Ultra Processed Food: ಪ್ಯಾಕೆಟ್‌ ಫುಡ್​ ಸೇವಿಸೋ ಮುನ್ನ ಇರಲಿ ಎಚ್ಚರ, ಇಲ್ಲಾಂದ್ರೆ ಈ ಕಾಯಿಲೆಗೆ ಗುರಿಯಾಗೋದು ಪಕ್ಕಾ!

ಒಂದೆಡೆ ಸಮಯದ ಅಭಾವ, ಮತ್ತೊಂದೆಡೆ ಆರೋಗ್ಯದ ಕಾಳಜಿ ಎರಡೂ ಇಂದಿನ ಆಹಾರ ಮಾರುಕಟ್ಟೆಯ ಲಾಭಕ್ಕೆ ಸರಕುಗಳಾಗಿವೆ. ಅವರು ಕೊಟ್ಟಿದ್ದನ್ನು ನಾವಿಂದು ಪರೀಕ್ಷಿಸದೆ ಒಪ್ಪಿಕೊಂಡು ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದೇವೆ. ಅಲ್ಟ್ರಾ-ಸಂಸ್ಕರಿಸಿದ ಆಹಾರಗಳಿಂದ ವಯಸ್ಕ ಪುರುಷರು ಮತ್ತು ಮಹಿಳೆಯರಲ್ಲಿ ಬೊಜ್ಜು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿದೆ. ಈ ಹೆಚ್ಚಿನ ಬೊಜ್ಜಿಗೆ ನೇರ ಕಾರಣ ಈ ಅಲ್ಟ್ರಾ-ಸಂಸ್ಕರಿಸಿದ ಆಹಾರಗಳು. 

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಫಾಸ್ಟ್ ಫುಡ್ಸ್ (Fast Food), ರೆಡಿ ಟು ಈಟ್ ಊಟಗಳು ಈಗ ನಮ್ಮ ದೈನಂದಿನ ಬದುಕಿನ ಭಾಗವಾಗಿಬಿಟ್ಟಿವೆ. ವಿರಾಮದಲ್ಲಿ ತಯಾರಿಸಿ, ಆರಾಮವಾಗಿ ತಿನ್ನಲು ನಮಗೀಗ ಸಮಯವಿಲ್ಲ. ಒಂದೆಡೆ ಸಮಯದ ಅಭಾವ, ಮತ್ತೊಂದೆಡೆ ಆರೋಗ್ಯದ (Health) ಕಾಳಜಿ ಎರಡೂ ಇಂದಿನ ಆಹಾರ ಮಾರುಕಟ್ಟೆಯ (Food Market) ಲಾಭಕ್ಕೆ ಸರಕುಗಳಾಗಿವೆ. ಅವರು ಕೊಟ್ಟಿದ್ದನ್ನು ನಾವಿಂದು ಪರೀಕ್ಷಿಸದೆ ಒಪ್ಪಿಕೊಂಡು ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದೇವೆ. ಅಲ್ಟ್ರಾ-ಸಂಸ್ಕರಿಸಿದ ಆಹಾರಗಳಿಂದ Ultra-processed food) ವಯಸ್ಕ ಪುರುಷರು ಮತ್ತು ಮಹಿಳೆಯರಲ್ಲಿ ಬೊಜ್ಜು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿದೆ. ಈ ಹೆಚ್ಚಿನ ಬೊಜ್ಜಿಗೆ (Fat) ನೇರ ಕಾರಣ ಈ ಅಲ್ಟ್ರಾ-ಸಂಸ್ಕರಿಸಿದ ಆಹಾರಗಳು. 

ಆಹಾರಗಳು ಕೆಡದಂತೆ ಸಹಾಯ ಮಾಡುತ್ತೆ ಪಾಕೆಟ್‌ಗಳು
ಇಂದು ಬಹುತೇಕ ಆಹಾರಗಳು ನಮಗೆ ಅಲ್ಟ್ರಾ-ಪ್ರೊಸೆಸ್ಡ್ ಫುಡ್ ಪ್ರಾಡಕ್ಟ್ ಅಥವಾ ಯುಪಿಎಫ್‌ನ (UPF) ಪ್ಯಾಕೆಟ್‌ನಲ್ಲಿ ಸಿಗುತ್ತಿವೆ. ಏಕೆಂದರೆ ಆಹಾರಗಳು ಕೆಡದಂತೆ ಈ ಪಾಕೆಟ್‌ಗಳು ಸಹಾಯ ಮಾಡುತ್ತವೆ. ಇದರಲ್ಲಿ ನಮಗೆ ದೊರಕುವ ಆಹಾರ ಪದಾರ್ಥಗಳು ನೈಸರ್ಗಿಕ ಪದಾರ್ಥಗಳು ಇದ್ದ ರೀತಿಯಲ್ಲಿ ಇರುವುದಿಲ್ಲ. ತುಂಬಾ ರುಚಿಯಾಗಿರಬಹುದು ಅಥವಾ ಉತ್ತಮ ಅಂಶಗಳನ್ನು ಖಂಡಿತ ಹೊಂದಿರುವುದಿಲ್ಲ. ಪ್ರತಿ ಆಹಾರಗಳಿಗೂ ಹಾಳಾಗುವುದಕ್ಕೆ ಇಂತಿಷ್ಟು ಸಮಯ ಎಂದು ಇರುತ್ತದೆ. ಆದರೆ ಈ ಪ್ಯಾಕಿಂಗ್‌ ವ್ಯವಸ್ಥೆ ಬಂದ ಮೇಲೆ ಯಾವುದೇ ಆಹಾರಗಳು ವರ್ಷಾನುಗಟ್ಟಲೇ ಕೆಡುವುದೇ ಇಲ್ಲ. ಆದ್ದರಿಂದ ಎಲ್ಲರಲ್ಲಿಯೂ ಬೊಜ್ಜುತನ ಹೆಚ್ಚಾಗಿದೆ.

ಇದನ್ನೂ ಓದಿ: Weight Loss: ತೂಕ ಕಡಿಮೆ ಮಾಡಿಕೊಳ್ಳಲು ಈ ಆಹಾರ ಸಹಾಯಕವಂತೆ, ಡಯಟ್ ಪ್ಲ್ಯಾನ್ ನಲ್ಲಿ ಇದನ್ನೂ ಸೇರಿಸಿಕೊಳ್ಳಿ

ಈ ಆಹಾರ ಯಾವೆಲ್ಲ ಅಂಶಗಳನ್ನು ಒಳಗೊಂಡಿರುತ್ತದೆ
ಬಹುತೇಕ ಆಹಾರ ಉತ್ಪನ್ನಗಳು UPFಗಳಲ್ಲಿ ಪ್ಯಾಕ್ ಮಾಡಲಾದ ಆಹಾರ ಉತ್ಪನ್ನಗಳಾಗಿರುತ್ತವೆ. ಅವುಗಳನ್ನು ಕಾರ್ಖಾನೆಗಳಲ್ಲಿ ತಯಾರಿಸಲಾಗುತ್ತದೆ. ನಂತರ ಅವುಗಳಿಗೆ ರಾಸಾಯನಿಕಗಳನ್ನು ಬಳಸಿ ಪ್ಯಾಕ್‌ ಮಾಡಲಾಗುತ್ತದೆ. ಇನ್ನು ಮಾರುಕಟ್ಟೆಯಲ್ಲಿ ಕೈಗೆಟುಕುವ ದರದಲ್ಲಿ ಮತ್ತು ಹೆಚ್ಚಿನ ಮಟ್ಟದಲ್ಲಿ ಅವುಗಳ ಕುರಿತು ಪ್ರಚಾರ ಮಾಡಲಾಗುತ್ತದೆ.

ಇವು ತೈಲಗಳು, ಕೊಬ್ಬುಗಳು, ಸಕ್ಕರೆ, ಪಿಷ್ಟ ಮತ್ತು ಇತರ ಉತ್ಪನ್ನಗಳು ಆಗಿವೆ. ಇವುಗಳು ಸಾಮಾನ್ಯವಾಗಿ ಸುವಾಸನೆಗಳು, ಬಣ್ಣಗಳು, ಎಮಲ್ಸಿಫೈಯರ್ಗಳು ಮತ್ತು ಇತರ ಕಾಸ್ಮೆಟಿಕ್ ಅಂಶಗಳನ್ನು ಹೊಂದಿರುವ ಆಹಾರ ಪದಾರ್ಥಗಳಾಗಿರುತ್ತವೆ. UPF ನಿಂದ ತಯಾರಾದ ಆಹಾರ ಪದಾರ್ಥಗಳು ದೇಶೀಯ ಅಡಿಗೆಮನೆಗಳಲ್ಲಿ ಕಂಡುಬರದ ಪದಾರ್ಥಗಳನ್ನು ಹೊಂದಿರುತ್ತವೆ. ಆ ಪ್ಯಾಕೆಟ್‌ ಮೇಲೆ ಆಹಾರ ಉತ್ಪನ್ನವು ಐದಕ್ಕಿಂತ ಹೆಚ್ಚು ಪದಾರ್ಥಗಳನ್ನು ಹೊಂದಿದ್ದರೆ, ಅದು ಯುಪಿಎಫ್ ಪ್ಯಾಕೆಟ್‌ ಆಹಾರ ಪದಾರ್ಥ ಆಗಿರುತ್ತದೆ.

ಆರೋಗ್ಯಕ್ಕೆ ಹಾನಿಕಾರಕ ಅಲ್ಟ್ರಾ ಸಂಸ್ಕರಿಸಿದ ಆಹಾರ!
UN ಆಹಾರ ಮತ್ತು ಕೃಷಿ ಸಂಸ್ಥೆ (FAO), ಅಲ್ಟ್ರಾ-ಸಂಸ್ಕರಿಸಿದ ಆಹಾರ ಉತ್ಪನ್ನಗಳ ಸೇವನೆಯು ಕಳಪೆ ಆರೋಗ್ಯ ಫಲಿತಾಂಶಗಳೊಂದಿಗೆ ಸಂಬಂಧಿಸಿದೆ ಎಂದು ಗುರುತಿಸುತ್ತದೆ. ನೀತಿಗಳು ಮತ್ತು ನಿಬಂಧನೆಗಳ ಮೂಲಕ UPF ಗಳ ಬಳಕೆಯನ್ನು ಮಿತಿಗೊಳಿಸಲು ಕೂಡ ಶಿಫಾರಸು ಮಾಡುತ್ತದೆ.

ಇದನ್ನೂ ಓದಿ:  Ladies Finger: ಹೃದಯದ ಆರೋಗ್ಯ ಕಾಪಾಡುತ್ತದೆ ಕೆಂಪು ಬೆಂಡೆಕಾಯಿ! ಇಲ್ಲಿದೆ ಇದರ ಆರೋಗ್ಯ ಗುಣಗಳು

ಲ್ಯಾನ್ಸೆಟ್ ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟಾಲಜಿ, ಲ್ಯಾನ್ಸೆಟ್ ಎಂಡೋಕ್ರೈನಾಲಜಿ ಮತ್ತು ಬ್ರಿಟಿಷ್ ಮೆಡಿಕಲ್ ಜರ್ನಲ್‌ನಂತಹ ಪ್ರಸಿದ್ಧ ವೈದ್ಯಕೀಯ ನಿಯತಕಾಲಿಕಗಳಲ್ಲಿ ಇತ್ತೀಚೆಗೆ ಪ್ರಕಟವಾದ ಪ್ರಕಟಣೆಗಳ ಸರಣಿಯಿಂದ ಈ ವಿಷಯದ ಬಗ್ಗೆ ಜಾಗತಿಕವಾಗಿ ಮತ್ತು ವೈಜ್ಞಾನಿಕವಾಗಿ ಒಮ್ಮತ ಅಭಿಪ್ರಾಯಗಳು ಮೂಡಿ ಬರುತ್ತಿವೆ. ಯುಪಿಎಫ್‌ಗಳ ಹೆಚ್ಚಿನ ಬಳಕೆಯು ಆರೋಗ್ಯ ಮತ್ತು ಜಾಗತಿಕ ಸಮಸ್ಯೆಯಾಗಿದೆ. ಅದರ ಜೊತೆಗೆ ಆಹಾರ ಸಂಸ್ಕರಣೆಯನ್ನು ಕಳಪೆ ಆರೋಗ್ಯಕ್ಕೆ ಹೋಲಿಕೆ ಮಾಡುವ ಜ್ಞಾನವಿದ್ದರೂ ಸಹ ಭಾರತದಲ್ಲಿ ಇನ್ನು ತುರ್ತು ಸಮಸ್ಯೆಯಾಗಿಲ್ಲ ಎಂಬುದೇ ವಿಷಾದನೀಯ ಆಗಿದೆ.

2010 ರಲ್ಲಿ ನಡೆದ ಸಂಶೋಧನಾ ಅಧ್ಯಯನದ ಪೆಕಾರ ಬ್ರೆಜಿಲಿಯನ್ ವಿಜ್ಞಾನಿಗಳು “ಸಕ್ಕರೆ ಸೇವನೆಯು ಕಡಿಮೆಯಾಗಿದ್ದರೂ, ಬೊಜ್ಜು ಹೆಚ್ಚುತ್ತಿದೆ” ಎಂಬುದನ್ನು ಗಮನಿಸಿದರು. ಆದ್ದರಿಂದ ಅವರು ಸಂಸ್ಕರಣೆಯ ಮಟ್ಟವನ್ನು ಆಧರಿಸಿ ಆಹಾರಗಳು/ಆಹಾರ ಉತ್ಪನ್ನಗಳ ಹೊಸ ವರ್ಗೀಕರಣದೊಂದಿಗೆ ಅಧ್ಯಯನ ನಡೆಸಲು ಮುಂದಾದರು. ಅದನ್ನು 'ನೋವಾ ವರ್ಗೀಕರಣ' ಅಂದರೆ ಹೊಸ ವರ್ಗೀಕರಣ ಎಂದು ಕರೆದರು.

ಈ ವರ್ಗೀಕರಣವು ನಾಲ್ಕು ರೀತಿಯ ಆಹಾರ ಗುಂಪುಗಳನ್ನು ಹೊಂದಿದೆ. ಅವುಗಳೆಂದರೆ:

ಗುಂಪು- 1 ಹಣ್ಣುಗಳು, ತರಕಾರಿಗಳು, ಬೇಳೆಕಾಳುಗಳು, ಅಕ್ಕಿ, ಮೊಟ್ಟೆಗಳು, ಮಾಂಸ, ಮೀನು, ಅಥವಾ ಹಾಲು ಮುಂತಾದ ಸಂಸ್ಕರಿಸದ ಅಥವಾ ಸ್ವಲ್ಪ ಸಂಸ್ಕರಿಸಿದ ಆಹಾರಗಳನ್ನು ಒಳಗೊಂಡಿರುತ್ತದೆ.

ಗುಂಪು- 2 ಉಪ್ಪು, ಸಸ್ಯಜನ್ಯ ಎಣ್ಣೆಗಳು, ಬೆಣ್ಣೆ, ಸಕ್ಕರೆ ಮತ್ತು ಊಟವನ್ನು ತಯಾರಿಸಲು ಬಳಸುವ ಇತರ ಪದಾರ್ಥಗಳನ್ನು ಒಳಗೊಂಡಂತೆ ಸಂಸ್ಕರಿಸಿದ ಪದಾರ್ಥಗಳನ್ನು ಒಳಗೊಂಡಿದೆ.

ಗುಂಪು- 3 'ಸಂಸ್ಕರಿಸಿದ ಆಹಾರಗಳು', ಇದು ಉಪ್ಪು ಅಥವಾ ಸಕ್ಕರೆ ಸೇರಿಸಿದ ಪೂರ್ವಸಿದ್ಧ ತರಕಾರಿಗಳು ಅಥವಾ ಹಣ್ಣುಗಳನ್ನು ಒಳಗೊಂಡಿರುತ್ತದೆ.

ಗುಂಪು- 4 ಸೋಡಾ, ಐಸ್ ಕ್ರೀಮ್, ಬೇಕರಿ ವಸ್ತುಗಳು, ಬಿಸ್ಕತ್ತುಗಳು ಮತ್ತು ಚಾಕೊಲೇಟ್‌ಗಳಂತಹ UPF ಪ್ಯಾಕೆಟ್‌ ಇರುವ ಆಹಾರ ಪದಾರ್ಥಗಳನ್ನು ಒಳಗೊಂಡಿದೆ. ಈ ನಾಲ್ಕು ರೀತಿಯ ಆಹಾರ ಪದಾರ್ಥಗಳನ್ನು ಅಧ್ಯಯನ ನಡೆಸಿದ್ದಾರೆ.

ಮೇಲಿನ ಎಲ್ಲಾ ಪ್ರಕ್ರಿಯೆಗಳು ಕೆಟ್ಟದ್ದಲ್ಲ. ಹೌದು, ಹಲವು ವರ್ಷಗಳಿಂದ ಜನರು ಹುದುಗುವಿಕೆ, ಬಿಸಿಮಾಡುವಿಕೆ, ಸೂರ್ಯನ ಶಾಖಕ್ಕೆ ಒಣಗಿಸುವಿಕೆ, ಅಡುಗೆ, ಗೋಧಿಯನ್ನು ಹಿಟ್ಟಾಗಿ ಪರಿವರ್ತಿಸುವುದು ಮತ್ತು ಚಪಾತಿಗಳನ್ನು ತಯಾರಿಸುವುದು ಅಥವಾ ರುಚಿ ಮತ್ತು ಸುವಾಸನೆಯನ್ನು ಹೆಚ್ಚಿಸಲು ಮಸಾಲೆಗಳೊಂದಿಗೆ ಆಹಾರವನ್ನು ಬೇಯಿಸುವುದು ಮುಂತಾದ ಕಡಿಮೆ ಮಟ್ಟದ ಸಂಸ್ಕರಣೆಗಳನ್ನು ಬಳಸಿದ್ದಾರೆ.

ಇದನ್ನೂ ಓದಿ:  Health Tips: ನೀರು ಕುಡಿಯೋಕೂ ಒಂದು ವಿಧಾನ ಇದೆ ಕಣ್ರೀ, ತಪ್ಪಾಗಿ ಸೇವನೆ ಮಾಡೋದು ಅಪಾಯ

ಆದರೆ ಇಂದು ಎಲ್ಲೆಲ್ಲೂ ಸಂಸ್ಕರಿಸಿದ ಆಹಾರ ಪದಾರ್ಥಗಳ ಸೇವನೆಯೇ ಮಾರುಕಟ್ಟೆಯ ಬೃಹತ್ ಉತ್ಪಾದನೆಗೆ ಕಾರಣವಾಯಿತು ಮತ್ತು ಇವುಗಳನ್ನು ಕೈಗೆಟುಕುವಂತೆ ಮಾಡಿತು. ಹೆಚ್ಚಿನ ಮಟ್ಟದ ಮಾರುಕಟ್ಟೆಯ ತಂತ್ರಗಳು ಇಂತಹ ಆಹಾರ ಪದಾರ್ಥಗಳನ್ನು 'ಆರೋಗ್ಯಕರ' ಎಂದು ಬಿಂಬಿಸುವ ಮೂಲಕ ಬೇಡಿಕೆಯನ್ನು ಸೃಷ್ಟಿಸಿತು.

ಅಲ್ಟ್ರಾ ಸಂಸ್ಕರಿಸಿದ ಆಹಾರವನ್ನು ಸೇವಿಸುವ ದೇಶಗಳು 
UPFಗಳಿಂದ ಬರುವ ದೈನಂದಿನ ಶಕ್ತಿಯ ಸೇವನೆಯ 57% ರಷ್ಟು ಪ್ರಮಾಣವನ್ನು ಬಳಸುವ ಮೂಲಕ ಯುಸ್‌ ದೇಶವು ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಯುನೈಟೆಡ್ ಕಿಂಗ್‌ಡಮ್, ಕೆನಡಾ, ಬಾರ್ಬಡೋಸ್, ಆಸ್ಟ್ರೇಲಿಯಾ, ಫ್ರಾನ್ಸ್, ಬೆಲ್ಜಿಯಂ, ಚಿಲಿ, ಬ್ರೆಜಿಲ್, ತೈವಾನ್ ಮತ್ತು ಮೆಕ್ಸಿಕೋ ನಂತರದ ಸ್ಥಾನಗಳಲ್ಲಿ ಇವೆ. ಕೊಲಂಬಿಯಾವು UPF ಗಳ ಕನಿಷ್ಠ ಬಳಕೆಯನ್ನು ಅಂದರೆ 15.9 % ರಷ್ಟು ಹೊಂದಿದೆ.

ಆದರೆ ಭಾರತವು ಇನ್ನೂ ಈ ಪಟ್ಟಿಯಲ್ಲಿಲ್ಲ. ಆದರೆ ಕಳೆದ 15 ವರ್ಷಗಳ ದತ್ತಾಂಶದ ಪ್ರಕಾರ, ಆಹಾರ ಮತ್ತು ಪಾನೀಯ ಉತ್ಪನ್ನಗಳೆರಡರ ಬಳಕೆ ಹೆಚ್ಚುತ್ತಿರುವುದನ್ನು ಸೂಚಿಸುತ್ತದೆ. ಫುಡ್ ಸೇಫ್ಟಿ ಅಂಡ್ ಸ್ಟ್ಯಾಂಡರ್ಡ್ಸ್ ಅಥಾರಿಟಿ ಆಫ್ ಇಂಡಿಯಾ (ಎಫ್‌ಎಸ್‌ಎಸ್‌ಎಐ) ನಿಯೋಜಿಸಿದ ಅಧ್ಯಯನದ ಪ್ರಕಾರ, ಭಾರತದಲ್ಲಿ ಮಾರಾಟವಾಗುವ 1,300 ಕ್ಕೂ ಹೆಚ್ಚು ಪ್ಯಾಕ್ ಮಾಡಲಾದ ಆಹಾರ ಮತ್ತು ಪಾನೀಯ ಉತ್ಪನ್ನಗಳು ಉಪ್ಪು, ಸಕ್ಕರೆ ಅಥವಾ ಸ್ಯಾಚುರೇಟೆಡ್ ಕೊಬ್ಬುಗಳನ್ನು ಒಳಗೊಂಡಿರುತ್ತವೆ. ಇದರಿಂದ ಅನಾರೋಗ್ಯಕ್ಕೆ ಒಳಗಾಗುವ ಸಂಭವ ಹೆಚ್ಚು.

ಈ ಆಹಾರ ಸೇವನೆಯಿಂದ ಉಂಟಾಗುವ ಕಾಯಿಲೆಗಳು 
ಅಲ್ಟ್ರಾ-ಪ್ರೊಸೆಸ್ಡ್ ಆಹಾರ ಪದಾರ್ಥಗಳ ಹೆಚ್ಚಿನ ಸೇವನೆಯು ಅಧಿಕ ತೂಕ, ಟೈಪ್ -2 ಮಧುಮೇಹ, ಕ್ಯಾನ್ಸರ್, ಅಧಿಕ ರಕ್ತದೊತ್ತಡ, ಹೃದ್ರೋಗದಂತಹ ದೀರ್ಘಕಾಲದ ಕಾಯಿಲೆಗಳಿಗೆ ಗುರಿಯಾಗುವ ಸಂಭವ ಹೆಚ್ಚು ಎಂದು ಅಧ್ಯಯನಗಳಿಂದ ತಿಳಿದು ಬಂದಿದೆ. ತಮ್ಮ ಆಹಾರದಲ್ಲಿ 10% ರಷ್ಟು ಪ್ರಮಾಣದ ಆಹಾರವನ್ನು ಯುಪಿಎಫ್ ಗಳ ಮೂಲಕ ಸೇವಿಸುವ ಜನರಲ್ಲಿ ಟೈಪ್ -2 ಮಧುಮೇಹಕ್ಕೆ ತುತ್ತಾಗುವ ಅಪಾಯ 15% ರಷ್ಟು ಹೆಚ್ಚಳವಾಗಿರುವುದು ನಿಜಕ್ಕೂ ಕಳವಳಕಾರಿ ಸಂಗತಿ ಆಗಿದೆ.

ಹೊಸ ಸಂಶೋಧನೆಗಳ ಪ್ರಕಾರ, “ UPF ಪ್ಯಾಕ್‌ನಲ್ಲಿನ ಆಹಾರ ಪದಾರ್ಥಗಳು ಮನುಷ್ಯನ ಜ್ಞಾಪಕ ಶಕ್ತಿಯ ಮೇಲೆ ಕೂಡ ಗಾಢವಾದ ಪರಿಣಾಮ ಬೀರುತ್ತವೆ. ನೆನಪಿನ ಶಕ್ತಿಯನ್ನು ವೇಗವಾಗಿ ಕಡಿಮೆಗೊಳಿಸುವ ಶಕ್ತಿಯನ್ನು ಈ ಪ್ಯಾಕೆಟ್‌ಗಳು ಹೊಂದಿವೆ ಎಂಬುದು ಅಧ್ಯಯನಗಳಿಂದ ಸಾಬೀತಾಗಿದೆ.

ಇದನ್ನೂ ಓದಿ:  IVF Babies: ಕೃತಕ ಗರ್ಭಧಾರಣೆಯಿಂದ ಜನಿಸುವ ಮಕ್ಕಳಲ್ಲಿ ಹೆಚ್ಚಾಗುತ್ತಿದೆಯಾ ಕ್ಯಾನ್ಸರ್‌? ಈ ಬಗ್ಗೆ ಅಧ್ಯಯನ ಹೇಳಿದ್ದೇನು?

ಯುಕೆ ಬಯೋಬ್ಯಾಂಕ್‌ನ ಒಂದು ಅಧ್ಯಯನವು UPF ಪ್ಯಾಕೆಟ್ ಆಹಾರ ಸೇವನೆ ಮತ್ತು ಕೋವಿಡ್‌ಗೆ ನೇರ ಸಂಬಂಧವಿದೆ ಎಂದು ತೋರಿಸುತ್ತದೆ. ಬುದ್ಧಿಮಾಂದ್ಯತೆ, ಆತಂಕ ಮತ್ತು ಖಿನ್ನತೆಯ ಅನೇಕ ಸಂದರ್ಭಗಳಲ್ಲಿ ಅಲ್ಟ್ರಾ-ಪ್ರೊಸೆಸ್ಡ್ ಆಹಾರದ ಸೇವನೆಯು ಹೆಚ್ಚಾಗಿರುತ್ತದೆ ಎಂದು ಸಹ ಅಧ್ಯಯನಗಳು ಬಹಿರಂಗಪಡಿಸಿವೆ.
Published by:Ashwini Prabhu
First published: