Chiranjeevi Sarja: ಮೊದಲೇ ಆಸ್ಪತ್ರೆಗೆ ಬಂದಿದ್ರೆ ಬದುಕುಳಿಯುತ್ತಿದ್ರಾ ಚಿರು ಸರ್ಜಾ?; ಇಲ್ಲಿವೆ ನೋಡಿ ಹಾರ್ಟ್ ಅಟ್ಯಾಕ್​ನ ಲಕ್ಷಣಗಳು

Heart Attack Symptoms | ಹೃದಯಾಘಾತದ ಲಕ್ಷಣಗಳು | ಹೃದಯಾಘಾತವಾದ ಒಂದು ಗಂಟೆಯೊಳಗೆ ಚಿಕಿತ್ಸೆ ದೊರೆತರೆ ಬದುಕುವ ಸಾಧ್ಯತೆ ಹೆಚ್ಚು. ಅನೇಕ ಬಾರಿ ಹೃದಯಾಘಾತದ ಕುರುಹುಗಳನ್ನು ಗ್ಯಾಸ್ಟ್ರಿಕ್ ಎಂದು ಜನ ಭಾವಿಸುತ್ತಾರೆ. ಎದೆ ಉರಿ, ಇಡೀ ಕೈ ನೋಯುವುದು, ತಲನೋವು, ಹೊಟ್ಟೆಯಲ್ಲಿ ಸಂಕಟ, ವಾಂತಿ ಇವೆಲ್ಲವೂ ಹೃದಯಾಘಾತದ ಲಕ್ಷಣಗಳು.

chiranjeevi sarja

chiranjeevi sarja

 • Share this:
ಚಿರಂಜೀವಿ ಸರ್ಜಾ ಚಿಕ್ಕ ವಯಸ್ಸಿಗೆ ಹೃದಯ ಸ್ಥಂಭನ ಅಥವಾ ಕಾರ್ಡಿಯಾಕ್ ಅರೆಸ್ಟ್​ನಿಂದ ಸಾವನ್ನಪ್ಪಿದ್ದು ಅನೇಕರಿಗೆ ಇನ್ನೂ ಅರಗಿಸಿಕೊಳ್ಳೋಕೆ ಆಗ್ತಿಲ್ಲ. ಇಷ್ಟು ಸಣ್ಣ ವಯಸ್ಸಿಗೇ ಹೃದಯಾಘಾತ ಬರುತ್ತಾ? ಇದಕ್ಕೆಲ್ಲಾ ಏನು ಕಾರಣವಿರಬಹುದು? ಅಷ್ಟಕ್ಕೂ ಹೃದಯಾಘಾತ ಅಂದ್ರೇನು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ಚಿರಂಜೀವಿ ಸರ್ಜಾ ಹೃದಯಾಘಾತದ ಲಕ್ಷಣಗಳನ್ನು ಉದಾಸೀನ ಮಾಡಿದ್ರಾ ಎನ್ನುವ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿ ಆಗ್ತಿದೆ. ಕೆಲವೇ ಗಂಟೆಗಳ ಮುಂಚೆ ಆಸ್ಪತ್ರೆಗೆ ಬಂದಿದ್ದರೂ ಅಮೂಲ್ಯ ಜೀವ ಉಳಿಸಬಹುದಾ ಎನ್ನುವ ಅನುಮಾನ ಅನೇಕರನ್ನು ಕಾಡಿದೆ. ವೈದ್ಯರು ಹೇಳುವ ಪ್ರಕಾರ ಹೃದಯಾಘಾತ ಇದ್ದಕ್ಕಿದ್ದಂತೆ ಬರುವುದಿಲ್ಲ. ಯಾವಾಗಲೂ ಸಾಕಷ್ಟು ಕುರುಹುಗಳನ್ನು ನೀಡಿರುತ್ತದೆ. ಆ ಸೈನ್ ಗಳನ್ನು ನಾವು ಗಮನಿಸಬೇಕು, ಎಚ್ಚೆತ್ತುಕೊಳ್ಬೇಕು ಅಂತಾರೆ ವೈದ್ಯರು

Chiranjeevi Sarja
ಚಿರಂಜೀವಿ


ಹೃದಯಾಘಾತವಾದ ಒಂದು ಗಂಟೆಯೊಳಗೆ ಚಿಕಿತ್ಸೆ ದೊರೆತರೆ ಬದುಕುವ ಸಾಧ್ಯತೆ ಹೆಚ್ಚು. ಅನೇಕ ಬಾರಿ ಹೃದಯಾಘಾತದ ಕುರುಹುಗಳನ್ನು ಗ್ಯಾಸ್ಟ್ರಿಕ್ ಎಂದು ಜನ ಭಾವಿಸುತ್ತಾರೆ. ಎದೆ ಉರಿ, ಇಡೀ ಕೈ ನೋಯುವುದು, ತಲನೋವು, ಹೊಟ್ಟೆಯಲ್ಲಿ ಸಂಕಟ, ವಾಂತಿ ಇವೆಲ್ಲವೂ ಹೃದಯಾಘಾತದ ಲಕ್ಷಣಗಳು. ಗ್ಯಾಸ್ಟ್ರಿಕ್‌ ಎಂದುಕೊಂಡು ಮನೆಯಲ್ಲೇ ಮದ್ದು ಮಾಡಲು ಹೊರಟುಬಿಡ್ತಾರೆ ಜನ. ವ್ಯಕ್ತಿಯಿಂದ ವ್ಯಕ್ತಿಗೆ ರೋಗಲಕ್ಷಣಗಳು ಭಿನ್ನವಾಗಿರುತ್ತವೆ. ಆರೋಗ್ಯ ಎಂದಿನಂತಿಲ್ಲ ಎಂದೆನಿಸಿದಾಗ ವೈದ್ಯರ ಬಳಿ ಕಡ್ಡಾಯವಾಗಿ ಹೋಗಬೇಕು. ಈಗಿನ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳಲ್ಲಿ ಹೃದಯಾಘಾತವಾದಾಗ ಸಂಪೂರ್ಣವಾಗಿ ಗುಣಪಡಿಸಬಹುದು. ಮಧುಮೇಹ, ರಕ್ತದೊತ್ತಡ, ವ್ಯಾಯಾಮ ಇಲ್ಲದಿರುವುದು ಮತ್ತು ಬೊಜ್ಜು ಹೃದಯಾಘಾತಕ್ಕೆ ಅತೀ ಸಾಮಾನ್ಯ ಕಾರಣಗಳು ಎನ್ನುತ್ತಾರೆ ವೈದ್ಯರು. ವರ್ಷಕ್ಕೊಮ್ಮೆ ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳುವುದೇ ಇದಕ್ಕಿರುವ ಅತ್ಯುತ್ತಮ ಪರಿಹಾರ ಮಾರ್ಗ.

Chiranjeevi Sarja Funeral Today in Kanakapur Road Dhruva Sarja Farm House
ಚಿರಂಜೀವಿ ಸರ್ಜಾ


ಅಂದಹಾಗೆ  ಹೃದಯಾಘಾತ ಮತ್ತು ಹೃದಯಸ್ಥಂಭನ ಎರಡೂ ಬೇರೆ ಬೇರೆ. ಹೃದಯದ ನಾಳಗಳಲ್ಲಿ ಯಾವುದಾದರೂ ಅಡೆತಡೆಯಿಂದ (ಬ್ಲಾಕ್ ನಿಂದಾಗಿ) ಹೃದಯಕ್ಕೆ ರಕ್ತದ ಚಲನೆ ನಿಂತರೆ ಅದು ಹಾರ್ಟ್ ಅಟ್ಯಾಕ್ ಅಥವಾ ಹೃದಯಾಘಾತ. ಹೃದಯದ ರಕ್ತನಾಳಗಳು ಅಥವಾ ಮಾಂಸಖಂಡಗಳಲ್ಲಿ ಉಂಟಾದ ಯಾವುದಾದರೂ ಸಮಸ್ಯೆಯಿಂದಾಗಿ ಇದ್ದಕ್ಕಿದ್ದಂತೆ ಹೃದಯ ಕೆಲಸ ಮಾಡುವುದನ್ನು ನಿಲ್ಲಿಸಿ ಸ್ತಬ್ಧವಾದರೆ ಅದು ಹೃದಯಸ್ಥಂಭನ ಅಥವಾ ಕಾರ್ಡಿಯಾಕ್ ಅರೆಸ್ಟ್.

 ಹೃದಯಾ
ಹೃದಯ


ಹೃದಯಾಘಾತವಾದಾಗ ಕೂಡಲೇ ಚಿಕಿತ್ಸೆ ದೊರೆಯದೇ ಹೋದರೆ ಅದು ಹೃದಯಸ್ಥಂಭನಕ್ಕೆ ದಾರಿ ಮಾಡಿಕೊಡುತ್ತದೆ. ಲಘು ಹೃದಯಾಘಾತವಾದಾಗ ಗುಣಪಡಿಸುವುದು ಸುಲಭಸಾಧ್ಯ. ಹೃದಯಸ್ಥಂಭನವಾದಾಗ ಮೊದಲು ಸಿಪಿಆರ್ ಮಾಡುತ್ತಾರೆ. ಆಗ ನಿಂತಿರುವ ಹೃದಯ ಮತ್ತೆ ಬಡಿಯಲು ಆರಂಭಿಸಲು ಔಷಧ ಮತ್ತು ಉಪಚಾರ ಮಾಡಲಾಗುತ್ತದೆ. ಹೃದಯಾಘಾತವಾದ ನಂತರ ಹೃದಯಸ್ಥಂಭನವಾಗುವ ಸಾಧ್ಯತೆಗಳು ಹೆಚ್ಚು. ಜೀವ ಉಳಿಸಲು ಸಾಧ್ಯವಿದ್ದಾಗ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಸಮಯ ವ್ಯರ್ಥ ಮಾಡದೇ ದೊಡ್ಡ ಆಸ್ಪತ್ರೆಗಳಿಗೆ ರೋಗಿಯನ್ನು ಕರೆದುಕೊಂಡು ಹೋಗುವುದರಿಂದ ಜೀವ ಉಳಿಸಬಹುದು. ಹಿಂದಿನ ದಿನಗಳಲ್ಲಿ 50 ವರ್ಷ ಮೇಲ್ಪಟ್ಟವರಲ್ಲಿ ಹೃದಯಾಘಾತವಾಗುವ ಸಂಭವ ಹೆಚ್ಚಿತ್ತು. ಆದರೆ ಈಗ 30 ರಿಂದ 40 ವರ್ಷದವರಿಗೂ ಹೃದಯಾಘಾತ ಉಂಟಾಗುವ ಪ್ರಕರಣಗಳು ಹೆಚ್ಚಿವೆ. ಕಳಪೆ ಆರೋಗ್ಯಶೈಲಿ ಮತ್ತು ಮಾನಸಿಕ ಒತ್ತಡವೇ ಯುವಜನರಲ್ಲಿ ಹೃದಯಾಘಾತವಾಗಲು ಅತೀ ಹೆಚ್ಚು ಕಾರಣ ಎನ್ನಲಾಗಿದೆ. ಉತ್ತಮ ಜೀವನಶೈಲಿ ಮತ್ತು ನಿಯಮಿತ ಆರೋಗ್ಯ ತಪಾಸಣೆ ಹೃದಯಾಘಾತದಿಂದ ಕಾಪಾಡಬಲ್ಲದು.

ಇತ್ತೀಚಿನ ದಿನಗಳಲ್ಲಿ 30-40 ವರ್ಷ ವಯಸ್ಸಿನವರಲ್ಲಿ ಹೃದ್ರೋಗ ಹೆಚ್ಚುತ್ತಿದೆ. ಹಿಂದೆಂದಿಗಿಂತ 40% ಯುವಜನರಲ್ಲೇ ಹೃದ್ರೋಗದ ಪ್ರಕರಣಗಳು ಜಾಸ್ತಿಯಾಗಿದೆ. ಯುವಜನರಲ್ಲಿ ಹೃದಯ ಸಂಬಂಧಿ ಸಮಸ್ಯೆಗಳಿಗೆ ಹಲವಾರು ಕಾರಣಗಳನ್ನು ವೈದ್ಯರು ಗುರುತಿಸುತ್ತಾರೆ. ಜಂಕ್ ಫುಡ್, ಮಾನಸಿಕ ಒತ್ತಡ, ವ್ಯಾಯಾಮ ಇಲ್ಲದಿರುವಿಕೆ, ಧೂಮಪಾನ, ಮದ್ಯಪಾನಗಳೇ ಪ್ರಮುಖ ಕಾರಣ. ಕೆಲಸದ ಒತ್ತಡದ ಕಾರಣ ಹೇಳಿ ಧೂಮಪಾನ, ಮದ್ಯಪಾನಗಳನ್ನು ಅಭ್ಯಾಸ ಮಾಡಿಕೊಳ್ತಾರೆ ಜನ. ಫಾಸ್ಟ್ ಫುಡ್ ಗಳನ್ನು ಹೆಚ್ಚಾಗಿ ಸೇವಿಸುತ್ತಾರೆ, ಇದು ರಕ್ತನಾಳಗಳಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಿಸುತ್ತದೆ. ಕಳಪೆ ಜೀವನಶೈಲಿ ಹೃದ್ರೋಗಕ್ಕೆ ಬಹುದೊಡ್ಡ ಕಾರಣ. ಅಲ್ಲದೇ

ಯುವಜನರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದಿಲ್ಲ, ರೋಗ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡುತ್ತಾರೆ. ಹೃದ್ರೋಗ ತಮಗೆ ಬರೋಲ್ಲ, ಇದು ವಯಸ್ಸಾದವರ ಖಾಯಿಲೆ ಎಂದುಕೊಳ್ತಾರೆ. ವೈದ್ಯರ ಬಳಿ ಹೋಗಲು ತಡಮಾಡ್ತಾರೆ. ಇದು ಮತ್ತಷ್ಟು ಅಪಾಯಕ್ಕೆ ದಾರಿ ಮಾಡಿಕೊಡುತ್ತದೆ.

ಯಾವುದೇ ವಯಸ್ಸಿನವರಾದರೂ ಈ ಲಕ್ಷಣಗಳನ್ನು ಉದಾಸೀನ ಮಾಡಬಾರದು ಎನ್ನುವುದು ವೈದ್ಯರ ಸಲಹೆ:

 • ಎದೆ ಉರಿ

 • ವಿಪರೀತ ಬೆವರುವುದು

 • ಇಡೀ ಕೈ ನೋಯುವುದು

 • ತಲೆನೋವು

 • ಹೊಟ್ಟೆಯಲ್ಲಿ ಸಂಕಟ

 • ವಾಂತಿ ಇವೆಲ್ಲವೂ ಹೃದಯಾಘಾತದ ಲಕ್ಷಣಗಳು

 • ದೇಹದ ಒಂದು ಭಾಗ ಎಳೆದಂತಾಗುವುದು

 • ಪ್ರಜ್ಞೆ ತಪ್ಪಿ ಬಿದ್ದಂತಾಗುವುದು

 • ವಿಪರೀತ ಆಯಾಸವಾಗುವುದು, ಹೆಜ್ಜೆ ಎತ್ತಿಡಲೂ ಕಷ್ಟವಾಗುವುದು

 • ಉಸಿರಾಟದ ಸಮಸ್ಯೆ

First published: