Good Qualities: ಪುರುಷರೇ ನಿಮ್ಮಲ್ಲಿ ಈ ಗುಣಗಳಿದ್ದರೆ ಮಹಿಳೆಯರಿಗೆ ತುಂಬಾನೇ ಇಷ್ಟವಂತೆ!

ಪ್ರತಿಯೊಬ್ಬರಿಗೂ ನಾವು, ಎದುರಿನ ವ್ಯಕ್ತಿಗೆ ಚೆನ್ನಾಗಿ ಕಾಣಬೇಕು ಅಂತಾನೆ ಮುಖಕ್ಕೆ ಮೇಕಪ್ ಮಾಡಿಕೊಂಡು, ಒಳ್ಳೆಯ ಸ್ಟೈಲಿಷ್ ಆಗಿರುವ ಬಟ್ಟೆಗಳನ್ನು ಧರಿಸಿಕೊಂಡು ಹೋಗುತ್ತಾರೆ. ಈ ಪ್ರಣಯ ಸನ್ನಿವೇಶಗಳಲ್ಲಿಯೂ ಸಹ, ಒಬ್ಬ ಪುರುಷನ ನೋಟ ಮತ್ತು ವರ್ತನೆಗಳು ಮಹಿಳೆಯನ್ನು ಮೊದಲು ಅವನ ಕಡೆಗೆ ಸೆಳೆಯುತ್ತವೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಸಾಮಾನ್ಯವಾಗಿ ಪುರುಷರು ಮಹಿಳೆಯರ (Women's) ಮುಂದೆ ಮತ್ತು ಮಹಿಳೆಯರು ಪುರುಷರ (Men's) ಮುಂದೆ ಚೆನ್ನಾಗಿ ಕಾಣಬೇಕು ಎನ್ನುವ ಹಂಬಲ ಇದ್ದೇ ಇರುತ್ತದೆ. ಪ್ರತಿಯೊಬ್ಬರೂ ನಾವು, ಎದುರಿನ ವ್ಯಕ್ತಿಗೆ (Person) ಚೆನ್ನಾಗಿ ಕಾಣಬೇಕು ಅಂತಾನೆ ಮುಖಕ್ಕೆ ಮೇಕಪ್ ಮಾಡಿಕೊಂಡು, ಒಳ್ಳೆಯ ಸ್ಟೈಲಿಷ್ (Stylish) ಆಗಿರುವ ಬಟ್ಟೆಗಳನ್ನು (Clothes) ಧರಿಸಿಕೊಂಡು ಹೋಗುತ್ತಾರೆ. ಈ ಪ್ರಣಯ ಸನ್ನಿವೇಶಗಳಲ್ಲಿಯೂ ಸಹ, ಒಬ್ಬ ಪುರುಷನ ನೋಟ ಮತ್ತು ವರ್ತನೆಗಳು ಮಹಿಳೆಯನ್ನು ಮೊದಲು ಅವನ ಕಡೆಗೆ ಸೆಳೆಯುತ್ತವೆ. ಆದಾಗ್ಯೂ, ಮಹಿಳೆಯರ ಗಮನವನ್ನು ಸೆಳೆಯುವ ಇತರ ವಿಷಯಗಳೂ ಇವೆ. "ಸಂಬಂಧಗಳನ್ನು (relationships)  ಪರಿಗಣಿಸುವುದು ಕೇವಲ ದೈಹಿಕ ನೋಟಕ್ಕಿಂತ ಹೆಚ್ಚಾಗಿ, ಪುರುಷರು ಹೆಣ್ಣನ್ನು ಆಕರ್ಷಿಸಲು ವ್ಯಕ್ತಿತ್ವದಲ್ಲಿ ಆತ್ಮವಿಶ್ವಾಸ ಮತ್ತು ಹಾಸ್ಯದಂತಹ ಗುಣಗಳನ್ನು ಹೊಂದುವುದು ಸಹ ಮುಖ್ಯವಾಗುತ್ತವೆ.

ವ್ಯಕ್ತಿಗಳು ಉದ್ರೇಕಗೊಂಡಾಗ ಕಣ್ಣಿನಲ್ಲಿ ಆ ಭಾವನೆ ವ್ಯಕ್ತವಾಗುತ್ತದೆ. ಇಂತಹ ಪ್ರಚೋದನಾ ಸೂಚಕವು ಪುರುಷರು ಮತ್ತು ಮಹಿಳೆಯರು ಇಬ್ಬರಿಗೂ ಆಕರ್ಷಕವಾಗಿದೆ" ಎಂದು ಭಾರತದ ಗ್ಲೀಡೆನ್ ನ ಕಂಟ್ರಿ ಮ್ಯಾನೇಜರ್ ಸಿಬಿಲ್ ಶಿಡೆಲ್ ಹೇಳುತ್ತಾರೆ.

ಮಹಿಳೆಯರಿಗೆ ಪುರುಷರ ಈ ಗುಣಲಕ್ಷಣಗಳು ಆಕರ್ಷಕವಾಗಿ ಕಾಣುತ್ತವೆ ನೋಡಿ:
1. ನಾಯಕತ್ವ ವಹಿಸುವ ಪುರುಷರು
ಹೆಚ್ಚಿನ ಮಹಿಳೆಯರು ತಮ್ಮ ಕೆಲಸಗಳಲ್ಲಿ ಜವಾಬ್ದಾರಿಯನ್ನು ತೆಗೆದುಕೊಳ್ಳುವ ಮತ್ತು ಅವರ ನಂಬಿಕೆಗಳಲ್ಲಿ ಅಚಲವಾಗಿರುವ ಹುಡುಗರ ಕಡೆಗೆ ಹೆಚ್ಚು ಆಕರ್ಷಿತರಾಗುತ್ತಾರೆ. ತಂಡವನ್ನು ಮುನ್ನಡೆಸುವ ವ್ಯಕ್ತಿಯ ಸಾಮರ್ಥ್ಯವು ಪ್ರಬುದ್ಧತೆಯ ಸೂಚನೆಯಾಗಿದೆ.

ಮಹಿಳೆಯರು ತಮ್ಮ ನಿರ್ಧಾರಗಳನ್ನು ಅನುಸರಿಸುವ ಬಲವಾದ ನಂಬಿಕೆಗಳನ್ನು ಹೊಂದಿರುವ ಹುಡುಗರ ಕಡೆಗೆ ಹೆಚ್ಚು ಆಕರ್ಷಿತರಾಗುತ್ತಾರೆ. ದೀರ್ಘಕಾಲೀನ ಯೋಜನೆಗಳನ್ನು ರೂಪಿಸುವುದು ಮತ್ತು ನಿಮ್ಮ ಉದ್ದೇಶಗಳ ಅನ್ವೇಷಣೆಯಲ್ಲಿ ದೃಢನಿಶ್ಚಯವನ್ನು ಹೊಂದಿರುವುದು ನಿಮ್ಮ ಹುಡುಗಿಯನ್ನು ನಿಮ್ಮ ಕಡೆಗೆ ಆಕರ್ಷಿಸುತ್ತದೆ.

2. ಹಾಸ್ಯ ಪ್ರಜ್ಞೆ ಇರಬೇಕು
ಯಾವುದೇ ಸಂಬಂಧಗಳನ್ನು ಯಾವಾಗಲೂ ಗಂಭೀರವಾಗಿ ಪರಿಗಣಿಸಬಾರದು. ಸಂಬಂಧವನ್ನು ಆನಂದದಾಯಕವಾಗಿಸುವ ಮತ್ತೊಂದು ಅಸ್ತ್ರವೆಂದರೆ ಅದು ನಮ್ಮಲ್ಲಿರುವ ಹಾಸ್ಯ ಪ್ರಜ್ಞೆ ಎಂದು ಹೇಳಬಹುದು. ಎಂದರೆ ಅನಿರೀಕ್ಷಿತ ಜೋಕ್ ಗಳನ್ನು ಮಾಡುವುದರಿಂದ ಪುರುಷರಲ್ಲಿರುವ ಹಾಸ್ಯ ಪ್ರಜ್ಞೆಯ ವ್ಯಕ್ತಿತ್ವವು ಮಹಿಳೆಯರಿಗೆ ಇಷ್ಟವಾಗುತ್ತದೆ ಮತ್ತು ಇದು ಹೆಚ್ಚು ಪ್ರಶಂಸನೀಯ ಗುಣಲಕ್ಷಣವಾಗಿದೆ.

ಇದನ್ನೂ ಓದಿ:  Health Tips for Women: ಮನೆ, ಕಚೇರಿ ಕೆಲಸದಲ್ಲಿ ಬ್ಯುಸಿಯಾಗಿರೋ ಮಹಿಳೆಯರಿಗೆ ಆರೋಗ್ಯ ಸಲಹೆಗಳು

ಗೊಣಗುವುದು ಪುರುಷರಲ್ಲಿ ಒಂದು ಗುಣಲಕ್ಷಣವಾಗಿದ್ದು, ಮಹಿಳೆಯರು ಅದನ್ನು ಅನಪೇಕ್ಷಿತವೆಂದು ಕಂಡುಕೊಳ್ಳುತ್ತಾರೆ. ಎಲ್ಲರೊಂದಿಗೂ ಮುಕ್ತವಾಗಿ ಸಂವಹನ ನಡೆಸಲು, ಸನ್ನಿವೇಶಗಳಲ್ಲಿ ಹಾಸ್ಯವನ್ನು ಗ್ರಹಿಸಲು ಮತ್ತು ಅವಳ ಪಕ್ಕದಲ್ಲಿದ್ದು ಸುಲಭವಾಗಿ ನಗುವುದನ್ನು ಮಹಿಳೆ ಇಷ್ಟ ಪಡುತ್ತಾಳೆ.

3. ಪುರುಷರ ಫಿಟ್ನೆಸ್
ಒಬ್ಬ ಮಹಿಳೆಯನ್ನು ಮೆಚ್ಚಿಸಲು, ಒಬ್ಬ ಪುರುಷನು ಪ್ರತಿದಿನ ಜಿಮ್ ಗೆ ಹೋಗಿ ಸಿಕ್ಸ್-ಪ್ಯಾಕ್ ಆಬ್ಸ್ ಅನ್ನು ಹೊಂದಿರಬೇಕಾಗಿಲ್ಲ. ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಹುಡುಗರನ್ನು ತುಂಬಾನೇ ಇಷ್ಟಪಡುತ್ತಾರೆ. ನಿರ್ದಿಷ್ಟವಾದ ವೇಳಾಪಟ್ಟಿಗೆ ಬದ್ಧರಾಗಿರುವವರು ಈ ದುಶ್ಚಟಗಳಿಂದ ಹೇಗೆ ದೂರವಿರುವುದು ಅಂತ ತಿಳಿದಿರುತ್ತಾರೆ.

4. ಮಹಿಳೆಯರಿಗೆ ಇಷ್ಟವಾಗುವುದು ವಿನಮ್ರತೆ
ಹೆಚ್ಚಿನ ಮಹಿಳೆಯರು ಬಯಸುವ ಅತ್ಯಂತ ಪ್ರಮುಖ ಗುಣಲಕ್ಷಣಗಳಲ್ಲಿ ಒಂದು ವಿನಯತೆ. ಬಹಿರಂಗವಾಗಿ ಮಾತನಾಡುವುದು, ಪ್ರಾಮಾಣಿಕತೆ ಮತ್ತು ನಮ್ರತೆಯನ್ನು ಸಹ ಮಹಿಳೆಯರು ತುಂಬಾನೇ ಇಷ್ಟಪಡುತ್ತಾರೆ.

ಆತ್ಮಪ್ರಜ್ಞೆಯನ್ನು ಹೊಂದಿರುವ ಪುರುಷನಿಗಿಂತ ಹೆಚ್ಚಾಗಿ ಮಹಿಳೆಗೆ ಯಾವುದೂ ಇಷ್ಟವಾಗುವುದಿಲ್ಲ. ಆತ್ಮವಿಶ್ವಾಸವನ್ನು ಹೊಂದಿರುವ ವ್ಯಕ್ತಿ ಎಂತಹದೇ ಕಠಿಣ ಪರಿಸ್ಥಿತಿಯನ್ನು ನಿಭಾಯಿಸಲು ಸಮರ್ಥನಾಗಿರುತ್ತಾನೆ.

5. ಪುಸ್ತಕದ ಹುಳು ಆಗಿರಬೇಕು
ಹೆಚ್ಚು ಓದಿಕೊಂಡಿರುವ ಮತ್ತು ಸೃಜನಶೀಲವಾಗಿರುವ ಪುರುಷರನ್ನು ಮಹಿಳೆಯರು ಇಷ್ಟಪಡುತ್ತಾರೆ. ಓದುವ ಯಾರಾದರೂ ಹೆಚ್ಚು ಹೆಚ್ಚು ಕಲಿಯಲು ತಮ್ಮ ಸಮಯವನ್ನು ಕಳೆಯುತ್ತಾರೆ. ಹೊಸ ವಿಷಯಗಳನ್ನು ಕಲಿಯುವುದನ್ನು ಆನಂದಿಸುವ ಮತ್ತು ಸಾಹಿತ್ಯ, ವಿಜ್ಞಾನ, ಕಥೆ ಮತ್ತು ಕಾದಂಬರಿಗಳನ್ನು ಓದುವಲ್ಲಿ ಉತ್ಸುಕರಾಗಿರುವ ವ್ಯಕ್ತಿಯನ್ನು ಇಷ್ಟಪಡುತ್ತಾರೆ ಎಂದು ಹೇಳಬಹುದು.

ಇದನ್ನೂ ಓದಿ:  Heart Diseases: ಸಣ್ಣ ವಯಸ್ಸಿನಲ್ಲೇ ಕಾಡುತ್ತಿವೆ ಹೃದ್ರೋಗ ಸಮಸ್ಯೆಗಳು! ಈ ಬಗ್ಗೆ ತಜ್ಞರು ಏನಂತಾರೆ ಕೇಳಿ

6. ತಪ್ಪುಗಳನ್ನು ಒಪ್ಪಿಕೊಳ್ಳುವ ಪುರುಷ ಇಷ್ಟ
ಒಬ್ಬ ವ್ಯಕ್ತಿಯು ಹೊಂದಿರಬಹುದಾದ ಮೊದಲ ಮತ್ತು ಅತ್ಯಂತ ಪ್ರಮುಖವಾದ ಗುಣವೆಂದರೆ ಅದು ಪಾರದರ್ಶಕತೆ ಅಂತ ಹೇಳಬಹುದು. ಒಬ್ಬ ಮನುಷ್ಯನು ಆಗಾಗ್ಗೆ ಉತ್ತರದಾಯಿಯಾಗಿರಬೇಕು ಎಂದು ಪ್ರಜ್ಞೆ ಹೊಂದಿದ್ದರೆ, ಅವನು ನಿಜವಾಗಿಯೂ ತನ್ನ ದೃಷ್ಟಿಕೋನವನ್ನು ಬದಲಾಯಿಸಬಹುದು.

ತನ್ನ ಅಪರಿಪೂರ್ಣತೆಗಳು ಮತ್ತು ವೈಫಲ್ಯಗಳನ್ನು ಒಪ್ಪಿಕೊಳ್ಳಲು ಒಬ್ಬ ಮಹಿಳೆಗೆ ಉತ್ತರದಾಯಿತ್ವವನ್ನು ಹೊಂದಿರುವುದು ಅತ್ಯಂತ ಪ್ರಸ್ತುತವಾದ ವಿಷಯಗಳಲ್ಲಿ ಒಂದಾಗಿರುವುದರಿಂದ ಈ ಗುಣಲಕ್ಷಣವು ನಿಜವಾಗಿಯೂ ಆಕರ್ಷಕವಾಗಿದೆ ಎಂದು ಅವಳು ಪರಿಗಣಿಸುತ್ತಾಳೆ.

7. ಸ್ಟೈಲಿಷ್ ಆಗಿ ಡ್ರೆಸ್ ಮಾಡಿಕೊಳ್ಳುವುದು
ಕಳಪೆ ಡ್ರೆಸ್ಸಿಂಗ್ ಮಾಡಿಕೊಂಡು ಮಹಿಳೆಯರ ಮುಂದೆ ನೀವು ಹೋದರೆ ಅವರು ಅಷ್ಟಾಗಿ ಇಷ್ಟ ಪಡುವುದಿಲ್ಲ. ಒಬ್ಬ ಹೆಂಗಸಿನ ಗಮನವು ಚೆನ್ನಾಗಿ ಉಡುಪು ಧರಿಸಿದ ಪುರುಷ, ಅವನ ಡ್ರೆಸ್ಸಿಂಗ್ ಸ್ಟೈಲ್ ಕಡೆಗೆ ಹೋಗುತ್ತದೆ.

8. ಪುರುಷ ಪ್ರಬುದ್ಧತೆಯನ್ನು ಹೊಂದಿರಬೇಕು
ಮಹಿಳೆಯರು ವಯಸ್ಸಾದ ಹುಡುಗರನ್ನು ಹೆಚ್ಚು ಇಷ್ಟಪಡುತ್ತಾರೆ. ಏಕೆಂದರೆ ಅವರು ಹೆಚ್ಚು ಪ್ರಬುದ್ಧ ಮತ್ತು ತಿಳುವಳಿಕೆಯುಳ್ಳವರೆಂದು ಅವರು ಭಾವಿಸುತ್ತಾರೆ. ಆದಾಗ್ಯೂ, ವಯಸ್ಸು ಪ್ರಬುದ್ಧತೆಯೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ.

ಪ್ರಬುದ್ಧತೆ ಎಂಬುದು ನಾವು ಜೀವನದಲ್ಲಿ ಪಡೆದ ಅನುಭವಗಳಿಂದ ಬರುತ್ತದೆ ಎಂದು ಹೇಳಬಹುದು. ಮಹಿಳೆಯರು ಹೆಚ್ಚು ಸ್ಥಿರತೆಯನ್ನು ಗೌರವಿಸುತ್ತಾರೆ ಮತ್ತು ಅವುಗಳನ್ನು ಒದಗಿಸಬಲ್ಲ ಪುರುಷರ ಕಡೆಗೆ ಹೆಚ್ಚು ಆಕರ್ಷಿತರಾಗುತ್ತಾರೆ.

9. ರೊಮ್ಯಾಂಟಿಕ್ ಆಗಿರಬೇಕು
ಅಂತಿಮವಾಗಿ, ಮಹಿಳೆಯರು ಹೆಚ್ಚು ರೊಮ್ಯಾಂಟಿಕ್ ಆಗಿರುವ ಪುರುಷರನ್ನು ಇಷ್ಟಪಡುತ್ತಾರೆ. ಹೂವುಗಳನ್ನು ಮನೆಗೆ ತರುವ ಮತ್ತು ಅವರನ್ನು ರಾಣಿಯಂತೆ ನೋಡಿಕೊಳ್ಳುವ ಪುರುಷರನ್ನು ಹೆಚ್ಚು ಇಷ್ಟ ಪಡುತ್ತಾರೆ. ರಜೆಗೆ ಕರೆದುಕೊಂಡು ಹೋಗುವುದು, ನಿಮ್ಮ ಮಹಿಳೆಗೆ ಸಣ್ಣ ಉಡುಗೊರೆಗಳನ್ನು ನೀಡಿ ಆಶ್ಚರ್ಯಗೊಳಿಸುವುದು, ಅವಳಿಗೆ ಕೆಲವು ಸುಂದರವಾಗಿ ಬರೆದ ಪತ್ರಗಳನ್ನು ಕಳುಹಿಸುವುದು ಮತ್ತು ಅವಳನ್ನು ಪಡೆದಿರುವ ನೀವು ಎಷ್ಟು ಅದೃಷ್ಟಶಾಲಿ ಎಂದು ಅವಳಿಗೆ ಹೇಳುವುದೆಲ್ಲವು ಪುರುಷನಲ್ಲಿ ಮಹಿಳೆಯರು ನೋಡುತ್ತಾರೆ.

ಇದನ್ನೂ ಓದಿ: Fashion Tips: ಮಳೆಗಾಲದಲ್ಲಿ ಆಫೀಸ್​ಗೆ ಹೋಗುವಾಗ ಈ ಡ್ರೆಸ್​ಗಳು ಸೂಪರ್​ ಆಗಿ ಸೂಟ್​ ಆಗುತ್ತೆ

10. ಹೆಚ್ಚು ವ್ಯಕ್ತಪಡಿಸುವ ಪುರುಷರು ಇಷ್ಟ
ನಮ್ಮ ಮನಸ್ಸಿನ ಭಾವನೆಗಳು ನಮ್ಮ ಹುಡುಗಿಗೆ ಅರ್ಥವಾಗಬೇಕು ಎಂದರೆ ಆ ಭಾವನೆಗಳನ್ನು ಮೊದಲು ನಾವು ವ್ಯಕ್ತಪಡಿಸಬೇಕು. ಒಬ್ಬ ಮಹಿಳೆ ಹೆಚ್ಚು ವ್ಯಕ್ತಪಡಿಸುವಂತಹ ಪುರುಷನಿಗೆ ಹೆಚ್ಚು ಆಕರ್ಷಿತಳಾಗುತ್ತಾಳೆ. ನಮಗೆಲ್ಲರಿಗೂ ತಿಳಿದಿರುವಂತೆ, ಸಂವಹನವು ಪ್ರತಿಯೊಂದು ಸಂಬಂಧಕ್ಕೂ ಕೀಲಿಕೈಯಾಗಿದೆ
Published by:Ashwini Prabhu
First published: