲ್ಲ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಇತ್ತೀಚಿನ ದಿನಗಳಲ್ಲಿ ಬೊಜ್ಜಿನ ಸಮಸ್ಯೆ (Fat Problem) ಅಧಿಕ ಜನರನ್ನು (People) ಕಾಡುತ್ತಲೇ ಇದೆ. ಅನಾರೋಗ್ಯಕರ ಆಹಾರ (Bad Food) ಪದ್ಧತಿ, ಕೆಟ್ಟ ಜೀವನಶೈಲಿ ( Bad Lifestyle), ಚಟುವಟಿಕೆ ರಹಿತ ಚಟುವಟಿಕೆಗಳಿಂದ (Activities) ಬೊಜ್ಜಿನ ಸಮಸ್ಯೆ ಸಾಮಾನ್ಯ ಆಗುತ್ತಿದೆ. ಆದರೆ ಆಲೋಚಿಸಬೇಕಾದ ವಿಷಯ ಅಂದ್ರೆ ಬೊಜ್ಜಿನ ಸಮಸ್ಯೆ ಇಂದು ಕೇವಲ ವಯಸ್ಸಾದವರಲ್ಲಿ ಮಾತ್ರವಲ್ಲದೇ ಯಾವುದೇ ವಯಸ್ಸಿನ ಅಂತರವಿಲ್ಲದೆ ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಬೊಜ್ಜಿನ ಸಮಸ್ಯೆ ಸಾಮಾನ್ಯವಾಗಿದ್ದು, ತುಂಬಾ ಜನರು ಬೊಜ್ಜಿನಿಂದ ಬಳಲುತ್ತಿದ್ದಾರೆ. ಜೀವನಶೈಲಿ, ಅನಾರೋಗ್ಯ, ಕಂಪ್ಯೂಟರ್‌ ಎದುರು ಕುಳಿತು ದೀರ್ಘಕಾಲ ಕೆಲಸ ಮಾಡುವುದು, ಜಂಕ್ ಫುಡ್ ಸೇವನೆ ಸರಿಯಾಗಿ ನಿದ್ದೆ ಮಾಡದಿರುವುದು ತೂಕ ಹೆ್ಚಳಕ್ಕೆ ಮೂಲ ಕಾರಣವಾಗಿದೆ.

    ಇಂತಹ ಅನೇಕ ಕಾರಣಗಳಿಂದಾಗಿ ಜನರು ಸ್ಥೂಲಕಾಯ ಸಮಸ್ಯೆಗೆ ಬಲಿಯಾಗುತ್ತಿದ್ದಾರೆ. ತಿಳಿದೋ, ತಿಳಿಯದೆಯೋ ಬೊಜ್ಜು ಬೆಳೆಯುತ್ತದೆ. ಬೊಜ್ಜು ಕಡಿಮೆ ಮಾಡಲು ಎಲ್ಲಾ ಪ್ರಯತ್ನ ಮಾಡಿದರೂ ಯಾವುದೂ ಪ್ರಯೋಜನ ಆಗಲ್ಲ.

    ಇದರಿಂದ ಹಲವು ಆಲೋಚನೆ, ಜೀವನೋತ್ಸಾಹ, ಸೋಮಾರಿತನ ಬರುತ್ತದೆ. ಹಾಗಾಗಿ ಇಂದು ನಾವು ಇಲ್ಲಿ ನಿಮ್ಮ ಬೊಜ್ಜನ್ನು ಹೇಗೆ ಕಡಿಮೆ ಮಾಡಿಕೊಳ್ಳಬೇಕೆಂಬ ಕ್ರಮಗಳನ್ನು ನೋಡೋಣ.

    ಇದನ್ನೂ ಓದಿ: ಮೂನ್ ಚಾರ್ಜ್ಡ್ ವಾಟರ್ ಎಂದರೇನು? ಇದರಿಂದ ಆರೋಗ್ಯಕ್ಕೆ ಸಿಗುವ ಲಾಭಗಳೇನು?

    ಹೊಟ್ಟೆ ಫ್ರೆಶ್ ಆಗಿದ್ದರೆ ಮೂಡ್ ಕೂಡ ಫ್ರೆಶ್ ಆಗಿರುತ್ತದೆ

    ಬೆಳಿಗ್ಗೆ ಎದ್ದ ನಂತರ ಮೊದಲು ನೀವು ಕರುಳಿನ ಚಲನೆ ಹೊಂದಿರಲು ನೀರು ಕುಡಿಯಿರಿ. ಹೊಟ್ಟೆಯು ತಾಜಾ ಆಗಿದ್ದರೆ ನಿಮ್ಮ ಮೂಡ್ ಕೂಡ ಉತ್ತಮವಾಗಿರುತ್ತದೆ. ಬೆಳಿಗ್ಗೆ ಇದಕ್ಕೆಲ್ಲ ಸಮಯವಿಲ್ಲದಿದ್ದರೆ ಮೊದಲು ಸಮಯ  ಹೊಂದಿಸಿ. ತಾಜಾತನ ಅನುಭವಿಸಿ ಮತ್ತು ಆನಂದಿಸಿ.

    ವೇಗದಲ್ಲಿ ನಡೆಯುವುದು

    ಫ್ರೆಶ್ ಆದ ನಂತರ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಗ್ಲಾಸ್ ನೀರು ಕುಡಿಯಿರಿ. ನಂತರ, ಮೊದಲು ನಿಮ್ಮ ಬೂಟು ಹಾಕಿಕೊಳ್ಳಿ. ಮತ್ತು ಮುಂದಿನ 20 ರಿಂದ 30 ನಿಮಿಷಗಳವರೆಗೆ ಸ್ವಲ್ಪ ಚುರುಕಾಗಿ ಮತ್ತು ವೇಗವಾಗಿ ನಡೆಯಿರಿ.

    ನೀವು ನಡೆಯವಾಗ ಆರಾಮವಾಗಿ ನಡೆಯುವ ಬದಲು ಸ್ವಲ್ಪ ಜೋರಾಗಿ ನಡೆಯಿರಿ. ನಡಿಗೆಯ ಪರಿಣಾಮವು ನಿಮ್ಮ ದೇಹದ ಮೇಲೆ ನೇರವಾಗಿ ಉಂಟಾಗುತ್ತದೆ. ನೀವು ಪ್ರತಿದಿನ ಈ ದಿನಚರಿ ಫಾಲೋ ಮಾಡಿದ್ರೆ ನಿಮ್ಮ ತೂಕವು ಎಂದಿಗೂ ಹೆಚ್ಚಾಗಲ್ಲ ಎಂದು ನಂಬಿ. ಜೊತೆಗೆ ದೇಹಕ್ಕೆ ಬೇಕಾದ ಶಕ್ತಿ ಸಿಗುತ್ತೆ.

    ತೂಕ ಇಳಿಕೆಯ ಫಲಿತಾಂಶದ ಬಗ್ಗೆ ಚಿಂತಿಸಬೇಡಿ

    ತೂಕ ಇಳಿಕೆ ಜೊತೆಗೆ ಬಿಪಿ, ಶುಗರ್ , ಕಾಯಿಲೆಗಳ ಜೊತೆಗೆ ಹೃದ್ರೋಗ ಸಮಸ್ಯೆಯೂ ಕಾಡದಂತೆ ಇದು ತಡೆಯುತ್ತದೆ. ಎಲ್ಲಾ ಕಾಯಿಲೆ ಚಿಕಿತ್ಸೆ ಕೇವಲ ನಡಿಗೆ ಆಗಿದೆ. ನಿಮ್ಮ ದಿನಚರಿಯಲ್ಲಿ ಇದನ್ನು ಮೊದಲು ಸೇರಿಸಿ. ಜೊತೆಗೆ ತೂಕ ಕಡಿಮೆ ಮಾಡಲು ನೈಸರ್ಗಿಕ ರೀತಿಯಲ್ಲಿ ಪ್ರಯತ್ನಿಸಿ.

    ಕೆಲವು ದಿನಗಳಲ್ಲಿ ಫಲಿತಾಂಶ ದೊರೆಯುತ್ತದೆ ಎಂದು ಯೋಚಿಸಬೇಡಿ. ದಿನವೂ ಒಂದು ಗಂಟೆ ನಡೆಯಿರಿ. ಇದು ಬೊಜ್ಜಿನ ಜೊತೆಗೆ ಇತರೆ ಸಮಸ್ಯೆಯನ್ನೂ ಕಡಿಮೆ ಮಾಡುತ್ತದೆ. ನಿಯಮಿತ ಮಾಡುವುದು ನಿಮ್ಮ ತೂಕ ಇಳಿಕೆಗೆ ಸಹಕಾರಿ.

    ಆಹಾರ ಕ್ರಮದ ಬಗ್ಗೆ ಗಮನಹರಿಸಿ

    ಬೊಜ್ಜು ನಿಯಂತ್ರಣಕ್ಕೆ ವ್ಯಾಯಾಮ ಹಾಗೂ ಆಹಾರ ಕ್ರಮದ ಬಗ್ಗೆ ಗಮನ ಹರಿಸಿ. ಉತ್ತಮ ಆಹಾರ ನಿಮ್ಮನ್ನು ಫಿಟ್ ಆಗಿಡಲು ಸಹಕಾರಿ ಆಗಿದೆ. ಆಹಾರದಲ್ಲಿ ಹಸಿರು ತರಕಾರಿ, ಸಲಾಡ್, ಮತ್ತು ಅತಿಯಾದ ಉಪ್ಪು, ಮಸಾಲೆ ಮತ್ತು ಜಂಕ್ ಫುಡ್ ಗಳಿಂದ ದೂರವಿರಿ.

    ಇದನ್ನೂ ಓದಿ: ಆಯುರ್ವೇದ ಔಷಧಗಳ ದೀರ್ಘ ಬಳಕೆ ಎಷ್ಟು ಒಳ್ಳೆಯದು? ಇದರಿಂದ ಉಂಟಾಗುವ ಅಡ್ಡ ಪರಿಣಾಮಗಳು ಹೀಗಿವೆ!

    ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತೂಕ ಇಳಿಕೆಗೆ ಮತ್ತು ಜೀರ್ಣಕ್ರಿಯೆ ಸುಧಾರಿಸುವ ಪಾನೀಯ ಸೇವನೆ ಮಾಡಿ. ಅತಿಯಾದ ಸಕ್ಕರೆ ಸೇವನೆ ಮಾಡದಿರುವುದು ಒಳಿತು.
    Published by:renukadariyannavar
    First published: