B12 vitamin: ಕಿಡ್ನಿ ಸಮಸ್ಯೆಗೆ ವಿಟಮಿನ್​ 12 ಕೊರತೆ ಕೂಡ ಕಾರಣ; ಅದಕ್ಕೆ ಈ ಆಹಾರ ಸೇವಿಸಿ

ನಮ್ಮ ದೇಹಕ್ಕೆ ಅವಶ್ಯಕವಿರುವ ಸರಿಯಾದ ಪ್ರಮಾಣದ ವಿಟಮಿನ್ ಬಿ12 ಹೊಂದಿಲ್ಲದಿದ್ದಾಗ, ದಣಿವು, ದೌರ್ಬಲ್ಯ ಅಥವಾ ಆಯಾಸದ ವಿಭಿನ್ನ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ

ನಮ್ಮ ದೇಹಕ್ಕೆ ಅವಶ್ಯಕವಿರುವ ಸರಿಯಾದ ಪ್ರಮಾಣದ ವಿಟಮಿನ್ ಬಿ12 ಹೊಂದಿಲ್ಲದಿದ್ದಾಗ, ದಣಿವು, ದೌರ್ಬಲ್ಯ ಅಥವಾ ಆಯಾಸದ ವಿಭಿನ್ನ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ

ನಮ್ಮ ದೇಹಕ್ಕೆ ಅವಶ್ಯಕವಿರುವ ಸರಿಯಾದ ಪ್ರಮಾಣದ ವಿಟಮಿನ್ ಬಿ12 ಹೊಂದಿಲ್ಲದಿದ್ದಾಗ, ದಣಿವು, ದೌರ್ಬಲ್ಯ ಅಥವಾ ಆಯಾಸದ ವಿಭಿನ್ನ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ

  • Share this:
ನಮ್ಮ ಆರೋಗ್ಯವು ಚೆನ್ನಾಗಿರಬೇಕೆಂದರೆ ಎಲ್ಲಾ ಪೌಷ್ಟಿಕ ಅಂಶಗಳನ್ನು ಹೊಂದಿರುವಂತಹ ಆಹಾರ, ಹಸಿರು ತರಕಾರಿ ಮತ್ತು ಹಣ್ಣುಗಳನ್ನು ಪ್ರತಿದಿನ ತಪ್ಪದೆ ಸೇವಿಸಬೇಕು. ಅದರಲ್ಲೂ ನಮ್ಮ ದೇಹಕ್ಕೆ ಅನೇಕ ವಿಟಮಿನ್‌ಗಳ ಅವಶ್ಯಕತೆ ತುಂಬಾನೇ ಇದ್ದು, ಸ್ವಲ್ಪ ಅದರಲ್ಲಿ ಕೊರತೆ ಕಂಡು ಬಂದರೂ ನಮ್ಮ ಆರೋಗ್ಯದ ಮೇಲೆ ಭಾರಿ ಪರಿಣಾಮ ಬೀರುತ್ತದೆ.ಈ ವಿಟಮಿನ್ ಬಿ12 ಮಾನವನ ಆರೋಗ್ಯಕ್ಕೆ ಅತ್ಯಂತ ಪ್ರಮುಖ ಸೂಕ್ಷ್ಮ ಪೋಷಕಾಂಶಗಳಲ್ಲಿ ಒಂದಾಗಿದೆ ಎಂದರೆ ತಪ್ಪಾಗುವುದಿಲ್ಲ. ವಿಟಮಿನ್ ಬಿ12 ಮುಖ್ಯವಾಗಿ, ಇದು ಕೆಂಪು ರಕ್ತ ಕಣಗಳ ಉತ್ಪಾದನೆಯಲ್ಲಿ ಮತ್ತು ಡಿಎನ್‌ಎ ರಚನೆಯಲ್ಲಿ ಅವಶ್ಯಕವಾದ ವಿಟಮಿನ್ ಇದಾಗಿದೆ ಎಂದು ಹೇಳಬಹುದು.

ನಮ್ಮ ದೇಹಕ್ಕೆ ಅವಶ್ಯಕವಿರುವ ಸರಿಯಾದ ಪ್ರಮಾಣದ ವಿಟಮಿನ್ ಬಿ12 ಹೊಂದಿಲ್ಲದಿದ್ದಾಗ, ದಣಿವು, ದೌರ್ಬಲ್ಯ ಅಥವಾ ಆಯಾಸದ ವಿಭಿನ್ನ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ, ಈ ಸೂಕ್ಷ್ಮ ಪೋಷಕಾಂಶಗಳ ಕೊರತೆಯ ಅತ್ಯಂತ ಗಂಭೀರ ನಕಾರಾತ್ಮಕ ಪರಿಣಾಮಗಳಲ್ಲಿ ಒಂದು ಮೆಗಾಲೋಬ್ಲಾಸ್ಟಿಕ್ ರಕ್ತಹೀನತೆ ಎಂದು ಹೇಳಬಹುದು.

ಎಲ್ಲಿ ಇರುತ್ತದೆ ಈ ವಿಟಮಿನ್​ ಬಿ 12

ವಿಟಮಿನ್ ಬಿ12 ಬಗ್ಗೆ ನೆನಪಿನಲ್ಲಿಟ್ಟುಕೊಳ್ಳಬೇಕಾದ ಮತ್ತೊಂದು ಅಂಶವೆಂದರೆ ಪ್ರಾಣಿ ಮೂಲದ ಆಹಾರಗಳಲ್ಲಿ ಮಾತ್ರ ಕಂಡುಬರುತ್ತದೆ. ಅಂದರೆ, ಇದು ಯಾವುದೇ ತರಕಾರಿ, ಹಣ್ಣಿನಲ್ಲಿ ಇರುವುದಿಲ್ಲ. ಆದ್ದರಿಂದ ಪ್ರಾಣಿ ಮೂಲದ ಆಹಾರಗಳನ್ನು ಸೇವಿಸದ ಜನರಲ್ಲಿ ಈ ಜೀವಸತ್ವದ ಕೊರತೆ ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಮೂತ್ರಪಿಂಡದ ಕಾಯಿಲೆ ಮತ್ತು ವಿಟಮಿನ್ ಬಿ12 ಹೇಗೆ ಸಂಬಂಧ ಹೊಂದಿವೆ

ಮೂತ್ರಪಿಂಡ ವೈಫಲ್ಯ ಹೊಂದಿರುವ ಜನರು ಹೆಮೊಡಿಯಾಲಿಸಿಸ್ ಎಂಬ ಒಂದು ರೀತಿಯ ಚಿಕಿತ್ಸೆ ಪಡೆಯುತ್ತಾರೆ. ಹೀಗಾಗಿ, ಈ ರೀತಿಯ ರೋಗದಿಂದ ಬಳಲುತ್ತಿರುವ ಜನರು ತಮ್ಮ ಯೋಗಕ್ಷೇಮದ ಪ್ರಯೋಜನಕ್ಕಾಗಿ ಸ್ವಲ್ಪ ಮಟ್ಟಿಗೆ ತಮ್ಮ ಆಹಾರವನ್ನು ಬದಲಾಯಿಸಿಕೊಳ್ಳಬೇಕಾಗುತ್ತದೆ.

ಹೀಗಾಗಿ, ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ, ವೈದ್ಯಕೀಯ ತಜ್ಞರು ಬಿ ಜೀವಸತ್ವಗಳಿಂದ ಸಮೃದ್ಧವಾದ ಆಹಾರಗಳನ್ನು ಸೇವಿಸಲು ಹೇಳುತ್ತಾರೆ. ಈ ಅರ್ಥದಲ್ಲಿ, ಮೂತ್ರಪಿಂಡ ವೈಫಲ್ಯ ಹೊಂದಿರುವ ಜನರಿಗೆ ಹೆಚ್ಚು ಹಾನಿಕಾರಕವಾಗಬಹುದಾದ ಇತರ ರೋಗಗಳು ಪ್ರಾರಂಭವಾಗುವುದನ್ನು ತಡೆಯಲು ವಿಟಮಿನ್ ಬಿ6, ಬಿ12 ಅಥವಾ ಫೋಲಿಕ್ ಆಮ್ಲವು ಇಪಿಒ ಮತ್ತು ಕಬ್ಬಿಣದೊಂದಿಗೆ ಒಟ್ಟಿಗೆ ಕೆಲಸ ಮಾಡುತ್ತದೆ.

ಇದನ್ನು ಓದಿ: ಗೌತಮ್​ ಗಂಭೀರ್​ಗೆ ಜೀವ ಬೆದರಿಕೆ ಹಾಕಿದ್ದು ಪಾಕ್ ವಿದ್ಯಾರ್ಥಿ; ತನಿಖೆಯಲ್ಲಿ ಬಹಿರಂಗ

ಮೂತ್ರಪಿಂಡ ವೈಫಲ್ಯಕ್ಕೆ ಸಂಬಂಧಿಸಿದ ಅಧ್ಯಯನಗಳು ಏನು ಹೇಳುತ್ತವೆ?

ವಿಟಮಿನ್ ಬಿ12 ಮತ್ತು ಮೂತ್ರಪಿಂಡ ವೈಫಲ್ಯದ ನಡುವಿನ ಸಂಬಂಧದ ಬಗ್ಗೆ, ಎರಡನ್ನೂ ಜೋಡಿಸುವ ವಿಭಿನ್ನ ಅಧ್ಯಯನಗಳಿವೆ. ಹೀಗಾಗಿ, ಮಧುಮೇಹ ಮತ್ತು ಮೂತ್ರಪಿಂಡದ ವೈಫಲ್ಯ ಹೊಂದಿರುವ ರೋಗಿಗಳ ಮೇಲೆ ನಡೆಸಲಾದ ಸಂಶೋಧನಾ ಅಧ್ಯಯನದಲ್ಲಿ, ಈ ಜೀವಸತ್ವವನ್ನು ಜನರು ಚೆನ್ನಾಗಿ ಸಹಿಸಿಕೊಳ್ಳಲ್ಪಟ್ಟಿದ್ದಾರೆ ಎಂದು ಕಂಡು ಬಂದಿದೆ.

ಇದನ್ನು ಓದಿ: ಹಾಲುಣಿಸುವ ತಾಯಂದಿರೇ ತೂಕ ಇಳಿಸುವ ಚಿಂತೆಯೇ? ಹಾಗಾದರೆ ಇವುಗಳ ಬಗ್ಗೆ ತಿಳಿಯಿರಿ

ಮತ್ತೊಂದೆಡೆ, ಗ್ರಾನಡಾ ವಿಶ್ವವಿದ್ಯಾಲಯದ ನೇತೃತ್ವದಲ್ಲಿ ನಡೆದಂತಹ ಸಂಶೋಧನೆಯಲ್ಲಿ ದೀರ್ಘಕಾಲದ ಮೂತ್ರಪಿಂಡದ ವೈಫಲ್ಯದಿಂದ ಬಳಲುತ್ತಿರುವ ವ್ಯಕ್ತಿಯು ತನ್ನ ಆಹಾರದಲ್ಲಿ ದಿನಕ್ಕೆ 2.4 ಮೈಕ್ರೋ ಗ್ರಾಂಗಳಷ್ಟು ವಿಟಮಿನ್ ಬಿ12 ಸೇವಿಸಬಹುದು ಎಂದು ಸೂಚಿಸಿದೆ.

ಆದರೂ, ನಿಮ್ಮ ಆಹಾರದಲ್ಲಿ ಬದಲಾವಣೆ ಮಾಡಿಕೊಳ್ಳುವ ಮೊದಲು, ನಿರ್ದಿಷ್ಟ ಆಹಾರ ಮಾರ್ಗಸೂಚಿ ಪಡೆಯಲು ವೈದ್ಯಕೀಯ ತಜ್ಞರನ್ನು ಸಂಪರ್ಕಿಸುವುದು ಅಗತ್ಯವಾಗಿದೆ.
First published: