ಕೊಲೆಸ್ಟ್ರಾಲ್ (Cholesterol) ನಮ್ಮ ಜೀವಕೋಶಗಳಲ್ಲಿ (Cells) ಇರುವ ಮೇಣದಂಥ ವಸ್ತು ಎಂಬುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಆರೋಗ್ಯಕರ (Healthy) ಕೋಶಗಳ ರಚನೆಗೆ ಕೊಲೆಸ್ಟ್ರಾಲ್ ಅನ್ನು ಬಹಳ ಮುಖ್ಯ ಎಂದು ಪರಿಗಣಿಸಲಾಗಿದೆ. ಒಳ್ಳೆಯ ಕೊಲೆಸ್ಟ್ರಾಲ್ ವ್ಯಕ್ತಿಯ (Person) ದೇಹದ (Body) ಜೀವಕೋಶಗಳು ಮತ್ತು ಅಂಗಗಳು ಸರಿಯಾಗಿ ಕಾರ್ಯ ನಿರ್ವಹಿಸಲು ಸಹಾಯ ಮಾಡುತ್ತವೆ. ಜೊತೆಗೆ ಜೀರ್ಣಕ್ರಿಯೆಗೆ ಅಗತ್ಯವಾದ ಹಾರ್ಮೋನುಗಳು, ಜೀವಸತ್ವ ಮತ್ತು ದ್ರವಗಳ ಉತ್ಪಾದನೆಯಲ್ಲಿ ಕೊಲೆಸ್ಟ್ರಾಲ್ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಿದರೆ ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಧಿಕ ಕೊಲೆಸ್ಟ್ರಾಲ್ ಮಟ್ಟದಿಂದ ಅಪಧಮನಿಗಳಲ್ಲಿ ಕೊಬ್ಬು ಸಂಗ್ರಹವಾಗಲು ಶುರುವಾಗುತ್ತದೆ.
ಕೆಟ್ಟ ಕೊಲೆಸ್ಟ್ರಾಲ್ ದೇಹದಲ್ಲಿ ಬೊಜ್ಜು ಹೆಚ್ಚಿಸುತ್ತದೆ
ಕೆಟ್ಟ ಕೊಲೆಸ್ಟ್ರಾಲ್ ದೇಹದಲ್ಲಿ ಕ್ರಮೇಣ ಹೆಚ್ಚುತ್ತಾ ಹೋಗುವುದು ಬೊಜ್ಜು ಹೆಚ್ಚಳಕ್ಕೆ ಕಾರಣವಾಗುತ್ತದೆ. ಈ ಕೊಬ್ಬಿನ ಹೆಚ್ಚಳ ಅಪಧಮನಿಗಳಲ್ಲಿ ರಕ್ತದ ಹರಿವಿಗೆ ಸಾಕಷ್ಟು ಅಡೆತಡೆ ಉಂಟಾಗುತ್ತದೆ. ಇದರಿಂದ ಹೃದ್ರೋಗ, ಪಾರ್ಶ್ವವಾಯು ಮುಂತಾದ ಸಮಸ್ಯೆ ಎದುರಿಸಬೇಕಾಗಬಹುದು. ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿಸುವ ಯಾವುದೇ ಲಕ್ಷಣಗಳು ಗೋಚರ ಆಗುವುದಿಲ್ಲ.
ಹೀಗಾಗಿ ಕೆಟ್ಟ ಕೊಲೆಸ್ಟ್ರಾಲ್ ದೇಹದಲ್ಲಿ ಹೆಚ್ಚಾಗುವುದನ್ನು ಮೂಕ ಕೊಲೆಗಾರ ಎಂದೂ ಕರೆಯುತ್ತಾರೆ. ನಿಮ್ಮ ದೇಹದಲ್ಲಿ ಆಗುವ ಬದಲಾವಣೆಗಳನ್ನು ನೀವು ನಿರ್ಲಕ್ಷಿಸಬಾರದು. ಜೊತೆಗೆ ದೇಹದಲ್ಲಿ ಉಂಟಾಗುವ ಕೆಲವು ಸಂಕೇತಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು. ಇದು ನಿಮ್ಮ ಆರೋಗ್ಯ ಕೆಡುವ ಮೊದಲು ನಿಮ್ಮನ್ನು ಸುರಕ್ಷಿತವಾಗಿರಿಸುತ್ತದೆ.
ಇದನ್ನೂ ಓದಿ: ಶ್ವಾಸಕೋಶ ತೊಂದರೆ, ಉಸಿರಾಟ ಸಮಸ್ಯೆಗೆ ಮನೆಯಲ್ಲೇ ಹೀಗೆ ಪರಿಹಾರ ಮಾಡಿ!
ಕೂದಲಿನಲ್ಲಿ ಆಗುವ ಕೆಲವು ಬದಲಾವಣೆಯು ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟದಲ್ಲಿ ಹೆಚ್ಚಳವಾಗಿದೆ ಎಂಬುದನ್ನು ಹೇಳುತ್ತದೆ. ಇಲ್ಲಿ ನಾವು ಕೂದಲಿನಲ್ಲಿ ಕಂಡು ಬರುವ ಅಧಿಕ ಕೊಲೆಸ್ಟ್ರಾಲ್‌ನ ಸಂಕೇತಗಳು ಯಾವವು ಎಂಬ ಬಗ್ಗೆ ನೋಡೋಣ.
ಕೂದಲಿನಲ್ಲಿ ಕಂಡು ಬರುವ ಅಧಿಕ ಕೊಲೆಸ್ಟ್ರಾಲ್ ಲಕ್ಷಣಗಳು ಹೀಗಿವೆ
ಜಾನ್ ಹಾಪ್ಕಿನ್ಸ್‌ನ ಸಂಶೋಧಕರು ಇಲಿಗಳ ಮೇಲೆ ಸಂಶೋಧನೆ ನಡೆಸಿದ್ದಾರೆ. ಸಂಶೋಧನೆಯಲ್ಲಿ ಕೊಲೆಸ್ಟ್ರಾಲ್ ಅಧಿಕವಾಗಿರುವ ಆಹಾರ ಸೇವನೆ ಮಾಡುವುದರಿಂದ ಕೂದಲಿನ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ. ನೇಚರ್ ಜರ್ನಲ್ ಸೈಂಟಿಫಿಕ್ ರಿಪೋರ್ಟ್ಸ್‌ನಲ್ಲಿ ಈ ಸಂಶೋಧನೆ ಪ್ರಕಟವಾಗಿದೆ. ಹೆಚ್ಚು ಕೊಲೆಸ್ಟ್ರಾಲ್ ಕೂದಲು ಉದುರುವಿಕೆ ಮತ್ತು ಬೂದು ಬಣ್ಣಕ್ಕೆ ಕಾರಣವಾಗುತ್ತದೆ ಎಂದು ತಿಳಿಸಿದ್ದಾರೆ.
ಹೆಚ್ಚಿನ ಕೊಬ್ಬು ಮತ್ತು ಅಧಿಕ ಕೊಲೆಸ್ಟ್ರಾಲ್ ಆಹಾರ
ಜೊತೆಗೆ ಸಂಶೋಧಕರು ಇಲಿಗಳ ಗುಂಪಿನ ಮೇಲೆ ಅಪಧಮನಿ ಕಾಠಿಣ್ಯದ ಸ್ಥಿತಿಯ ಬಗ್ಗೆಯೂ ಪರಿಶೀಲನೆ ಮಾಡಿದ್ದಾರೆ. ಇದು ಅಪಧಮನಿಯೊಳಗೆ ಕೊಬ್ಬು ಸಂಗ್ರಹವಾಗುವ ಸ್ಥಿತಿ ಆಗಿದೆ. ಹೀಗಾಗಿ ರಕ್ತದ ಹರಿವಿನಲ್ಲಿ ಸಾಕಷ್ಟು ಸಮಸ್ಯೆ ಇರುತ್ತದೆ. ಸಂಶೋಧನೆ ವೇಳೆ ಇಲಿಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿತ್ತು. ಒಂದು ಗುಂಪಿನ ಇಲಿಗಳಿಗೆ ಸಾಮಾನ್ಯ ಆಹಾರ ನೀಡಲಾಗಿತ್ತು. ಇನ್ನೊಂದು ಗುಂಪಿಗೆ ಹೆಚ್ಚಿನ ಕೊಬ್ಬು ಮತ್ತು ಅಧಿಕ ಕೊಲೆಸ್ಟ್ರಾಲ್ ಹೊಂದಿರುವ ಆಹಾರ ನೀಡಿದ್ದರು.
ಸಂಶೋಧನೆ ವೇಳೆ ಹೆಚ್ಚಿನ ಕೊಬ್ಬು ಮತ್ತು ಅಧಿಕ ಕೊಲೆಸ್ಟ್ರಾಲ್ ಹೊಂದಿರುವ ಆಹಾರ ನೀಡಿದ ಇಲಿಗಳ ಗುಂಪು ಕೂದಲು ಉದುರುವಿಕೆಯ ಸಮಸ್ಯೆ ಎದುರಿಸಿದೆ ಎಂದು ತಂಡವು ತಿಳಿಸಿದೆ. ಸಂಶೋಧನೆಯು ಪೂರ್ಣಗೊಂಡ ನಂತರ, ಹೆಚ್ಚಿನ ಕೊಲೆಸ್ಟ್ರಾಲ್ ಆಹಾರವು ಕೂದಲಿನ ಮೇಲೆ ಬಹಳ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.
ಜನರು ಹೆಚ್ಚಿನ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಹೊಂದಿರುವ ಆಹಾರ ಸೇವನೆ ಮಾಡಿದಾಗ ಕೂದಲು ಉದುರುವಿಕೆ ಮತ್ತು ಬೂದು ಬಣ್ಣದ ಕೋದಲಿನ ಸಮಸ್ಯೆ ಅನುಭವಿಸುತ್ತಾರೆ ಎಂದು ಸಂಶೋಧಕರು ಹೇಳಿದ್ದಾರೆ.
ಅಧಿಕ ಕೊಲೆಸ್ಟ್ರಾಲ್ ಅಪಾಯಗಳು
ಅಪಧಮನಿಗಳಲ್ಲಿ ಕೊಲೆಸ್ಟ್ರಾಲ್ ಹೆಚ್ಚಳದಿಂದ ಅವು ತುಂಬಾ ಹಿಗ್ಗುತ್ತವೆ. ಹೀಗಾಗಿ ರಕ್ತದ ಹರಿವು ತುಂಬಾ ನಿಧಾನವಾಗುತ್ತದೆ. ಅಥವಾ ನಿರ್ಬಂಧಿಸಲ್ಪಡುತ್ತದೆ. ಇದು ಎದೆ ನೋವು ಮತ್ತು ಹೃದಯಾಘಾತ, ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಿಸುತ್ತದೆ.
ಅಧಿಕ ಕೊಲೆಸ್ಟ್ರಾಲ್ ಲಕ್ಷಣಗಳು ಹೀಗಿವೆ
ಎದೆ, ತೋಳು ಅಥವಾ ಭುಜದಲ್ಲಿ ನೋವು
ಅಸ್ವಸ್ಥತೆ
ತಲೆತಿರುಗುವಿಕೆ, ಆಯಾಸ, ವಾಕರಿಕೆ
ಉಸಿರಾಟದ ಸಮಸ್ಯೆ
ಇದನ್ನೂ ಓದಿ: ದೈನಂದಿನ ತ್ವಚೆಯ ಕಾಳಜಿ ಹೀಗಿರಲಿ! ಆಹಾರದಲ್ಲಿ ಇವುಗಳನ್ನು ಮಿಸ್ ಮಾಡಬೇಡಿ
ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿಸುವ ಅಂಶಗಳು
ಅತಿಯಾದ ಮದ್ಯ ಸೇವನೆ
ಧೂಮಪಾನ
ವ್ಯಾಯಾಮ ಮಾಡದೇ ಇರುವುದು
ಸಾಕಷ್ಟು ನಿದ್ರೆ ಮಾಡದಿರುವುದು
ಅತಿಯಾದ ಒತ್ತಡ
ಸ್ಯಾಚುರೇಟೆಡ್ ಕೊಬ್ಬಿನ ಆಹಾರ ಸೇವನೆ
ಹೆಚ್ಚಿನ ಟ್ರಾನ್ಸ್ ಕೊಬ್ಬಿನ ಆಹಾರ ಸೇವನೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ